Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Weekly Horoscope: ನವೆಂಬರ್ 23ರಿಂದ 30ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ನವೆಂಬರ್ 23ರಿಂದ ನವೆಂಬರ್ 30ರ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ತುಲಾ ರಾಶಿ
ತುಲಾ ರಾಶಿಯವರು ಈ ವಾರ ಅದೃಷ್ಟವನ್ನು ತರುತ್ತಾರೆ. ಈ ವಾರ, ನೀವು ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಅಪೇಕ್ಷಿತ ಯಶಸ್ಸನ್ನು ಸಾಧಿಸುವಿರಿ. ವಾರದ ಆರಂಭದಲ್ಲಿ ನಿಮಗೆ ಒಂದು ಪ್ರಮುಖ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ನೀವು ವ್ಯಾಪಾರದಲ್ಲಿ ಗಮನಾರ್ಹ ಲಾಭವನ್ನು ಅನುಭವಿಸುವಿರಿ. ಹಣಕಾಸು ಸಂಬಂಧಿತ ವಿಚಾರದಲ್ಲಿ ವಾರದ ಅಂತ್ಯವು ನಿಮಗೆ ಒತ್ತಡ ತರಬಹುದು. ವಾರದ ಮಧ್ಯದಲ್ಲಿ ಶುಭ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಅವಕಾಶ ತರಲಿದೆ. ಸಂಬಂಧಗಳ ವಿಷಯದಲ್ಲಿ ಈ ವಾರ ನಿಮಗೆ ಅನುಕೂಲಕರವಾಗಿರುತ್ತದೆ. ಪ್ರವಾಸದಂತಹ ಕೆಲಸಗಳಿಗೆ ನೀವು ಮುಂದಾಗಬಹುದು.
ವೃಶ್ಚಿಕ ರಾಶಿ
ಈ ವಾರ ಸಾಕಷ್ಟು ಪ್ರಯಾಣ ಹಾಗೆ ಹಲವು ರೀತಿಯ ಸಮಸ್ಯೆಗಳ ನೋಡಬಹುದು. ಅದ್ರಲ್ಲೂ ಹಣಕಾಸಿನ ವಿಚಾರದಲ್ಲಿ ನೀವು ಎದುರಿಸುತ್ತಿರುವ ಒತ್ತಡವೊಂದು ದೊಡ್ಡದಾಗಲಿದೆ. ಕುಟುಂಬ ಸಮಸ್ಯೆಗೆ ನಿಮ್ಮ ಹಣಕಾಸಿನ ವಿಚಾರದಿಂದಲೂ ಸಮಸ್ಯೆ ಉಂಟಾಗಬಹುದು. ಈ ಸಮಯದಲ್ಲಿ ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿವಾದಗಳು ನಿಮಗೆ ಆತಂಕ ತರಬಹುದು. ಪಿತ್ರಾರ್ಜಿತ ಆಸ್ತಿ ಸಂಬಂಧಿತ ವಿವಾದಗಳಲ್ಲಿ ಮತ್ತೆ ನಿಮಗೆ ಚಿಂತೆ ಕಾಡಬಹುದು. ನಿರುದ್ಯೋಗಿಗಳು ಹಣಕಾಸಿನ ಸಮಸ್ಯೆ ಎದುರಿಸಬಹುದು. ನಿಮ್ಮ ವೃತ್ತಿ ಮತ್ತು ವ್ಯವಹಾರವನ್ನು ಸುಧಾರಿಸಲು ನೀವು ಶ್ರಮಿಸುತ್ತೀರಿ. ನಿಮ್ಮ ಪ್ರೇಮ ಸಂಬಂಧದಲ್ಲಿನ ಅಡೆತಡೆಗಳು ಎದುರಿಸಬಹುದು.

ಧನು ರಾಶಿ
ಈ ವಾರ ನಿಮ್ಮ ಯೋಜಿತ ಕಾರ್ಯಗಳನ್ನು ಪೂರ್ಣಗೊಳಿಸಲು ಧನು ರಾಶಿ ಹೆಚ್ಚುವರಿ ಶ್ರಮ ಹಾಕಬೇಕಾಗುತ್ತದೆ. ವಾರದ ಆರಂಭದಿಂದ ನೀವು ಕೆಲಸದಲ್ಲಿ ನಿರತರಾಗಿರುತ್ತೀರಿ. ಆದ್ದರಿಂದ, ನಿಮ್ಮ ಸಮಯ ಮತ್ತು ಕೆಲಸವನ್ನು ಯೋಜಿತ ರೀತಿಯಲ್ಲಿ ನಿರ್ವಹಿಸುವುದು ಉತ್ತಮ. ಈ ವಾರ ಸೋಮಾರಿತನ ಮತ್ತು ಆಯಾಸ ಮೇಲುಗೈ ಸಾಧಿಸುತ್ತದೆ. ನಿಮ್ಮ ವ್ಯಾಪಾರದಲ್ಲಿದ್ದ ದೊಡ್ಡ ಹೊರೆಯೊಂದು ನಿವಾರಣೆಯಾಗಲಿದೆ. ಪ್ರತಿಕೂಲ ಆರೋಗ್ಯ ನೋಡಬಹುದು, ಆದ್ರೆ ಇದರಿಂದ ನಿಮ್ಮ ದೈನಂದಿನ ಕೆಲಸಗಳಲ್ಲಿ ಸಣ್ಣ ಪುಟ್ಟ ಅಡ್ಡಿಗಳಿರಬಹುದು. ಉದ್ಯೋಗದ ಸ್ಥಳದಲ್ಲಿ ದೊಡ್ಡ ಸಮಸ್ಯೆಗಳ ಎದುರಿಸುತ್ತೀರಿ.
ಮಕರ ರಾಶಿ
ಮಕರ ರಾಶಿಯವರಿಗೆ ಈ ವಾರ ಮಿಶ್ರ ಫಲ ನೋಡಬಹುದು. ಈ ವಾರದ ಆರಂಭವು ನಿಮಗೆ ದೊಡ್ಡ ಅಡ್ಡಿಗಳ ತರಬಹುದು. ಆದ್ರೆ ಇದನ್ನು ನೀವು ಸುಲಭವಾಗಿ ಎದುರಿಸುತ್ತೀರಿ. ಪ್ರಯಾಣಗಳಲ್ಲಿ ಶುಭವಾಗಲಿದೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸು ಸಂಬಂಧಿ ಸಹಾಯಕ್ಕೆ ಮನವಿ ಬರಬಹುದು. ಹಾಗೆ ನಿಮ್ಮ ಮನೆಯ ಹಿರಿಯ ಸದಸ್ಯರ ಆರೋಗ್ಯ ಸಂಬಂಧವಾಗಿ ಖರ್ಚುಗಳಿವೆ. ಏಕಾಗ್ರತೆಯ ಕೊರತೆ ಮತ್ತು ಹೆಚ್ಚಿದ ಸೋಮಾರಿತನವನ್ನು ಅನುಭವಿಸಬಹುದು. ಉದ್ಯೋಗದಲ್ಲಿರುವ ಜನರು ಈ ವಾರ ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ದೀರ್ಘಕಾಲದ ಕಾಯಿಲೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ವಾರ ಸ್ವಲ್ಪ ಅಸ್ಥಿರವಾಗಿರಬಹುದು. ವಾರದ ಆರಂಭವು ಆರ್ಥಿಕವಾಗಿ ಪ್ರತಿಕೂಲವಾಗಿರುತ್ತದೆ. ಅನಿರೀಕ್ಷಿತ ಖರ್ಚುಗಳು ನಿಮಗೆ ಸಮಸ್ಯೆಗಳ ತರಬಹುದು. ಸಂಬಂಧಿಕರ ಭೇಟಿಯಿಂದಾಗಿ ಹೊಸ ಚಿಂತೆ ಕಾಡಬಹುದು. ನಿಮ್ಮ ಪ್ರಯಾಣಗಳಲ್ಲಿ ಶುಭವಾಗುವ ನಿರೀಕ್ಷೆ ಇದೆ. ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಬಳಸಿ ಮತ್ತು ಅಪಾಯಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನೀವು ಆರ್ಥಿಕ ತೊಂದರೆಗಳನ್ನು ಎದುರಿಸಬಹುದು. ವಾರದ ಅಂತ್ಯದಲ್ಲಿ ವೆಚ್ಚಗಳು ಇನ್ನೂ ಆದಾಯವನ್ನು ಮೀರಿಸುತ್ತದೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿತೈಷಿಗಳನ್ನು ಸಂಪರ್ಕಿಸಲು ಮರೆಯಬೇಡಿ.
ಮೀನ ರಾಶಿ
ಈ ವಾರ ಮೀನ ರಾಶಿಯವರಿಗೆ ಉತ್ತಮ ಫಲಗಳ ನೋಡಬಹುದು. ಉದ್ಯೋಗದಲ್ಲಿದ್ದ ಮಂದಿಗೆ ವೇತನ ಕುರಿತಾಗಿ ಶುಭ ಸುದ್ದಿ ಬರಲಿದೆ. ನಿಮ್ಮ ಗುರಿಗಳನ್ನು ಮುಟ್ಟುವ ಸಮಯವಿದು. ಬಹುದಿನದಿಂದ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸವನ್ನು ಪೂರ್ಣ ಮಾಡಬಹುದು. ವಾರದ ಆರಂಭದಲ್ಲಿ ನೀವು ಅಗತ್ಯವಾದ ವಸ್ತುವಿನ ಮೇಲೆ ಗಮನಾರ್ಹ ಪ್ರಮಾಣದ ಹಣವನ್ನು ಖರ್ಚು ಮಾಡಬೇಕಾಗಬಹುದು. ಮಕ್ಕಳ ಕುರಿತಾದ ಚಿಂತೆಯೊಂದು ಕಾಡಬಹುದು. ವಾರದ ಅಂತ್ಯದಲ್ಲಿ ಹಣಕಾಸು ಕುರಿತ ವಿಚಾರದಲ್ಲಿ ನಿಮಗೆ ಅಡ್ಡಿಗಳು ಆತಂಕ ತರಬಹುದು.



Click it and Unblock the Notifications












