Weekly Horoscope: ಅಕ್ಟೋಬರ್ 19 ರಿಂದ 25ರ ವಾರ ಭವಿಷ್ಯ, ದೀಪಾವಳಿ ವಾರ ಯಾರಿಗೆ ಶುಭ!

ಅಕ್ಟೋಬರ್ 19ರಿಂದ ಅಕ್ಟೋಬರ್ 25ರ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...

ಮೇಷ ರಾಶಿ

ಈ ವಾರ ಮೇಷ ರಾಶಿಯ ಜನರಲ್ಲಿ ಮಿಶ್ರ ಫಲಿತಾಂಶಗಳ ನೋಡಬಹುದು. ವಾರದ ಆರಂಭದಲ್ಲಿ ಜನರೊಂದಿಗೆ ವಾದಗಳನ್ನು ತಪ್ಪಿಸಿ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಸಂಬಂಧಗಳ ಬಗ್ಗೆ ವಿಶೇಷ ಗಮನ ಕೊಡಿ. ವಾರದ ಆರಂಭದಲ್ಲಿ ನೀವು ಹಲವು ರೀತಿಯ ಸವಾಲುಗಳ ಎದುರಿಸಬಹುದು. ಹಣಕಾಸು ವಿಚಾರವಾಗಿಯೂ ಒಂದಿಷ್ಟು ಸವಾಲುಗಳಿವೆ. ಅಪಾಯಕಾರಿ ಕೆಲಸಗಳನ್ನು ಮಾಡುವವರು, ವಾಹನ ಚಲಾಯಿಸುವವರು ಈ ವಾರ ಎಚ್ಚರಿಕೆಯಿಂದ ಇರಿ. ವಾರದ ದ್ವಿತಿಯಾರ್ಧದಲ್ಲಿ ದಿಢೀರ್ ಉಡುಗೊರೆಗಳ ಪಡೆಯಬಹುದು. ದೀರ್ಘ ಪ್ರಯಾಣಗಳು, ಪ್ರವಾಸಗಳು, ಕುಟುಂಬಸ್ಥರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ಖರ್ಚುಗಳ ಕಡೆಗೆ ಹೆಚ್ಚು ಗಮನವಿಡಿ.

ವೃಷಭ ರಾಶಿ

ಈ ವಾರ ವೃಷಭ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ವಾರದ ಆರಂಭದಲ್ಲಿ ನೀವು ದೀರ್ಘ ಪ್ರಯಾಣವನ್ನು ಕೈಗೊಳ್ಳಬೇಕಾಗಬಹುದು. ಈ ವಾರ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬಹುದು. ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ, ಈ ವಾರ ನಿಮಗೆ ಅವಕಾಶ ಸಿಗಬಹುದು. ದೊಡ್ಡ ಅಥವಾ ಸಣ್ಣ ಯಾವುದೇ ಅವಕಾಶವನ್ನು ಕಳೆದುಕೊಳ್ಳಲು ಬಿಡಬೇಡಿ. ಮನೆಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ಛಾಗಲಿದೆ.

Weekly Horoscope

ಮಿಥುನ ರಾಶಿ

ಈ ವಾರ ಮಿಥುನ ರಾಶಿಯವರಿಗೆ ಅದೃಷ್ಟ. ನೀವು ಈ ವಾರ ಸಂತೋಷ ಮತ್ತು ಸಮೃದ್ಧಿಯನ್ನು ಕಾಣುವಿರಿ. ವಾರದ ಆರಂಭದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳ ಪೂರ್ಣಗೊಳಿಸುವಿರಿ. ಆಪ್ತ ಸ್ನೇಹಿತರ ಬೆಂಬಲದೊಂದಿಗೆ, ನೀವು ಸಮಯಕ್ಕೆ ಸರಿಯಾಗಿ ಒಂದು ಪ್ರಮುಖ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ವಾರದ ಉತ್ತರಾರ್ಧದಲ್ಲಿ ನಿಮ್ಮ ಕುಟುಂಬದೊಂದಿಗೆ ದೀರ್ಘ ಪ್ರಯಾಣದ ಸಾಧ್ಯತೆ ಇರುತ್ತದೆ. ಹಲವು ಆರ್ಥಿಕ ವಿಚಾರಗಳಲ್ಲಿ ಶುಭವಿದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತವಿದೆ.

ಕರ್ಕ ರಾಶಿ

ಈ ವಾರ ಕರ್ಕ ರಾಶಿಯವರಿಗೆ ಶುಭ ಮತ್ತು ಅದೃಷ್ಟವನ್ನು ನೀಡುವ ವಾರ. ನಿಮ್ಮ ಯೋಜಿತ ಕಾರ್ಯಗಳು ಸಮಯಕ್ಕೆ ಮತ್ತು ಅಪೇಕ್ಷಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ವಾರದ ಆರಂಭವು ಅತ್ಯಂತ ಶುಭ ಮತ್ತು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ವ್ಯವಹಾರದಲ್ಲಿ ಗಮನಾರ್ಹ ಲಾಭಗಳ ನೀವು ನೋಡುತ್ತೀರಿ. ಆಪ್ತರ ಬಳಿ ನಿಮ್ಮ ಹಣಕಾಸು ಸಮಸ್ಯೆಗಳ ಹಂಚಿಕೊಳ್ಳುವುದು ಶುಭ ತರಲಿದೆ. ಬುದ್ದಿವಂತಿಕೆಯಿಂದ ನಿಮ್ಮ ಕೆಲಸಗಳ ಪೂರ್ಣ ಮಾಡುವಿರಿ. ವಾರದ ದ್ವಿತಿಯಾರ್ಧದಲ್ಲಿ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರವಿದೆ. ಪ್ರಯಾಣಗಳಲ್ಲಿ ಶುಭವಿದೆ. ಅನಗತ್ಯ ವಿಚಾರಗಳಿಗೆ ಮಾಡುತ್ತಿದ್ದ ಖರ್ಚುಗಳು ನಿವಾರಣೆಯಾಗಲಿದೆ.

ಸಿಂಹ ರಾಶಿ

ಈ ವಾರ ಸಿಂಹ ರಾಶಿಯ ಜನರಿಗೆ ಉತ್ತಮ ಸಮಯ. ನಿಮ್ಮ ಹಣಕಾಸು ವಿಚಾರಗಳು ಸುಗಮವಾಗಲಿದೆ. ವಾರದ ಆರಂಭದಲ್ಲಿ ನೀವು ಕೆಲಸದಲ್ಲಿ ಘರ್ಷಣೆಗಳನ್ನು ಎದುರಿಸಬೇಕಾಗುತ್ತದೆ. ಸಣ್ಣ ಕೆಲಸಗಳನ್ನು ಸಹ ಪೂರ್ಣಗೊಳಿಸಲು ನೀವು ಹೆಚ್ಚುವರಿ ಪ್ರಯತ್ನ ಮಾಡಬೇಕಾಗಬಹುದು. ಅನಿರೀಕ್ಷಿತ ಸ್ಥಳಗಳಿಗೆ ನೀವು ಪ್ರಯಾಣ ಮಾಡಬಹುದು. ನಿಮ್ಮ ವ್ಯವಹಾರಗಳು, ಹೂಡಿಕೆಗಳು ಲಾಭ ತರಲಿವೆ. ವ್ಯಾಪಾರದಲ್ಲಿ ಲಾಭವಿದೆ. ಅದ್ರಲ್ಲೂ ಹೋಟೆಲ್, ರಸ್ತೆ ಬದಿ ವ್ಯಾಪಾರಿಗಳು ಲಾಭ ನೋಡಲಿದ್ದಾರೆ. ಪೂರ್ವಜರ ಆಸ್ತಿಯ ಬಗ್ಗೆ ನೀವು ನ್ಯಾಯಾಲಯ ವಿಚಾರದಲ್ಲಿ ಶುಭವಿದೆ. ದೇವಾಲಯ ಭೇಟಿಯಂತಹ ಸಾಧ್ಯತೆ ಇದೆ.

ಕನ್ಯಾ ರಾಶಿ

ಈ ವಾರ ಕನ್ಯಾ ರಾಶಿಯವರಿಗೆ ಶುಭ ತರುತ್ತದೆ. ವಾರದ ಆರಂಭದಿಂದ ನಿಮ್ಮ ಕೆಲಸ ಅನುಕೂಲಕರವಾಗಿರುತ್ತದೆ. ನಿಮ್ಮ ಪ್ರಯಾಣಗಳಲ್ಲಿ ಶುಭವಿದೆ.
ನೀವು ಐಷಾರಾಮಿ ವಸ್ತುಗಳಿಗೆ ಹಣ ಖರ್ಚು ಮಾಡುತ್ತೀರಿ. ನೀವು ಬಯಸಿದ್ದನ್ನು ಪಡೆಯುವುದರಿಂದ ಮನೆಯ ಸಂತಸಕ್ಕೆ ಕಾರಣವಾಗುತ್ತೀರಿ. ಭೂಮಿ ಮತ್ತು ಆಸ್ತಿ ಸಂಬಂಧಿತ ವಿಚಾರವಾಗಿ ನಿಮಗೆ ಶುಭವಿದೆ. ದಾಂಪತ್ಯ ವಿಚಾರದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಎದುರಾಗಬಹುದು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ. ಈ ಸಮಯದಲ್ಲಿ, ನೀವು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುತ್ತೀರಿ. ಉದ್ಯಮಿಗಳು ತಮ್ಮ ಪರಿಸ್ಥಿತಿಯಲ್ಲಿ ಹಠಾತ್ ಸುಧಾರಣೆಯನ್ನು ಅನುಭವಿಸಬಹುದು. ಮನೆಯಲ್ಲಿ ನಿಮಗೆ ಬೆಂಬಲ ಇರಲಿದೆ.

ತುಲಾ ರಾಶಿ

ಈ ವಾರ ತುಲಾ ರಾಶಿಯವರಿಗೆ ಮಿಶ್ರ ಫಲವಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಬಹಳ ಶುಭವಾಗುತ್ತದೆ. ಆದ್ರೆ ನೀವು ಮಾಡುವ ಕೆಲಸಗಳು ಶ್ರಮದಾಯಕವಾಗಬಹುದು. ಹಾಗೆ ಅದರ ಫಲಿತಾಂಶಗಳಿಂದ ನಿಮ್ಮ ತೃಪ್ತಿ ಕಡಿಮೆಯಾಗಬಹುದು. ವಾರದ ಮಧ್ಯದಲ್ಲಿ ನಿಮ್ಮ ಆರೋಗ್ಯ ಸ್ವಲ್ಪ ದುರ್ಬಲವಾಗಿರಬಹುದು. ಈ ಸಮಯದಲ್ಲಿ ನೀವು ಪ್ರಯಾಣಗಳಿಂದ ದೂರ ಉಳಿಯುವುದು ಉತ್ತಮ. ವಾರದ ಕೊನೆಯಲ್ಲಿ ನೀವು ಧನಲಾಭ ತರುವ ಕೆಲಸ ಮಾಡುವಿರಿ. ಕುಟುಂಬದ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಿರಬಹುದು. ಕುಟುಂಬ ಸದಸ್ಯರೊಂದಿಗೆ ಪ್ರವಾಸ ತೆರಳಬಹುದು. ಹಲವು ಪೂರ್ವ ನಿಯೋಜಿತ ಕೆಲಸಗಳು ಯಶಸ್ವಿಯಾಗಲಿದೆ.

ವೃಶ್ಚಿಕ ರಾಶಿ

ಈ ವಾರ ವೃಶ್ಚಿಕ ರಾಶಿಯವರಿಗೆ ಶುಭ ಮತ್ತು ಅದೃಷ್ಟವನ್ನು ತರುತ್ತದೆ. ನಿಮ್ಮ ಹಲವು ಕೆಲಸಗಳನ್ನು ಈ ವಾರ ಪೂರ್ಣ ಮಾಡುವಿರಿ. ನಿಮ್ಮ ಸಾಲದ ಪ್ರಮಾಣ ಕಡಿಮೆಯಾಗಲಿದೆ. ಹಾಗೆ ಆರ್ಥಿಕವಾಗಿ ಹೊಸ ಆದಾಯ ಮೂಲ ನೀವು ಹುಡುಕಬಹುದು. ಪ್ರಯಾಣಗಳ ಮಾಡುವ ಸನ್ನಿವೇಶದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ. ಸ್ನೇಹಿತರು ಕುಟುಂಬಸ್ಥರೊಂದಿಗೆ ನೀವು ಪ್ರವಾಸ ಮಾಡುವಿರಿ. ಧಾರ್ಮಿಕ ಚಟುವಟಿಕೆಗಳು ಮತ್ತು ಪ್ರಾರ್ಥನೆಗಳಲ್ಲಿ ನಿಮ್ಮ ಭಕ್ತಿ ಹೆಚ್ಚಾಗುತ್ತದೆ. ಉದ್ಯೋಗದಲ್ಲಿರುವವರು ಹೆಚ್ಚಿನ ಕೆಲಸದ ಹೊರೆ ಅನುಭವಿಸಬಹುದು.

ಧನು ರಾಶಿ

ಈ ವಾರ ಧನು ರಾಶಿಯ ಮಂದಿಗೆ ಉತ್ತಮ ಸಮಯ. ನಿಮ್ಮ ಕೆಲಸಗಳು ಸುಲಭವಾಗಿರುವುದಿಲ್ಲ. ಹಲವು ಕೆಲಸಗಳು ಶ್ರಮದಾಯಕವಾಗಬಹುದು. ಅನಿರೀಕ್ಷಿತವಾಗಿ ಎದುರಾಗುವ ಯಾವುದೇ ಸಮಸ್ಯೆಗಳಿಗೆ ನೀವು ಸಿದ್ಧರಾಗಿರಬೇಕು. ನಿರ್ದಿಷ್ಟವಾಗಿ ಉದ್ಯೋಗದಲ್ಲಿರುವ ವ್ಯಕ್ತಿಗಳು ಹೊಸ ಜವಾಬ್ದಾರಿ ನೋಡಬಹುದು. ನಿಮ್ಮಲ್ಲಿ ದೊಡ್ಡ ಹೂಡಿಕೆಗಳು, ಉಳಿತಾಯಗಳು ಕಡಿಮೆಯಾಗಬಹುದು. ವಾಹನ ಖರೀದಿಯ ಲಾಭವಿದೆ. ಹಾಗೆ ಮನೆಗಾಗಿಯೂ ನೀವು ದೊಡ್ಡ ಖರ್ಚೊಂದನ್ನು ಮಾಡಬಹುದು.

ಮಕರ ರಾಶಿ

ಈ ವಾರ ಮಕರ ರಾಶಿಯವರಿಗೆ ಮಿಶ್ರ ಫಲವಾಗಿರುತ್ತದೆ. ವಾರದ ಆರಂಭವು ಸವಾಲಿನದ್ದಾಗಿರುತ್ತದೆ ಆದರೆ ಪ್ರಯೋಜನಕಾರಿಯಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮಗಳಿಗೆ ತಕ್ಕ ಪ್ರತಿಫಲ ಪಡೆಯಬಹುದು. ಸ್ನೇಹಿತರಿಂದ ಬರಬೇಕಿದ್ದ ಹಣ ಈ ಸಮಯದಲ್ಲಿ ಸಂದಾಯ ಆಗಲಿದೆ. ನಿಮ್ಮ ಅಗತ್ಯ ಓಡಾಟಗಳಲ್ಲಿ ಯಶಸ್ಸು ಇದೆ. ಹಣ‍ಕಾಸು ಸ್ಥಿತಿ ಸುಧಾರಿಸಲಿದೆ. ಆಪ್ತರಿಂದ ಶುಭ ಕಾರ್ಯ ಸಂಬಂಧವಾಗಿ ಆಹ್ವಾನ ಬರುವ ಹಿನ್ನೆಲೆ ಈ ವಾರ ನೀವು ಪ್ರಯಾಣಿಸಬಹುದು. ಮನೆಗಾಗಿ ಖರ್ಚು ಮಾಡಬಹುದು. ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಿ. ಗಂಡ ಮತ್ತು ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.

ಕುಂಭ ರಾಶಿ

ಈ ವಾರ ಕುಂಭ ರಾಶಿಯ ಜನರಿಗೆ ಶುಭಗಾಲ. ವಾರದ ಆರಂಭ ಸಂತಸದಿಂದ ಆರಂಭವಾಗಲಿದೆ. ಈ ವಾರದಲ್ಲಿ ನೀವು ರಾತ್ರಿ ಪ್ರಯಾಣಗಳ ತಪ್ಪಿಸುವುದು ಉತ್ತಮ. ಮನೆಯಲ್ಲಿ ಶುಭ ವಾತಾವರಣ ಇರಲಿದೆ. ಹೊಸದಾಗಿ ಉದ್ಯೋಗ ಹುಡುಕುತ್ತಿದ್ದ ಮಂದಿ ಈ ವಾರ ಬಹಳ ಶ್ರಮ ಹಾಕಬೇಕಾಗುತ್ತದೆ. ಅನೇಕರಲ್ಲಿ ಹೊಸ ರೀತಿಯ ಸಮಸ್ಯೆಗಳು ಉದ್ಭವಿಸಬಹುದು. ಸಾಲದ ಪ್ರಮಾಣ ಏರಿಕೆಯಾಗುವುದು ಹೊಸ ಒತ್ತಡಕ್ಕೆ ಕಾರಣವಾಗಬಹುದು. ನಿಮ್ಮಿಂದಾಗಿ ಬೇರೆಯವರಿಗೆ ಹಲವು ರೀತಿಯಲ್ಲಿ ಸಹಕಾರ ಸಿಗಲಿದೆ. ಪ್ರೇಮ ವ್ಯವಹಾರಗಳಲ್ಲಿ ನಂಬಿಕೆ ಮತ್ತು ಆಕರ್ಷಣೆ ಹೆಚ್ಚಾಗುತ್ತದೆ. ದಾಂಪತ್ಯ ಜೀವನವು ಸಂತೋಷವಾಗಿರುತ್ತದೆ.

ಮೀನ ರಾಶಿ

ಈ ವಾರ ನಿಮಗೆ ಸಾಮಾನ್ಯವಾಗಿರಲಿದೆ. ವಾರದ ಆರಂಭವು ಸ್ವಲ್ಪ ಸವಾಲಿನದ್ದಾಗಿದ್ದರೂ, ಉತ್ತರಾರ್ಧವು ಅನುಕೂಲಕರ ಫಲಿತಾಂಶಗಳ ತರಲಿದೆ. ಕೌಟುಂಬಿಕ ವಿಚಾರದಲ್ಲಿದ್ದ ಮನಸ್ತಾಪಗಳು ನಿವಾರಣೆಯಾಗಲಿದೆ. ಸ್ವಂತ ಉದ್ಯೋಗಿಗಳು, ವ್ಯಾಪಾರಿಗಳು ಅಧಿಕ ಲಾಭ ನೋಡುವ ವಾರ, ಪ್ರಯಾಣಗಳನ್ನು ಕಡಿಮೆ ಮಾಡುವುದು ಉತ್ತಮ. ಅಮಾವಾಸ್ಯೆ ಹಿನ್ನಲೆ ದೊಡ್ಡ ವ್ಯವಹಾರಗಳು, ಒಪ್ಪಂದಗಳಿಂದ ದೂರ ಇರುವುದು ನಿಮಗೆ ಒಳಿತು ಮಾಡಲಿದೆ. ಕೆಲಸದ ಕಾರಣದಿಂದಾಗಿ ಕೈಗೊಂಡ ಪ್ರಯಾಣದಿಂದ ವಿಷಾದ ವ್ಯಕ್ತವಾಗುವ ಪರಿಸ್ಥಿತಿ ಇರಲಿದೆ. ಆಹಾರ ಸಂಬಂಧಿ ಖರ್ಚುಗಳು ಈ ವಾರ ಹೆಚ್ಚಾಗುತ್ತದೆ. ಸಮಸ್ಯೆಗಳಿಂದ ಹೊರಬರಬಹುದು.

English summary

Weekly Horoscope From October 19 To October 25: Lucky To These Zodiac Signs

Weekly Horoscope From October 29 To October 25: These zodiac get more benefits during this 7 days, read on...
Story first published: Saturday, October 18, 2025, 13:25 [IST]
X
Desktop Bottom Promotion