Weekly Horoscope: ವಾರ ಭವಿಷ್ಯ ಪ್ರಕಾರ ಈ ವಾರ (ಜೂನ್ 08-ಜೂನ್ 14) ಯಾವ ರಾಶಿಗೆ ಹೇಗಿರಲಿದೆ?

Weekly Horoscope: ಜೂನ್ 08 ರಿಂದ 14ರ ವರೆಗಿನ ನಿಮ್ಮ ವಾರ ಭವಿಷ್ಯದಲ್ಲಿ ಏನಿದೆ ನೋಡಿ.

ಮೇಷ ರಾಶಿ

ಮೇಷ ರಾಶಿಯವರು ಈ ವಾರದಂದು ಬಹಳ ಕಷ್ಟಕರವಾಗಿರುವ ದಿನಗಳ ಎದುರಿಸುತ್ತೀರಿ. ನಿಮ್ಮ ಕೆಲಸ ಕಾರ್ಯದಲ್ಲಿ ಅಡೆತಡೆಗಳು ನೋಡಬಹುದು, ಸಹೋದ್ಯೋಗಿಗಳೊಂದಿಗೆ, ಅಧಿಕಾರಿಗಳೊಂದಿಗಿನ ಸಂಬಂಧಗಳು ಕೆಡಬಹುದು. ನಿಮ್ಮ ಶ್ರಮಕ್ಕೆ ಉತ್ತಮ ಪ್ರತಿಫಲ ನೋಡುವಿರಿ. ನಿಮ್ಮ ಕೆಲಸಗಳು ಸರಿಯಾಗಿ ಪೂರ್ಣವಾಗದ ಕಾರಣ ನಿಮಗೆ ಒತ್ತಡ ಕಾಡಬಹುದು. ಹಣಕಾಸಿನ ವಿಚಾರದಲ್ಲಿ ವಾರದ ಕೊನೆಯಲ್ಲಿ ಮತ್ತಷ್ಟು ಒತ್ತಡ ಇರಬಹುದು. ಹೀಗಾಗಿ ವ್ಯವಹಾರಿಕವಾಗಿ ಈ ವಾರ ಉತ್ತಮವಲ್ಲ. ನಿಮ್ಮ ದೊಡ್ಡ ಒಪ್ಪಂದಗಳು, ವ್ಯವಹಾರಗಳಲ್ಲಿ ಹಿನ್ನಡೆ ಉಂಟಾಗಬಹುದು. ಕುಟುಂಬ ಜೀವನದಲ್ಲಿ ಸಂತಸ ಇರಲಿದೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ವಾರವು ಮಿಶ್ರ ಫಲ ನೀಡುವ ವಾರವಾಗಿದೆ. ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ದೊಡ್ಡ ಹೆಜ್ಜೆ ಇಡಬಹುದು. ಹಾಗೆ ನಿಮ್ಮ ಕೆಲಸಗಳಲ್ಲಿ ಬಹಳಷ್ಟು ಒತ್ತಡ ಇರಬಹುದು. ಇದರಿಂದ ನಿಮ್ಮ ಮನಃಶಾಂತಿ ಹಾಳಾಗುವ ಪರಿಸ್ಥಿತಿ ನೀವು ಎದುರಿಸುತ್ತೀರಿ. ಮೂಳೆ, ಸೊಂಟ, ಕಾಲು ನೋವಿನ ವಿಚಾರದಲ್ಲಿ ಎಚ್ಚರವಾಗಿರಿ. ವಾರದ ಉತ್ತರಾರ್ಧವು ನಿಮಗೆ ಬಹಳ ಸವಾಲುಗಳ ಮೆಟ್ಟಿನಿಲ್ಲಲು ಸಹಕಾರಿಯಾಗಬಹುದು. ಹೊಸದಾಗಿ ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಈ ವಾರವು ಉತ್ತಮ ಅವಕಾಶಗಳ ತರಬಹುದು.

Weekly Horoscope From June 08 To June 14 For All Zodiac Signs In Kannada

ಮಿಥುನ ರಾಶಿ

ಮಿಥುನ ರಾಶಿಯವರಲ್ಲಿ ಈ ಹಿಂದೆ ಇದ್ದ ಕೌಟುಂಬಿಕ ಸಮಸ್ಯೆಯೊಂದು ಈ ವಾರ ನಿವಾರಣೆಯಾಗಬಹುದು. ನಿಮ್ಮ ವಾಹನ ಸಂಬಂಧಿ ಸಮಸ್ಯೆಗಳಿಂದಲೂ ನೀವು ಮುಕ್ತಿ ಪಡೆಯಬಹುದು. ಆರಂಭದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆ ಕಂಡರೂ ವಾರಾಂತ್ಯದಲ್ಲಿ ಹೆಚ್ಚು ಖರ್ಚು ಹಾಗೂ ಐದಾರಾಮಿ ವಸ್ತುಗಳ ಕಡೆಗೆ ನಿಮ್ಮ ಆದಾಯ ಹರಿಯುವುದು ನೋಡಬಹುದು. ಆರೋಗ್ಯದಲ್ಲಿಯೂ ಸಣ್ಣ ಪುಟ್ಟ ಏರಿಳಿತ ನೀವು ಅನುಭವಿಸಬಹುದು. ವ್ಯವಹಾರ ಸ್ವಲ್ಪ ಮಟ್ಟಿನ ನಿಧಾಗತಿಗೆ ತುತ್ತಾಗಬಹುದು. ಹಿರಿಯರ ಆರೋಗ್ಯ ಹಾಗೂ ಅವರ ಸಲಹೆ ಮೇಲೆ ನೀವು ಗಮನವಿಡಿ. ಪ್ರವಾಸ ಕೈಗೊಳ್ಳಲು ಇದು ಉತ್ತಮ ಸಮಯ ಆಗಿರಲಿದೆ.

ಕರ್ಕ ರಾಶಿ

ಕರ್ಕ ರಾಶಿಯವರು ಈ ವಾರದಲ್ಲಿ ಬಹಳ ಶ್ರಮ ಹಾಕುತ್ತೀರಿ, ಅದಕ್ಕೆ ಪ್ರತಿಯಾಗಿ ಉತ್ತಮ ಪ್ರತಿಫಲ ಕೂಡ ನೋಡುವಿರಿ. ನಿಮ್ಮ ಹೂಡಿಕೆಗಳು, ಅರ್ಥಪೂರ್ಣವಾಗಬಹುದು. ವಾಗೆ ಬಾಕಿ ಉಳಿಸಿಕೊಂಡಿದ್ದ ಹಲವು ಕೆಲಸಗಳನ್ನು ಪೂರ್ಣ ಮಾಡುವಿರಿ. ಭೂಮಿ, ಮನೆ, ಆಸ್ತಿ ಸಂಬಂಧಿಸಿದ ಯಾವುದಾದರು ಸಮಸ್ಯೆಗಳಿದ್ದರೆ ನಿವಾರಣೆಯಾಗಲಿದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಆಪ್ತರಿಂದ ಸಹಕಾರ ಒಡೆದು ಆ ಮೂಲಕ ಲಾಭ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಮಕ್ಕಳ ಭವಿಷ್ಯದ ಕುರಿತಾದ ಚಿಂತೆಯೊಂದು ಸಮಸ್ಯೆಗಳ ತರಬಹುದು.

ಸಿಂಹ ರಾಶಿ

ಸಿಂಹ ರಾಶಿ ಮಂದಿ ಈ ವಾರದಲ್ಲಿ ಸವಾಲುಗಳ ಎದುರಿಸಬಹುದು. ಅದು ಕೆಲಸ, ಆರೋಗ್ಯ, ಹಣಕಾಸು ಸ್ಥಿರಿಗೆ ಸಂಬಂಧಿಸಿರಬಹುದು. ಅನಿರೀಕ್ಷಿತ ಬೆಳವಣಿಗೆಗಳು ನಿಮಗೆ ಗೊಂದಲ ಹಾಗೂ ಒತ್ತಡಕ್ಕೆ ತಳ್ಳಬಹುದು. ಹಣಕಾಸು ಸ್ಥಿತಿಯಲ್ಲೂ ದಿಢೀರ್ ಬದಲಾವಣೆಗಳು ಯೋಜನೆಗೆ ತಳ್ಳಬಹುದು. ವಾಹನ ಸಂಬಂಧಿ ಖರ್ಚುಗಳು ಹೆಚ್ಚಾಗುತ್ತದೆ. ದಾಂಪತ್ಯದಲ್ಲಿ ನೀವು ಬಯಸಿದ ಸುಖ ಇರಲಿದೆ. ಆದ್ರೆ ಕುಟುಂಬದಲ್ಲಿನ ಸಮಸ್ಯೆಯೊಂದು ಮತ್ತಷ್ಟು ದೊಡ್ಡದಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಈ ವಾರದಲ್ಲಿ ಬಹಳದಷ್ಟು ಓಡಾಟದಲ್ಲಿ ಕಳೆಯುತ್ತೀರಿ. ಶುಭ ಕಾರ್ಯ ಸಂಬಂಧ ಚರ್ಚೆಗಳು, ಓಡಾಟಗಳಲ್ಲಿ ತೊಡಗಬಹುದು. ವಾರದ ಆರಂಭದಲ್ಲಿ ನೀವು ಕೆಲಸ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬಹುದು. ಉತ್ಸಾಹದಲ್ಲಿ ಯಾವುದೇ ನಿರ್ಧಾರವನ್ನು ಆತುರದಿಂದ ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ, ನೀವು ನಷ್ಟಗಳನ್ನು ಎದುರಿಸಬಹುದು. ಬೇರೆಯರಿಂದ ಪಡೆದ ವಸ್ತುಗಳಿಂದ ನೀವು ಸಮಸ್ಯೆಗೆ ಒಳಗಾಗಬಹುದು ಹೀಗಾಗಿ ಈ ವಾರ ಎಚ್ಚರಿಕೆಯಿಂದ ಇರಿ. ಅನಗತ್ಯ ವಿಚಾರಗಳಿಂದ ನಿಮಗೆ ಸಮಸ್ಯೆಗಳು ಉದ್ಭವಿಸಬಹುದು.

ತುಲಾ ರಾಶಿ

ತುಲಾ ರಾಶಿಯವರು ಈ ವಾರ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತಾರೆ. ನಿಮ್ಮ ಕಚೇರಿ ಕೆಲಸಗಳು ನೀವು ಅಂದುಕೊಂಡಂತೆ ಇರಲಿದೆ. ಮನೆಯಲ್ಲೂ ನಿಮ್ಮ ಪರವಾದ ಒಲವು ಇರಲಿದೆ. ಹೂಡಿಕೆ ಮಾಡುವ ಮೊದಲು ಸಂಪೂರ್ಣ ಮಾಹಿತಿ ಮತ್ತು ಸಲಹೆಯನ್ನು ಪಡೆಯಿರಿ. ಭೂಮಿ, ಮನೆ, ವಾಹನ ಇತ್ಯಾದಿಗಳನ್ನು ಖರೀದಿಸಲು ದೊಡ್ಡ ಖರ್ಚುಗಳನ್ನು ಎದುರಿಸುವ ಸಾಧ್ಯತೆಯಿದೆ. ಹಳೆಯ ಸಾಲ ಮರುಪಾವತಿ ಮಾಡಲು ಮುಂದಾಗುವಿರಿ, ಇದು ನಿಮಗೆ ಶಾಂತಿ ತರಲಿದೆ. ಉದ್ಯೋಗ ಹುಡುಕುತ್ತಿರುವವರು, ಅವಿವಾಹಿತರು ಈ ವಾರದಲ್ಲಿ ಶುಭ ಸುದ್ದಿ ಕೇಳುವಿರಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ವಾರದಲ್ಲಿ ಬಹಳ ಲಾಭದಾಯಕವಾಗಿ ಕಳೆಯುತ್ತೀರಿ. ನೀವು ಬಯಸಿದಂತೆ ಹಣಕಾಸು ವಿಚಾರಗಳು ಸರಾಗವಾಗಿ ಮುಗಿಯಲಿವೆ. ಅಗತ್ಯ ಸಮಯದಲ್ಲಿ ಹಣ ನಿಮ್ಮ ಕೈಸೇರಲಿದೆ, ಅದರಲ್ಲೂ ಹಲವು ಸಮಯದಿಂದ ಯಾರಿಂದಾದರು ಹಣಕಾಸು ವಿಚಾರವಾಗಿ ಬಯಕೆ ಅಥವಾ ಬೇಡಿಕೆ ಇಟ್ಟಿದ್ದರೆ ಈ ವಾರದಲ್ಲಿ ಪರಿಪೂರ್ಣವಾಗಿ ನಿಮ್ಮ ಪರವಾಗಿ ಹರಿದು ಬರಲಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಕಾರಣದಿಂದ ಉತ್ತಮ ನಿರ್ಧಾರ ತೆಗೆದುಕೊಳ್ಳುವ ವಾರವಿದು. ಗೃಹಿಣಿಯರ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳ ನೋಡಬಹುದು.

ಧನು ರಾಶಿ

ಧನು ರಾಶಿಯವರಲ್ಲಿ ಈ ವಾರವು ಬಹಳ ಶುಭಕರ ಆಗಿರಲಿದೆ. ಹತ್ತಾರು ಕೆಲಸಗಳನ್ನು ನೀವು ಏಕಕಾಲಕ್ಕೆ ಮುಗಿಸಬೇಕಾಗಬಹುದು, ಆದರೂ ಅದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ದೊಡ್ಡ ಕೆಲಸಗಳಲ್ಲಿನ ಯಶಸ್ಸು ನಿಮಗೆ ನೆಮ್ಮದಿ ತರಲಿದೆ. ವ್ಯಾಪಾರಿಗಳು ಈ ವಾರದಲ್ಲಿ ದೊಡ್ಡ ಲಾಭ ನೋಡಲಿದ್ದಾರೆ. ನಿಮ್ಮ ವ್ಯಾಪಾರ ಪ್ರಗತಿಗೆ ಪೂರಕವಾದ ವಾತಾವರಣ ಕೂಡ ಇರಲಿದೆ. ಕುಟುಂಬಸ್ಥರೊಂದಿಗೆ ನೀವು ಬಹಳ ಕಾಲದಿಂದ ದೇವಾಲಯ ಭೇಟಿಯ ಆಲೋಚನೆ ಮಾಡಿದ್ದರೆ ಈ ವಾರ ನೆರವೇರಬಹುದು. ಎಲ್ಲಾ ವಿಚಾರದಲ್ಲಿಯೂ ಧನಾತ್ಮಕ ಪರಿಣಾಮಗಳ ನೋಡುವಿರಿ.

ಮಕರ ರಾಶಿ

ಈ ವಾರದಂದು ಮಕರ ರಾಶಿಯವರಲ್ಲಿ ಅಧಿಕ ಖರ್ಚು ನೋಡುವ ಸಾಧ್ಯತೆ ಇದೆ. ಮನೆಯ ವಿಚಾರವಾಗಿ ಖರ್ಚು ಮಾಡುತ್ತೀರಿ. ಇದರಿಂದ ಆತ್ಮತೃಪ್ತಿಗೆ ನೀವು ಒಳಗಾಗಬಹುದು. ಆಹಾರ ಸಂಬಂಧಿ ಅಥವಾ ವಾಹನ ಸಂಬಂಧಿ ಖರ್ಚುಗಳು ಹೆಚ್ಚಾಗಬಹುದು. ಸರ್ಕಾರಿ ನೌಕರರಿಗೆ ಈ ವಾರ ಬಹಳ ಉತ್ತಮ ಸಮಯ. ನಿಮ್ಮ ವರ್ಗಾವಣೆ, ಬಡ್ತಿ ಕುರಿತಾದ ವಿಚಾರದಲ್ಲಿ ಶುಭಕರವಾಗಲಿದೆ. ಅನೇಕ ಬಾರಿ ನೀವು ಮಾಡಲು ಯತ್ನಿಸಿ ವಿಫಲವಾದ ಕಲಸದಲ್ಲೂ ಕೂಡ ಯಶಸ್ಸು ಪಡೆಯುವ ಸಮಯವಿದು. ದೊಡ್ಡ ಒಪ್ಪಂದಗಳಿಂದ ದೂರ ಉಳಿಯುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿಯವರು ಈ ವಾರದಲ್ಲಿ ಎಷ್ಟು ದಿನಗಳಿಂದ ಮಾಡಲು ಯತ್ನಿಸಿದ್ದ ಕೆಲಸಗಳನ್ನು ಸುಲಭವಾಗಿ ಅಡ್ಡಿ ಆತಂಕಗಳಿಲ್ಲದೆ ಮಾಡಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಅವಕಾಶಗಳು ಸಿಗಲಿವೆ. ಸ್ನೇಹಿತರೊಂದಿಗೆ ಇಲ್ಲವೆ ಆಪ್ತರೊಂದಿಗೆ ಹೆಚ್ಚಿನ ಸಮಯ ಕಳೆಯಲು ಮುಂದಾಗುತ್ತೀರಿ. ಮನೆಗೆ ಅಗತ್ಯವಾಗಿದ್ದ ವಸ್ತುವೊಂದನ್ನು ಖರೀದಿಸುವುದು ಶಾಂತಿ ನೆಲೆಸಲು ಕಾರಣವಾಗುತ್ತದೆ. ನಿಮ್ಮ ಎಲ್ಲಾ ಪ್ರಯತ್ನಗಳು ಯಶಸ್ಸಿಗೆ ಕಾರಣವಾಗಬಹುದು. ನೀವು ಉದ್ಯೋಗ ಬದಲಾಯಿಸಲು ಮುಂದಾದರೆ ಈ ಸಮಯದಲ್ಲಿ ಅವಕಾಶ ಪಡೆಯಬಹುದು. ದಾಂಪತ್ಯದಲ್ಲಿನ ಒಂದು ಸಮಸ್ಯೆ ಬಗೆಹರಿಯಲಿದೆ.

ಮೀನ ರಾಶಿ

ಮೀನ ರಾಶಿಯ ಮಂದಿ ಈ ವಾರದಲ್ಲಿ ಹಲವು ರೀತಿಯ ಸಮಸ್ಯೆಗಳಿಂದ ಮುಕ್ತರಾಗುವ ಅವಕಾಶ ಪಡೆಯಲಿದ್ದೀರಿ. ನೀವು ಹಣಕಾಸು ವಿಚಾರವಾಗಿ ಅನುಭವಿಸಿದ್ದ ಕಂಟಕವೊಂದು ನಿವಾರಣೆಯಾಗಲಿದೆ, ಇದರಿಂದ ನಿಮ್ಮ ಕೈಸೇರಬೇಕಿದ್ದ ಹಣ ಸರಾಗವಾಗಿ ಬರಬಹುದು. ಉದ್ಯೋಗದ ವಿಚಾರವಾಗಿಯೂ ಮೂಡಿರುವ ಸಮಸ್ಯೆಗಳು ನಿವಾರಣೆಯಾಗಬಹುದು. ಕುಟುಂಬದಲ್ಲಿ ನಿಮ್ಮ ಮಾತುಗಳಿಗೆ ಬೆಂಬಲ ಇರಲಿದೆ. ಸಮಾಜದಲ್ಲಿ ಕೀರ್ತಿ ಹೆಚ್ಚಾಗುವ ಕೆಲಸ ಮಾಡಲಿದ್ದೀರಿ.

English summary

Weekly Horoscope From June 08 To June 14 For All Zodiac Signs In Kannada

Here is weekly horoscope prediction for all zodiac signs, read on...
Story first published: Sunday, June 8, 2025, 12:47 [IST]
X
Desktop Bottom Promotion