ವಾರ ಆರೋಗ್ಯದ ರಾಶಿಫಲ: (ಜುಲೈ 08ರಿಂದ ಜುಲೈ 14) ರಾಶಿಗಳ ಆರೋಗ್ಯ ಭವಿಷ್ಯ

ಗ್ರಹಗತಿಗಳ ಸ್ಥಾನವು ಈ ವಾರ ಜನರ ಆರೋಗ್ಯದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ? ಯಾವ ರಾಶಿಗಳಿಗೆ ಯಾವ ರೀತಿಯ ಫಲ ನೀಡಲಿದೆ ಎಂದು ನೋಡೋಣ ಬನ್ನಿ:

ಮೇಷ ರಾಶಿ

ಈ ವಾರದಲ್ಲಿ ನಿಮ್ಮ ದೈಹಿಕ ಸಮಸ್ಯೆಗಳಿಂದಾಗಿ ಕೆಲಸ ಕಾರ್ಯಗಳಲ್ಲಿ ಅಡ್ಡಿಯಾಗಿ ಸಮಸ್ಯೆ ಹೆಚ್ಚಾಗಬಹುದು. ಆದರೆ ಇದು ಕ್ಷಣಿಕ ಮಾತ್ರ ವಾರದ ಕೊನೆಯಲ್ಲಿ ನಿಮ್ಮ ಆರೋಗ್ಯ ಎಂದಿನಂತೆ ಆಗಲಿದೆ. ಆದರೆ ನಿಮ್ಮ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ. ಇದರಿಂದ ನಿಮಗೆ ಹಾನಿಯಾಗುವುದು ಖಚಿತ.

Here is weekly horoscope

ವೃಷಭ ರಾಶಿ

ಈ ವಾರ ನಿಮಗೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ನಿಮ್ಮ ಆರೋಗ್ಯದಲ್ಲಿ ನೀವು ಸುಧಾರಣೆಯನ್ನು ಕಾಣುತ್ತೀರಿ ಮತ್ತು ನಿಮ್ಮ ಮಾನಸಿಕ ಒತ್ತಡವು ಕಾಣಿಸಿಕೊಂಡರೆ ಅದರಿಂದ ಹಾನಿಯಾಗುವುದಿಲ್ಲ. ಹೆಚ್ಚು ಫಿಟ್‌ನೆಸ್ ಕಡೆ ಗಮನ ಕೊಡಿ. ಮಧುಮೇಹ, ಬಿಪಿ ಸಮಸ್ಯೆ ಇದ್ದವರು ಈ ವಾರ ಬಹಳ ಎಚ್ಚರಿಕೆಯಿಂದಿರಿ.

ಮಿಥುನ ರಾಶಿ

ಆಲಸ್ಯ ಮತ್ತು ಸೋಮಾರಿತನದಿಂದಾಗಿ, ನಿಮ್ಮ ಕೆಲಸದ ಮೇಲೆ ಸರಿಯಾಗಿ ಗಮನಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಲಘು ವ್ಯಾಯಾಮ ಮಾಡಲು ಮರೆಯಬೇಡಿ. ದೂರ ಪ್ರಯಾಣದಿಂದಾಗಿ ನಿಮ್ಮ ಆರೋಗ್ಯ ಮತ್ತಷ್ಟು ಹದಗೆಡಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಇಡೀ ವಾರ ಕಷ್ಟ ಪಡಬೇಕಾಗಬಹುದು.

ಕರ್ಕ ರಾಶಿ

ಆರೋಗ್ಯದ ಬಗ್ಗೆ ನಿರ್ಲಕ್ಷ್ಯವು ದುಬಾರಿಯಾಗಹುದು, ಏಕೆಂದರೆ ವಾರದಲ್ಲಿ ಮೂರು ದಿನಗಳ ಕಾಲ ನಿಮಗೆ ಅನಾರೋಗ್ಯ ಕಾಡುವ ಸಂಭವವನ್ನು ನೀವು ತಪ್ಪಿಸಬಹುದು. ಆಯಾಸ ಹಾಗೂ ಸುಸ್ತು, ಕಾಲೋಚಿತ ಕಾಯಿಲೆಗೆ ಒಳಗಾಗಬಹುದು. ಈ ಕಾಯಿಲೆಗಳ ನಿರ್ಲಕ್ಷ್ಯ ಬೇಡ, ಆದಷ್ಟು ಬೇಗ ವೈದ್ಯರ ಸಲಹೆ ಪಡೆದುಕೊಳ್ಳಿ.

ಸಿಂಹ ರಾಶಿ

ಹೆಚ್ಚುತ್ತಿರುವ ಕೆಲಸದ ಹೊರೆ ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ಈ ಸಮಯದಲ್ಲಿ, ನೀವು ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ ಮತ್ತು ನಿಮ್ಮ ಮೇಲೆ ಸರಿಯಾಗಿ ಗಮನಹರಿಸಲು ಸಾಧ್ಯವಾಗುವುದಿಲ್ಲ. ಆದರೆ ನಿಮ್ಮ ಅತಿಯಾದ ಆತ್ಮವಿಶ್ವಾಸ ನಿಮ್ಮ ಅನಾರೋಗ್ಯ ನಿವಾರಿಸಲಿದೆ. ಹೆಚ್ಚು ಕಾಲ ಮನೆಯಿಂದ ಹೊರಗೆ ಕಳೆಯಬೇಡಿ. ನಿಮ್ಮ ಕಾಯಿಲೆಗೆ ಮನೆ ಮದ್ದು ಕೆಲಸ ಮಾಡಲಿದೆ.

ಕನ್ಯಾರಾಶಿ

ದೈಹಿಕ ಆರೋಗ್ಯದ ಜೊತೆಗೆ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಮತ್ತು ಧನಾತ್ಮಕವಾಗಿರಲು ಪ್ರಯತ್ನಿಸಿ. ಮೂಳೆಗೆ ಸಂಬಂಧಿಸಿದಂತೆ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಇದರಿಂದ ನಿತ್ಯವೂ ನೋವು ಕಾಡಬಹುದು.

ತುಲಾ ರಾಶಿ

ವಾರದ ಆರಂಭದಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಲಿದ್ದೀರಿ. ಆದರೆ ಕೊನೆಯಲ್ಲಿ ದೊಡ್ಡ ಸಮಸ್ಯೆಗಳು ಎದುರಾಗಬಹುದು. ಸಮತೋಲಿತ ಆಹಾರ ಮತ್ತು ಲಘು ವ್ಯಾಯಾಮದಿಂದ ನೀವು ಉತ್ತಮ ಆರೋಗ್ಯವನ್ನು ಆನಂದಿಸಬಹುದು. ಕೆಲಸದ ನಡುವೆ ವಿರಾಮ ತೆಗೆದುಕೊಳ್ಳಿ.

ವೃಶ್ಚಿಕ ರಾಶಿ

ನಿಮ್ಮ ಭಾವನೆಗಳು ಉತ್ತಮವಾಗಿರುತ್ತವೆ ಮತ್ತು ನಿಮ್ಮ ಆಲೋಚನೆ ಕೂಡ ಧನಾತ್ಮಕವಾಗಿರುತ್ತದೆ. ಆಯಾಸ ಮತ್ತು ಹೃದಯ ಸಂಬಂಧಿ ಸಮಸ್ಯೆ ಹೊಂದಿರುವವರು ಎಚ್ಚರಿಕೆ ವಹಿಸಿ, ವಾರದ ಬಹುಪಾಲು ದಿನದಲ್ಲಿ ನಿಮ್ಮ ಆರೋಗ್ಯ ಸುಧಾರಣೆ ಕಾಣಲಿದೆ. ಅಲ್ಲದೆ ನಿಯಮಿತ ವೈದ್ಯರ ಭೇಟಿ ತಪ್ಪಿಸದೆ ಮಾಡಿ.

ಧನು ರಾಶಿ

ಅನಗತ್ಯ ಚಿಂತೆಗಳಿಂದ ದೂರವಿರಿ, ಇಲ್ಲದಿದ್ದರೆ ನಿಮ್ಮ ಆರೋಗ್ಯ ಹದಗೆಡಬಹುದು. ಈ ಅವಧಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಯಾದರೂ ನಿರ್ಲಕ್ಷಿಸಬೇಡಿ, ಇಲ್ಲವಾದಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳಬಹುದು. ನಿಮ್ಮ ಒತ್ತಡವನ್ನು ಕಡಿಮೆ ಮಾಡಲು, ನಿಮ್ಮ ನೆಚ್ಚಿನ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಿ.

ಮಕರ ರಾಶಿ

ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನೀವು ಆದ್ಯತೆ ನೀಡುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ಆರೋಗ್ಯಕರವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತೀರಿ. ಈ ಅವಧಿಯಲ್ಲಿ, ನೀವು ಕೆಲವು ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತೀರಿ ಅದು ನಿಮಗೆ ಹೆಚ್ಚು ಉಲ್ಲಾಸವನ್ನು ನೀಡುತ್ತದೆ.

ಕುಂಭ ರಾಶಿ

ನೀವು ಕೆಲವು ಹಳೆಯ ಕಾಯಿಲೆಯಿಂದ ಪರಿಹಾರವನ್ನು ಪಡೆಯುತ್ತೀರಿ ಮತ್ತು ನಿಮ್ಮ ಆರೋಗ್ಯವು ಗಮನಾರ್ಹವಾಗಿ ಸುಧಾರಿಸುತ್ತದೆ. ನಿಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗೆ ಒಳಗಾಗಬಹುದು.

ಮೀನ ರಾಶಿ

ನಿಮ್ಮ ಅನಿಯಂತ್ರಿತ ಕೋಪ ಮತ್ತು ಅತಿಯಾಗಿ ಯೋಚಿಸುವ ಅಭ್ಯಾಸವು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಅತೀಯಾಗಿ ನೀವು ಕೋಪ, ಸಿಟ್ಟು ಮಾಡಿಕೊಳ್ಳುವ ಮೂಲಕ ನಿಮ್ಮ ಮಾನಸಿಕ ಆರೋಗ್ಯ ಹದಗೆಡಬಹುದು. ಅಲ್ಲದೆ ಚರ್ಮ ಸಂಬಂಧಿ ಸಮಸ್ಯೆ ಹೊಂದಿದ್ದರೆ ಮತ್ತಷ್ಟು ಎಚ್ಚರ ವಹಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly-Horoscope-July-08-July-14-Prediction-Of-6-Signs-Including-Libra-Sagittarius-And-Capricorn

Weekly-Horoscope-July-08-July-14-Prediction-Of-6-Signs-Including-Libra-Sagittarius-And-Capricorn
Story first published: Sunday, July 7, 2024, 23:40 [IST]
X
Desktop Bottom Promotion