ವಾರ ಭವಿಷ್ಯ: ಜನವರಿ 4-10ರವರೆಗೆ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?

ಜ್ಯೋತಿಷ್ಯಶಾಸ್ತ್ರ ಪ್ರಕಾರ ಜನವರಿ 4-10ರವರೆಗೆ ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ
ಈ ವಾರ ನಿಮಗೆ ಶುಭವಾಗಿದೆ, ನಿಮ್ಮೆಲ್ಲಾ ಕೆಲಸ ಕಾರ್ಯಗಳು ಯೋಜನೆಯಂತೆಯೇ ಪೂರ್ಣಗೊಳ್ಳಲಿದೆ, ಹಾಗಾಗಿ ಕೆಲಸದ ವಿಷಯದಲ್ಲಿ ಚಿಂತೆ ಇರಲ್ಲ. ಹಣಕಾಸಿನ ಬಗ್ಗೆ ನೋಡುವುದಾದರೆ ಖರ್ಚು ಅಧಿಕವಿರಲಿದೆ, ಬಜೆಟ್‌ ಪ್ರಕಾರ ಖರ್ಚು ಮಾಡಿದರೆ ಒಳ್ಳೆಯದು. ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ಆರೋಗ್ಯಕ್ಕಾಗಿ ಆಹಾರಕ್ರಮದ ಕಡೆಗೆ ಗಮನಹರಿಸಿ.

Weekly Horoscope

ವೃಷಭ ರಾಶಿ
ಕೆಲಸದಲ್ಲಿ ನಿಮಗೆ ಹೊಸ ಜವಾಬ್ದಾರಿ ಸಿಗಲಿದೆ, ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಆದರೆ ಖರ್ಚು ಹೆಚ್ಚಿರಲಿದೆ, ಅನಗ್ಯತ ಖರ್ಚು ತಪ್ಪಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಗಂಟಲಿನ ಆರೋಗ್ಯದ ಕಡೆಗೆ ಗಮಹರಿಸಿ. ಮನೆಯ ವಾತಾವರಣ ಚೆನ್ನಾಗಿರಲಿದೆ.

ಮಿಥುನ ರಾಶಿ
ಈ ವಾರ ಹಣದ ವಿಷಯದಲ್ಲಿ ಜಾಗ್ರತೆವಹಿಸಿ. ಕೆಲಸದ ಜಾಗದಲ್ಲಿ ಜಾಗ್ರತೆವಹಿಸಿ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನಹರಿಸಿ. ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಬೇರೆ ಕಡೆ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ.

ಕರ್ಕ ರಾಶಿ
ಕೆಲಸ ಕಾರ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು. ಕುಟುಂಬ ಜೀವನ ಚೆನ್ನಾಗಿರಲಿದೆ. ನೀವು ಖರ್ಚು ಕಡೆಗೆ ಗಮನಹರಿಸಿ. ಇನ್ನುಈ ಸಮಯದಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡದಂತೆ ಸಲಹೆ ನೀಡಲಾಗುವುದು. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ.

ಸಿಂಹ ರಾಶಿ
ಈ ವಾರ ನಿಮಗೆ ಉತ್ತಮವಾಗಿರಲಿದೆ, ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆ ನಡೆಯಲಿದೆ. ಕೆಲಸದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ.
ಕುಟುಂಬ ಜೀವನ ಚೆನ್ನಾಗಿರಲಿದೆ. ಆರ್ಥಿಕ ದೃಷ್ಟಿಯಿಂದಲೂ ಚೆನ್ನಾಗಿರಲಿದೆ. ಈ ವಾರವನ್ನು ಖುಷಿಯಿಂದ ಕಳೆಯಲು ಸಾಧ್ಯವಾಗುವುಉದ.

ಕನ್ಯಾ ರಾಶಿ
ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಕೆಲಸದಲ್ಲಿ ಕೆಲ ಸವಾಲುಗಳು ಬರಬಹುದು. ಹಣದ ನಿರ್ಧಾರ ಆಲೋಚಿಸಿ ತೆಗೆದುಕೊಳ್ಳಬೇಕು. ಮನೆಯಲ್ಲಿ ನಿಮ್ಮ ವರ್ತನೆ ಅಥವಾ ಮಾತುಗಳ ಕಡೆ ಗಮನಹರಿಸಬೇಕು. ನಿಮ್ಮ ಮಾತು ಮನೆಯವರ ಮನಸ್ಸು ನೋಯಿಸಬಹುದು. ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ.

ತುಲಾ ರಾಶಿ
ತುಲಾ ರಾಶಿಯವರಿಗೆ ಈ ಸಮಯ ತುಂಬಾ ಚೆನ್ನಾಗಿರಲಿದೆ. ಹಣದ ಸಮಸ್ಯೆ ಬಗೆಹರಿಯುವ ಸೂಚನೆಯಿದೆ. ಈ ಹಿಂದೆ ಮಾಡಿದ ಹೂಡಿಕೆಯಿಂದ ಹಣ ಲಾಭ ದೊರೆಯಲಿದೆ. ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ಆರೋಗ್ಯ ಸರಾಸರಿಯಾಗಿರಲಿದೆ.

ವೃಶ್ಚಿಕ ರಾಶಿ
ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ, ಆದರೆ ಖರ್ಚಿನ ಕಡೆ ಗಮನಹರಿಸಿ. ಕುಟುಂಬದಲ್ಲಿ ಸಮಸ್ಯೆ ಉಂಟಾಗದಂತೆ ಜಾಗ್ರತೆವಹಿಸ. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.

ಧನು ರಾಶಿ
ಈ ವಾರ ಸಂಗಾತಿ ಜೊತೆ ಕೆಲ ಭಿನ್ನಾಭಿಪ್ರಾಯವಿರಬಹುದು. ನಿಮ್ಮ ಸಮಸ್ಯೆಯನ್ನು ಮಾತುಕತೆ ಮೂಲಕ ಬೆಹರಿಸುವುದು ಒಳ್ಳೆಯದು. ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ.

ಮಕರ ರಾಶಿ
ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ವೃತ್ತಿ ಜೀವನದಲ್ಲಿ ಬಡ್ತಿ ಸಿಗಲಿದೆ. ಈ ವಾರ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಕೂಡ ಉತ್ತಮವಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ.

ಕುಂಭ ರಾಶಿ
ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆ ನಡೆಯಲಿದೆ, ಕೆಲಸದಲ್ಲಿ ಒತ್ತಡವಿರಲಿದೆ. ಹಣಕಾಸಿನ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ, ಖರ್ಚು-ವೆಚ್ಚಗಳ ನಡುವೆ ಸಮತೋಲನ ಕಾಪಾಡಿಕೊಳ್ಳಿ. ಆರೋಗ್ಯದ ಕಡೆಗೆ ಗಮನಹರಿಸಿ.

ಮೀನ ರಾಶಿ
ಕೆಲಸದಲ್ಲಿ ಸವಾಲುಗಳಿರಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಈ ವಾರ ಆರೋಗ್ಯ ಸರಾಸರಿಯಾಗಿರಲಿದೆ. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನದ ಕಡೆಗೆ ಗಮನಹರಿಸಿ. ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತೀರಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Horoscope: January 4 To January 10 Prediction For 12 Zodiac Signs In Kannada

Weekly Horoscope: Here is weekly prediction for January 4 To January 10 prediction for each zodiac signs, read on....
Story first published: Saturday, January 4, 2025, 8:56 [IST]
X
Desktop Bottom Promotion