ವಾರ ಭವಿಷ್ಯ ಪ್ರಕಾರ ಈ ವಾರ (ಮಾರ್ಚ್ 16-22) ಯಾವ ರಾಶಿಗೆ ಹೇಗಿರಲಿದೆ?

ವಾರ ಭವಿಷ್ಯ ಪ್ರಕಾರ ಈ ವಾರ ಯಾವ ರಾಶಿಗಳಿಗೆ ಶುಭವಾಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಮೇಷ ರಾಶಿ

ಮೇಷ ರಾಶಿ ಈ ವಾರದ ಆರಂಭದಲ್ಲಿ ನೀವು ಉತ್ತಮ ಫಲಿತಾಂಶ ನೋಡಲಿದ್ದೀರಿ. ಆದ್ರೆ ವಾರದ ಕೊನೆಯಲ್ಲಿ ನಿಮಗೆ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಈ ವಾರದಲ್ಲಿ ನಿಮ್ಮ ಸಂಬಂಧಿಕರು, ಸ್ನೇಹಿತರು ಬಹಳ ಮುಖ್ಯ ಕೆಲಸದ ದೃಷ್ಟಿಯಿಂದ ಭೇಟಿಯಾಗಲಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಎದುರಾಗಬಹುದು. ವಾರದ ಕೊನೆಯಲ್ಲಿ ಒತ್ತಡ, ಹಣಕಾಸು ಪರಿಸ್ಥಿತಿಯಲ್ಲಿ ಏರುಪೇರು ಸಂಭವಿಸಲಿದೆ, ನೀವು ಅಂದುಕೊಂಡಂತೆ ನಿಮ್ಮ ಹಣಕಾಸು ಸ್ಥಿತಿ ಇರುವುದಿಲ್ಲ. ಉದ್ಯೋಗ ಬದಲಿಸುವ ನಿಮ್ಮ ಆಲೋಚನೆಯನ್ನು ಮುಂದೂಡುವುದು ಬಹಳ ಉತ್ತಮ.

ವೃಷಭ ರಾಶಿ

ಈ ವಾರ ವೃಷಭ ರಾಶಿಯವರಿಗೆ ನಿರೀಕ್ಷಿತ ಕೆಲಸಗಳು ಕೈ ಹಿಡಿಯಲಿವೆ. ಹಾಗೆ ನೀವು ಬಯಸಿದಂತೆ ಲಾಭದಾಯಕ ದಿನಗಳ ನೋಡಲಿದ್ದೀರಿ. ಈ ವಾರದಲ್ಲಿ ನೀವು ಮಾಡಲು ಇಚ್ಛಿಸಿದ್ದ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಮುಕ್ತಾಯವಾಗಲಿದೆ. ವಿವಿಧ ಮೂಲಗಳಿಂದ ನಿಮಗೆ ಆದಾಯ ಬರಬಹುದು. ಕೆಲಸದ ಸ್ಥಳದಲ್ಲಿ ಉಂಟಾಗಬಹುದಾದ ಒತ್ತಡವನ್ನು ನಿವಾರಿಸಲು ನೀವು ಹೊಸ ರೀತಿಯ ಮಾರ್ಗ ಕಂಡುಕೊಳ್ಳಲಿದ್ದೀರಿ. ದಾಂಪತ್ಯ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಮಾತಿನ ಮೂಲಕ ನಿವಾರಿಸಿಕೊಳ್ಳುವುದು ಬಹಳ ಮುಖ್ಯ, ಇಲ್ಲದಿದ್ದರೆ ಬಹುದೊಡ್ಡ ಸಮಸ್ಯೆಯಾಗಿ ಕಾಡಬಹುದು.

Weekly Horoscope From March 16 To 22 For Al Zodiac Signs In Kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ವಾರವು ಏರಿಳಿತಗಳಿಂದ ತುಂಬಿರಲಿದೆ. ಯಾವುದೇ ಕೆಲವ ನೀವು ಮಾಡುವ ಮುನ್ನ ಹಲವು ಆಯಾಮಗಳಲ್ಲಿ ಆಲೋಚಿಸಿ. ಹೆಚ್ಚು ಕಷ್ಟಕರ ಕೆಲಸಗಳನ್ನು ಸುಲಭ ಮಾರ್ಗದಲ್ಲಿ ಮಾಡಲು ಮುಂದಾಗಬೇಡಿ. ವ್ಯಾಪಾರಿಗಳಿಗೆ ಉತ್ತಮ ದಿನಗಳು ಕಂಡುಬರಲಿವೆ. ಆದರೆ ನಿಮ್ಮ ಹಣಕಾಸಿನ ವಿಚಾರವಾಗಿ ಖರ್ಚು ಹೆಚ್ಚಾಗಲಿದೆ, ಹಾಗೆ ಆದಾಯ ಕೂಡ ಹೆಚ್ಚಾಗಲಿದೆ. ಆರೋಗ್ಯದಲ್ಲಿ ಕಂಡುಬರುವ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ನಿರ್ಲಕ್ಷಿಸಬೇಡಿ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿರಲಿದೆ.

ಕರ್ಕ ರಾಶಿ

ಈ ರಾಶಿಯವರು ಈ ವಾರದಲ್ಲಿ ಸಂತಸದ ದಿನಗಳ ನೋಡಬಹುದು. ನಿಮ್ಮ ಪ್ರಯತ್ನಗಳಲ್ಲಿ ಶ್ರಮ ವಹಿಸಿದರೆ ಅದರ ಫಲಿತಾಂಶ ಕೂಡ ನಿಮಗೆ ತೃಪ್ತಿ ನೀಡಲಿದೆ. ನಿಮ್ಮ ಸುತ್ತಲು ಧನಾತ್ಮಕ ವಿಚಾರಗಳು ನಡೆಯಲಿವೆ. ಇದರಿಂದ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ದೊಡ್ಡ ನಿರ್ಧಾರ ಕೈಗೊಳ್ಳಲಿದ್ದೀರಿ. ಕೆಲಸದ ಕಾರಣಕ್ಕೆ ನೀವು ದೂರ ಪ್ರಯಾಣ ಮಾಡಬೇಕಾಗಬಹುದು. ವಾಹನ ಮಾಲಿಕರು ಎಚ್ಚರಿಕೆಯಿಂದ ಇರುವುದು ಮುಖ್ಯ. ಈ ವಾರದಲ್ಲಿ ಹೆಚ್ಚು ಸೋಮಾರಿತನದಿಂದ ಕೆಲಸಗಳ ಮುಂದೂಡಬೇಡಿ. ಇದು ಅಲ್ಲಿಯೇ ಅಂತ್ಯವಾಗಬಹುದು. ಆರೋಗ್ಯದಲ್ಲಿ ಸುಧಾರಣೆ ನೋಡಲಿದ್ದೀರಿ.

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ ಈ ವಾರ ಬಹಳ ಅಪರೂಪದ ಲಾಭ ನೋಡಬಹುದು. ವಾರದ ಅಂತ್ಯದಿಂದ ಹಣಕಾಸು ವಿವಾರದಲ್ಲಿ ನಿಮ್ಮ ಪರವಾದ ಒಲವು ಇರಲಿದೆ. ಹಾಗೆ ದಿಢೀರ್ ಧನಲಾಭ, ಆದಾಯ ಮೂಲದಲ್ಲಿ ಹೆಚ್ಚಳದಂತಹ ಪ್ರಕ್ರಿಯೆ ನೋಡಬಹುದು. ವೈವಾಹಿಕ ಜೀವನದಲ್ಲಿ ಮನಸ್ಥಾಪಗಳು ಮೂಡಬಹುದು. ಹಾಗೆ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ನಿಮ್ಮ ಆಲೋಚನೆಗಳಿಗೆ ಕಡಿವಾಣ ಹಾಕುವುದು ಉತ್ತಮ. ಈ ವಾರ ದೇವಾಲಯ ಭೇಟಿಯಂತಹ ಕೆಲಸಕ್ಕೆ ಮುಂದಾಗುವಿರಿ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಈ ವಾರ ಹೆಚ್ಚು ಖರ್ಚುಗಳಿಗೆ ಒಳಗಾಗಬಹುದು. ಮನೆಗೆ ಯಾವುದಾದರು ಹೊಸ ವಸ್ತು ಖರೀದಿಗೆ ನೀವು ಮುಂದಾಗುತ್ತೀರಿ. ನಿರ್ದಿಷ್ಟ ಕೆಲಸಕ್ಕಾಗಿ ಹೆಚ್ಚಿನ ಹಣ ವ್ಯಯಿಸಬೇಕಾಗಬಹುದು. ನೀವು ಬಯಸಿದಂತೆ ಬಹಳ ಕಾಲದಿಂದ ಬಾಕಿ ಉಳಿದಿದ್ದ ಕೆಲಸವೊಂದನ್ನು ಪೂರ್ಣಗೊಳಿಸಲು ಮುಂದಾಗುವಿರಿ, ಇದರಿಂದ ನಿಮ್ಮ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಐಟಿ ಉದ್ಯೋಗಿಗಳು, ಬ್ಯಾಂಕ್ ಉದ್ಯೋಗಿಗಳಲ್ಲಿ ಒತ್ತಡ ಹೆಚ್ಚಾಗಲಿದೆ. ಅನಗತ್ಯ ಚರ್ಚೆ ಅಥವಾ ಮಾತುಗಳು ನಿಮಗೆ ಸಮಸ್ಯೆ ತರಬಹುದು.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ವಾರ ಅನೇಕ ಲಾಭಗಳು ಸಿಗಲಿದೆ. ನಿಮ್ಮ ಹಣಕಾಸು ಪರಿಸ್ಥಿತಿಯು ಉತ್ತಮವಾಗುತ್ತದೆ. ನಿಮ್ಮಿಂದ ಅಗತ್ಯ ಕೆಲಸವೊಂದಕ್ಕೆ ಹಣಕಾಸಿನ ನೆರವು ಸಿಗಲಿದೆ. ಅಪೇಕ್ಷಿತ ವಲಯವು ನಿಮ್ಮ ನೆರವಿಗೆ ಬರಲಿದೆ. ವೈವಾಹಿಕ ಜೀವನದಲ್ಲಿ ನಿಮ್ಮ ಪರವಾದ ಒಲುವು ಇರಲಿದೆ. ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಅಥವಾ ಮಾಡಲು ಆರಂಭಿಸಿದ್ದರೆ ಉತ್ತಮ ಫಲಿತಾಂಶ ನೋಡಲಿದ್ದೀರಿ. ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಇರಬಹುದು. ಕುಟುಂಬದಲ್ಲಿ ಶಾಂತಿ ನೆಲೆಸಲಿದ್ದು, ಶುಭ ಕಾರ್ಯದಲ್ಲಿ ನೀವು ಭಾಗಿಯಾಗುವ ನಿರೀಕ್ಷೆ ಇದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಲ್ಲಿ ಈ ವಾರವು ಮಿಶ್ರ ಫಲಕ್ಕೆ ಕಾರಣವಾಗುತ್ತಿದೆ. ನಿಮ್ಮ ಹತ್ತರಿದ ಶತ್ರುಗಳಿಂದ ಈ ವಾರ ದೂರ ಇರುವುದು ಬಹಳ ಉತ್ತಮ. ಹಣಕಾಸು, ಆಸ್ತಿ ವಿಚಾರದಲ್ಲಿ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಚಿನ್ನ, ಬೆಳ್ಳಿಯಂತಹ ಅಮೂಲ್ಯ ವಸ್ತುಗಳ ಖರೀದಿಗೆ ನೀವು ಮುಂದಾಗಬಹುದು. ಆತುರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ವ್ಯಾಪಾರಸ್ಥರಲ್ಲಿ ಹೊಸ ರೀತಿಯ ಕೆಲಸಗಳು ಮಾಡಬೇಕಾಗಿ ಬರಬಹುದು. ಎಲ್ಲಾ ವಿಚಾರದಲ್ಲಿ ನಾಯಕತ್ವ ವಹಿಸಲಿದ್ದೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಬಹುದಿನಗಳ ಅನಾರೋಗ್ಯ ಸಮಸ್ಯೆಯಿಂದು ನಿವಾರಣೆಯಾಗಲಿದೆ.

ಧನು ರಾಶಿ

ಧನು ರಾಶಿಯವರು ಈ ವಾರದಲ್ಲಿ ಅಂದುಕೊಂಡ ಕೆಲಸಗಳನ್ನ ಮಾಡಿ ಮುಗಿಸಲಿದ್ದೀರಿ. ಬಹಳ ಸಮಯ ನೀವು ಮನೆಯಿಂದ ಹೊರಗೆ ಕಳೆಯಬೇಕಾಗಬಹುದು. ದೀರ್ಘ ಪ್ರಯಾಣಗಳು ಆಯಾಸ, ಒತ್ತಡಕ್ಕೆ ಕಾರಣವಾಗಲಿದೆ. ಸೈಬರ್ ಕುರಿತ ವಿಚಾರಗಳಿಂದ ಈ ವಾರ ದೂರು ಇರುವುದು ಉತ್ತಮ. ವ್ಯಾಪಾರ ವ್ಯವಹಾರದಲ್ಲಿ ಯಥಾಸ್ಥಿತಿ ಇರಲಿದೆ. ಆಪ್ತರ ಸಲಹೆಯಿಂದಾಗಿ ನಿಮ್ಮ ಹಲವು ಕಾರ್ಯಗಳು ಸಲೀಸಾಗಿ ನಡೆಯಲಿದೆ. ಅರ್ಧಕ್ಕೆ ನಿಲ್ಲಿಸಿರುವ ಕೆಲಸವನ್ನು ಈ ಸಮಯದಲ್ಲಿ ಪೂರ್ಣಗೊಳಿಸಿ, ಕೆಲಸದ ಸ್ಥಳದಲ್ಲಿನ ಒತ್ತಡ ಹೆಚ್ಚುವ ಸಾಧ್ಯತೆ ಇದೆ.

ಮಕರ ರಾಶಿ

ಮಕರ ರಾಶಿಯವರು ಈ ಸಮಯದಲ್ಲಿ ಹೆಚ್ಚು ಲಾಭ ನೋಡುತ್ತೀರಿ. ಅದರಲ್ಲೂ ವಾರದ ದ್ವಿಯಾರ್ಧದಲ್ಲಿ ನಿಮ್ಮ ಆದಾಯ ದ್ವಿಗುಣ‍ವಾಗಲಿದೆ, ಹೊಸ ಉದ್ಯೋಗ, ಅಥವಾ ಹೊಸ ವ್ಯಾಪಾರ ನಿಮ್ಮ ಕೈ ಹಿಡಿಯಲಿದೆ. ಬಹಳ ಸಮಯದಿಂದ ಬಯಸಿದ್ದ ವಸ್ತುವೊಂದನ್ನು ನೀವು ಖರೀದಿಸಲಿದ್ದೀರಿ. ನಿಮ್ಮ ಆಪ್ತರಿಂದ ನಿಮ್ಮ ಕನಸಿಗೆ ಸಹಕಾರ ಪಡೆಯಲಿದ್ದೀರಿ. ಹಳೆಯ ಬಾಕಿಗಳು ಮರುಪಾವತಿಯಾಗಲಿದೆ. ದೊಡ್ಡ ಖರ್ಚುಗಳನ್ನು ಮೂಂದೂಡುವ ಆಲೋಚನೆಯು ನಿಮಗೆ ಉತ್ತಮ ಫಲ ನೀಡಲಿದೆ. ಮನೆಯಲ್ಲಿ ಹಿರಿಯರ ಆರೋಗ್ಯದ ಕಡೆಗೆ ಹೆಚ್ಚು ಗಮನವಿಡಿ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ವಾರವು ಮಿಶ್ರ ಫಲದಿಂದ ಕೂಡಿರಲಿದೆ. ವಾರದ ಆರಂಭದಿಂದಲೂ ಉತ್ತಮ ಹಣಕಾಸು ಪರಿಸ್ಥಿತಿ ಇದ್ದರೂ ಖರ್ಚು ಕೂಡ ಹೆಚ್ಚಾಗುತ್ತದೆ. ತಂದೆ ತಾಯಿಯ ಆರೋಗ್ಯದ ಕಡೆಗೆ ಹೆಚ್ಚು ಗಮನವಿಡಿ. ಪಾಲುದಾರಿಕೆ ವ್ಯಾಪಾರ, ರಿಯಲ್ ಎಸ್ಟೇಟ್, ಹೋಟೆಲ್ ಉದ್ಯಮಿಗಳಿಗೆ ಈ ವಾರ ಶುಭವಾಗಲಿದೆ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಿರಲಿದೆ. ಸಮಯಕ್ಕೆ ಸರಿಯಾಗಿ ಕೆಲಸಗಳ ಪೂರ್ಣಗಳಿಸಲು ಮುಂದಾಗಿ. ಈ ಸಮಯದಲ್ಲಿ ನಿಮ್ಮ ಭಾವನೆಗಳಿಗೆ ನೋವಾಗುವಂತಹ ಹಲವು ಘಟನೆಗಳು ನಡೆಯಬಹುದು.

ಮೀನ ರಾಶಿ

ಮೀನ ರಾಶಿಯವರು ಈ ವಾರ ಅತ್ಯುತ್ತಮ ಲಾಭ ಗಳಿಸಲಿದ್ದೀರಿ. ನಿಮ್ಮ ಕೆಲಸದಲ್ಲಿ ಉತ್ತಮ ಫಲ ನೋಡಲಿದ್ದೀರಿ, ಶ್ರಮ ಇಲ್ಲದ ಕೆಲಸದಲ್ಲಿ ನೀವು ತೊಡಗಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡ ಕಡಿಮೆಯಾಗಲಿದೆ. ಬಹಳ ಸಮಯದಿಂದ ಮುಗಿಸಬೇಕೆಂದಿದ್ದ ಕೆಲಸ ಪೂರ್ಣ ಮಾಡಲಿದ್ದೀರಿ. ವ್ಯಾಪಾರದಲ್ಲೂ ಲಾಭದಾಯಕ ವಾರವಾಗಲಿದೆ. ಬಟ್ಟೆ ವ್ಯಾಪಾರಿಗಳು ಅಧಿಕ ಲಾಭ ಮಾಡುವ ವಾರವಿದು. ಕುಟುಂಬದಲ್ಲಿ ಶಾಂತಿ ಇರಲಿದೆ, ಶುಭ ಕಾರ್ಯದಲ್ಲಿ ನೀವು ಭಾಗಿಯಾಗಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Horoscope From March 16 To 22 For Al Zodiac Signs In Kannada

Here is weekly horoscope prediction for all zodiac signs, read on...
Story first published: Sunday, March 16, 2025, 14:24 [IST]
X
Desktop Bottom Promotion