Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಜೂನ್ 15ರಿಂದ ಜೂನ್ 21ರ ವಾರ ಭವಿಷ್ಯ: ಯಾವ ರಾಶಿಯವರಿಗೆ ಈ ವಾರ ಶುಭದಾಯಕ?
ಈ ವಾರ ಗ್ರಹಗತಿಗಳ ಸ್ಥಾನವೂ ಯಾರಿಗೆಲ್ಲ ಶುಭಕರವಾಗಿದೆ ನೋಡಿ...
ಮೇಷ ರಾಶಿ
ಮೇಷ ರಾಶಿಯವರು ಈ ವಾರ ನೀವು ಅನೇಕ ಪ್ರಮುಖ ಬದಲಾವಣೆಗಳನ್ನು ನೋಡುತ್ತೀರಿ. ಕೆಲಸದಲ್ಲಿ ಪ್ರಗತಿ ಗುರುತಿಸುವಂತಹ ಕಾರ್ಯ ಆಗಲಿದೆ. ನಿಮ್ಮ ಆತುರದ ನಿರ್ಧಾರಗಳಿಂದ ಹಿನ್ನಡೆ ಅನುಭವಿಸಿದರು ನಿಮಗಾಗಿ ಉತ್ತಮ ಪ್ರತಿಫಲಗಳು ಕಾದಿವೆ. ನಿಮ್ಮ ವ್ಯವಹಾರ ಹಾಗೂ ಹೂಡಿಕೆಗಳಲ್ಲಿ ಬಲವಾದ ನಂಬಿಕೆ ಇಡಿ. ಇದರಿಂದ ನಿಮ್ಮ ಭವಿಷ್ಯದ ಹಣಕಾಸು ಸ್ಥಿತಿ ಉತ್ತಮವಾಗಲಿದೆ. ಈ ವಾರದ ಅಂತ್ಯದಲ್ಲಿ ನಿಮ್ಮ ದೊಡ್ಡ ಸವಾಲಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ನೀವು ಮುಂದಾಗುವುದರಿಂದ ಈ ವಾರದಲ್ಲಿ ಹಣಕಾಸು ಸಂಕಷ್ಟ ದೂರಾಗಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ದೊಡ್ಡ ಸವಾಲು ಎದುರಾಗಬಹುದು.
ವೃಷಭ ರಾಶಿ
ವೃಷಭ ರಾಶಿ ಅವರು ಈ ವಾರದಲ್ಲಿ ಬಹಳ ಉತ್ತಮ ದಿನಗಳ ನೋಡಲಿದ್ದಾರೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವ್ಯಾಪಾರಿಗಳಿಗೆ ಉತ್ತಮ ದಿನಗಳು ಬರಲಿವೆ. ವಾರದ ಅಂತ್ಯದಲ್ಲಿ ನಿಮ್ಮ ವ್ಯವಹಾರ, ವ್ಯಾಪಾರದಲ್ಲಿ ಲಾಭ ನೋಡಬಹುದು. ಸರ್ಕಾರಿ ನೌಕರರು ವರ್ಗಾವಣೆ ಸಂಬಂಧ ಸಂತಸ ಪಡೆಯಬಹುದು. ಇನ್ನು ಉದ್ಯೋಗಿಗಳಲ್ಲಿ ವೇತನ ಸಂಬಂಧಿ ಸಂತೋಷ ಇರಲಿದೆ. ಮನಸ್ಸಿಗೆ ಶಾಂತಿ ತರುವಂತಹ ಕೆಲಸದಲ್ಲಿ ನೀವು ಭಾಗಿಯಾಗುತ್ತೀರಿ. ಹಲ್ಲು ನೋವಿನ ಸಮಸ್ಯೆ ಇದ್ದರೆ ಈ ವಾರ ಸಮಸ್ಯೆ ಹೆಚ್ಚಾಗಬಹುದು. ವಿವಾಹ ಜೀವನವು ಸಂತೋಷವಾಗಿ ಕಳೆಯಬಹುದು. ನಿಮಗೆ ಹೊಸ ಜವಾಬ್ದಾರಿಗಳು ಒತ್ತಡ ತರಬಹುದು.

ಮಿಥುನ ರಾಶಿ
ಮಿಥುನ ರಾಶಿಯವರು ಈ ವಾರದಲ್ಲಿ ಬಹಳಷ್ಟು ಕಷ್ಟಪಡುತ್ತೀರಿ. ವಾರದ ಎಲ್ಲಾ ದಿನದಲ್ಲೂ ನೀವು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತೀರಿ. ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಈ ವಾರ ಬಹಳ ಅಚ್ಚರಿಯ ಫಲಿತಾಂಶ ಪಡೆಯಬಹುದು. ಶುಭ ಕಾರ್ಯಗಳ ಮಾತುಕತೆಯಲ್ಲಿ ಹಿನ್ನಡೆ ನೋಡಬಹುದು. ಯಾರೊಂದಿಗಾದರು ಮನಸ್ತಾಪಗಳಿದ್ದರೆ ಈ ವಾರ ಅವರೊಂದಿಗೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ. ವ್ಯಾಪಾರಿಗಳು ದೊಡ್ಡ ಮಟ್ಟದ ವ್ಯವಹಾರ ಅಥವಾ ಸಾಲ ನೀಡುವುದು ತಡೆಯುವುದು ಉತ್ತಮ. ದೇವಾಲಯ ಭೇಟಿಗೆ ಮುಂದಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯವರು ಈ ವಾರ ನಿಮಗೆ ಬಹಳ ಅನುಕೂಲಕರ ವಾತಾವರಣ ಇರಲಿದೆ. ನಿಮ್ಮ ದೈನಂದಿನ ಕೆಲಸಗಳಲ್ಲಿ ನೀವು ಅಂದುಕೊಂಡ ಫಲಿತಾಂಶ ಪಡೆಯಬಹುದು. ಕೆಲಸದ ಸ್ಥಳದಲ್ಲಿ ನಿಮಗೆ ಉತ್ತಮ ಫಲವಿದೆ. ನಿಮ್ಮ ಹಣಕಾಸು ವ್ಯವಹಾರಗಳಲ್ಲಿ ಯಾವುದೇ ಅಡ್ಡಿ ಇಲ್ಲದೆ ನೆರವೇರುವ ಸಾಧ್ಯತೆ ಇದೆ. ದಾಂಪತ್ಯ, ಪ್ರೀತಿಯ ವಿಚಾರದಲ್ಲಿ ಸಣ್ಣ ಪುಟ್ಟ ಏರಿಳಿತ ಇರಬಹುದು. ಕುಟುಂಬದೊಂದಿಗೆ ನೀವು ಹೆಚ್ಚು ಸಮಯ ಕಳೆಯುವುದು ಉತ್ತಮ. ಪ್ರವಾಸಗಳಲ್ಲಿ, ಆಪ್ತರ ಭೇಟಿಯಿಂದ ಶುಭವಾಗುವ ನಿರೀಕ್ಷೆ ಇದೆ. ದೀರ್ಘಕಾಲದ ಯಾವುದಾದರು ಅನಾರೋಗ್ಯ ಸಮಸ್ಯೆ ಇದ್ದರೆ ಈ ವಾರ ಸೂಕ್ತ ಚಿಕಿತ್ಸೆ ಪಡೆಯುವುದು ಇಲ್ಲವೆ ನಿಯಮಿತ ಪರೀಕ್ಷೆಗೆ ಒಳಗಾಗುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯವರು ಈ ವಾರ ನಿಮ್ಮ ಪ್ರತಿಭೆ ಮತ್ತು ನಾಯಕತ್ವದ ಕೌಶಲ್ಯಗಳನ್ನು ಪ್ರದರ್ಶಿಸುವ ಸಮಯ. ನಿಮ್ಮ ಆರ್ಥಿಕ ಸ್ಥಿತಿ ಹಿಂದೆಂದಿಗಿಂತಲೂ ಉತ್ತಮವಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ನಿಮ್ಮ ಉಳಿತಾಯದ ಹಣದಲ್ಲಿ ಹೆಚ್ಚಳ ನೋಡಬಹುದು. ವಾಹನ ಲಾಭದಂತಹ ಪ್ರಯೋಜನ ಇರಲಿದೆ. ದಾಂಪತ್ಯದಲ್ಲಿ ಸುಖ, ಪ್ರೀತಿಯ ವಿಚಾರವಾಗಿ ವಾರದ ಆರಂಭ ಕಹಿಯಾದರು ಬಳಿಕ ನಿಮ್ಮ ಬಯಕೆಯಂತೆ ಸಂತಸವಾಗಿರಲಿದೆ. ಔದ್ಯೋಗಿಕ ಒತ್ತಡಗಳು ಕಡಿಮೆಯಾಗುವ ನಿರೀಕ್ಷೆ ಇದೆ. ಅವಿವಾಹಿತರಲ್ಲಿ ಉತ್ತಮ ಲಾಭ ನೋಡಬಹುದು. ಗೃಹಿಣಿಯಲ್ಲಿ ಆರ್ಥಿಕ ಸ್ವಾವಲಂಬನೆ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಈ ವಾರ ಮಿಶ್ರ ಫಲ ನೀಡುವ ದಿನಗಳಿವೆ. ನೀವು ಬಹಳ ಸಮಯದಿಂದ ಬಯಸಿದ್ದ ವಸ್ತುಳನ್ನು ಪಡೆಯಲು ಬಹಳ ಶ್ರಮ ಹಾಗೂ ಕಷ್ಟಪಡಬೇಕಾಗುತ್ತದೆ. ಹಾಗೆ ನಿಮ್ಮ ಆರೋಗ್ಯದಲ್ಲಿನ ಏರುಪೇರು ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ಆಪ್ತರೊಬ್ಬರಿಗೆ ನೀಡಿದ ಹಣ ವಾಪಾಸು ಪಡೆಯುವುದು ಕಷ್ಟವಾಗಬಹುದು. ವ್ಯಾಪಾರಿಗಳಲ್ಲಿ ಹೆಚ್ಚು ಲಾಭ ಇಲ್ಲದಿದ್ದರೂ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ದೂರ ಪ್ರಯಾಣಗಳಲ್ಲಿ ನೀವು ಭಾಗಿಯಾಗುವುದು ಸಂತಸ ತರಲಿದೆ. ಸಂಗಾತಿಯೊಂದಿಗೆ ಹಣಕಾಸು ವಿಚಾರದಲ್ಲಿನ ಮನಸ್ತಾಪ ದೊಡ್ಡದಾಗಬಹುದು. ಮಕ್ಕಳ ಕುರಿತಾದ ಚಿಂತೆ ಬಗೆಹರಿಯಲಿದೆ.
ತುಲಾ ರಾಶಿ
ತುಲಾ ರಾಶಿಯವರು ಈ ವಾರ ಸವಾಲುಗಳಿಂದ ತುಂಬಿದ್ದರೂ, ಪ್ರಗತಿಗೆ ಅವಕಾಶ ಇದೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ತಪ್ಪು ತಿಳುವಳಿಕೆಯಿಂದ ಮನಸ್ತಾಪಗಳಿಗೆ ಕಾರಣವಾಗು ಘಟನೆಗಳು ನಡೆಯಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿಸಲು ನೀವು ತೆಗೆದುಕೊಳ್ಳುವ ಒಂದು ನಿರ್ಧಾರ ತಾತ್ಕಾಲಿಕ ನಿವಾರಣೆಗೆ ಕಾರಣವಾಗಲಿದೆ. ವಾಹನ ಖರೀದಿ, ಆಸ್ತಿ ಖರೀದಿಯಂತಹ ವಿಷಯದಲ್ಲಿ ನಿಮಗೆ ಲಾಭವಾಗಲಿದೆ. ಕಬ್ಬಿಣ ವ್ಯಾಪಾರಿಗಳು, ಕೃಷಿಕರಿಗೆ ಈ ವಾರ ಬಹಳ ಶುಭಕರವಾಗಲಿದೆ. ಹಿರಿಯರ ಆರೋಗ್ಯದಲ್ಲಿ ಏರುಪೇರು ಇರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ವಾರ ಬಹಳ ತಾಳ್ಮೆಯಿಂದ ಯಾವುದಾದರು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ವಾರ ನಿಮಗೆ ಖರ್ಚುಗಳು ಹೆಚ್ಚಾಗಬಹುದು, ಮನೆಗಾಗಿ ನೀವು ಅಗತ್ಯ ವಸ್ತುವೊಂದನ್ನು ಖರೀದಿಸಬೇಕಾಗಬಹುದು. ಕುಟುಂಬಸ್ಥರಲ್ಲಿ ಇದ್ದ ಮನಸ್ತಾಪ ನಿವಾರಣೆ ಸಂಭವವಿದೆ. ಖರ್ಚುಗಳನ್ನು ನಿಭಾಯಿಸಲು ಮುಂದಾಗಿ. ಆರೋಗ್ಯದ ಕಡೆಗೆ ಹೆಚ್ಚು ಜಾಗರೂಕರಾಗಿರಿ. ಬಹಳ ಸಮಯದಿಂದ ನೀವು ಖರೀದಿಸಲು ಬಯಸಿದ್ದ ವಸ್ತುವೊಂದನ್ನು ಖರೀದಿಸಬಹುದು. ದಾಂಪತ್ಯ ಜೀವನದಲ್ಲಿ ಸುಖ ನೋಡಬಹುದು. ರಿಯಲ್ ಎಸ್ಟೇಟ್, ಸ್ವಂತ ಉದ್ಯೋಗ ಮಾಡುವವರು ಈ ವಾರದಲ್ಲಿ ಲಾಭ ಮಾಡುತ್ತೀರಿ.
ಧನು ರಾಶಿ
ಧನು ರಾಶಿಯವರು ಈ ವಾರದ ಆರಂಭದಲ್ಲಿ ಒತ್ತಡ ಎದುರಿಸುತ್ತೀರಿ. ಆದ್ರೆ ವಾರದ ಕೊನೆಯ ದಿನಗಳು ನಿಮಗೆ ನೆಮ್ಮದಿ ತರಲಿವೆ. ನೀವು ಪ್ರವಾಸ ಕೈಗೊಳ್ಳಲು ಇದು ಉತ್ತಮ ಸಮಯ. ಮಕ್ಕಳ ಕುರಿತಾದ ಚಿಂತೆ ಹೆಚ್ಚಾಗಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸವಾಲಿನ ದಿನಗಳಿವೆ. ಗೃಹಿಣಿಯರ ಬಹುದಿನಗಳ ಬಯಕೆಯೊಂದು ಈಡೇರಬಹುದು, ಅವಿವಾಹಿತರಲ್ಲಿ ಖರ್ಚು ಹೆಚ್ಚಾಗಲಿದೆ. ಮದುವೆ ಸಂಬಂಧಿ ವಿಚಾರದಲ್ಲಿ ಆತುರದ ನಿರ್ಧಾರಕ್ಕೆ ಮುಂದಾಗಬೇಡಿ.
ಮಕರ ರಾಶಿ
ಮಕರ ರಾಶಿ ಮಂದಿ ಈ ವಾರ ಅನುಕೂಲಕರ ದಿನ ನೋಡಬಹುದು. ನೀವು ಈ ವಾರ ಯಾರಿಗೂ ಸಾಲ ನೀಡಬೇಡಿ. ಹಾಗೆ ನಿಮ್ಮ ಸಾಲಗಳನ್ನು ತೀರಿಸಿಕೊಳ್ಳಲು ಮುಂದಾಗುವುದು ಉತ್ತಮ. ದೊಡ್ಡ ಮಟ್ಟದಲ್ಲಿ ನಿಮಗೆ ಬರಬೇಕಿದ್ದ ಹಣ ಕೈ ಸೇರಬಹುದು. ಉದ್ಯೋಗ ಬದಲಿಸುವ ಆಲೋಚನೆಯನ್ನು ಮುಂದೂಡುವುದು ಉತ್ತಮ. ಬಹಳಷ್ಟು ಕೆಲಸಗಳಲ್ಲಿ ನಿಮಗೆ ಶುಭವಾಗುತ್ತದೆ. ನೀವು ಬಾಡಿಗೆದಾರರಾಗಿದ್ದರೆ ಈ ಸಮಯದಲ್ಲಿ ಸಮಸ್ಯೆಯೊಂದು ಬಗೆಹರಿಯಲಿದೆ. ಪ್ರಯಾಣ ಮುಂದೂಡುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿಯವರು ಈ ವಾರದಲ್ಲಿ ಬಹಳಷ್ಟು ಓಡಾಟ ಮಾಡುತ್ತೀರಿ. ನಿಮ್ಮ ದೊಡ್ಡ ಸಮಸ್ಯೆಗಳಿಗೆ ಹಾಗೂ ಹಣಕಾಸು ಸಂಬಂಧಿ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಉದ್ಯೋಗ ಸಂಬಂಧಿ ಸಮಸ್ಯೆಗಳನ್ನು ಆಪ್ತರಲ್ಲಿ ಹಂಚಿಕೊಳ್ಳುವುದು ಒಳಿತು. ಯಾರಿಗಾದರು ಹಣ ನೀಡಿದ್ದರೆ ಈ ವಾರದಲ್ಲಿ ವಾಪಾಸು ಪಡೆಯಬಹುದು. ವಾಹನ ಖರೀದಿಯ ನಿಮ್ಮ ಬಯಕೆಯ ಈಡೇರಿಸಿಕೊಳ್ಳಲು ನೀವು ಒಂದು ಹೆಜ್ಜೆ ಮುಂದಿಡುತ್ತೀರಿ. ಆರೋಗ್ಯದಲ್ಲಿ ಸುಧಾರಣೆ ಇರಲಿದೆ.
ಮೀನ ರಾಶಿ
ಮೀಣ ರಾಶಿಯ ಮಂದಿ ಈ ವಾರ ಅನುಕೂಲಕರ ದಿನಗಳ ನೋಡುತ್ತೀರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಹಾಗೆ ನೀವು ಅಂದುಕೊಂಡಿದ್ದ ವಿಚಾರಗಳಲ್ಲಿ ಒಲವು ಇರಲಿದೆ. ಯಾವುದೇ ಪ್ರಯಾಣಗಳು ನಿಮಗೆ ಧನಾತ್ಮಕ ಪರಿಣಾಮಗಳ ತರಬಹುದು. ಕೌಟುಂಬಿಕ ವಿಚಾರಗಳಲ್ಲಿ ನಿಮಗೆ ಶುಭವಾಗುತ್ತದೆ. ಆಸ್ತಿ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ ಇದು ಸೂಕ್ತ ಸಮಯ. ಹೊಸ ಮನೆ ಕಟ್ಟಿಸುವವರು ವ್ಯವಹಾರದಲ್ಲಿ ಎಚ್ಚರಿಕೆ ವಹಿಸಬೇಕಿದೆ.



Click it and Unblock the Notifications












