ವಾರ ಭವಿಷ್ಯ ಪ್ರಕಾರ ಈ ವಾರ (ಮೇ 04-ಮೇ 10) ಯಾವ ರಾಶಿಗೆ ಹೇಗಿರಲಿದೆ?

ಮೇ 04ರಿಂದ 10ರ ವರೆಗಿನ ನಿಮ್ಮ ವಾರ ಭವಿಷ್ಯದಲ್ಲಿ ಏನಿದೆ ನೋಡಿ.

ಮೇಷ ರಾಶಿ

ಮೇಷ ರಾಶಿ ಮಂದಿ ಈ ವಾರ ಹೊಸ ರೀತಿಯ ಪ್ರಗತಿಗಳಿಗೆ ತೆರೆದುಕೊಳ್ಳುತ್ತಾರೆ. ಹೊಸ ಅವಕಾಶ ನಿಮ್ಮನ್ನು ಹುಡುಕಿ ಬರಲಿದೆ. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗುತ್ತೀರಿ. ವ್ಯಾಪಾರದಲ್ಲಿ ಕೊಂಚ ಹಿನ್ನಡೆ ಅನುಭವಿಸಬಹುದು. ಹಾಗೆ ಖರ್ಚುಗಳು ಸಹ ಹೆಚ್ಚಾಗಬಹುದು. ಸಂಬಂಧಗಳ ವಿಷಯದಲ್ಲಿ ಈ ವಾರ ನಿಮಗೆ ಅನುಕೂಲಕರವಾಗಿರುತ್ತದೆ. ಪ್ರಣಯ ಸಂಬಂಧಗಳು ಗಾಢವಾಗುತ್ತವೆ. ನಿಮ್ಮ ಸಂಗಾತಿಯೊಂದಿಗಿನ ಅನ್ಯೋನ್ಯತೆ ಹೆಚ್ಚಾಗುತ್ತದೆ. ಮನೆಗಾಗಿ ಹೆಚ್ಚಿನ ಹಣ ವ್ಯಯಿಸುತ್ತೀರಿ ಆರೋಗ್ಯದಲ್ಲೂ ಸುಧಾರಣೆ ಇದೆ. ವಿಪರೀತ ಪ್ರಯಾಣದಿಂದ ಆಯಾಸ ಕಾಡಬಹುದು.

ವೃಷಭ ರಾಶಿ

ವೃಷಭ ರಾಶಿ ಮಂದಿಗೆ ಈ ವಾರವು ಮಿಶ್ರ ಫಲ ನೋಡಬಹುದು. ನೀವು ಯಾವುದಾದರು ದೊಡ್ಡ ವ್ಯವಹಾರದಲ್ಲಿ ತೊಡಗಿದ್ದರೆ ಈ ಸಮಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ನಿಮ್ಮ ಹಣಕಾಸು ಸ್ಥಿತಿಯಲ್ಲಿ ಸ್ವಲ್ಪ ಮಟ್ಟಿನ ಅಡೆತಡೆ ನೋಡಬಹುದು. ಈ ‍ವಾರದಲ್ಲಿ ನಿಮ್ಮ ವ್ಯಾಪಾರಗಳಲ್ಲಿ ಲಾಭ ನೋಡಬಹುದು. ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ಆದರೆ ಮನೆಯ ಪರುಸ್ಥಿತಿಯಲ್ಲಿ ಸುಧಾರಣೆ ನೋಡುವುದು ಮುಖ್ಯವಾಗಿದೆ. ಹಾಗೆ ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ತಾಪವೂ ದೊಡ್ಡದಾಗಬಹುದು.

Weekly Horoscope From May 04 To May 10 For All Zodiac Signs In Kannada

ಮಿಥುನ ರಾಶಿ

ಮಿಥುನ ರಾಶಿ ಜನರು ಈ ವಾರದ ಆರಂಭರದಲ್ಲಿ ಸಮಸ್ಯೆಗಳು ಸವಾಲುಗಳ ಎದುರಿಸಬಹುದು. ಆದರೆ ವಾರದ ಅಂತ್ಯದ ದಿನಗಳಲ್ಲಿ ಉತ್ತಮ ಸಮಯ ಹೊಂದಲಿದ್ದಾರೆ. ನಿಮ್ಮ ಪೂರ್ವ ನಿಯೋಜಿತ ಕೆಲಸ ಕಾರ್ಯಗಳಲ್ಲಿ ಸಫಲತೆ ಇರಲಿದೆ. ದೊಡ್ಡ ಖರ್ಚುಗಳ ಹೊರತಾಗಿಯೂ, ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಕೆಲಸದಲ್ಲಿ ಹಿರಿಯರು ಮತ್ತು ಸಹೋದ್ಯೋಗಿಗಳೊಂದಿಗೆ ಸಂಬಂಧಗಳು ಉತ್ತಮವಾಗಿರುತ್ತವೆ. ಒತ್ತಡಗಳು ನಿವಾರಣೆಯಾಗುವ ಅವಕಾಶ ಸೃಷ್ಟಿಯಾಗಲಿದೆ. ಭೂಮಿ ಖರೀದಿ ಮಾರಾಟದಂತಹ ಕೆಲಸದಲ್ಲಿ ನಿಮಗೆ ಲಾಭವಾಗಬಹುದು. ಆಪ್ತರೊಬ್ಬರಿಂದ ಅಗತ್ಯ ಹಣಕಾಸು ನೆರವು ಪಡೆಯಲಿದ್ದೀರಿ.

ಕರ್ಕ ರಾಶಿ

ಕರ್ಕ ರಾಶಿ ಮಂದಿ ಈ ವಾರ ಮಿಶ್ರ ಫಲ ನೋಡಲಿದ್ದಾರೆ. ಈ ವಾರದ ದ್ವಿತೀಯಾರ್ಧವು ಮೊದಲಾರ್ಧಕ್ಕಿಂತ ಹೆಚ್ಚು ಶುಭವಾಗಿರಲಿದೆ. ನಿಮ್ಮ ದುಬಾರಿ ಖರ್ಚುಗಳಿಗೆ ಅಂತ್ಯ ಹಾಡಿ, ಐಷಾರಾಮಿ ವಸ್ತು ಖರೀದಿ ಸಂಬಂಧ ಉಳಿತಾಯ ಮಾಡಲು ಮುಂದಾಗಬಹುದು. ವಾರದ ಮೊದಲಾರ್ಧದಲ್ಲಿ ಸಣ್ಣ ಪುಟ್ಟ ಅನಾರೋಗ್ಯಕ್ಕೆ ನೀವು ತುತ್ತಾಗಹುದು. ಯಾವ ಉಳಿತಾಯದ ಹಣವನ್ನು ಈ ಸಮಯದಲ್ಲಿ ಬೇರೆ ಕೆಲಸಕ್ಕೆ ಬಳಸಬೇಡಿ. ಹೂಡಿಕೆಯಲ್ಲಿ ಆಸಕ್ತಿ ಹೊಂದಿದ್ದರೆ ಈ ಸಮಯದಲ್ಲಿ ಧೈರ್ಯವಾಗಿ ಹೂಡಿಕೆ ಮಾಡಬಹುದು.

ಸಿಂಹ ರಾಶಿ

ಸಿಂಹ ರಾಶಿಯವರು ಈ ವಾರ ಹೆಚ್ಚು ಪ್ರಯಾಣದಲ್ಲಿ ಕಳೆಯಬೇಕಾಗಬಹುದು. ಇದರಿಂದ ನಿಮ್ಮ ಹಣಕಾಸು ಪರಿಸ್ಥಿತಿ ಸ್ವಲ್ಪ ಏರುಪೇರಾಗಬಹುದು. ಹಾಗೆ ಯಾವುದಾದರು ದೊಡ್ಡ ವ್ಯವಹಾರದಲ್ಲಿ ತೊಡಗಿದ್ದರೆ ಈ ಸಮಯದಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ಭೂಮಿ, ಕಟ್ಟಡಗಳು, ವಾಹನ ಇತ್ಯಾದಿಗಳಲ್ಲಿ ನೀವು ಸಂತೋಷವನ್ನು ಕಾಣುವಿರಿ. ನಿಮ್ಮ ಕೆಲಸ ಕಾರ್ಯದಲ್ಲಿ ಒತ್ತಡ ಇದ್ದರೂ ಅದನ್ನು ನಿಭಾಯಿಸುತ್ತೀರಿ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಈ ಸಮಯದಲ್ಲಿ ಬಹಳ ಸಮಸ್ಯೆಗೆ ಒಳಗಾಗಬಹುದು. ಅದರಲ್ಲೂ ನಿಮ್ಮ ಹಣಕಾಸಿನ ಪರಿಸ್ಥಿತಿಯು ನೀವು ಅಂದುಕೊಂಡಂತೆ ಇರುವುದಿಲ್ಲ. ಇದರಿಂದ ಬಹಳಷ್ಟು ಒತ್ತಡ ಎದುರಿಸಬೇಕಾಗುತ್ತದೆ. ವಾರದ ಕೊನೆಯ ಎರಡು ದಿನದಲ್ಲಿ ನಿಮ್ಮ ಆರ್ಥಿಕ ಸ್ಥಿತಿಗಳು ಸುಧಾರಿಸಲಿದೆ. ಒಂದು ಸಣ್ಣ ತಪ್ಪು ಕೂಡ ಉನ್ನತ ಅಧಿಕಾರಿಗಳ ಕೋಪಕ್ಕೆ ಗುರಿಯಾಗಬಹುದು. ವ್ಯವಹಾರದಲ್ಲಿ ತೊಡಗಿರುವವರು ಹಣಕಾಸಿನ ವಹಿವಾಟುಗಳನ್ನು ಎಚ್ಚರಿಕೆಯಿಂದ ನಡೆಸಬೇಕು.

ತುಲಾ ರಾಶಿ

ತುಲಾ ರಾಶಿಯವರು ಈ ವಾರ ಶುಭ ಪ್ರಯೋಜನ ಪಡೆಯಲಿದ್ದಾರೆ. ಮನೆ ಕುಟುಂಬದಲ್ಲಿ ಸಂತೋಷದ ವಾತಾವರಣಕ್ಕೆ ಕಾರಣವಾಗುವ ವಿಶೇಷ ದಿನಗಳ ನೋಡಬಹುದು. ನೀವು ಅವಿವಾಹಿತರಾಗಿದ್ದರೆ ಶುಭ ಕಾರ್ಯದಲ್ಲಿ ಭಾಗಿಯಾಗುವುದು ನಿಮಗೂ ಶುಭ ತರಬಹುದು. ಖಾಸಗಿ ಸಂಸ್ಥೆಯ ಉದ್ಯೋಗಿಗಳಲ್ಲಿ ದೊಡ್ಡ ಸವಾಲು ಹಾಗೂ ಒತ್ತಡ ಇರಬಹುದು. ನಿಮ್ಮ ಖರ್ಚುಗಳ ಮೇಲೆ ನಿಗಾ ಇಡಬೇಕು. ಸಂಬಂಧಿಕರು ಮತ್ತು ಕುಟುಂಬ ಸದಸ್ಯರೊಂದಿಗಿನ ನಿಮ್ಮ ಸಂಬಂಧಗಳು ಉತ್ತಮವಾಗಿರುತ್ತವೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ವಾರದ ಬಹಳ ಸಂತೋಷದಿಂದ ಕಳೆಯುತ್ತಾರೆ. ನಿಮ್ಮ ಸಂಬಂಧದಲ್ಲಿ ದೊಡ್ಡ ಬದಲಾವಣಗೆ ಕಾರಣವಾಗಬಹುದು. ವಾರದ ಆರಂಭದಲ್ಲಿ ಕೆಲವು ಹೊಸ ಜವಾಬ್ದಾರಿಗಳನ್ನು ನೀವು ಪಡೆಯಬಹುದು. ಕಚೇರಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳು ನಿಮಗೆ ಸವಾಲು ತರಬಹುದು. ಕಬ್ಬಿಣ ಮತ್ತು ಗೃಹಪಯೋಗಿ ವಸ್ತುಗಳ ವ್ಯಾಪಾರಸ್ಥರು ಲಾಭ ಮಾಡುವ ವಾರವಾಗಿದೆ. ಹಲವು ದಿನಗಳಿಂದ ನೀವು ಅನಾರೋಗ್ಯಕ್ಕೆ ತುತ್ತಾಗಿದ್ದರೆ ಈ ಸಮಯದಲ್ಲಿ ಸುಧಾರಣೆಯಾಗಲಿದೆ.

ಧನು ರಾಶಿ

ಧನು ರಾಶಿ ಮಂದಿ ಈ ವಾರದಲ್ಲಿ ಬಹಳ ಪ್ರಯಾಣ ಮಾಡಬೇಕಾಗಬಹುದು. ಕುಟುಂಬಸ್ಥರೊಂದಿಗೆ ನೀವು ಪ್ರವಾಸ ಕೈಗೊಳ್ಳಬಹುದು. ನಿಮ್ಮ ಹಣ ಯಾವುದಾದರು ವಿಚಾರವಾಗಿ ಸಿಲುಕಿದ್ದರೆ ಅಥವಾ ಬಾಕಿ ಉಳಿದಿದ್ದರೆ ಈ ಸಮಯದಲ್ಲಿ ನಿಮ್ಮ ಕೈ ಸೇರಬಹುದು. ನೀವು ಯಾರಿಂದಾದರು ಹಣದ ಸಹಕಾಯಕ್ಕೆ ಮನವಿ ಮಾಡಿದ್ದರೆ ಈ ವಾರ ನಿಮ್ಮ ಕೈ ಸೇರಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲ ಸಿಗುವ ದಿನಗಳಿವೆ. ದಾಂಪತ್ಯದಲ್ಲಿ ಸಂತಸ ಇರಲಿದೆ. ನಿಮ್ಮ ಕೆಲಸಗಳು ಪ್ರಶಂಸೆ ಪಡೆಯಲಿವೆ. ಮನೆಗಾಗಿ ನೀವು ಖರ್ಚು ಮಾಡಬೇಕಾಗುತ್ತದೆ.

ಮಕರ ರಾಶಿ

ಮಕರ ರಾಶಿಯವರು ಈ ವಾರ ಬಹಳ ಶ್ರಮ ಹಾಕಿ ಎಲ್ಲಾ ಕೆಲಸ ಮಾಡಬೇಕಾಗುತ್ತದೆ. ಹಾಗೆ ನಿಮ್ಮ ಹಣಕಾಸು ಪರಿಸ್ಥಿತಿ ಏರುಪೇರಾಗಬಹುದು. ವಾಹನ ಸಂಬಂಧಿ, ಆರೋಗ್ಯ ಸಂಬಂಧಿಸಿದ ಖರ್ಚು ಹೆಚ್ಚಾಗಬಹುದು. ಹಿತೈಷಿಗಳಿಂದ ನಿಮಗೆ ಬೆಂಬಲ ಸಿಗಬಹುದು. ಬಹಳ ದೂರ ಪ್ರಯಾಣದಿಂದ ನಿಮ್ಮಲ್ಲಿ ಆಯಾಸದಂತಹ ಸಮಸ್ಯೆ ಕಾಡಬಹುದು. ವ್ಯಾಪಾರದಲ್ಲಿ ತೊಡಗಿರುವವರು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸಂಗಾತಿಯ ಭಾವನೆಗಳನ್ನು ನೀವು ಗೌರವಿಸಬೇಕು. ಕುಟುಂಬಕ್ಕೆ ಸಂಬಂಧಿಸಿದ ಶುಭ ಕಾರ್ಯವೊಂದರಲ್ಲಿ ನೀವು ಭಾಗಿಯಾಗುತ್ತೀರಿ.

ಕುಂಭ ರಾಶಿ

ಕುಂಭ ರಾಶಿ ಜನರು ಈ ವಾರದಲ್ಲಿ ನೀವು ಅಂದುಕೊಂಡಂತ ಕೆಲಸ ಕಾರ್ಯದಲ್ಲಿ ಸಫಲತೆ ನೋಡುವ ದಿನವಾಗಿರಲಿದೆ. ಉದ್ಯೋಗಾಕಾಂಕ್ಷಿಗಳು ಉತ್ತಮ ಅವಕಾಶಗಳ ಪಡೆಯಬಹುದು. ಭೌತಿಕ ಸಂತೋಷ ಮತ್ತು ಸಂಪತ್ತು ಹೆಚ್ಚಾಗುತ್ತದೆ. ಈ ವಾರ ಹೆಚ್ಚಾಗಿ ಲಾಭ ಮತ್ತು ಪ್ರಗತಿಯಿಂದ ತುಂಬಿರುತ್ತದೆ. ಈ ವಾರ ನೀವು ಕೈಗೊಳ್ಳುವ ಪ್ರಯಾಣವು ಆಹ್ಲಾದಕರ ಮತ್ತು ಫಲಪ್ರದವಾಗಿರುತ್ತದೆ. ಮನೆಯಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗಬಹುದು.

ಮೀನ ರಾಶಿ

ಮೀನ ರಾಶಿಯವರು ಈ ವಾರ ತುಂಬಾ ಚೆನ್ನಾಗಿರಲಿದೆ. ಕೆಲಸ ಮಾಡುವ ಜನರು ವಿವಿಧ ಮೂಲಗಳಿಂದ ಆದಾಯವನ್ನು ಪಡೆಯುತ್ತಾರೆ. ಸಂಪತ್ತು ವೃದ್ಧಿಯಾಗಲಿದೆ. ವ್ಯವಹಾರ ಯೋಜನೆಯನ್ನು ವಿಸ್ತರಿಸುವ ಆಲೋಚನೆ ಮಾಡುವಿರಿ. ಕುಟುಂಬದಲ್ಲಿ ನಿಮ್ಮ ಮಾತುಗಳು ನಡೆಯಲಿದೆ, ಹಾಗೆ ಮನೆಯಿಂದ ಹಣಕಾಸು ವಿಚಾರವಾಗಿ ಒತ್ತಡ ಇರಬಹುದು. ದೊಡ್ಡ ಕೆಲಸಗಳನ್ನು ಆದಷ್ಟು ನಿಧಾನವಾಗಿ ಯಾವುದೇ ತರಾತುರಿಯಿಲ್ಲದೆ ಮಾಡುವುದು ಉತ್ತಮ. ಆರೋಗ್ಯದಲ್ಲಿ ಉತ್ತಮ ಪ್ರಗತಿ ನೋಡಬಹುದು.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Horoscope From May 04 To May 10 For All Zodiac Signs In Kannada

Here is weekly horoscope prediction for all zodiac signs, read on...
Story first published: Monday, May 5, 2025, 11:15 [IST]
X
Desktop Bottom Promotion