ಜುಲೈ 27 ರಿಂದ ಆಗಸ್ಟ್ 03ರ ವಾರ ಭವಿಷ್ಯ: ಯಾವ ರಾಶಿಯವರಿಗೆ ಅನುಕೂಲ!

ಜುಲೈ 27 ರಿಂದ ಆಗಸ್ಟ್ 03 ರ ವರೆಗಿನ ವಾರ ಭವಿಷ್ಯ ಇಲ್ಲಿದೆ:

ಮೇಷ ರಾಶಿ

ಮೇಷ ರಾಶಿಯವರಿಗೆ ಈ ವಾರ ಬಹಳ ಅನುಕೂಲಕರ ದಿನಗಳಿವೆ. ನಿಮ್ಮ ಕಾರ್ಯ ಕಪಾಲಗಳಲ್ಲಿ ಯಶಸ್ಸು ಪಡೆಯುತ್ತೀರಿ. ನಿಮ್ಮ ನಿಯೋಜಿತ ಹಾಗೆ ಅಪೇಕ್ಷಿತ ಪ್ರಯಾಣಗಳು ಸುಖಕರವಾಗಿರಲಿದೆ. ವಾರದ ಆರಂಭದಲ್ಲಿ ಹಣಕಾಸು ವಿಚಾರವಾಗಿ ಸಂಕಷ್ಟ ಸ್ಥಿತಿ ಇರಬಹುದು. ಆದ್ರೆ ವಾರದ ಅಂತ್ಯದಲ್ಲಿ ಈ ಸಮಸ್ಯೆಗಳು ನಿವಾರಣೆಯಾಗಲಿವೆ. ಉದ್ಯೋಗಿಗಳಲ್ಲಿ ಒತ್ತಡ ಕಡಿಮೆಯಾಗಲಿದೆ, ನಿಮ್ಮ ಹಲವು ಕೆಲಸಗಳಲ್ಲಿ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿದೆ. ದಾಂಪತ್ಯ ವಿಚಾರವಾಗಿ ನಿಮಗೆ ಸುಖಕರ ದಿನಗಳಿವೆ. ವ್ಯವಹಾರಕ್ಕೆ ಸಂಬಂಧವಾಗಿ ನಿಮಗೆ ವಾರದ ಕೊನೆಯಲ್ಲಿ ಶುಭಕರ ದಿನಗಳಿವೆ. ವ್ಯಾಪಾರಿಗಳ ಆದಾಯ ಹೆಚ್ಚಾಗಲಿದೆ. ಮನಸ್ಸು ವಿಚಲಿತವಾಗುವಂತಹ ಘಟನೆಗಳು ನಡೆಯಬಹುದು. ಆರೋಗ್ಯದಲ್ಲಿಯೂ ಬಹುತೇಕರಿಗೆ ಏರುಪೇರು ಉಂಟಾಗಬಹುದು.

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ವಾರ ಶುಭ ಮತ್ತು ಅದೃಷ್ಟಶಾಲಿಯಾಗಲಿದೆ. ಈ ವಾರ ನೀವು ಕೆಲವು ಸಮಯದಿಂದ ಅನುಭವಿಸಿದ್ದ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ವ್ಯಾಪಾರಿಗಳು ಹಿಂದೆಂದಿಗಿಂತಲೂ ಹೆಚ್ಚು ಲಾಭದಾಯಕ ದಿನಗಳ ನೋಡುವಿರಿ. ವ್ಯವಹಾರಗಳ ಸಂಬಂಧವಾಗಿ ನಿಮ್ಮ ಪ್ರಯಾಣವು ಅತ್ಯಧಿಕ ಲಾಭಕ್ಕೆ ಕಾರಣವಾಗಲಿದೆ. ವ್ಯಾಪಾರ ವಿಸ್ತರಣೆ ಸಂಬಂಧವಾಗಿ ನೀವು ಒಪ್ಪಂದಕ್ಕೂ ಮುಂದಾಗಬಹುದು. ಬ್ಯಾಂಕಿಂಗ್ ವ್ಯವಹಾರದಲ್ಲಿ ನಿಮಗಿದ್ದ ದಾಖಲೆ ಅಡ್ಡಯಂತಹ ಸಮಸ್ಯೆ ನಿವಾರಣೆಯಾಗಲಿದೆ. ಕೌಟುಂಬಿಕ ವಿಚಾರದಲ್ಲಿ ಸಾಮಾನ್ಯ ಸ್ಥಿತಿ ಇರಲಿದೆ. ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳು ಈ ಸಮಯದಲ್ಲಿ ಪೂರ್ಣ ಮಾಡಲಿದ್ದೀರಿ. ಆರೋಗ್ಯ ಸುಧಾರಣೆಯಾಗಲಿದೆ.

Weekly Horoscope From July 27 To August 03

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ವಾರವು ಒತ್ತಡದಿಂದ ತುಂಬಿರಬಹುದು. ನಿಮ್ಮ ಹಲವು ವಿಚಾರಗಳಲ್ಲಿ ಹಿನ್ನಡೆ ನೋಡಬಹುದು. ವ್ಯವಹಾರಗಳಲ್ಲಿ ನಿಧಾನಗತಿಯ ಪ್ರಗತಿ ನೋಡುವಿರಿ. ಆರ್ಥಿಕ ವಿಚಾರದಲ್ಲಿ ನಿಮಗೆ ಒತ್ತಡ ಉಂಟಾಗುವ ಸಮಯ. ಸಾಲ ಮಾಡಿದ್ದರೆ ಮರಳಿಸಬೇಕಾಗಬಹುದು. ವೃತ್ತಿ ವ್ಯವಹಾರದಲ್ಲಿ ಅಡ್ಡಿಗಳು ಇರಬಹುದು. ದಾಂಪತ್ಯದಲ್ಲಿ ಸಾಮಾನ್ಯ ದಿನಗಳು ಇರಲಿವೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳಿರಲಿದೆ. ವಾರದ ಅಂತ್ಯದಲ್ಲಿ ಹಣಕಾಸು ನಿಮ್ಮ ಕೈಸೇರುವುದರಿಂದ ನೆಮ್ಮದಿ ಇರಲಿದೆ. ಕುಟುಂಬದಲ್ಲಿ ಶುಭ ಕಾರ್ಯ ಸಂಬಂಧ ಮಾತುಕತೆ ಇರಬಹುದು.

ಕರ್ಕ ರಾಶಿ

ಕರ್ಕ ರಾಶಿಯವರಲ್ಲಿ ಈ ವಾರ ವ್ಯಾಪಾರ ಲಾಭ ನೋಡಬಹುದು. ನೀವು ಕಳೆದ ಸಮಯದಿಂದ ಒಂದು ನಿರ್ದಿಷ್ಟ ಕೆಲಸದ ಬಗ್ಗೆ ಚಿಂತೆ ಮಾಡುತ್ತಿದ್ದರೆ ಅಥವಾ ನೀವು ಯಾವುದೇ ಕುಟುಂಬದ ಕಾಳಜಿಯ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಈ ವಾರ ಅದು ದೂರವಾಗುತ್ತದೆ. ನೀವು ಅತಿಯಾದ ಕೆಲಸದಿಂದ ದಣಿದಿರುವಿರಿ, ಆದರೆ ಈ ಸಮಯದಲ್ಲಿ ನೀವು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದ್ದಕ್ಕಿದ್ದಂತೆ ಹಣ ಲಾಭದ ನಿರೀಕ್ಷದೆ ಇಡಬಹುದು. ಅಧಿಕಾರ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳು ಬಗೆಹರಿಯುತ್ತವೆ. ಆರೋಗ್ಯದ ಕಡೆ ಗಮನಹರಿಸುವುದು ಸೂಕ್ತ.

ಸಿಂಹ ರಾಶಿ

ಈ ವಾರ ಸಿಂಹ ರಾಶಿಯವರಿಗೆ ಮಿಶ್ರ ಫಲ ಇರಲಿದೆ. ವಾರದ ಆರಂಭದಲ್ಲಿ ಕೌಟುಂಬಿಕ ವಿಚಾರವಾಗಿ ನಿಮಗೆ ಬೇಸರ ಮೂಡುವ ಸಂಭವವಿದೆ ಹಾಗೆ. ನಿಮ್ಮ ಆರ್ಥಿಕ ವಿಚಾರದಲ್ಲು ವಾರದ ಅಂತ್ಯ ಹಿತವಾಗಿರಲಿದೆ. ಆಪ್ತರೊಬ್ಬರ ಭೇಟಿ, ಪ್ರವಾಸದಂತಹ ವಿಚಾರವಾಗಿ ಇಡೀ ವಾರ ತಯಾರಿಯಲ್ಲಿ ತೊಡಗಬಹುದು. ವ್ಯವಹಾರಗದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ವಾರದ ಮೊದಲಾರ್ಧವು ದ್ವಿತೀಯಾರ್ಧಕ್ಕಿಂತ ಸ್ವಲ್ಪ ಕಡಿಮೆ ಲಾಭದಾಯಕವಾಗಿರುತ್ತದೆ, ಆದರೆ ನೀವು ನಷ್ಟವನ್ನು ಅನುಭವಿಸುವುದಿಲ್ಲ. ದೈಹಿಕ ಆಯಾಸಕ್ಕಿಂತ ಮಾನಸಿಕ ಆಯಾಸ ಇರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿಗೆ ಈ ವಾರವು ಅದ್ಭುತ ಫಲಿತಾಂಶಗಳ ಅನುಭವಿಸುವ ವಾರವಾಗಿರಲಿದೆ. ಆರೋಗ್ಯ ಮತ್ತು ಸಂಬಂಧಗಳೆರಡರ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಈ ವಾರ ಕಾರ್ಮಿಕರಿಗೆ ಬಹಳ ಉತ್ತಮ ಸಮಯವಾಗಿದೆ. ಹಾಗೆ ಹೊಸದಾಗಿ ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಹೊಸ ಹೊಸ ಅವಕಾಶಗಳು ಹಾಗೆ ಆಪ್ತರಿಂದ ನಿಮಗೆ ಈ ಸಂಬಂಧ ಸಹಕಾರ ಇರಲಿದೆ. ಕೆಲಸದ ಸ್ಥಳದಲ್ಲಿನ ಒತ್ತಡ ಹಾಗೂ ಅನಗತ್ಯ ವಿವಾದಗಳಿಂದ ದೂರ ಇರುವುದು ಉತ್ತಮ. ವ್ಯವಹಾರಿಕವಾಗಿ ಎಚ್ಚರಿಕೆಯಿಂದ ನಿರ್ಧಾರಗಳ ತೆಗೆದುಕೊಳ್ಳಿ.

ತುಲಾ ರಾಶಿ

ಈ ವಾರ ತುಲಾ ರಾಶಿ ಜನರಿಗೆ ತುಂಬಾ ಶುಭಕರವಾಗಿರುತ್ತದೆ. ಈ ವಾರ ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿಗಳ ನೋಡಬಹುದು. ಕೆಲಸದ ಸ್ಥಳದಲ್ಲಿ ಹಿರಿಯ ಮತ್ತು ಕಿರಿಯರ ಸಹಕಾರ ಮತ್ತು ಬೆಂಬಲ ಪಡೆಯಲಿದ್ದೀರಿ. ಈ ವಾರ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆದಾಯದ ಮೂಲದಲ್ಲಿ ಹೆಚ್ಚಳ ಆಗಬಹುದು. ನೀವು ಅಪೇಕ್ಷಿತ ಉದ್ಯೋಗದಿಂದ ಲಾಭ ಪಡೆಯುವ ಸಾಧ್ಯತೆ ಇದೆ. ಕುಟುಂಬದಲ್ಲಿ ಹಣಕಾಸಿನ ಹರಿವು ಚೆನ್ನಾಗಿರಲಿದೆ. ದಾಂಪತ್ಯದಲ್ಲಿ ಬಯಸಿದ ಸುಖ ಇರಲಿದೆ.

ವೃಶ್ಚಿಕ ರಾಶಿ

ಈ ವಾರ ವೃಶ್ಚಿಕ ರಾಶಿಯವರಿಗೆ ಸರಾಸರಿಯಾಗಿರಲಿದೆ. ಸ್ವಲ್ಪ ಸಮಯದಿಂದ ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಇದ್ದ ಅನುಕೂಲತೆ ಹೆಚ್ಚಾಗಲಿದೆ. ವಾರದ ಮೊದಲಾರ್ಧವು ನಿಮಗೆ ಉತ್ತಮ ಲಾಭಗಳ ತರಲಿದೆ. ಕೌಟುಂಬಿಕ ವಿಚಾರದಲ್ಲಿ ಶುಭ ಸುದ್ದಿ ಇರಲಿದೆ. ವೈವಾಹಿಕ ಜೀವದಲ್ಲಿ ಎದುರಾಗಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ನವವಿವಾಹಿತರಿಗೆ ಈ ಸಮಯ ಬಹಳ ಅನುಕೂಲಕರವಾಗಿಲಿದೆ. ವ್ಯಾಪಾರಿಗಳಲ್ಲಿ ಅಧಿಕ ಖರ್ಚು ನೋಡಬಹುದು.

ಧನು ರಾಶಿ

ಈ ವಾರ ಧನು ರಾಶಿಯ ಜನರಿಗೆ ಮಿಶ್ರ ಫಲದ ದಿನವಾಗಿರಲಿದೆ. ಒಳ್ಳೆಯ ವಿಷಯವೆಂದರೆ ಈ ವಾರ ನೀವು ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳಿಗೆ ಸಕಾರಾತ್ಮಕ ಫಲಿತಾಂಶಗಳ ಪಡೆಯುತ್ತೀರಿ. ಆರೋಗ್ಯ ಸಂಬಂಧಿಸಿದ ಕೆಲವು ಸಮಸ್ಯೆಗಳ ಎದುರಿಸಬಹುದು. ಮಾರ್ಕೆಟಿಂಗ್ ಉದ್ಯೋಗಗಳಲ್ಲಿ ಅಥವಾ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ದೊಡ್ಡ ಜವಾಬ್ದಾರಿ ಸಿಗಬಹುದು. ವ್ಯಾಪಾರಿಗಳಿಗೆ ಆದಾಯದಷ್ಟೇ ಖರ್ಚು ಕೂಡ ಇರಲಿದೆ. ಪ್ರೇಮ ಸಂಬಂಧಗಳಲ್ಲಿ ಎಚ್ಚರಿಕೆಯಿಂದ ಮುಂದುವರಿಯಿರಿ. ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾದವರಿಗೆ ಸುಧಾರಣೆ ಕಾಣುವ ವಾರ.

ಮಕರ ರಾಶಿ

ಈ ವಾರ ಮಕರ ರಾಶಿಯವರು ಬಹಳಷ್ಟು ಚಿಂತೆಗಳ ಅನುಭವಿಸುವಿರಿ. ಮನೆ, ಕೌಟುಂಬಿಕ ವಿಚಾರ, ಕರಷಿ, ವ್ಯವಹಾರ ಸಂಬಂಧವಾಗಿ ನಿಮ್ಮಲ್ಲಿ ಚಿಂತೆ ಇರಲಿದೆ. ವಾಹನ ಸಂಬಂಧಿ ಅಥವಾ ಯಂತ್ರೋಪಕರಣ ಸಂಬಂಧಿ ಖರ್ಚುಗಳು ಹೆಚ್ಚಾಗಬಹುದು. ಅಪಾಯಕಾರಿ ಹಾಗೂ ದೊಡ್ಡ ಹೂಡಿಕೆಗಳನ್ನು ತಪ್ಪಿಸಬೇಕು. ನೀವು ಪಾಲುದಾರಿಕೆಯ ವ್ಯಾಪಾರ ಮಾಡುತ್ತಿದ್ದರೆ ಪರಸ್ಪರ ಸಮನ್ವಯದಲ್ಲಿ ಕೊರತೆ ನೋಡಬಹುದು. ಕಾರ್ಮಿಕ ವರ್ಗಕ್ಕೆ ಆರ್ಥಿಕ ಸಮಸ್ಯೆ ಇರಬಹುದು. ಗೃಹಿಣಿತರಲ್ಲಿ ಖರ್ಚು ಹಾಗೂ ಅನಾರೋಗ್ಯ ಕಾಡಬಹುದು. ಉದ್ಯೋಗ ಬದಲಾಯಿಸುವವರು ಹಾಗೆ ಹುಡುಕುತ್ತಿದ್ದವರಿಗೆ ಸೂಕ್ತ ಸಮಯವಲ್ಲ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಈ ವಾರ ಶ್ರಮದಾಯಕ ಹಾಗಙೂ ಸರಾಸರಿಯ ವಾರ ಎನ್ನಬಹುದು, ನಿಮ್ಮ ನಿರೀಕ್ಷೆಗೆ ತಕ್ಕಂತೆ ಯಾವುದೇ ಕೆಲಸದಲ್ಲಿ ಫಲಿತಾಂಶ ಸಿಗದೆ ಇರಬಹುದು. ಲಾಭಕ್ಕಿಂತ ವೆಚ್ಚ ಹೆಚ್ಚಾಗಬಹುದು. ನಿಮ್ಮ ಹೂಡಿಕೆ, ಉಳಿತಾಯದಲ್ಲಿ ಇಳಿಮುಖ ನೋಡುತ್ತೀರಿ. ಪ್ರಯಾಣಗಲ್ಲಿ ನೀವು ಬಯಸಿದ ಫಲಿತಾಂಶ ಪಡೆಯಲು ಆಗದೆ ಇರಬಹುದು. ನಿಮ್ಮ ಆದಾಯ ಮೂಲಗಳು ನಿಮಗೆ ಲಾಭ ತರದೆ ಇರಬಹುದು. ನೀವು ಯಾರಿಂದಾದರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೆ ಅಥವಾ ಬಾಕಿ ಪಾವತಿಯಾಗಬೇಕಿದ್ದರೆ ಇನ್ನೂ ಸ್ವಲ್ಪ ದಿನ ಮುಂದೂಡಿಕೆಯಾಗಲಿದೆ. ಹಿರಿಯರ ಸಲಹೆಯನ್ನು ನಿರ್ಲಕ್ಷ್ಯ ಮಾಡಬೇಡಿ. ಅಧಿಕ ಖರ್ಚು ಮಾಡಬೇಕಾಗಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಈ ವಾರ ಶುಭ ಆರಂಭ ಎನ್ನಬಹುದು. ಹಲವು ತಿಂಗಳುಗಳಿಂದ ನಿಮ್ಮ ದೈನಂದಿನ ಕೆಲಸಕ್ಕೆ ಅಡ್ಡಿಯಾಗಿದ್ದ ವಿಚಾರವೊಂದು ನಿವಾರಣೆಯಾಗುತ್ತಿದೆ. ಹಾಗೆ ಸರ್ಕಾರಿ ಕೆಲಸದ ವಿಚಾರದಲ್ಲಿ ನಿಮಗೆ ಯಶಸ್ಸು ಇದೆ. ದಾಂಪತ್ಯ ವಿಚಾರವಾಗಿ ಎದುರಾಗಿದ್ದ ಸಮಸ್ಯೆ ನಿವಾರಣೆ ಖಚಿತ. ಆಹಾರ ಸಂಬಂಧಿ ಖರ್ಚು ಹೆಚ್ಚಾಗಲಿದೆ. ದೂರ ಸಂಬಂಧಕರೊಬ್ಬರ ವಿಚಾರದಲ್ಲಿ ನೀವು ಪ್ರಯಾಣ ಮಾಡುತ್ತೀರಿ. ಆಸ್ತಿ ವಿಚಾರದಲ್ಲಿ ನಿಮಗೆ ಮೇಲುಗೈ ಇರಲಿದೆ. ಆರೋಗ್ಯದಲ್ಲು ಸುಧಾರಣೆ ನೋಡುವಿರಿ.

English summary

Weekly Horoscope From July 27 To August 03: Lucky To These Zodiac Signs

Weekly Horoscope From July 27 To August 03: These 12 zodiac get more benefits during this 7 days, read on...
Story first published: Saturday, July 26, 2025, 16:35 [IST]
X
Desktop Bottom Promotion