Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಜೂನ್ 22 ರಿಂದ ಜೂನ್ 28ರ ವಾರ ಭವಿಷ್ಯ: ಯಾವ ರಾಶಿಯವರಿಗೆ ಈ ವಾರ ಧನಲಾಭ?
ಈ ವಾರ ಗ್ರಹಗತಿಗಳ ಸ್ಥಾನವೂ ಯಾರಿಗೆಲ್ಲ ಶುಭಕರವಾಗಿದೆ ನೋಡಿ...
ಮೇಷ ರಾಶಿ
ಮೇಷ ರಾಶಿಯವರಿಗೆ ಈ ವಾರವು ಬಹಳ ಉತ್ತಮ ಫಲಿತಾಂಶ ನೀಡಲಿದೆ. ನಿಮ್ಮ ಹಲವು ಕೆಲಸ ಕಾರ್ಯಗಳಲ್ಲಿ ಶುಭವಾಗುತ್ತಿದೆ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಇದ್ದ ಅಡೆಡೆಗಳು ನಿವಾರಣೆಯಾಗಲಿದೆ. ಹಾಗೆ ದೊಡ್ಡ ಖರ್ಚುಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಖರ್ಚುಗಳು ನಿಮ್ಮ ಆದಾಯಕ್ಕಿಂತ ಹೆಚ್ಚಾಗಿರುವುದರಿಂದ ನಿಮ್ಮ ಬಜೆಟ್ ಮೇಲೆ ಪರಿಣಾಮ ಬೀರಬಹುದು. ಆದರೆ ವಾರದ ಕೊನೆಯಲ್ಲಿ ನಿಮಗೆ ನೆಮ್ಮದಿ ತರಿಸುವ ಹಲವು ಕೆಲಸಗಳು ಆಗಬಹುದು. ಜಂಟಿ ಉದ್ಯಮಗಳು, ಅಥವಾ ವ್ಯವಹಾರಗಳ ವಿಚಾರದಲ್ಲಿ ಈ ವಾರ ಆತುರ ಪಡಬೇಡಿ. ನಿಮ್ಮ ಬಳಿ ಇರುವ ದುಬಾರಿ ವಸ್ತುವೊಂದನ್ನು ನೀವು ಮಾರಾಟ ಮಾಡಬಹುದು. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ.
ವೃಷಭ ರಾಶಿ
ಈ ವಾರದಲ್ಲಿ ವೃಷಭ ರಾಶಿಯವರಿಗೆ ಸಂತೃಪ್ತಿ ನೀಡುವ ವಾರ ಎನ್ನಬಹುದು. ನಿಮ್ಮ ವ್ಯಾಪಾರಗಳಲ್ಲಿ ಲಾಭ ನೋಡಬಹುದು. ನೀವು ಉದ್ಯೋಗ ಹುಡುಕುತ್ತಿದ್ದರೆ ಆಪ್ತರು ಅಥವಾ ಪ್ರಭಾವಿ ವ್ಯಕ್ತಿಯೊಬ್ಬರ ಸಹಾಯದಿಂದ ಉತ್ತಮ ಅವಕಾಶ ಪಡೆಯಬಹುದು. ಹಣಕಾಸು ವಹಿವಾಟಿನಲ್ಲಿ ನಿಮಗೆ ಶುಭವಾಗಲಿದೆ, ಅದರಲ್ಲೂ ಸಾಲದ ವಿಚಾರವಾಗಿ ನಿಮ್ಮಲ್ಲಿ ಯಶಸ್ಸು ಇರಲಿದೆ. ಬ್ಯಾಂಕಿಂಗ್ ಕೆಲಸಗಳು, ಆಸ್ತಿ ಸಂಬಂಧಿತ ಕೆಲಸಗಳಲ್ಲಿ ನಿಮ್ಮ ಪರವಾದ ವಿಚಾರಗಳಿವೆ. ಮನೆಯ ಸದಸ್ಯರ ಆರೋಗ್ಯದಲ್ಲಿ ಸುಧಾರಣೆ ಇರಲಿದೆ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ವಾರದು ಬಹಳ ಧನಾತ್ಮಕವಾಗಿರಲಿದೆ. ಈ ವಾರ ನೀವು ಪ್ರವಾಸ ಕೈಗೊಳ್ಳಬಹುದು. ಹಾಗೆ ಆಪ್ತರೊಬ್ಬರ ಭೇಟಿ ಮಾಡಬಹುದು. ಅವಿವಾಹಿತರಲ್ಲಿ ಈ ವಾರವು ಖರ್ಚುಗಳಿಗೆ ಕಾರಣವಾಗಲಿದೆ. ಅದರಲ್ಲೂ ವಾಹನ ಸಂಬಂಧಿ, ಆಹಾರ ಸಂಬಂಧಿ ಖರ್ಚುಗಳು ಹೆಚ್ಚಾಗಬಹುದು. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಹೆಚ್ಚು ಗಮನವಿಡಬೇಕಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿಸಲು ನೀವು ಬಹಳ ಶ್ರಮ ಹಾಕಬೇಕಾಗುತ್ತದೆ. ಹಾಗೆ ನೀವು ಯಾರೊಬ್ಬರಿಂದ ಆರ್ಥಿಕ ಸಹಾಯವನ್ನು ಪಡೆಯುತ್ತೀರಿ. ಬಹಳ ಸಮಯದಿಂದ ಹಣಕಾಸು ವಿಚಾರದಲ್ಲಿ ಇದ್ದ ಗೊಂದಲ ದೂರಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ವಾರವು ಬಹಳ ಉತ್ತಮವಾಗಿರಲಿದೆ. ನಿಮ್ಮ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ನೀವು ನಿಮ್ಮ ನಿಯೋಜಿತ ಆದಾಯ ಹೊರತುಪಡಿಸಿ ಬೇರೊಂದು ಮೂಲದಿಂದ ಆದಾಯ ಪಡೆಯಬಹುದು. ಗೃಹಿಣಿಯರಲ್ಲಿ ಈ ವಾರವು ಬಹಳ ಆರಾಮದಾಯಕವಾಗಲಿದೆ, ನಿಮ್ಮ ಕೌಟುಂಬಿಕ ವಿಚಾರವಾಗಿ ಕಾಡಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಅವಿವಾಹಿತರಲ್ಲಿ ಔದ್ಯೋಗಿಕ ಸಂಬಂಧಿ ಸಮಸ್ಯೆಗಳು ದೂರಾಗಬಹುದು. ನೀವು ದೂರ ಪ್ರಯಾಣಗಳಲ್ಲಿ ಭಾಗಿಯಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯವರು ಈ ವಾರದಂದು ಬಹಳಷ್ಟು ಓಡಾಟ ಮಾಡುತ್ತೀರಿ, ಕೆಲಸದ ವಿಚಾರವಾಗಿ ಹಾಗೂ ವೈಯಕ್ತಿಕ ಕಾರಣದಿಂದಲೂ ನೀವು ಪ್ರಯಾಣದಲ್ಲಿ ಕಳೆಯುತ್ತೀರಿ. ಮನೆಯಲ್ಲಿ ಶಾಂತಿ ಇರಲಿದೆ. ಕೌಟುಂಬಿಕ ವಿಚಾರಗಳು ಧನಾತ್ಮಕವಾಗಿರಲಿದೆ. ನಿಮ್ಮ ಆಲೋಚನೆಯಂತೆ ಹಲವು ಕೆಲಸಗಳು ಮುಗಿಯಲಿವೆ. ನಿಮ್ಮ ಆರಂಭಿಕ ವಾರದಲ್ಲಿ ಖರ್ಚು ಹೆಚ್ಚಾಗಬಹುದು ಆದ್ರೆ ವಾರದ ಕೊನೆಯಲ್ಲಿ ನಿಮಗೆ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ನಿಮ್ಮ ಬಹುದಿನದ ಅನಾರೋಗ್ಯ ಸಮಸ್ಯೆಯೊಂದು ನಿವಾರಣೆಯಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ವಾರವು ಮಿಶ್ರ ಫಲದಿಂದ ಕೂಡಿರಲಿದೆ. ನೀವು ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ಉದ್ಯೋಗದಲ್ಲಿರುವವರು ಕೆಲಸದ ಸಂದರ್ಭಗಳನ್ನು ಅವಲಂಬಿಸಿ ತಮ್ಮ ಕೆಲಸದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬಹುದು. ದಾಂಪತ್ಯ ವಿಚಾರದಲ್ಲಿ ನಿಮಗೆ ಬಹಳ ಶುಭಕರವಾಗಿರಲಿದೆ. ಮನೆಗಾಗಿ ನೀವು ಖರೀದಿಸುವ ವಸ್ತುವೊಂದು ಸಂತಸಕ್ಕೆ ಕಾರಣವಾಗಲಿದೆ. ನಿಮ್ಮ ಪ್ರಯಾಣಗಳು ಸುಖಕರವಾಗಲಿದೆ. ಹಾಗೆ ವ್ಯಾಪಾರಿಗಳಿಗೆ ದೊಡ್ಡ ಬದಲಾವಣೆಗಳು ಕಾಣಿಸುವುದಿಲ್ಲ.
ತುಲಾ ರಾಶಿ
ಈ ವಾರ ನೀವು ಸೋಮಾರಿತನವನ್ನು ಬಿಟ್ಟು ಕೆಲಸ ಮಾಡಬೇಕಾಗಿದೆ. ಇದರಿಂದ ನಿಮ್ಮ ಶ್ರಮ ಗುರುತಿಸಲಾಗುತ್ತದೆ. ಇದರಿಂದ ನಿಮಗೆ ಆರ್ಥಿಕ ಲಾಭವೂ ಇದೆ. ಜಂಟಿ ಉದ್ಯಮ ನಡೆಸುತ್ತಿದ್ದರೆ ವ್ಯವಹಾರಿಕವಾಗಿ ಎಚ್ಚರಿಕೆ ವಹಿಸಿ. ನೀವು ಕಬ್ಬಿಣ ಸಂಬಂಧಿ ವ್ಯಾಪಾರಿಗಳಾಗಿದ್ದರೆ ಉತ್ತಮ ವಾರ ಆಗಬಹುದು. ಮನೆಯಲ್ಲಿ ಶುಭ ಕಾರ್ಯ ಸಂಬಂಧಿಸಿದ ಚರ್ಚೆ ನಡೆಯಬಹುದು, ಹಾಗೆ ಕುಟುಂಬಸ್ಥರಿಂದ ಹಣಕಾಸು ಸಂಬಂಧ ಒತ್ತಡ ಹೆಚ್ಚಾಗಬಹುದು. ಗೃಹಿಣಿಯರಿಗೆ ಬಹಳ ಅನುಕೂಲಕರ ವಾರ ಆಗಿರಲಿದೆ. ಆರೋಗ್ಯದಲ್ಲಿ ಸುಧಾರಣೆ ನೋಡಬಹುದು.
ವೃಶ್ಚಿಕ ರಾಶಿ
ಈ ವಾರ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನೀವು ನಿರ್ಲಕ್ಷ್ಯ ವಹಿಸುವುದನ್ನು ತಪ್ಪಿಸಬೇಕು. ಈ ವಾರ ಹಣಕಾಸು ವಿಚಾರವು ಸ್ವಲ್ಪ ಅಸ್ಥಿರವಾಗಿರುತ್ತದೆ. ನಿಮಗೆ ಅಗತ್ಯ ಸಮಯದಲ್ಲಿ ಹಣ ಕೈಗೆ ಸಿಗದೆ ಇರಬಹುದು. ಆಪ್ತರೊಬ್ಬರಿಂದ ಬರಬೇಕಿದ್ದ ಹಣವು ಸಿಲುಕಬಹುದು. ನಿಮ್ಮ ದೈನಂದಿನ ಕೆಲಸಗಳು ಅಡ್ಡಿ ಇಲ್ಲದೆ ನಡೆಯಬಹುದು ಆದ್ರೆ ನಿಯೋಜಿತ ಕೆಲಸಗಳು ನೀವು ನಿರೀಕ್ಷಿಸಿದಂತೆ ಕೈಗೂಡದೆ ಇರಬಹುದು. ಆಪ್ತರೊಬ್ಬರದ ಕೆಲಸದ ನಿಮಿತ್ತ ನೀವು ಪ್ರಯಾಣ ಮಾಡಬೇಕಾಗಿ ಬರಬಹುದು. ನಿಮ್ಮ ಕಚೇರಿ ಕೆಲಸಗಳಲ್ಲಿ ಕೊಂಚ ಮಟ್ಟಿನ ಹಿನ್ನಡೆ ನೋಡಬಹುದು. ಹಠಾತ್ ಅನಾರೋಗ್ಯ ಕಾಡುವ ಸಂಭವವಿದೆ.
ಧನು ರಾಶಿ
ಈ ವಾರ ಕಳೆದ ವಾರಕ್ಕಿಂತ ಸ್ವಲ್ಪ ಉತ್ತಮವಾಗಿರುತ್ತದೆ. ವಾರದ ಮೊದಲಾರ್ಧದಲ್ಲಿ ನಿಮಗೆ ಬಹಳ ಲಾಭದ ವಿಚಾರಗಳ ನೋಡಬಹುದು. ಆದಾಯ ಹೆಚ್ಚಳ, ವ್ಯವಹಾರ ವಿಸ್ತರಣೆ, ವ್ಯಪಾರದಲ್ಲಿ ಧನಾತ್ಮಕತೆ ನೋಡಬಹುದು. ಆದ್ರೆ ವಾರದ ಅಂತ್ಯದಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳು ನಿಮ್ಮ ಕೆಲಸಗಳಲ್ಲಿ ಅಡ್ಡಿಗೆ ಕಾರಣವಾಗಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ತೊಂದರೆಗೆ ಸಿಲುಕಬಹುದು. ಸರ್ಕಾರಿ ನೌಕರರು ಕೆಲಸಕ್ಕೆ ಸಂಬಂಧಿಸಿದಂತೆ ಯಾವುದಾದರು ದಾಖಲಾತಿ ಸಮಸ್ಯೆ ಎದುರಿಸಬೇಕಾಗಬಹುದು. ಮನೆಯಲ್ಲಿ ಹಣಕಾಸು ವಿಚಾರವಾಗಿ ಒತ್ತಡ ಹೆಚ್ಚಾಗಬಹುದು.
ಮಕರ ರಾಶಿ
ಮಕರ ರಾಶಿಯವರು ಈ ವಾರದಲ್ಲಿ ಮಿಶ್ರ ಫಲ ನೋಡುವಿರಿ. ನಿಮ್ಮ ದೈನಂದಿನ ಕೆಲಸಗಳಲ್ಲಿ ಯಶಸ್ಸು ನೋಡುವಿರಿ, ಆದ್ರೆ ಅದರ ಫಲಿತಾಂಶದಿಂದ ತೃಪ್ತಿ ಇಲ್ಲದೆ ಇರಬಹುದು. ಮನೆಯ ವಾತಾವರಣಲ್ಲಿ ಒತ್ತಡ ಹಾಗೂ ಹಣಕಾಸು ವಿಚಾರವಾಗಿ ಹಲವು ರೀತಿ ಸಮಸ್ಯೆಗಳು ಎದುರಾಗಬಹುದು. ಶಾಪಿಂಗ್ ಸಂಬಂಧಿಸದಂತೆ ನಿಮ್ಮ ಖರ್ಚು ಹೆಚ್ಚಾಗಬಹುದು. ವಾರದ ಉತ್ತರಾರ್ಧದಲ್ಲಿ ನಿಮಗೆ ಬಹಳ ದೊಡ್ಡ ಲಾಭ ನೀಡುವ ಕೆಲಸ ಆಗಲಿದೆ. ಬಹಳ ಸಮಯದಿಂದ ನೀವು ಮಾಡಬೇಕೆಂದು ಅಂದುಕೊಂಡ ಕೆಲಸವು ಈ ವಾರದಲ್ಲಿ ಪೂರ್ಣವಾಗಲಿದೆ. ಬಹಳ ಪ್ರಯಾಣದ ಬಳಿಕ ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ.
ಕುಂಭ ರಾಶಿ
ಕುಂಭ ರಾಶಿಯವರು ಈ ವಾರ ಬಹಳ ಓಡಾಟದಲ್ಲಿ ಕಳೆಯುತ್ತೀರಿ. ಮನೆಯವರ ಅಥವಾ ಆಪ್ತರ ಒತ್ತಡಕ್ಕೆ ಮಣಿದು ನೀವು ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಕು. ವ್ಯಾಪಾರ ಸಂಬಂಧಿ ನಿರ್ಧಾರಗಳನ್ನು ಹಲವು ಬಾರಿ ಚರ್ಚಿಸಿ ತೆಗೆದುಕೊಳ್ಳಿ. ನಿಮ್ಮ ಮನೆಗಾಗಿ ದುಬಾರಿ ವಸ್ತು ಖರೀದಿಸಬಹುದು. ಕೌಟುಂಬಿಕ ವಿಚಾರವಾಗಿ ನಿಮ್ಮಲ್ಲಿ ದೊಡ್ಡ ಸವಾಲು ಎದುರಾಗಬಹುದು. ನಿಮ್ಮ ಆರೋಗ್ಯದ ಕುರಿತು ನಿರ್ಲಕ್ಷ್ಯ ಮಾಡಬೇಡಿ. ಬೇರೆಯವರಿಂದ ನೀವು ಹಣ ಪಡೆದಿದ್ದರೆ ಈ ವಾರದಲ್ಲಿ ಮರಳಿ ನೀಡುವುದು ಉತ್ತಮ.
ಮೀನ ರಾಶಿ
ಮೀನ ರಾಶಿಯವರು ಈ ವಾರ ಅನುಕೂಲಕರ ದಿನಗಳ ನೋಡುವಿರಿ. ನಿಮ್ಮ ವ್ಯಾಪಾರಗಳು ಲಾಭದಾಯಕವಾಗಲಿವೆ, ನೀವು ಹೋಟೆಲ್ ಉದ್ಯಮಿಗಳಾಗಿದ್ದರೆ ಲಾಭದಾಯಕ. ಉದ್ಯೋಗಿಗಳಲ್ಲಿ ಒತ್ತಡ ಮುಂದುವರೆಯಲಿದೆ. ವಾರದ ಅಂತ್ಯದಲ್ಲಿ ನಿಮ್ಮ ಆದಾಯ ಹೆಚ್ಚಿಸುವ ಕೆಲಸಕ್ಕೆ ನೀವು ಮುಂದಾಗಬಹುದು. ಉಳಿತಾಯದ ಕಡೆಗೆ ಹೆಚ್ಚಿನ ಒಲವು ಇರಲಿದೆ. ಅವಿವಾಹಿತರಲ್ಲಿ ಈ ವಾರ ಲಾಭದಾಯಕವಾಗಬಹುದು, ನಿಮ್ಮ ವಾಹನ ವಿಚಾರದ ಕುರಿತು ಧನಾತ್ಮಕ ಫಲಿತಾಂಶ ಪಡೆಯಬಹುದು.



Click it and Unblock the Notifications












