ವಾರ ಭವಿಷ್ಯ ಪ್ರಕಾರ ಈ ವಾರ (ಮೇ 25-ಮೇ 31) ಯಾವ ರಾಶಿಗೆ ಹೇಗಿರಲಿದೆ?

ಮೇ 25ರಿಂದ 31ರ ವರೆಗಿನ ನಿಮ್ಮ ವಾರ ಭವಿಷ್ಯದಲ್ಲಿ ಏನಿದೆ ನೋಡಿ.

ಮೇಷ ರಾಶಿ

ಮೇಷ ರಾಶಿಯವರಿಗೆ ಈ ವಾರವು ಸಾಮಾನ್ಯವಾಗಿರುವ ದಿನ. ನೀವು ಬಹಳ ದೊಡ್ಡ ಖರ್ಚುಗಳ ಎದುರಿಸುತ್ತೀರಿ. ಅದರಲ್ಲೂ ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಇದರಿಂದ ಬಹಳ ಸಮಸ್ಯೆಗೆ ಒಳಗಾಗಬಹುದು. ಕೆಲಸದ ಸ್ಥಳದಲ್ಲಿ ನಿಮಗೆ ಒತ್ತಡ ಹೆಚ್ಚಾಗಬಹುದು. ಹೊಸ ಜವಾಬ್ದಾರಿಗಳು ನಿಮಗೆ ಹೊಸ ರೀತಿಯ ಸಮಸ್ಯೆಗಳ ತರಬಹುದು. ಹಾಗೆ ಈ ವಾರದ ಅಂತ್ಯದಲ್ಲಿ ನಿಮಗೆ ಶುಭಕರ ದಿನವಾಗಿರಲಿದೆ, ನಿಮ್ಮ ಆರೋಗ್ಯ ಸಮಸ್ಯೆಗಳು ಈ ವಾರದಲ್ಲಿ ಪರಿಹಾರವಾಗಬಹುದು. ವ್ಯಾಪಾರಿಗಳು ಈ ದಿನದಂದು ದೊಡ್ಡ ಲಾಭ ಮಾಡುವ ಸಾಧ್ಯತೆ ಇದೆ. ಹಾಗೆ ಈ ವಾರದಲ್ಲಿ ವ್ಯವಹಾರ ಪ್ರಗತಿಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೀರಿ.

ವೃಷಭ ರಾಶಿ

ವೃಷಭ ರಾಶಿ ಮಂದಿ ಈ ವಾರದಲ್ಲಿ ದೊಡ್ಡ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತಿರಿ. ಹಾಗೆ ದುಂದು ವೆಚ್ಚ ಮಾಡುವುದನ್ನು ತಪ್ಪಿಸಿ. ಇದರಿಂದ ನಿಮಗೆ ಆರ್ಥಿಕ ಸಂಕಷ್ಟಗಳು ಎದುರಾಗಬಹುದು. ಕೆಲಸದ ಕಾರಣಕ್ಕೆ ನೀವು ಬಹಳ ದೂರ ಪ್ರಯಾಣ ಕೈಗೊಳ್ಳಬಹುದು. ಹಾಗೆ ಯಾರಿಂದಾದರು ಹಣ ಪಡೆದಿದ್ದರೆ ಈ ವಾರದಂದು ಅದನ್ನು ತೀರಿಸುವುದು ಬಹಳ ಮುಖ್ಯ. ಬಹಳಷ್ಟು ಓಡಾಟದಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರು ನೋಡಬಹುದು. ವಿದ್ಯಾರ್ಥಿಗಳು ಈ ವಾರ ಬಹಳ ಕಷ್ಟಪಡಬಹುದು. ಆರೋಗ್ಯ ವಿಚಾರವಾಗಿ ನೀವು ಎಚ್ಚರಿಕೆ ವಹಿಸಿ. ಹಾಗೆ ಸಂಬಂಧಗಳಲ್ಲಿ ನಿಮಗೆ ಪ್ರತಿಕೂಲ ಪರಿಣಾಮ ಎದುರಿಸುತ್ತೀರಿ.

Weekly Horoscope From May 25 To May 31 For All Zodiac Signs In Kannada

ಮಿಥುನ ರಾಶಿ

ಮಿಥುನ ರಾಶಿಯ ಮಂದಿ ಕೆಲಸದ ಕಾರಣಕ್ಕೆ ವಾರದ ಬಹಳಷ್ಟು ಸಮಯ ನೀವು ಮನೆಯಿಂದ ಹೊರಗುಳಿಯುತ್ತೀರಿ. ಬಹುತೇಕ ಸಮಯ ನೀವು ಭವಿಷ್ಯದ ವಿಚಾರವಾಗಿ ಚಿಂತೆ ಮಾಡುವಿರಿ, ಅದರಲ್ಲೂ ಮಕ್ಕಳ ವಿಚಾರವಾಗಿ ನಿಮಗೆ ಚಿಂತೆ ಕಾಡಬಹುದು. ಈ ವಾರ ನಿಮ್ಮ ಆರ್ಥಿಕ ಸ್ಥಿತಿಯು ಬಹಳಷ್ಟು ಜಂಜಾಟದಿಂದ ಕೂಡಿರಲಿದೆ. ನೀವು ಅಂದುಕೊಂಡ ಕೆಲಸಗಳಲ್ಲಿ ಹಣಕಾಸು ಅಡ್ಡಿ ಹೆಚ್ಚಾಗಬಹುದು. ಇದರಿಂದ ಒತ್ತಡ, ಗೊಂದಲ ಕಾಡಬಹುದು. ಇನ್ನು ಮನೆಯ ಸದಸ್ಯರೊಬ್ಬರ ಆರೋಗ್ಯದಲ್ಲಿನ ಏರುಪೇರು ನಿಮಗೆ ಸಮಸ್ಯೆ ತರಬಹುದು. ಹಾಗೆ ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಡಕಿಗೆ ಇದು ಕಾರಣವಾಗಬಹುದು.

ಕರ್ಕ ರಾಶಿ

ಕರ್ಕ ರಾಶಿಯ ಮಂದಿ ಈ ವಾರ ಬಹಳ ಶುಭಕರ ದಿನಗಳ ನೋಡಬಹುದು. ಸಂಬಂಧಿಕರ ಜೊತೆಗೆ ಅಥವಾ ಮನೆಯಲ್ಲಿನ ಮನಸ್ತಾಪಗಳು ಹೆಚ್ಚಾಗಬಹುದು. ವಿದೇಶದಲ್ಲಿ ವ್ಯಾಪಾರ ಮತ್ತು ವೃತ್ತಿ ಮಾಡುತ್ತಿರುವವರು ಉತ್ತಮ ಯಶಸ್ಸನ್ನು ಸಾಧಿಸುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಶ್ರಮದಿಂದ ಉತ್ತಮ ಪ್ರತಿಫಲ ನೀಡುವ ದಿನವಾಗಿರಲಿದೆ. ನೀವು ಹೋಟೆಲ್ ವ್ಯವಹಾರದಲ್ಲಿದ್ದರೆ ಈ ವಾರ ಬಹಳ ದೊಡ್ಡ ಲಾಭಗಳ ನೋಡಲಿದ್ದೀರಿ. ಕುಟುಂಬದ ಸದಸ್ಯರೊಬ್ಬರ ಅನಾರೋಗ್ಯ ನಿಮಗೆ ಖರ್ಚು ಹೆಚ್ಚಾಗುವಂತೆ ಮಾಡಬಹುದು. ಹಾಗೆ ವಾರದ ಅಂತ್ಯದಲ್ಲಿ ಶುಭ ಕಾರ್ಯದಲ್ಲಿ ಭಾಗಿಯಾಗಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಮಂದಿ ಈ ವಾರದಲ್ಲಿ ದೊಡ್ಡ ವಿಚಾರಗಳಲ್ಲಿ ಯಶಸ್ಸು ಸಿಗಲಿದೆ, ಬಹಳ ಕಾಲದಿಂದ ಹಣಕಾಸು ವಿಚಾರವಾಗಿ ಸಮಸ್ಯೆಗಳ ಎದುರಿಸುತ್ತಿದ್ದರೆ ಈ ವಾರದಂದು ಬಹಳ ಲಾಭದಾಯಕವಾಗಿ ಪರಿಣಮಿಸಬಹುದು. ಉದ್ಯಮಿಗಳಲ್ಲಿ ಲಾಭದಾಯಕ ದಿನಗಳ ನೋಡಬಹುದು. ಕುಟುಂಬ ಸದಸ್ಯರೊಂದಿಗೆ ನಿಮ್ಮ ಪ್ರೀತಿ ಹೆಚ್ಚಾಗಲಿದೆ. ಅವರ ಅಗತ್ಯದ ಸಮಯದಲ್ಲಿ ನಿಮ್ಮಿಂದಾಗಿ ಹಣಕಾಸಿನ ನೆರವು ಸಹಾಯಕ್ಕೆ ಬರಲಿದೆ. ದಾಂಪತ್ಯದಲ್ಲಿ ಸಾಮರಸ್ಯ ಇರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿ ಈ ವಾರದಂದು ಯಾವುದಾದರು ಕೆಲಸದ ನಿಮಿತ್ತ ದೂರ ಪ್ರಯಾಣಕ್ಕೆ ಮುಂದಾಗುವುದಾದರೆ ಅದರಿಂದ ಯಶಸ್ಸು ಪಡೆಯಲಿದ್ದೀರಿ. ನಿಮ್ಮ ಕಠಿಣ ಪರಿಶ್ರಮವು ಪ್ರತಿಫಲ ನೀಡಲಿದೆ. ಉದ್ಯಮಿಗಳಲ್ಲಿ ಇಷ್ಟು ದಿನದಂದ ಇದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ನಿಮ್ಮ ಆದಾಯ ಹೆಚ್ಚು ಮಾಡುವಂತಹ ಕೆಲಸಗಳು ಹೆಚ್ಚಾಗುತ್ತದೆ. ಹಾಗೆ ಹಠಾತ್ ಲಾಭಗಳು ನಿಮಗೆ ಸಿಗಬಹುದು. ಭೂಮಿ, ವಾಹನ ಖರೀದಿ, ಜಮೀನು, ಆಸ್ತಿ, ಮನೆ ವಿಚಾರವಾಗಿ ಯಾವುದೇ ಕೆಲಸದಲ್ಲಿ ನಿಮಗೆ ಯಶಸ್ಸು ಪಡೆಯಬಹುದು. ನೀವು ಸರ್ಕಾರಿ ಕೆಲಸದಲ್ಲಿ ವರ್ಗಾವಣೆ, ಬಡ್ತಿ ಸಂಬಂಧ ಯಶಸ್ಸು ಪಡೆಯಬಹುದು.

ತುಲಾ ರಾಶಿ

ತುಲಾ ರಾಶಿಯ ಮಂದಿ ಈ ವಾರದಲ್ಲಿ ಬಹಳ ಖರ್ಚು ತರುವ ದಿನಗಳಿವೆ, ಮನೆಗಾಗಿ ನೀವು ದುಬಾರಿ ವಸ್ತುಗಳ ಖರೀದಿಸಬಹುದು. ವಾರದ ಮಧ್ಯದಲ್ಲಿ ನೀವು ಇದ್ದಕ್ಕಿದ್ದಂತೆ ದೀರ್ಘ ಪ್ರಯಾಣ ಮಾಡಬೇಕಾಗಬಹುದು. ಈ ಪ್ರಯಾಣವು ಆಹ್ಲಾದಕರ ಮತ್ತು ಉಪಯುಕ್ತವಾಗಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ನೋಡುತ್ತೀರಿ. ಯೋಜಿತ ಕೆಲಸವು ಸಮಯಕ್ಕೆ ಮತ್ತು ಅಪೇಕ್ಷಿತ ರೀತಿಯಲ್ಲಿ ಪೂರ್ಣಗೊಳ್ಳುತ್ತದೆ. ಬಹಳ ಸಮಯದಿಂದ ನೀವು ಬಯಸಿದ್ದ ವಸ್ತುವೊಂದನ್ನು ಪಡೆಯಬಹುದು. ಅದರಲ್ಲೂ ನಿಮ್ಮ ಬಯಕೆಯಂತೆ ಈ ದಿನವು ನಿಮಗೆ ದೂರ ಪ್ರಯಾಣಗಳಿಗೆ ಕಾರಣವಾಗಲಿದೆ. ಹೀಗಾಗಿ ಅಗತ್ಯ ತಯಾರಿ ನಡೆಸುವುದು ಉತ್ತಮ. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಮಂದಿಗೆ ಈ ವಾರವು ಸಾಮಾನ್ಯ ಹಾಗೆ ಮಿಶ್ರ ಫಲಗಳ ತರುವ ದಿನಗಳಿವೆ. ನೀವು ನಿಮ್ಮ ಅಗತ್ಯಕ್ಕಲ್ಲದೆ ಬೇರೆಯವರ ಕೆಲಸಕ್ಕಾಗಿ ಹೆಚ್ಚು ಖರ್ಚು ಮಾಡುವ ವಾರ. ನಿಮ್ಮ ಪ್ರಮುಖ ನಿರ್ಧಾರಗಳಲ್ಲಿ ಮಿಶ್ರ ಫಲ ನೋಡಬಹುದು. ಹಾಗೆ ಎಲ್ಲಾ ವಿಚಾರಗಳಲ್ಲಿ ನಿಮ್ಮ ಹಸ್ತಕ್ಷೇಪವು ಪ್ರಶಂಸೆ ಪಡೆಯಬಹುದು. ಕೆಲಸದ ಸ್ಥಳದಲ್ಲಿನ ಒತ್ತಡ ಹೆಚ್ಚಾಗಲಿದೆ. ನಿಮ್ಮ ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳು ದೂರಾಗಬಹುದು. ವಾಹನ ಖರೀದಿ ಅಥವಾ ರಿಪೇರಿಯ ಕನಸಿದ್ದರೆ ಈ ವಾರದಲ್ಲಿ ಅದರ ಕಡೆ ಒಂದು ಹೆಜ್ಜೆ ಇಡುತ್ತೀರಿ. ಮನೆಯಲ್ಲಿ ಶಾಂತಿ ಇರಲಿದೆ. ನಿಮ್ಮ ಆಪ್ತರೊಬ್ಬರಿಂದ ನೀವು ಹಣಕಾಸಿನ ನೆರವು ಪಡೆಯಬಹುದು.

ಧನು ರಾಶಿ

ಧನು ರಾಶಿಯವರಿಗೆ ಈ ವಾರವು ಅನುಕೂಲಕರ ದಿನಗಳ ತರಲಿದೆ. ನೀವು ಇಷ್ಟು ದಿನಗಳಿಂದ ದೈನಂದಿನ ಕೆಲಸದಲ್ಲಿ ಎದುರಿಸಿದ್ದ ಅಡೆತಡೆಯು ನಿವಾರಣೆಯಾಗಲಿದೆ. ಮನಸ್ತಾಪ ಉಂಟು ಮಾಡಿರುವ ವಿಚಾರಗಳಲ್ಲಿ ರಾಜಿ ಸಂದಾನ ಮಾಡಿಕೊಳ್ಳುವುದು ಉತ್ತಮ. ನ್ಯಾಯಾಲಯದ ಪ್ರಕರಣಗಳು ಹಾಗೆ ಆಸ್ತಿ ಕುರಿತಾದ ವಿಚಾರಗಳಲ್ಲಿ ಈ ವಾರ ನಿಮಗೆ ಯಶಸ್ಸಿನತ್ತ ಕೊಂಡೊಯ್ಯಬಹುದು. ಸವಾಲಿನ ವ್ಯವಹಾರ ಮಾಡಬಹುದು. ಇದು ಬಹಳ ಶ್ರಮದಾಯಕವಾಗಬಹುದು. ದಾಂಪತ್ಯದಲ್ಲಿ ನಿಮಗೆ ಸಂತಸ ಇರಲಿದೆ. ಗೃಹಿಣಿಯರಲ್ಲಿ ದಿಢೀರ್ ಆರೋಗ್ಯ ಸುಧಾರಣೆ ನೋಡಬಹುದು.

ಮಕರ ರಾಶಿ

ಮಕರ ರಾಶಿ ಮಂದಿಗೆ ಈ ವಾರವು ಮಿಶ್ರ ಫಲದ ದಿನಗಳಿಂದ ಕೂಡಿರಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಈ ಸಮಯ ಏಳುಬೀಳು ನೋಡಬಹುದು. ನಿಮ್ಮ ಕೈ ಸೇರಿದ್ದ ಹಣಕಾಸು ಬೇರೊಂದು ವಿಚಾರಕ್ಕೆ ಖರ್ಚಾಗಬಹುದು. ಹೋಗಾಗಿ ವಚ್ಚಗಳ ಕುರಿತಾಗಿ ಬಹಳ ಎಚ್ಚರಿಕೆ ಅಗತ್ಯ. ನೀವು ಕೆಲಸದ ನಿಮಿತ್ತ ದೀರ್ಘ ಪ್ರಯಾಣಿಸಬೇಕಾಗಬಹುದು. ನಿಮ್ಮ ಕೆಲಸದಲ್ಲಿ ನಿಮಗೆ ತೃಪ್ತಿ ಸಿಗದೆ ಇರಬಹುದು. ಬಹಳ ಸಮಯದಿಂದ ನೀವು ಬೇರೊಬ್ಬರಿಂದ ಹಣಕಾಸಿನ ನಿರೀಕ್ಷೆಯಲ್ಲಿದ್ದರೆ ಈ ಸಮಯದಲ್ಲಿ ನಿಮ್ಮ ಕೈ ಸೇರಬಹುದು. ಹೂಡಿಕೆಯಲ್ಲಿ ತೊಡಗಿದರೆ ಈ ಸಮಯ ಉತ್ತಮವಾಗುತ್ತದೆ.

ಕುಂಭ ರಾಶಿ

ಕುಂಭ ರಾಶಿಯ ಮಂದಿ ಈ ವಾರದಲ್ಲಿ ಬಹಳಷ್ಟು ಖರ್ಚು ಮಾಡುತ್ತೀರಿ, ನಿಮ್ಮದಲ್ಲದ ವಿಚಾರವಾಗಿ ನೀವು ಖರ್ಚು ಹೆಚ್ಚು ಮಾಡುತ್ತೀರಿ. ನೀವು ಬಯಸಿದಂತೆ ಕೆಲಸದಲ್ಲಿ ಯಶಸ್ಸು ಸಿಗದೆ ಇರಬಹುದು. ವಿದೇಶ ಪ್ರಯಾಣ ಬಯಸುತ್ತಿದ್ದರೆ ಈ ವಾರದಲ್ಲಿ ಆ ಕುರಿತಾಗಿ ಧನಾತ್ಮಕ ಬದಲಾವಣೆ ನೋಡುತ್ತೀರಿ. ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ದೂರ ಪ್ರಯಾಣಗಳು ನಿಮಗೆ ನೆಮ್ಮದಿ ತರಬಹುದು. ಕುಟುಂಬಸ್ಥರಲ್ಲಿ ನಿಮ್ಮ ಬಾಂಧವ್ಯ ಹೆಚ್ಚಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ನೀಡಬಹುದು.

ಮೀನ ರಾಶಿ

ಮೀನ ರಾಶಿಯ ಮಂದಿ ಈ ವಾರ ಬಹಳ ಅನುಕೂಲಕರ ದಿನಗಳ ನೋಡುತ್ತಾರೆ. ನಿಮ್ಮ ಬಯಕೆಯಂತೆ ಎಲ್ಲಾ ಕೆಲಸಗಳು ಈಡೇರಲಿದೆ. ಶುಭ ಕಾರ್ಯಗಳ ಸಂಬಂಧ ನೀವು ಭಾಗಿಯಾಗುತ್ತೀರಿ. ಅವಿವಾಹಿತರಲ್ಲಿ ಖರ್ಚು ಹೆಚ್ಚಾಗುವ ನಿರೀಕ್ಷೆ ಇದೆ. ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ವಾರದಂದು ಬಹಳ ಉತ್ತಮ ಅವಕಾಶಗಳ ಪಡೆಯಲಿದ್ದೀರಿ. ಪ್ರಯಾಣದಲ್ಲಿ ಸುಖ ಇರಲಿದೆ. ದಾಂಪತ್ಯದಲ್ಲಿ ನಿಮ್ಮ ಪರವಾದ ಧನಾತ್ಮಕ ವಿಚಾರಗಳು ನಡೆಯಲಿದೆ. ಮಕ್ಕಳ ವಿಚಾರವಾಗಿಯೂ ನೀವು ಖರ್ಚು ಮಾಡಬೇಕಾಗಿ ಬರಬಹುದು. ವಾಹನ ಸವಾರರು ಎಚ್ಚರಿಕೆ ಇಡಿ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು)

English summary

Weekly Horoscope From May 25 To May 31 For All Zodiac Signs In Kannada

Here is weekly horoscope prediction for all zodiac signs, read on...
X
Desktop Bottom Promotion