Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಾರ ಭವಿಷ್ಯ ಪ್ರಕಾರ ಈ ವಾರ (ಮೇ 18-ಮೇ 24) ಯಾವ ರಾಶಿಗೆ ಹೇಗಿರಲಿದೆ?
ಮೇ 18ರಿಂದ 24ರ ವರೆಗಿನ ನಿಮ್ಮ ವಾರ ಭವಿಷ್ಯದಲ್ಲಿ ಏನಿದೆ ನೋಡಿ.
ಮೇಷ ರಾಶಿ
ಮೇಷ ರಾಶಿ ಮಂದಿಗೆ ಈ ವಾರವು ಬಹಳ ಶುಭಕರವಾಗಿರಲಿದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಸುಖ ಇರಲಿದೆ. ನಿಮ್ಮ ಹಾಗೂ ಮನೆಯವರ ನಡುವೆ ಇರುವ ಸಮಸ್ಯೆಗಳು ಬಗೆಹರಿಯಬಹುದು. ನೀವು ದೂರ ಪ್ರಯಾಣದಂತಹ ಕಾರ್ಯಗಳಲ್ಲಿ ಹೆಚ್ಚು ದಿನ ಕಳೆಯಬಹುದು. ವಾರದ ಮೊದಲಾರ್ಧದಲ್ಲಿ ನಿಮಗೆ ಕೌಟುಂಬಿಕ ವಿಚಾರವಾಗಿ ಸಮಸ್ಯೆಗಳು ಕಂಡುಬರಬಹುದು. ಆದ್ರೆ ವಾರದ ಅಂತ್ಯದಲ್ಲಿ ನಿಮಗೆ ಸುಖಕರ ದಿನಗಳ ಇರಲಿವೆ. ನೀವು ಹಣಕಾಸು ವಿಚಾರವಾಗಿ ಬೇರೆಯವರ ಬಳಿ ಸಹಾಯಕ್ಕೆ ಮನವಿ ಮಾಡಿದ್ದರೆ ಅಥವಾ ಸಾಲ ಪಡೆಯಲು ಮುಂದಾಗಿದ್ದರೆ ಈ ವಾರದಲ್ಲಿ ಶುಭಕರ ಲಾಭ ಪಡೆಯಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ.
ವೃಷಭ ರಾಶಿ
ವೃಷಭ ರಾಶಿ ಮಂದಿ ಈ ವಾರದಲ್ಲಿ ಬಹಳ ಜಾಗರೂಕರಾಗಿರಿ. ಈ ವಾರ ನಿಮ್ಮ ಕೆಲಸ ಕಾರ್ಯಗಳಲ್ಲಿ ಬಹಳ ಅಡೆತಡೆಗಳ ನೀವು ಅನುಭವಿಸುತ್ತೀರಿ. ಹಾಗೆ ನಿಮ್ಮ ತಪ್ಪುಗಳನ್ನು ಸುಲಭವಾಗಿ ಜನರು ಗುರುತಿಸುತ್ತಾರೆ. ಹೂಡಿಕೆ, ಉಳಿತಾಯ ಮಾಡುವಾಗ ಯಾರನ್ನೂ ಕುರುಡಾಗಿ ನಂಬಬೇಡಿ. ಹಣಕಾಸು ವ್ಯವಹಾರ ಮಾಡುವಾಗ ಸಲಹೆಗಳ ಪಡೆಯುವುದು ಅತಿ ಮುಖ್ಯ. ನೀವು ಹೊಸದಾದ ವ್ಯವಹಾರದಲ್ಲಿ ಹಣ ಕಳೆದುಕೊಳ್ಳಬಹುದು. ಹೀಗಾಗಿ ಎಚ್ಚರಿಕೆ ಇರಲಿ. ಕೆಲಸ ಮಾಡುವ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು. ಆದ್ರೆ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ದಾಂಪತ್ಯ ಜೀವನದಲ್ಲಿ ಕೆಲವು ವಿಷಯಗಳ ಭಿನ್ನಾಭಿಪ್ರಾಯಗಳಿರಬಹುದು. ವಿದ್ಯಾರ್ಥಿಗಳಿಗೆ ಇದು ಕಷ್ಟದ ವಾರವಾಗಿರಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿ ಈ ವಾರದಲ್ಲಿ ಬಹಳಷ್ಟು ಶ್ರಮ ಹಾಕುತ್ತೀರಿ, ಅವಿವಾಹಿತರಲ್ಲಿ ಹೊಸ ಸಂಬಂಧಗಳ ನೋಡಬಹುದು. ನಿಮ್ಮ ವಿವಾಹ ಸಂಬಂಧವಾಗಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತೀರಿ. ಉದ್ಯೋಗಿಗಳು ವರ್ಗಾವಣೆ ಸಂಬಂಧವಾಗಿ ಬಹಳಷ್ಟು ಚಿಂತಿತರಾಗಿದ್ದರೆ ನಿಮಗೆ ಶುಭ ಸುದ್ದಿ ಕಾದಿರಲಿದೆ. ನಿಮ್ಮ ಮಾನಸಿನ ನೆಮ್ಮದಿಗೆ ಕಾರಣವಾಗುವಂತಹ ಹಲವು ವಿಚಾರಗಳು ನಡೆಯಲಿದೆ. ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳ ನಂತರವೇ ನಿಮ್ಮ ಕೆಲಸದಲ್ಲಿ ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯಮಿಗಳು ಹಾಗೆ ವ್ಯಾಪಾರಸ್ಥರಿಗೆ ಎದುರಾಗುತ್ತಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿ ಮಂದಿ ಈ ವಾರ ಬಹಳಷ್ಟು ದಣಿಯಲಿದ್ದೀರಿ. ನೀವು ಕೆಲಸದ ಸಂಬಂಧ ಹೆಚ್ಚು ಒತ್ತಡ, ಓಡಾಟಕ್ಕೆ ಒಳಗಾಗುತ್ತೀರಿ. ನಿಮ್ಮ ಬುದ್ದಿವಂತಿಕೆಯಿಂದ ಕೆಲಸ ಕಾರ್ಯಗಳ ಮಾಡುತ್ತೀರಿ, ಇದರಿಂದ ಕಷ್ಟದ ಕೆಲಸಗಳು ಸುಲಭವಾಗಬಹುದು. ವಾರದ ಮೊದಲಾರ್ಧದಲ್ಲಿ ಅಪೇಕ್ಷಿತ ಲಾಭವನ್ನು ಪಡೆಯಲು ಉದ್ಯಮಿಗಳು ಸ್ವಲ್ಪ ಹೆಚ್ಚುವರಿ ಪ್ರಯತ್ನ ಮತ್ತು ಕಠಿಣ ಪರಿಶ್ರಮವನ್ನು ಹಾಕಬೇಕಾಗುತ್ತದೆ. ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣವಾಗಲು ನೀವು ಪ್ರಮಾಣಿಕವಾಗಿ ಪ್ರಯತ್ನಿಸಿ. ಸಮಾಜದಲ್ಲಿ ನಿಮ್ಮ ಗೌರವ ಘನತೆ ಹೆಚ್ಚಾಗುವ ಕೆಲಸ ಮಾಡಲಿದ್ದೀರಿ. ಹಲವು ದಿನಗಳ ನಿಮ್ಮ ಆಸೆಯೊಂದನ್ನು ಈ ವಾರ ಈಡೇರಿಸಿಕೊಳ್ಳಬಹುದು.
ಸಿಂಹ ರಾಶಿ
ಸಿಂಹ ರಾಶಿ ಮಂದಿ ಈ ವಾರದಂದು ಬಹಳ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ನಿಮ್ಮ ಕೆಲಸದ ಸ್ಥಳದಲ್ಲಿ ಹೊಸ ಬದಲಾವಣೆಗಳನ್ನು ನೋಡುತ್ತೀರಿ. ನೀವು ಅವಿವಾಹಿತರಾಗಿದ್ದರೆ ಈ ವಾರ ನಿಮ್ಮ ಪ್ರೀತಿ ಪಾತ್ರರ ಭೇಟಿಯಾಗುವ ಸಾಧ್ಯತೆ ಇದೆ. ಇದರಿಂದ ನಿಮಗೆ ಸಂತಸದ ಸುದ್ದಿ ಕೇಳಿಬರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಸಣ್ಣ ಪುಟ್ಟ ವಿಚಾರಗಳು ನಿಮಗೆ ದೊಡ್ಡ ಸವಾಲಿನಂತೆ ಕಾಡಬಹುದು. ಹಣಕಾಸು ವಿಚಾರದಲ್ಲಿ ಸಮತೋಲನ ಕಾಪಾಡಿಕೊಳ್ಳಿ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಮೊದಲು ಆಲೋಚಿಸುವುದು ಉತ್ತಮ. ಮನೆಗಾಗಿ ನೀವು ಖರೀದಿಸಬೇಕೆಂದಿದ್ದ ವಸ್ತುವೊಂದನ್ನು ಖರೀದಿಸಬಹುದು. ವ್ಯಾಪಾರದಲ್ಲಿ ತೊಡಗಿರುವವರು ಈ ವಾರ ದೊಡ್ಡ ಒಪ್ಪಂದಗಳ ಮಾಡಲು ಮುಂದಾಗದಿರುವುದು ಉತ್ತಮ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರು ಈ ವಾರ ಬಹಳ ಶುಭಕರ ದಿನಗಳ ನೋಡಲಿದ್ದಾರೆ. ನೀವು ನೂತನ ದಂಪತಿಯಾಗಿದ್ದರೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಹಾಗೆ ನಿಮ್ಮ ಕೆಲಸದ ಸಂಬಂಧ ಇಷ್ಟ ದಿನ ಎದುರಾಗಿದ್ದ ಅಡೆತಡೆಯೊಂದು ನಿವಾರಣೆಯಾಗಲಿದೆ. ವ್ಯವಹಾರ ಸಂಬಂಧವಾಗಿ ನೀವು ದೊಡ್ಡ ಒಪ್ಪಂದಗಳು ಅಥವಾ ಹೂಡಿಕೆ ಮುಂದಾಗಿದ್ದರೆ ಆ ಸಂಬಂಧ ಸವಾಲುಗಳು ಎದುರಾಗಬಹುದು. ವಿದ್ಯಾರ್ಥಿಗಳು ಈ ವಾರ ಹಲವು ರೀತಿ ಅಡೆತಡೆ ನೋಡುತ್ತಿರಿ. ಬಹಳ ದಿನಗಳಿಂದ ನಿಮಗೆ ಯಾವುದಾದರು ಅನಾರೋಗ್ಯ ಇದ್ದರೆ ಸುಧಾರಣೆಯಾಗಲಿದೆ.
ತುಲಾ ರಾಶಿ
ತುಲಾ ರಾಶಿ ಮಂದಿ ಈ ದಿನದಂದು ಹೆಚ್ಚು ವಾದಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಿ. ಬೇರೆಯವರು ವಿಚಾರದಲ್ಲಿ ನೀವು ಅನಗತ್ಯವಾಗಿ ಸಲಹೆ, ಹಸ್ತಕ್ಷೇಪಕ್ಕೆ ಮುಂದಾಗುವುದನ್ನು ತಪ್ಪಿಸಿ. ಉದ್ಯಮಿಗಳು ಈ ದಿನದಂದು ಯಾವುದೇ ಸಮಸ್ಯೆಗಳ ನಿವಾರಣೆಗಾಗಿ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಈ ವಾರ ಖರ್ಚುಗಳ ನಿಭಾಯಿಸುವುದು ಒಳಿತು. ಸರ್ಕಾರಿ ನೌಕರರಿಗೆ ಈ ವಾರದಲ್ಲಿ ಒತ್ತಡ ಹೆಚ್ಚಬಹುದು. ನಿಮ್ಮ ಕೆಲಸಗಳಿಂದ ಹಲವರು ಅಸಮಾಧಾನ ಹೊರಹಾಕಬಹುದು. ಆರೋಗ್ಯದಲ್ಲಿ ಸುಧಾರಣೆ ನೋಡಲಿದ್ದೀರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ವಾರದಂದು ಬಹಳ ಸವಾಲುಗಳ ನಡುವೆಯೂ ಉತ್ತಮ ಲಾಭಗಳ ನೋಡಲಿದ್ದಾರೆ. ಪೂರ್ವ ನಿಯೋಜಿತ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದೆ, ನಿಮ್ಮ ಕುಟುಂಬದಲ್ಲಿ ಹಣಕಾಸು ಸಮಸ್ಯೆಯೊಂದು ನಿವಾರಣೆಯಾಗಲಿದೆ. ವ್ಯಾಪಾರಿಗಳಿಗೆ ಕಾಡಿದ್ದ ಹಣಕಾಸು ಸಮಸ್ಯೆ ಬಗೆಹರಿಯಲಿದೆ. ದ್ವಿತಿಯಾರ್ಧದಲ್ಲಿ ನಿಮಗೆ ಬರಬೇಕಿದ್ದ ಹಣ, ವಸ್ತುಗಳು ಕೈ ಸೇರಬಹುದು. ಸಮಸ್ಯೆಗಳು ದೊಡ್ಡದಾಗುವ ಮುನ್ನ ಅದನ್ನು ಪರಿಹರಿಸುವ ಮಾರ್ಗಗಳನ್ನು ಹುಡುಕಿಕೊಳ್ಳಿ. ವೈಯಕ್ತಿಕ ವಿಚಾರವನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದು ನಿಮಗೆ ನೆಮ್ಮದಿ ತರಬಹುದು.
ಧನು ರಾಶಿ
ಧನು ರಾಶಿಯವರು ಈ ವಾರ ಮಿಶ್ರ ಫಲ ಸಿಗಲಿದೆ. ನೀವು ಅನುಮಾನದಲ್ಲಿ ಯಾವುದಾದರು ಕೆಲಸ ಮಾಡುವುದನ್ನು ತಪ್ಪಿಸಿ, ಸಂಪೂರ್ಣ ಶ್ರಮ ಹಾಗೂ ಶ್ರದ್ಧೆ ಮಾಡಿದರೆ ಅದರ ಫಲಿತಾಂಶ ಕೂಡ ಉತ್ತಮವಾಗಿರಲಿದೆ. ನೀವು ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಹಾಗೆ ಮಾಡುವಾಗ ಸಲಹೆ ಪಡೆಯಲು ಮರೆಯದಿರಿ. ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಅಡೆತಡೆಗಳು ಉಂಟಾಗಬಹುದು. ಕುಟುಂಬದ ವ್ಯವಹಾರಗಳಲ್ಲಿ ನಿಮಗೆ ಲಾಭದಾಯಕ ದಿನಗಳು ಬರಬಹುದು. ಆರೋಗ್ಯದ ಕಡೆಗೂ ಗಮನವಿಡುವುದು ಒಳಿತು.
ಮಕರ ರಾಶಿ
ಮಕರ ರಾಶಿಯವರು ಈ ವಾರ ಲಾಭದಾಯಕ ದಿನಗಳನ್ನೇ ಹೆಚ್ಚು ನೋಡುತ್ತೀರಿ. ನೀವು ಉಳಿತಾಯ, ಹೂಡಿಕೆಯಲ್ಲಿ ಲಾಭದ ನಿರೀಕ್ಷೆಯಲ್ಲಿದ್ದರೆ ಈ ವಾರ ನಿಮಗೆ ಶುಭಕರವಾಗಿದೆ. ನಿಮ್ಮಿಂದಾಗಿ ಬೇರೆಯವರಿಗೆ ಆರ್ಥಿಕ ಸಹಾಯವಾಗಲಿದೆ. ನಿಮ್ಮ ದೈನಂದಿನ ಕೆಲಸಗಳಲ್ಲಿ ದೊಡ್ಡ ಯಶಸ್ಸು ಪಡೆಯಬಹುದು. ನೀವು ಕಬ್ಬಿಣ ವಸ್ತುಗಳ ಸಂಬಂಧಿ ವ್ಯಾಪಾರಿಗಳಾಗಿದ್ದರೆ ಈ ವಾರದಲ್ಲಿ ದೊಡ್ಡ ಮಟ್ಟ ಲಾಭ ನೋಡಲಿದ್ದೀರಿ. ಹಾಗೆ ಆರೋಗ್ಯದ ವಿಚಾರವಾಗಿ ಬೆನ್ನು, ಕೀಲು, ಉದರ ಬೇನೆಯಂತಹ ಸಮಸ್ಯೆಗಳಿಗೆ ತುತ್ತಾಗಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಈ ವಾರದಲ್ಲಿ ಬಹಳಷ್ಟು ಲಾಭದಾಯಕ ಕೆಲಸದಲ್ಲಿ ಭಾಗಿಯಾದರು ನಿಮ್ಮ ಸಮಸ್ಯೆಗಳು ದೂರಾಗಲು ಮತ್ತಷ್ಟು ಸಮಯ ಹಿಡಿಯಲಿದೆ. ಕೆಲಸಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ವಾರದ ಮಧ್ಯಭಾಗದಿಂದ ಪರಿಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತದೆ. ಧೈರ್ಯ ಮತ್ತು ಪ್ರಯತ್ನದಿಂದ ನಿಮ್ಮ ಕೆಲಸಗಳ ಪೂರ್ಣ ಮಾಡಿ. ವಿವಾಹಿತರಲ್ಲಿ ಹಣಕಾಸಿನ ಸಮಸ್ಯೆ ಎದುರಾಗಬಹುದು. ಮಕ್ಕಳ ಭವಿಷ್ಯಕ್ಕೆ ಪೂರಕವಾಗಿರುವ ಕೆಲಸವೊಂದನ್ನು ಈ ವಾರ ಮಾಡುತ್ತೀರಿ.
ಮೀನ ರಾಶಿ
ಮೀನ ರಾಶಿಯವರು ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಪಡೆಯಲು ಇದು ಉತ್ತಮ ವಾರವಾಗಿದೆ. ನಿಮ್ಮ ದೈನಂದಿನ ಕೆಲಸಗಳು ಫಲ ನೀಡಲಿವೆ. ನಿಮ್ಮ ಆರ್ಥಿಕ ಸಮಸ್ಯೆಗಳು ದೂರಾಗುವ ಸಮಯವಿದು. ನಿಮಗಾಗಿ ಹಾಗೆ ಮನೆಗಾಗಿ ನೀವು ದುಬಾರಿ ವಸ್ತು ಖರೀದಿಸಬಹುದು. ಸಾಲ ಪರುಪಾವತಿಯಂತಹ ಕಾರ್ಯದಲ್ಲಿ ನೀವು ತೊಡಗಬಹುದು. ಜವಾಬ್ದಾರಿಗಳು ಹೆಚ್ಚಾಗಬಹುದು, ಇದರಿಂದ ನಿಮಗೆ ಒತ್ತಡ ಇರುವುದಿಲ್ಲ. ನೀವು ಮೊದಲೇ ನಿರ್ಧರಿಸಿದ್ದ ಕೆಲವು ಕೆಲಸವನ್ನು ಅಂದುಕೊಂಡ ರೀತಿಯಲ್ಲಿ ಮುಗಿಸುತ್ತೀರಿ. ಹೂಡಿಕೆಯಿಂದ ಲಾಭದ ನಿರೀಕ್ಷೆ ಮಾಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











