Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾರ ಭವಿಷ್ಯ(ಅಕ್ಟೋಬರ್27-ನವೆಂಬರ್ 2): ದೀಪಾವಳಿಯ ಈ ವಾರ 12 ರಶಿಗಳಿಗೆ ಹೇಗಿರಲಿದೆ?
ದೀಪಾವಳಿಯ ಈ ವಾರ ಗ್ರಹಗತಿಗಳ ಸ್ಥಾನ ಯಾವ ರಾಶಿಯವರಿಗೆ ಹೇಗಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಮೇಷ ರಾಶಿಯವರೇ ಈ ವಾರ ಜಾಗ್ರತೆವಹಿಸಿ, ಈ ವಾರ ಹೆಚ್ಚು ಖರ್ಚು ಇರಬಹುದು,ಹಣವನ್ನು ನೋಡಿಕೊಂಡು ಖರ್ಚು ಮಾಡಿದರೆ ಒಳ್ಳೆಯದು. ವೃತ್ತಿ ಬದುಕಿನಲ್ಲಿ, ವೈಯಕ್ತಿಕ ಬದುಕಿನಲ್ಲಿ ಕೆಲ ಒತ್ತಡಗಳಿರಬಹುದು, ಏನೇ ಸಮಸ್ಯೆವಿದ್ದರೆ ನೀವು ತಾಳ್ಮೆಯಿಂದ ಬಗೆಹರಿಸಿ. ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡಬೇಡಿ. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನ ಮಾಡಿ. ಈ ವಾರ ಹೆಚ್ಚು ಪ್ರಯಾಣ ಮಾಡುವ ಸಾಧ್ಯತೆವಿದೆ. ಏಳು ದಿನಗಳಲ್ಲಿ ಭಾನುವಾರ ಹೆಚ್ಚು ಶುಭವಾಗಿದೆ.

ವೃಷಭ ರಾಶಿ
ಈ ವಾರ ನಿಮಗೆ ಲಾಭದಾಯಕವಾಗಿರಲಿದೆ. ಈ ಅವಧಿಯಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಗುವುದರಿಂದ ಖುಷಿಯಾಗುತ್ತೀರಿ. ವ್ಯಾಪಾರಿಗಳಿಗೂ ಈ ಏಳೂ ದಿನಗಳು ಲಾಭದಯಕವಾಗಿರಲಿದೆ. ಮನೆಯ ವಾತಾವರಣ ಚೆನ್ನಾಗಿರಲಿದೆ. ಹಬ್ಬದ ಸಮಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆಯಿಲ್ಲ, ಕೆಲಸದ ಒತ್ತಡವೂ ಅಧಿಕವಿರಲ್ಲ, ಹಾಗಾಗಿ ಖುಷಿಯಾಗಿರುತ್ತೀರಿ. ಆರೋಗ್ಯ ಕೂಡ ಚೆನ್ನಾಗಿರಲಿದೆ. ಈ ವಾರ ನಿಮಗೆ ಗುರುವಾರದ ದಿನ ಹೆಚ್ಚು ಶುಭವಾಗಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಗ್ರಹಗತಿಗಳ ಸ್ಥಾನವು ಅಷ್ಟೊಂದು ಅನುಕೂಲಕರವಲ್ಲ. ಈ ಅವಧಿಯಲ್ಲಿ ನಿಮ್ಮೆಲ್ಲಾ ಕೆಲಸ ಕಾರ್ಯಗಳು ನಿಮ್ಮ ಯೋಜನೆಯಂತೆ ನಡೆಯದೆ ಇದ್ದಾಗ ಅಸಮಧಾನ ಉಂಟಾಗುವುದು. ಕೆಲಸಕ್ಕೆ ಸಂಬಂಧಿಸಿದ ನಿರ್ಧಾರ ಆಲೋಚಿಸಿ ತೆಗೆದುಕೊಳ್ಳಿ. ಆರೋಗ್ಯದಲ್ಲಿಯೂ ನಿರ್ಲಕ್ಷ್ಯ ಬೇಡ. ಹಣಕಾಸು ಚೆನ್ನಾಗಿರಿದೆ. ಈ ವಾರ ಶುಕ್ರವಾರ ನಿಮಗೆ ಅತ್ಯಂತ ಶುಭದಿನವಾಗಿದೆ.
ಈ ವಾರ ಶುಕ್ರವಾರ ಹೆಚ್ಚು ಶುಭಕರವಾಗಿದೆ.
ಕರ್ಕ ರಾಶಿ
ಈ ವಾರ ಉತ್ತಮವಾಗಿರಲಿದೆ, ಈ ವಾರ ನಿಮ್ಮ ಕೆಲಸ ಕಾರ್ಯಗಳು ಯೋಜನೆಯಂತೆಯೇ ಮುಂದುವರೆಯಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಹಬ್ಬದ ಈ ವಾರ ಆರ್ಥಿಕವಾಗಿ ಉತ್ತಮವಾಗಿರಲಿದೆ. ಆರೋಗ್ಯ ಕೂಡ ಚೆನ್ನಾಗಿರಲಿದೆ. ಈ ವಾರ ನಿಮಗೆ ಗುರುವಾರ ಅತ್ಯಂತ ಶುಭ ದಿನವಾಗಿದೆ.
ಸಿಂಹ ರಾಶಿ
ಅಕ್ಟೋಬರ್ ಕೊನೆಯ ವಾರ ನಿಮೆ ಅನುಕೂಲಕರವಾಗಿಯೇ ಇದೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಕೆಲಸಕ್ಕೆ ಹುಡುಕಾಟ ಮಾಡುತ್ತಿದ್ದರೆ ನೀವು ನಿರೀಕ್ಷೆ ಮಾಡಿದ ಕಡೆ ಕೆಲಸ ಸಿಗಲಿದೆ. ಕುಟುಂಬ ಜೀವನ ತುಂಬಾ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ, ಸಮಯಕ್ಕೆ ಸರಿಯಾಗಿ ಔಷಧ ತೆಗೆದುಕೊಳ್ಳಿ. ಕುಟುಂಬ ಜೀವನ ಚೆನ್ನಾಗಿರಲಿದೆ. ಈ ವಾರ ಶುಕ್ರವಾರ ಹೆಚ್ಚು ಶುಭವಾಗಿದೆ.
ಕನ್ಯಾ ರಾಶಿ
ಈ ವಾರ ಕಳೆದ ವಾರಕ್ಕಿಂತ ಉತ್ತಮವಾಗಿರಲಿದೆ. ಕೆಲಸ ಹೆಚ್ಚಿರಬಹುದು, ಆದರೆ ಕೆಲಸಕ್ಕೆ ತಕ್ಕ ಫಲ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ಹಣಕಾಸು ಚೆನ್ನಾಗಿರಲಿದೆ, ಆದರೆ ಮಿತಿ ಮೀರಿ ಖರ್ಚು ಮಾಡಬೇಡಿ. ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ. ಈ ವಾರ ನಿಮಗೆ ಮಂಗಳವಾರ ಅತ್ಯಂತ ಶುಭವಾಗಿದೆ.
ತುಲಾ ರಾಶಿ
ತುಲಾ ರಾಶಿಯವರು ಈ ವಾರ ಸ್ವಲ್ಪ ಜಾಗ್ರತೆವಹಿಸಬೇಕು, ನಿಮಗೆ ವಹಿಸಿದ ಕೆಲವೊಂದು ಜವಾಬ್ದಾರಿ ಪೂರೈಸಲು ಕಷ್ಟವಾಗುವುದು. ಈ ಸಮಯದಲ್ಲಿ ನಿಮ್ಮ ಬಜೆಟ್‌ಗೆ ತಕ್ಕ ಖರ್ಚು ಮಾಡುವುದು ಒಳ್ಳೆಯದು, ಅತಿಯಾದ ಖರ್ಚು ಆರ್ಥಿಕ ತೊಂದರೆಗಳನ್ನುಂಟು ಮಾಡಬಹುದು. ಸಂಗಾತಿಯ ಜೊತೆ ಭಿನ್ನಾಭಿಪ್ರಾಯ ಉಂಟಾದರೆ ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಿ. ಈ ವಾರ ಸೋಮವಾರ ಹೆಚ್ಚು ಶುಭವಾಗಿದೆ.
ವೃಶ್ಚಿಕ ರಾಶಿ
ನೀವು ಅನಗ್ಯತ ವಿಷಯಗಳ ಕಡೆಗೆ ಗಮನಹರಿಸುವುದಕ್ಕಿಂತ ಕೆಲಸದ ಕಡೆಗೆ ಗಮಹರಿಸಬೇಕು. ಆರ್ಥಿಕ ದೃಷ್ಟಿಯಿಂದ ಈ ಅವಧಿ ಉತ್ತಮವಾಗಿರಲಿದೆ. ಹೆಚ್ಚು ಖರ್ಚು ಮಾಡಬೇಡಿ, ಉಳಿತಾಠಯದ ಕಡೆಗೆ ಗಮನಹರಿಸಬೇಕು. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಈ ವಾರ ಸೋಮವಾರ ಅತ್ಯಂತ ಶುಭವಾಗಿದೆ.
ಧನು ರಾಶಿ
ಧನು ರಾಶಿಯವರಿಗೆ ಈ ವಾರ ಉತ್ತಮವಾಗಿರಲಿದೆ. ಕೆಲಸ ಕಾರ್ಯಗಳು ಉತ್ತಮವಾಗಿರಲಿದೆ, ವ್ಯಾಪಾರಿಗಳು ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಹಣದ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ. ಹೀಗಾಗ ಹಣದ ತೊಂದರೆಯಿಂದ ನಿಲ್ಲಿಸಿದ್ದ ಕೆಲಸ ಚುರುಕುಗೊಳಿಸಲಿದೆ. ಈ ಅವಧಿಯಲ್ಲಿ ಆರೋಗ್ಯ ಚೆನ್ನಾಗಿರಲಿದೆ. ಈ ವಾರ ಶನಿವಾರ ನಿಮಗೆ ಶುಭವಾಗಿದೆ.
ಮಕರ ರಾಶಿ
ಈ ವಾರ ನೀವುಹೆಚ್ಚು ಜಾಗ್ರತೆವಹಿಸಿ. ಕೆಲಸದಲ್ಲಿ ಕೆಲ ಏರಳಿತವಿರಬಹುದು. ವ್ಯಾಪಾರಿಗಳಿಗೂ ಈ ಅವಧಿ ಸವಾಲಿನಿಂದ ಕೂಡಿದೆ. ಆರ್ಥಿಕವಾಗಿಯೂ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ. ಅಧಿಕ ಖರ್ಚುಗಳು ಬರಬಹುದು. ಆರೋಗ್ಯದ ಕಡೆಗೆ ಗಮನಹರಿಸಿ. ಈ ವಾರ ಸೋಮವಾರ ನಿಮಗೆ ಶುಭವಾಗಿದೆ.
ಕುಂಭ ರಾಶಿ
ಈ ವಾರ ನಿಮಗೆ ಅನುಕೂಲಕರವಾಗಿದೆ. ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಹಣದ ಖರ್ಚು ಹೆಚ್ಚಿರಲಿದೆ, ಆದರೆ ಆದಾಯ ಚೆನ್ನಾಗಿರುವುದರಿಂದ ಯಾವುದೇ ಸಮಸ್ಯೆವಿರಲ್ಲ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಆರೋಗ್ಯ ಚೆನ್ನಾಗಿರಲಿದೆ. ಕುಟುಂಬದ ಜೊತೆಗೆ ಸಂತೋಷದಿಂದ ಕಳೆಯುತ್ತೀರಿ. ಈ ವಾರ ನಿಮಗೆ ಶನಿವಾರ ಉತ್ತಮವಾಗಿರಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ವಾರ ತುಂಬಾ ಚೆನ್ನಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳು ಉತ್ತಮವಾಗಿ ಪೂರ್ಣಗೊಳ್ಳಲಿದೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಆರ್ಥಿಕವಾಗಿ ಉತ್ತಮವಾಗಿರಲಿದೆ. ಆರೋಗ್ಯ ಚೆನ್ನಾಗಿರಲಿದೆ. ಕುಟುಂಬದ ಜೊತೆಗೆ ಸಂತೋಷದಿಂದ ಕಳೆಯುತ್ತೀರಿ. ಈ ವಾರ ಶುಕ್ರವಾರ ಅತ್ಯಂತ ಶುಭವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications