Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Weekly Horoscope: ನವೆಂಬರ್ 23ರಿಂದ 30ರ ವರೆಗೆ ಮೇಷದಿಂದ ಸಿಂಹ ವರೆಗಿನ ವಾರ ಭವಿಷ್ಯ!
ನವೆಂಬರ್ 23ರಿಂದ ನವೆಂಬರ್ 30ರ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ಮೇಷ ರಾಶಿ
ಮೇಷ ರಾಶಿಯವರಿಗೆ ಈ ವಾರ ಬಹಳ ಅನುಕೂಲಕರ ವಾರವಾಗಿರಲಿದೆ. ವಾರದ ಆರಂಭದಲ್ಲಿ ನಿಮ್ಮ ಹಲವು ಕೆಲಸಗಳ ಸಂಬಂಧ ಪ್ರಯಾಣಗಳಲ್ಲಿ ಭಾಗಿಯಾಗಬೇಕಾಗುತ್ತದೆ. ವಾರದ ಆರಂಭದಲ್ಲಿ ನೀವು ಕೆಲಸಕ್ಕೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ನಿಮ್ಮ ಮೇಲಧಿಕಾರಿಗಳ ಬೆಂಬಲ ಪಡೆಯದಿರಬಹುದು. ಆದಾಯ ಮತ್ತು ವೆಚ್ಚಗಳು ಸಮಾನವಾಗಿರುತ್ತದೆ. ವಾರದ ಉತ್ತರಾರ್ಧವು ಆರೋಗ್ಯ ಮತ್ತು ಸಂಬಂಧಗಳಿಗೆ ಪ್ರತಿಕೂಲವಾಗಿರುತ್ತದೆ. ಈ ಸಮಯದಲ್ಲಿ ನೀವು ಋತುಮಾನದ ಕಾಯಿಲೆಗಳಿಂದ ಪ್ರಭಾವಿತರಾಗಬಹುದು. ನಿಮ್ಮ ಪ್ರೀತಿಪಾತ್ರರು ಯಾವುದೋ ವಿಷಯದ ಬಗ್ಗೆ ಅಸಮಾಧಾನಗೊಳ್ಳಬಹುದು. ಮನೆಯಲ್ಲಿನ ಹಣಕಾಸಿನ ಒತ್ತಡವು ಈ ವಾರ ನಿವಾರಣೆಯಾಗಲಿದೆ.
ವೃಷಭ ರಾಶಿ
ಈ ವಾರ ವೃಷಭ ರಾಶಿಯವರಿಗೆ ಅತ್ಯಂತ ಆಹ್ಲಾದಕರ ಮತ್ತು ಅನುಕೂಲಕರವಾಗಿರುತ್ತದೆ. ಈ ವಾರ ನಿಮ್ಮ ಯೋಜಿತ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಎಲ್ಲಾ ಕೆಲಸಗಳನ್ನು ನೀವು ಪ್ರಾಮಾಣಿಕವಾಗಿ ಮುಗಿಸಲಿದ್ದೀರಿ. ಈ ವಾರ ನಿರುದ್ಯೋಗಿಗಳು ಅವರು ಬಯಸುವ ಉದ್ಯೋಗ ಪಡೆಯುವ ಅವಕಾಶಕ್ಕೆ ಹತ್ತಿರವಾಗಲಿದ್ದೀರಿ. ಕೆಲಸದ ಸ್ಥಳದಲ್ಲಿನ ಒತ್ತಡ ನಿವಾರಣೆಯಾಗಲಿದೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಈ ಸಮಯ ವ್ಯವಹಾರದಲ್ಲಿ ತೊಡಗಿರುವವರಿಗೆ ಅನುಕೂಲಕರವಾಗಿರುತ್ತದೆ. ಆರೋಗ್ಯವು ಸಾಮಾನ್ಯವಾಗಿರಲಿದೆ. ವಾರದ ಉತ್ತರಾರ್ಧದಲ್ಲಿ ಪ್ರೀತಿಪಾತ್ರರ ಆಗಮನವು ನಿಮ್ಮ ಮನೆಗೆ ಸಂತೋಷದ ವಾತಾವರಣ ತರಲಿದೆ.

ಮಿಥುನ ರಾಶಿ
ಮಿಥುನ ರಾಶಿಯವರು ಈ ವಾರ ಯಾವುದೇ ಕೆಲಸವನ್ನು ಎಚ್ಚರಿಕೆಯಿಂದ ಮತ್ತು ವಿವೇಕದಿಂದ ಮಾಡಬೇಕಿದೆ. ಯಾರಿಂದಾದರು ನಿಮಗೆ ಹಣ ಬರುವುದು ಬಾಕಿ ಉಳಿದಿದ್ದರೆ ಈ ಸಮಯದಲ್ಲಿ ಅವರಿಂದ ಪಡೆಯುವ ಸಾಧ್ಯತೆ ಹೆಚ್ಚಾಗಿರಲಿದೆ. ಈ ವಾರ ನಿಮ್ಮ ಓಡಾಟಗಳು ಹೆಚ್ಛಾಗುತ್ತದೆ. ಹಾಗೆ ನಿಮ್ಮಿಂದಾಗಿ ಮನೆಗೆ ದೊಡ್ಡ ವಸ್ತುವೊಂದು ಅಥವಾ ಐಷಾರಾಮಿ ವಸ್ತುವೊಂದನ್ನು ಖರೀದಿಸಲಿದ್ದೀರಿ. ವಿದ್ಯಾರ್ಥಿಗಳು ಈ ಸಮಯದಲ್ಲಿ ಅಧ್ಯಯನದತ್ತ ಒಲುವು ನೀಡುವುದು ಉತ್ತಮ. ಹೊಸ ವ್ಯಾಪಾರ ಹಾಗೂ ವ್ಯವಹಾರದಲ್ಲಿ ಪ್ರಗತಿ ನೋಡಬಹುದು, ಗೃಹಿಣಿಯರಿಗೆ ಈ ವಾರ ಅದೃಷ್ಟಕರ ಲಾಭಗಳು ಬರಲಿವೆ.
ಕರ್ಕ ರಾಶಿ
ಕರ್ಕ ರಾಶಿಯವರು ಈ ವಾರ ಯಾವುದಕ್ಕೂ ಆತುರಪಡುವುದನ್ನು ತಪ್ಪಿಸಬೇಕು. ವ್ಯವಹಾರ ಸಂಬಂಧಿತ ವಿಚಾರವಾಗಿ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳುವಿರಿ. ನಿಮ್ಮ ದೀರ್ಘಕಾಲದ ಅನಾರೋಗ್ಯವೊಂದರಿಂದ ನೀವು ಮುಕ್ತಿ ಪಡೆಯಲಿದ್ದೀರಿ. ಯಾರ ಬಳಿಯಾದರು ಸಾಲ ಪಡೆದಿದ್ದರೆ ಈ ವಾರದಂದು ಮರಳಿ ನೀಡಬೇಕಾದ ದೊಡ್ಡ ಒತ್ತಡಗಳ ಎದುರಿಸುವಿರಿ. ನೀವು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳಲು, ಈ ವಾರ ನೀವು ಸಣ್ಣ ವಿಷಯಗಳನ್ನು ನಿರ್ಲಕ್ಷಿಸಬೇಕಾಗುತ್ತದೆ, ಇಲ್ಲದಿದ್ದರೆ ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯಗಳು ದೊಡ್ಡದಾಗಬಹುದು. ಪ್ರೇಮ ಸಂಬಂಧಗಳಲ್ಲಿ ತಪ್ಪು ತಿಳುವಳಿಕೆಯ ಅಪಾಯವಿದೆ.
ಸಿಂಹ ರಾಶಿ
ಈ ವಾರ ಸಿಂಹ ರಾಶಿಯವರಿಗೆ ಅತ್ಯಂತ ಶುಭವಾಗಿರುತ್ತದೆ. ಅದು ವೃತ್ತಿಯಾಗಿರಲಿ ಅಥವಾ ವ್ಯವಹಾರವಾಗಿರಲಿ, ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ಜೀವನದ ಪ್ರತಿಯೊಂದು ಅಂಶದಲ್ಲೂ ನೀವು ಸಕಾರಾತ್ಮಕ ಸುದ್ದಿ ಪಡೆಯುತ್ತೀರಿ. ಕುಟುಂಬದಿಂದ ಸ್ನೇಹಿತರವರೆಗೆ ಎಲ್ಲರೂ ತಮ್ಮ ಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡುತ್ತಾರೆ. ನೀವು ಉದ್ಯೋಗ ಬದಲಾವಣೆ ಆಲೋಚಿಸಿದ್ದರೆ ಉತ್ತಮ ಅವಕಾಶ ಪಡೆಯಬಹುದು. ಈ ವಾರ ನೀವು ಹಿಂದಿನ ಹೂಡಿಕೆಗಳಿಂದ ಲಾಭ ಪಡೆಯಬಹುದು. ಒಂದು ಯೋಜನೆ ಅಥವಾ ವ್ಯಕ್ತಿಯೊಂದಿಗೆ ಸಿಲುಕಿಕೊಂಡಿದ್ದ ಹಣವನ್ನು ಮರಳಿ ಪಡೆಯಬಹುದು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡುತ್ತಾರೆ. ದಾಂಪತ್ಯದಲ್ಲಿ ನೆಮ್ಮದಿ ಇರಲಿದೆ.
ಕನ್ಯಾ ರಾಶಿ
ಈ ವಾರ ಕನ್ಯಾ ರಾಶಿಯ ಜನರಿಗೆ ಅತ್ಯಂತ ಶುಭಗಾಲ ಈ ಸಮಯದಲ್ಲಿ ನಿಮ್ಮ ಹಣಕಾಸಿನ ನೆಮ್ಮದಿ ಅನುಭವಿಸಬಹುದು. ವಾರದ ಆರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆನಂದಿಸುವ ಸಮಯವನ್ನು ಕಳೆಯುತ್ತೀರಿ. ಆರ್ಥಿಕ ಮತ್ತು ಸಾಮಾಜಿಕ ದೃಷ್ಟಿಕೋನದಿಂದ, ಸಮಯ ಅನುಕೂಲಕರವಾಗಿರುತ್ತದೆ. ನೀವು ಬಹಳ ದಿನಗಳಿಂದ ಐಷಾರಾಮಿ ವಸ್ತುವನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಈ ವಾರ ನಿಮ್ಮ ಬಹುಸಮಯದ ಆಸೆಗಳು ಈಡೇರಲಿದೆ. ವಾರದ ಅಂತ್ಯದಲ್ಲಿ ಹಣಕ್ಕೆ ಸಂಬಂಧಿಸಿದ ಅಡೆತಡೆಗಳು ಎದುರಾಗಬಹುದು. ಆಪ್ತರಿಂದ ಸಮಸ್ಯೆಗಳಿಗೆ ಪರಿಹಾರ ಕೂಡ ಪಡೆಯಲಿದ್ದೀರಿ.



Click it and Unblock the Notifications











