Weekly Horoscope: ಸೆಪ್ಟೆಂಬರ್ 22 ರಿಂದ ಸೆಪ್ಟೆಂಬರ್ 28ರ ವಾರ ಭವಿಷ್ಯ: ಯಾರಿಗೆಲ್ಲಾ ಈ ವಾರ ಅದೃಷ್ಟ!

ಸೆಪ್ಟೆಂಬರ್ 22 ರಿಂದ ಸೆಪ್ಟೆಂಬರ್ 28ರ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...

ಮೇಷ ರಾಶಿ

ಮೇಷ ರಾಶಿಯ ಜನರಿಗೆ ಈ ವಾರವು ಅತ್ಯಂತ ಶುಭಫಲವನ್ನು ತರುವ ವಾರವಾಗಿರಲಿದೆ, ನಿಮ್ಮ ಹಲವಾರು ಕೆಲಸಗಳಲ್ಲಿ ಯಶಸ್ಸು ಇರಲಿದೆ. ನೀವು ನಿಮ್ಮ ವಿರೋಧಿಗಳ ಬಗ್ಗೆಯೂ ಅತ್ಯಂತ ಜಾಗರೂಕರಾಗಿರಬೇಕು. ವಾರದ ಉತ್ತರಾರ್ಧದಲ್ಲಿ ಕೆಲಸದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ದೀರ್ಘ ಅಥವಾ ಅಲ್ಪಾವಧಿಯ ಪ್ರಯಾಣಕ್ಕೆ ಅವಕಾಶಗಳು ಇರುತ್ತವೆ. ವಾರದ ಉತ್ತರಾರ್ಧವು ಮೊದಲಾರ್ಧಕ್ಕಿಂತ ಹೆಚ್ಚು ಶುಭ ಮತ್ತು ಲಾಭದಾಯಕವಾಗಿರುತ್ತದೆ. ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳಲು ತಾಳ್ಮೆಯಿಂದ ಇರುವುದು ಉತ್ತಮ.

ವೃಷಭ ರಾಶಿ

ಈ ವಾರ ವೃಷಭ ರಾಶಿಯವರಿಗೆ ಮಿಶ್ರ ಫಲಿತಾಂಶ. ಈ ವಾರ ನೀವು ಅಶಾಂತಿ ಅಥವಾ ಆತಂಕವನ್ ದೂರ ಮಾಡುವಿರಿ. ಕುಟುಂಬದಿಂದ ಅನಿರೀಕ್ಷಿತ ಬೆಂಬಲ ಪಡೆಯುವಿರಿ. ನೀವು ಕಠಿಣ ಸಂದರ್ಭಗಳಲ್ಲಿ ತಾಳ್ಮೆ ಮತ್ತು ವಿವೇಚನೆಯಿಂದ ಮಾತನಾಡುವುದು, ನಿರ್ಧಾರ ತೆಗೆದುಕೊಳ್ಳುವುದು ಮಾಡಿ. ಈ ಸಮಯದಲ್ಲಿ ವೆಚ್ಚಗಳು ಹೆಚ್ಚಾಗಿರುತ್ತವೆ ಮತ್ತು ಕೆಲವು ಅನಿರೀಕ್ಷಿತ ಪ್ರಮುಖ ವೆಚ್ಚಗಳು ಹೊಸದಾಗಿ ಹುಟ್ಟಿಕೊಳ್ಳಲಿವೆ. ವಾರದ ಆರಂಭದಲ್ಲಿ ನಿಮ್ಮ ಸಂಗಾತಿಯೊಂದಿಗೆ ವಾದದ ಸಾಧ್ಯತೆಯಿದೆ. ಆದಾಗ್ಯೂ ವಾರದ ಉತ್ತರಾರ್ಧದ ವೇಳೆಗೆ, ಎಲ್ಲಾ ತಪ್ಪು ತಿಳುವಳಿಕೆಗಳು ಬಗೆಹರಿಯುತ್ತವೆ ಮತ್ತು ನಿಮ್ಮ ವೈವಾಹಿಕ ಜೀವನವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ.

Weekly Horoscope

ಮಿಥುನ ರಾಶಿ

ಈ ವಾರ ಮಿಥುನ ರಾಶಿಯವರಿಗೆ ಶುಭ ಮತ್ತು ಅದೃಷ್ಟವನ್ನು ತರುವ ವಾರ. ನಿಮ್ಮ ಮಾತು ಮತ್ತು ನಡವಳಿಕೆಯಿಂದ ಎಲ್ಲರ ಹೃದಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತೀರಿ. ಪ್ರಯಾಣ ಸಂಬಂಧವಾಗಿ ಈ ವಾರ ಶುಭವಿದೆ. ಪ್ರೀತಿ ಪಾತ್ರರಿಂದ ನಿಮಗೆ ಉತ್ತಮ ಸುದ್ದಿ ಕೇಳಿಬರಲಿದೆ. ನ್ಯಾಯಾಲಯ ಸಂಬಂಧಿ ವಿಚಾರಗಳು, ಆಸ್ತಿ ಖರೀದಿ, ವಾಹನ ಖರೀದಿ, ಚಿನ್ನ, ಬೆಳ್ಳಿ ಖರೀದಿಯಂತಹ ವಿಚಾರದಲ್ಲಿ ಶುಭವಾಗಲಿದೆ. ವಾರದ ಅಂತ್ಯದಲ್ಲಿ ನಿಮಗೆ ಆರ್ಥಿಕ ವಿಚಾರದಲ್ಲಿ ಬೆಂಬಲ ಇರಲಿದೆ. ಆರೋಗ್ಯ ಕೂಡ ಸುಧಾರಿಸಲಿದೆ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗಿನ ಅನ್ಯೋನ್ಯತೆ ಹೆಚ್ಚಾಗುತ್ತದೆ. ಅವಿವಾಹಿತರು ತಮ್ಮ ಜೀವನದಲ್ಲಿ ಬಯಸಿದ ಜೊತೆಗಾರರ ಪಡೆಯುವ ಸಾಧ್ಯತೆ ಇದೆ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ವಾರ ಸಂತೋಷ ಮತ್ತು ದುಃಖಗಳ ಮಿಶ್ರಣವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಸುತ್ತಲಿನ ಮಂದಿ ಒರಟಾಗಿ ನಿಮ್ಮಲ್ಲಿ ನಡೆದುಕೊಳ್ಳಬಹುದು, ಇದರಿಂದ ನಿಮಗೆ ನೋವಾಗುವ ಸನ್ನಿವೇಶಗಳವೆ. ವಾರವಿಡೀ ತಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳುವುದು ಉತ್ತಮ. ಬಾಕಿ ಉಳಿದ ಕೆಲಸಗಳ ಮತ್ತೆ ವಿಳಂಭವಾಗಬಹುದು. ಆಪ್ತರೊಬ್ಬರಿಂದ ಬರಬೇಕಿದ್ದ ಹಣಕಾಸು ನಿಮ್ಮ ಕೈ ಸೇರದೆ ಇರಬಹುದು. ಹಠಾತ್ ವೆಚ್ಚಗಳು ಎದುರಾಗಬಹುದು. ಆದಾಯದಷ್ಟೇ ಖರ್ಚು ಕೂಡ ನಿಮ್ಮಲ್ಲಿ ನೋಡಬಹುದು.

ಸಿಂಹ ರಾಶಿ

ಸಿಂಹ ರಾಶಿಯವರು ಈ ವಾರ ಯಾವುದಕ್ಕೂ ಆತುರಪಡುವುದನ್ನು ತಪ್ಪಿಸಬೇಕು. ಅದು ವೃತ್ತಿಯಾಗಿರಲಿ ಅಥವಾ ವ್ಯವಹಾರವಾಗಿರಲಿ, ಯಾವುದೇ ರೀತಿಯ ಅಪಾಯ ಅಥವಾ ಅಜಾಗರೂಕತೆಯು ತೊಂದರೆಗೆ ಕಾರಣವಾಗಬಹುದು. ವ್ಯಾಪಾರಿಗಳಿ ಈ ವಾರ ಉತ್ತಮವಾಗಿರಲಿದೆ. ಅವವಾಹಿತರು ಈ ವಾರ ಬಹಳ ಆಪ್ತರ ಭೇಟಿಯಾಗಬಹುದು. ಹಾಗೆ ನಿಮ್ಮ ಖರ್ಚುಗಳ ಮೇಲೆಯೂ ನೀವು ಗಮನವಿಡಿ. ಹಣಕಾಸು ಕುರಿತಾಗಿ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಹಾಗೆ ನಿಮ್ಮ ಹಣಕಾಸು ಸಮಸ್ಯೆಯೊಂದು ಬಗೆಹರಿಯಲಿದೆ. ಈ ವಾರ ಆಧ್ಯಾತ್ಮಿಕವಾಗಿ ಬಲವಾಗುತ್ತೀರಿ. ಅದೃಷ್ಟ ನಿಮ್ಮ ಕೈ ಹಿಡಿಯಲಿದೆ ನಿಮ್ಮ ಕೆಲಸಗಳಲ್ಲಿ ಯಶಸ್ಸು ಇರಲಿದೆ.

ಕನ್ಯಾ ರಾಶಿ

ಈ ವಾರದ ಮೊದಲಾರ್ಧದಲ್ಲಿ ಕನ್ಯಾ ರಾಶಿಯವರು ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗಬಹುದು. ಕುಟುಂಬಸ್ಥರಿಂದ ನಿಮಗೆ ದೊಡ್ಡ ಜವಾಬ್ದಾರಿಯೊಂದು ಬರಬಹುದು. ಕೃಷಿ ಸಂಬಂಧಿತ ವಿಚಾರವಾಗಿ ಲಾಭದಾಯಕ. ಕಿರಾಣಿ ಅಂಗಡಿ, ಸಣ್ಣಪುಟ್ಟ ವ್ಯವಹಾರ ನಡೆಸುತ್ತಿರುವ ಮಂದಿಗೆ ಲಾಭದಾಯಕ ದಿನಗಳಿವೆ. ವಾರದ ಅಂತ್ಯದಲ್ಲಿ ಪ್ರಯಾಣ ಮಾಡಬೇಕಾಗಿ ಬರಬಹುದು. ಉದ್ಯಮಿಗಳು ವಾರದ ಮಧ್ಯದಲ್ಲಿ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೀವು ಬಹಳ ಸಮಯದಿಂದ ಪ್ರಮುಖ ವ್ಯವಹಾರ ಒಪ್ಪಂದವನ್ನು ಮುಕ್ತಾಯಗೊಳಿಸಲು ಬಯಸುತ್ತಿದ್ದರೆ, ಅದು ಈ ವಾರ ಕಾರ್ಯರೂಪಕ್ಕೆ ಬರಬಹುದು. ನಿಮ್ಮ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮನ್ವಯವನ್ನು ಕಾಯ್ದುಕೊಳ್ಳುತ್ತೀರಿ. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ.

ತುಲಾ ರಾಶಿ

ಈ ವಾರ ತುಲಾ ರಾಶಿಯವರಿಗೆ ಅತ್ಯಂತ ಶುಭಕರವಾಗಿರುತ್ತದೆ. ತುಲಾ ರಾಶಿಯವರು ತಮ್ಮ ಮಾತು ಮತ್ತು ನಡವಳಿಕೆಯ ಮೂಲಕ ತಮ್ಮ ಎಲ್ಲಾ ಕೆಲಸಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತಾರೆ. ವಾರದ ಮೊದಲಾರ್ಧವು ಮನೆಯಲ್ಲಿ ಶಾಂತಿ ನೆಲೆಸಲಿದೆ. ಮನೆಯಲ್ಲಿ ನಿಮ್ಮ ವ್ಯವಹಾರ ಸಂಬಂಧವಾಗಿ ಬೆಂಬಲ ಸಿಗಲಿದೆ. ಒಡಹುಟ್ಟಿದವರಿಂದ ಹಣಕಾಸು ಸಂಬಂಧವಾಗಿ ಬೆಂಬಲ ಇರಲಿದೆ. ನೀವು ಹೊಸ ಆಸ್ತಿ, ವಾಹನಗಳು ಇತ್ಯಾದಿಗಳನ್ನು ಖರೀದಿಸಬಹುದು. ಯೋಜಿತ ಅಧ್ಯಯನಗಳು ಯಶಸ್ಸಿಗೆ ಕಾರಣವಾಗುತ್ತವೆ. ನ್ಯಾಯಾಲಯದ ಪ್ರಕರಣಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು. ವಾರದ ಉತ್ತರಾರ್ಧದಲ್ಲಿ ನ್ಯಾಯಾಲಯದಿಂದ ಗಮನಾರ್ಹ ಪರಿಹಾರದ ಸುದ್ದಿಯನ್ನು ನೀವು ಪಡೆಯಬಹುದು.

ವೃಶ್ಚಿಕ ರಾಶಿ

ಈ ವಾರ ವೃಶ್ಚಿಕ ರಾಶಿಯವರಿಗೆ ಅನುಕೂಲಕರ ದಿನವಾಗಿರಲಿದೆ. ಈ ವಾರ ನಿಮ್ಮ ವೃತ್ತಿ ಮತ್ತು ವ್ಯವಹಾರಕ್ಕೆ ಪ್ರಯೋಜನಕಾರಿ ಮತ್ತು ಸಮೃದ್ಧವಾಗಿರುತ್ತದೆ. ವಾರದ ಆರಂಭದಲ್ಲಿ ವ್ಯಾಪಾರ ಉದ್ದೇಶಗಳಿಗಾಗಿ ನೀವು ದೀರ್ಘ ಅಥವಾ ಕಡಿಮೆ ದೂರ ಪ್ರಯಾಣಿಸಬೇಕಾಗಬಹುದು. ವ್ಯಾಪಾರಿಗಳಿಗೆ ಲಾಭದಾಯಕ ವಾರ, ದೇವಾಲಯ ಭೇಟಿಯಾಗಿ ನೀವು ಪ್ರಯಾಣ ಮಾಡಬೇಕಾಗಿ ಬರಬಹುದು. ವಾರದ ಉತ್ತರಾರ್ಧದಲ್ಲಿ ಮನೆಯಲ್ಲಿ ಶುಭ ವಾತಾವರಣ ಇರಲಿದೆ. ಪ್ರೇಮ ಸಂಬಂಧಗಳು ಅನುಕೂಲಕರವಾಗಿರುತ್ತವೆ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಪತಿ-ಪತ್ನಿಯರ ನಡುವೆ ಉತ್ತಮ ಸಮನ್ವಯ ಇರುತ್ತದೆ.

ಧನು ರಾಶಿ

ಈ ವಾರ ಧನು ರಾಶಿಯವರು ಹೆಚ್ಚಿನ ಲಾಭ ನೋಡಬಹುದು. ವೃತ್ತಿ ಹಾಗೂ ವ್ಯವಹಾರ ಸಂಬಂಧವಾಗಿ ನಿಮಗೆ ಉತ್ತಮ ವಾರ. ಹಲವರಿಗೆ ಈ ವಾರದಂದು ಹಣಕಾಸು ವಿಚಾರವಾಗಿ ಲಾಭದಾಯಕ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವಾರದ ಉತ್ತರಾರ್ಧದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿದೆ. ಐಷಾರಾಮಿ ವಸ್ತುಗಳಲ್ಲಿ ಗಮನಾರ್ಹ ಹೂಡಿಕೆಯನ್ನು ನೋಡಬಹುದು. ಪರೀಕ್ಷೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ವಾರ ಸಕಾರಾತ್ಮಕವಾಗಿರುತ್ತದೆ. ನಿಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿಯೊಂದಿಗೆ ಸಂತೋಷ ಹೆಚ್ಚಾಗುತ್ತದೆ. ಪಿತ್ರಾರ್ಜಿತ ಆಸ್ತಿ ಸಂಬಂಧವಾಗಿ ಪ್ರಗತಿ ಇದೆ.

ಮಕರ ರಾಶಿ

ಈ ವಾರ ಮಕರ ರಾಶಿಯವರಿಗೆ ಸ್ವಲ್ಪ ಅಸ್ಥಿರವಾಗಬಹುದು. ನೀವು ಪ್ರತಿಯೊಂದು ಹೆಜ್ಜೆಯನ್ನೂ ತೀವ್ರ ಎಚ್ಚರಿಕೆಯಿಂದ ಇಡಬೇಕಾಗುತ್ತದೆ. ಆಪ್ತರೊಬ್ಬರಿಂದ ಹಣಕಾಸು ಸೌಲಭ್ಯ ಪಡೆಯುವಿರಿ. ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು. ಪ್ರೀತಿ ಪ್ರೇಮದ ವಿಚಾರವಾಗಿ ನಿಮಗೆ ಉತ್ತಮ ವಾರ. ವಾರದ ಆರಂಭವು ಆರೋಗ್ಯ ಮತ್ತು ಸಂಬಂಧಗಳಿಗೆ ಸ್ವಲ್ಪ ಪ್ರತಿಕೂಲವಾಗಿರಬಹುದು. ಅನೇಕರಲ್ಲಿ ಈ ವಾರ ಆಧ್ಯಾತ್ಮಿಕ ನೆಮ್ಮದಿ ಇರಲಿದೆ. ಮದುವೆ ವಿಚಾರವಾಗಿ ಶುಭ ಸುದ್ದಿ ಕೇಳುವ ವಾರ. ಕೆಲಸದ ಸಂಬಂಧವಾಗಿ ನಿಮಗೆ ಬಡ್ತಿ, ವರ್ಗಾವಣೆಯ ಕನಸು ನನಸಾಗಬಹುದು. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ.

ಕುಂಭ ರಾಶಿ

ಈ ವಾರ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ವಾರವು ದೀರ್ಘ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮಾರ್ಗ ಇರಲಿದೆ. ಕೆಲಸದಲ್ಲಿ ನಿಮ್ಮ ವಿರೋಧಿಗಳ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಖ್ಯಾತಿಯನ್ನು ಹಾಳು ಮಾಡಲು ಸಂಚು ರೂಪಿಸಬಹುದು. ವಾರದ ಉತ್ತರಾರ್ಧದಲ್ಲಿ ವ್ಯವಹಾರವು ಮತ್ತೊಮ್ಮೆ ಕುಂಠಿತವಾಗಬಹುದು. ಈ ಅವಧಿಯಲ್ಲಿ ವೆಚ್ಚಗಳು ಆದಾಯವನ್ನು ಮೀರುತ್ತವೆ. ಗೃಹಿಣಿಯರಲ್ಲಿ ಹಣಕಾಸು ಸಂಬಂಧವಾಗಿ ಮನಸ್ತಾಪಗಳು ಮೂಡಬಹುದು. ಆಪ್ತರೊಬ್ಬರಿಂದ ನಿಮಗೆ ಶುಭ ಸುದ್ದಿ ಇರಲಿದೆ.

ಮೀನ ರಾಶಿ

ನಿಮಗೆ ಈ ವಾರವು ಬಹಳ ಅನುಕೂಲವಿದೆ. ಆಧ್ಯಾತ್ಮಿಕವಾಗಿ ಈ ವಾರ ನಿಮಗೆ ಫಲದಾಯಕ ವಾರ. ವಾರದ ಆರಂಭದಲ್ಲಿ ಆಪ್ತ ಸ್ನೇಹಿತರ ಬೆಂಬಲದ ಕೊರತೆಯಿಂದಾಗಿ ನೀವು ಸ್ವಲ್ಪ ಖಿನ್ನತೆಗೆ ಒಳಗಾಗಬಹುದು, ಆದರೆ ವಾರದ ಮಧ್ಯದಲ್ಲಿ ನಿಮಗೆ ಉತ್ತಮ ದಿನಗಳು ಬರಲಿವೆ. ಅದ್ರಲ್ಲೂ ಹಣ‍ಕಾಸು ವ್ಯವಹಾರದಲ್ಲಿ ನಿಮಗೆ ಲಾಭದಾಯಕ. ಪ್ರೀತಿಯ ವಿಚಾರವಾಗಿ ಧನಾತ್ಮಕ ದಿನಗಳಿವೆ. ವಾರದ ಉತ್ತರಾರ್ಧದಲ್ಲಿ ನೀವು ದೈಹಿಕ ಮತ್ತು ಮಾನಸಿಕ ಆಯಾಸವನ್ನು ಅನುಭವಿಸುವಿರಿ. ವ್ಯವಹಾರದಲ್ಲಿ ನೀವು ಬಯಸಿದ ಲಾಭವನ್ನು ಸಾಧಿಸುವಿರಿ. ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿಯ ನಡುವಿನ ನಂಬಿಕೆ ಹೆಚ್ಚಾಗುತ್ತದೆ.

Story first published: Saturday, September 20, 2025, 18:10 [IST]
X
Desktop Bottom Promotion