ವಾರ ಭವಿಷ್ಯ (ಜೂನ್ 15-22): ದ್ವಾದಶ ರಾಶಿಗಳ ಸಂಪೂರ್ಣ ರಾಶಿಫಲ

ಗ್ರಹಗತಿಗಳ ಸ್ಥಾನದ ಪ್ರಕಾರ ಈ ವಾರದ ರಾಶಿಫಲ ಪ್ರಕಾರ ದ್ವಾದಶ ರಾಶಿಗಳಲ್ಲಿ ಯಾವ ರಾಶಿಗೆ ಹೇಗಿರಲಿದೆ?

ಮೇಷ ರಾಶಿ

ಕೆಲಸದಲ್ಲಿ ಈ ದಿನ ನಿಮಗೆ ಉತ್ತಮವಾಗಿದೆ. ಅಉದ್ಯೋಗ ಅಥವಾ ವ್ಯವಹಾರವಾಗಿರಲಿ ಈ ವಾರ ನೀವು ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಪಡೆಯುತ್ತೀರಿ. ಉದ್ಯೋಗಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಕೆಲಸದಲ್ಲಿ ಜವಾಬ್ದಾರಿ ಹೆಚ್ಚಿರಲಿದೆ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ಆರ್ಥಿಕವಾಗಿ ಈ ಸಮಯ ತುಂಬಾ ಒಳ್ಳೆಯದಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ.
ಈ ವಾರ ಅದೃಷ್ಟದ ಬಣ್ಣ: ಆಕಾಶ ನೀಲಿ, ಅದೃಷ್ಟದ ಸಂಖ್ಯೆ: 15, ಶುಭ ದಿನ: ಸೋಮವಾರ

weekly horoscope

ವೃಷಭ ರಾಶಿ

ಕುಟುಂಬ ಜೀವನ ಚೆನ್ನಾಗಿರಲಿದೆ. ಈ ವಾರ ನಿಮಗೆ ಉತ್ತಮವಾಗಿರಲಿದೆ. ಆರ್ಥಿಕವಾಗಿ ಒಳ್ಳೆಯದಿದೆ, ಉದ್ಯೋಗಿಗಳಿಗೆ ಈ ವಾರ ತುಂಬಾ ಕಾರ್ಯನಿರತವಾಗಿರಲಿದೆ. ಈ ಅವಧಿಯಲ್ಲಿ ಕೆಲಸದ ಹೊರೆ ಹೆಚ್ಚಿರಲಿದೆ. ವ್ಯಾಪಾರಿಗಳು ಈ ಅವಧಿಯಲ್ಲಿ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ನೀಡಲಾಗುವುದು. ಆರೋಗ್ಯದಲ್ಲಿ ಈ ವಾರ ಮಿಶ್ರಫಲ.
ಈ ವಾರ ಅದೃಷ್ಟದ ಬಣ್ಣ: ಮರೂನ್, ಅದೃಷ್ಟದ ಸಂಖ್ಯೆ: 6, ಶುಭ ದಿನ: ಮಂಗಳವಾರ

ಮಿಥುನ ರಾಶಿ

ಕೆಲಸದಲ್ಲಿ ಈ ವಾರ ಅಜಾಗರೂಕರಾಗಿರಬೇಡಿ. ಉದ್ಯೋಗ ಅಥವಾ ವ್ಯವಹಾರವಾಗಿರಲಿ ಈ ಸಮಯದಲ್ಲಿ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಈ ಅವಧಿ ಸ್ವಲ್ಪ ಸವಾಲಿನಿಂದ ಕೂಡಿರಲಿದೆ. ಮನೆಯಲ್ಲಿ ಉತ್ತಮ ವಾತಾವರಣ ಇರಲಿದೆ. ವೈವಾಹಿಕ ಜೀವನದಲ್ಲಿ ಸಂಗಾತಿಯ ಭಾವನೆ ಕಡೆಗೆ ಗಮನಹರಿಸಿ. ಈ ದಿನ ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ. ಹಣದ ವಿಷಯದಲ್ಲಿ ಈ ದಿನ ಉತ್ತಮವಾಗಿದೆ.
ಈ ವಾರ ಅದೃಷ್ಟದ ಬಣ್ಣ: ಕಂದು, ಅದೃಷ್ಟದ ಸಂಖ್ಯೆ: 20, ಶುಭ ದಿನ: ಭಾನುವಾರ

ಕರ್ಕ ರಾಶಿ

ಹಣದ ವಿಷಯದಲ್ಲಿ ಈ ವಾರ ನಿಮಗೆ ಉತ್ತಮವಾಗಿರಲ್ಲ. ಆರ್ಥಿಕವಾಗಿ ಈ ವಧಿ ಅನುಕೂಲಕರಲ್ಲ, ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಉತ್ತಮ. ಈ ಅವಧಿಯಲ್ಲಿ ವ್ಯಾಪಾರಸ್ಥರು ಕಾನೂನು ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಯಾವುದೇ ಕಾನೂನುಬಾಹಿರ ಕೆಲಸವನ್ನು ಮಾಡಬೇಡಿ. ನೀವು ಮಕ್ಕಳ ನಡವಳಿಕೆ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಈ ಅವಧಿಯಲ್ಲಿ, ನಿಮ್ಮ ಸಂಗಾತಿಯೊಂದಿಗಿನ ಸಮನ್ವಯ ಹದಗೆಡಬಹುದು. ಆರೋಗ್ಯದ ಬಗ್ಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಗುಲಾಬಿ, ಅದೃಷ್ಟದ ಸಂಖ್ಯೆ: 7, ಅದೃಷ್ಟದ ದಿನ: ಮಂಗಳವಾರ

ಸಿಂಹ ರಾಶಿ

ಈ ವಾರ ನಿಮಗೆ ಉತ್ತಮವಾಗಿರಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಆದರೆ, ನಿಮ್ಮ ಖರ್ಚುಗಳನ್ನು ನೀವು ನಿಯಂತ್ರಿಸಬೇಕು. ನೀವು ಸಣ್ಣ ಹೂಡಿಕೆಗಳನ್ನು ಮಾಡಲು ಬಯಸಿದರೆ ಇದು ನಿಮಗೆ ಸರಿಯಾದ ಸಮಯ. ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ವ್ಯಾಪಾರಿಗಳಿಗೆ ಧನ ಲಾಭವಾಗಿದೆ. ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ.
ಈ ವಾರ ಅದೃಷ್ಟದ ಬಣ್ಣ: ಹಸಿರು, ಅದೃಷ್ಟದ ಸಂಖ್ಯೆ: 25, ಶುಭ ದಿನ: ಸೋಮವಾರ


ಕನ್ಯಾ ರಾಶಿ

ವಿವಾಹಿತರಿಗೆ ಈ ವಾರವು ಏರಿಳಿತಗಳಿಂದ ಕೂಡಿರಲಿದೆ. ನಿಮ್ಮ ಕೋಪವನ್ನು ನೀವು ನಿಯಂತ್ರಿಸಿದರೆ ಒಳ್ಳೆಯದು . ಆರ್ಥಿಕವಾಗಿ ಈ ಅವಧಿ ಅನುಕೂಲಕರವಲ್ಲ. ಈ ಅವಧಿಯಲ್ಲಿ ಕೆಲಸದ ಒತ್ತಡ ಅಧಿಕವಿರಲಿದೆ. ಈ ಸಮಯದಲ್ಲಿ ಅನೇಕ ರೀತಿಯ ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಬರಬಹುದು. ನೀವು ಉದ್ಯೋಗವನ್ನು ಬದಲಾಯಿಸಲು ಬಯಸಿದರೆ, ಹೊಸ ಉದ್ಯೋಗವನ್ನು ಹುಡುಕಲು ಇದು ಸರಿಯಾದ ಸಮಯ. ನಿಮ್ಮ ಆರೋಗ್ಯ ನಿರ್ಲಕ್ಷಿಸಬೇಡಿ .
ಈ ವಾರ ಅದೃಷ್ಟದ ಬಣ್ಣ: ನೇರಳೆ, ಅದೃಷ್ಟದ ಸಂಖ್ಯೆ: 19, ಶುಭ ದಿನ: ಶನಿವಾರ

ತುಲಾ ರಾಶಿ

ಕೌಟುಂಬಿಕ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಹಣದ ವಿಷಯದಲ್ಲಿ ಈ ವಾರ ದುಬಾರಿಯಾಗಲಿದೆ. ಈ ಅವಧಿಯಲ್ಲಿ, ನಿಮ್ಮ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ತ್ವರಿತ ಲಾಭ ಗಳಿಸಲು ವ್ಯಾಪಾರಿಗಳು ತಪ್ಪು ಮಾರ್ಗಗಳನ್ನು ಅನುಸರಿಸುವುದನ್ನು ತಪ್ಪಿಸಬೇಕು. ಆರೋಗ್ಯದ ಬಗ್ಗೆ ಜಾಗ್ರತೆವಹಿಸಬೇಕು.
ಈ ವಾರ ಅದೃಷ್ಟದ ಬಣ್ಣ: ಹಳದಿ, ಅದೃಷ್ಟದ ಸಂಖ್ಯೆ: 11, ಶುಭ ದಿನ: ಗುರುವಾರ

ವೃಶ್ಚಿಕ ರಾಶಿ

ಈ ವಾರ ನಿಮ್ಮ ದೊಡ್ಡ ಚಿಂತೆ ದೂರಾಗಲಿದೆ. ನಿಮ್ಮ ಪ್ರಮುಖ ನಿರ್ಧಾರಗಳನ್ನು ಪೂರ್ಣ ವಿಶ್ವಾಸದಿಂದ ತೆಗೆದುಕೊಳ್ಳುತ್ತೀರಿ. ನೀವು ಉದ್ಯೋಗದಲ್ಲಿದ್ದರೆ ನಿಮ್ಮ ಬಡ್ತಿಯ ಬಲವಾದ ಸಾಧ್ಯತೆಯಿದೆ. ನೀವು ನಿರುದ್ಯೋಗಿಗಳಾಗಿದ್ದರೆ, ನೀವು ಉದ್ಯೋಗವನ್ನು ಪಡೆಯುವ ಸಾಧ್ಯತೆಯಿದೆ. ಇದೆಲ್ಲವೂ ನಿಮ್ಮ ಶ್ರಮದ ಫಲ. ನಿಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿ ಹಾಗೂ ಉತ್ಸಾಹ ಇರಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ದೈನಂದಿನ ಖರ್ಚುಗಳನ್ನು ಸುಲಭವಾಗಿ ಭರಿಸಲಾಗುವುದು. ಆರ್ಥಿಕವಾಗಿ ಈ ದಿನ ಉತ್ತಮವಿದೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ಈ ವಾರ ಅದೃಷ್ಟದ ಬಣ್ಣ: ಕಿತ್ತಳೆ, ಅದೃಷ್ಟದ ಸಂಖ್ಯೆ: 32, ಶುಭ ದಿನ: ಗುರುವಾರ

ಧನು ರಾಶಿ

ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಕೆಲ ಚಿಂತೆ ಕಾಡಬಹುದು, ಕೆಲಸದ ಮೇಲೆ ಸರಿಯಾಗಿ ಗಮನಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ತಂದೆಯ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡು ಬರಲಿದೆ . ಈ ವಾರ ಹಣದ ವಿಷಯದಲ್ಲಿ ಮಿಶ್ರಫಲ. ನಿಮ್ಮ ಆದಾಯವನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿದರೆ ಉತ್ತಮವಾಗಿರಲಿದೆ. ದೊಡ್ಡ ಹಣಕಾಸಿನ ವಹಿವಾಟುಗಳನ್ನು ಮಾಡಲು ಇದು ಉತ್ತಮ ಸಮಯವಲ್ಲ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ .
ಈ ವಾರ ಅದೃಷ್ಟದ ಬಣ್ಣ: ಬಿಳಿ, ಅದೃಷ್ಟದ ಸಂಖ್ಯೆ: 5, ಶುಭ ದಿನ: ಶುಕ್ರವಾರ

ಮಕರ ರಾಶಿ

ಮಕರ ರಾಶಿಯವರಿಗೆ ಈ ವಾರ ತುಂಬಾ ಒಳ್ಳೆಯದಿದೆ, ವ್ಯಾಪರಿಗಳಿಗೆ ಈ ವಾರ ಲಾಭದಾಯಕವಾಗಿದೆ. ಉದ್ಯೋಗಿಗಳ ಕಾರ್ಯಕ್ಷಮತೆಯಲ್ಲಿ ದೊಡ್ಡ ಸುಧಾರಣೆ ಕಂಡುಬರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಇಡೀ ವಾರದ ಬಜೆಟ್ ಅನ್ನು ನೀವು ಮುಂಚಿತವಾಗಿ ಸಿದ್ಧಪಡಿಸಿದರೆ, ನೀವು ಉಳಿತಾಯದ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುವುದು. ಆರೋಗ್ಯ ಚೆನ್ನಾಗಿರಲಿದೆ.
ಈ ವಾರ ಅದೃಷ್ಟದ ಬಣ್ಣ: ಕೆಂಪು, ಅದೃಷ್ಟದ ಸಂಖ್ಯೆ: 4, ಶುಭ ದಿನ: ಮಂಗಳವಾರ

ಕುಂಭ ರಾಶಿ

ಕೆಲಸಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಆಲೋಚಿಸಿ ತೆಗೆದುಕೊಳ್ಳಿ. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಈ ಸಮಯದಲ್ಲಿ ನೀವು ಅದನ್ನು ತಪ್ಪಿಸಬೇಕು. ಸಂಗಾತಿಯ ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಆರೋಗ್ಯದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ನೀಲಿ, ಅದೃಷ್ಟದ ಸಂಖ್ಯೆ: 15, ಶುಭ ದಿನ: ಸೋಮವಾರ

ಮೀನ ರಾಶಿ

ಸಂಬಂಧಗಳ ವಿಷಯದಲ್ಲಿ ಈ ವಾರ ನಿಮಗೆ ಉತ್ತಮವಾಗಿರಲಿದೆ. ಕಚೇರಿಯಲ್ಲಿ ಹೆಚ್ಚಿನ ಒತ್ತಡ ಇರಲಿದೆ, ಆದರೆ ನೀವು ನೀವು ಹೆಚ್ಚು ಉದ್ವೇಗವನ್ನು ತೆಗೆದುಕೊಳ್ಳದಂತೆ ಸಲಹೆ ನೀಡಲಾಗುವುದು. ಉದ್ಯಮಿಗಳು ತಮ್ಮ ಹಣವನ್ನು ಸರಿಯಾಗಿ ನಿರ್ವಹಿಸಬೇಕು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಈ ಸಮಯವು ನಿಮಗೆ ಉತ್ತಮವಾಗಿರಲಿದೆ.
ಈ ವಾರ ಅದೃಷ್ಟದ ಬಣ್ಣ: ಬೂದು, ಅದೃಷ್ಟದ ಸಂಖ್ಯೆ: 25, ಶುಭ ದಿನ: ಬುಧವಾರ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Horoscope From June 15- June 22 In Kannada

Here is weekly horoscope prediction from June 15- June 22, Read on...
Story first published: Saturday, June 15, 2024, 13:01 [IST]
X
Desktop Bottom Promotion