Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಜುಲೈ 21 ರಿಂದ ಜುಲೈ 27ರ ವಾರ ಭವಿಷ್ಯ: ಯಾರಿಗೆ ಈ ವಾರ ಅದ್ಭುತ ದಿನಗಳಿವೆ ನೋಡಿ!
ಜುಲೈ 21 ರಿಂದ ಜುಲೈ 27ರ ವಾರ ಭವಿಷ್ಯ ಇಲ್ಲಿದೆ:
ಮೇಷ ರಾಶಿ
ಈ ವಾರ ಮೇಷ ರಾಶಿಯವರಿಗೆ ಸ್ವಲ್ಪ ಏರಿಳಿತದಿಂದ ಕೂಡಿರುತ್ತದೆ. ವಾರವು ಕೆಲವು ದೊಡ್ಡ ಖರ್ಚುಗಳಿಂದ ಆರಂಭವಾಗಬಹುದು. ಹಣಕಾಸು ವಿಚಾರವಾಗಿ ನಿಮಗೆ ದೊಡ್ಡ ಕೆಲಸಗಳು ಬರಬಹುದು. ಹಾಗೆ ನಿಮ್ಮಿಂದಾಗಿ ಕುಟುಂಬ ಸದಸ್ಯರಲ್ಲೂ ಖರ್ಚು ಉಂಟಾಗಬಹುದು. ವಾರದ ಮಧ್ಯದಲ್ಲಿ, ಕುಟುಂಬದಲ್ಲಿ ವಯಸ್ಸಾದ ವ್ಯಕ್ತಿಯ ಅನಾರೋಗ್ಯವು ನಿಮಗೆ ಕಳವಳಕಾರಿ ವಿಷಯವಾಗಬಹುದು. ನಿರುದ್ಯೋಗಿಗಳು ಆರ್ಥಿಕ ಸಮಸ್ಯೆಯಿಂದ ಮತ್ತಷ್ಟು ಒತ್ತಡ ಎದುರಿಸಬಹುದು. ಸಾಲ ಮಾಡುವ ಕುರಿತಾದ ಆಲೋಚನೆಯನ್ನು ಮುಂದೂಡುವುದು ಉತ್ತಮ. ವ್ಯಾಪಾರ ಹಾಗೂ ವ್ಯವಹಾರ ಸಂಬಂಧವಾಗಿ ದೊಡ್ಡ ಕೆಲಸಗಳಲ್ಲಿ ನೀವು ಭಾಗಿಯಾಗುತ್ತೀರಿ.
ವೃಷಭ ರಾಶಿ
ವೃಷಭ ರಾಶಿಯವರು ಈ ವಾರ ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳ ಫಲವನ್ನು ಸ್ವಲ್ಪ ತಡವಾಗಿ ಮತ್ತು ನಿರೀಕ್ಷೆಗಿಂತ ಕಡಿಮೆ ಪಡೆಯಬಹುದು. ಉದ್ಯೋಗಿಗಳ ಕೆಲಸದಲ್ಲಿ ಅನಿರೀಕ್ಷಿತ ಬದಲಾವಣೆಗಳು ಉಂಟಾಗಬಹುದು. ಬೇಡದ ವಿಚಾರದಲ್ಲಿ ನಿಮಗೆ ಸಮಸ್ಯೆಗು ಕಾಡಬಹುದು. ಈ ವಾರದ ಬಹುತೇಖ ಸಮಯ ನೀವು ಓಡಾಟದಲ್ಲಿ ಕಳೆಯುತ್ತೀರಿ. ಮನೆಯಲ್ಲಿ ದಾಂಪತ್ಯ ಕುರಿತಾಗಿ ಉತ್ತಮ ವಾತಾವರಣ ಇರಲಿದೆ. ವಾರದ ಅಂತ್ಯದಲ್ಲಿ ನಿಮಗೆ ಹಣಕಾಸಿನ ಲಾಭವಿದೆ. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ. ದೇವಾಲಯ ಭೇಟಿಯಂತಹ ಕೆಲಸಕ್ಕೂ ಮುಂದಾಗಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ವಾರ ಬಹಳ ಅನುಕೂಕರ ಆಗಿರಲಿದೆ. ನಿಮ್ಮ ಹಲವು ದಿನಗಳ ಬಯಕೆಯೊಂದು ಈಡೇರಲಿದೆ. ಅದ್ರಲ್ಲೂ ವಾಹನ ಲಾಭದಂತಹ ಖುಷಿ ತರುವ ಸಂಬರ್ಭಗಳಿಗೆ ನೀವು ಒಳಗಾಗುತ್ತೀರಿ. ಮಕ್ಕಳಿಂದ ಶುಭ ಸುದ್ದಿ ಕೇಳುವ ಸಾಧ್ಯತೆ ಹೆಚ್ಚಾಗಿದೆ. ಈ ವಾರ ಕೌಟುಂಬಿಕ ಸಂತೋಷದ ವಿಷಯದಲ್ಲಿ ಮಿಶ್ರಣವಾಗಲಿದೆ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಯಾವುದೇ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳು ಬಿರುಕುಗಳಾಗಿ ಬದಲಾಗಲು ಬಿಡಬೇಡಿ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ವಾರ ಸಾಮಾನ್ಯವಾಗಿ ಫಲಪ್ರದವಾಗಿರುತ್ತದೆ. ಈ ವಾರ ನಿಮ್ಮ ಕೆಲಸವು ಹಿಂದಿನಂತೆಯೇ ಮುಂದುವರಿಯುತ್ತದೆ. ಉದ್ಯೋಗಿಳಿಗೆ ಹೊಸ ಜವಾಬ್ದಾರಿಗಳು ಬರಬಹುದು. ಅವಿವಾಹಿತರಿಗೆ ವಿವಾಹ ಸಂಬಂಧಿ ಶುಭ ಸುದ್ದಿ ಬರಬಹುದು. ನೀವು ಪ್ರಯಾಣಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕಾಗುತ್ತೆ. ದೇವಾಲಯ, ಪುಣ್ಯಕ್ಷೇತ್ರ, ಪ್ರವಾಸದಂತಹ ಕೆಲಸದಲ್ಲಿ ನೀವು ಭಾಗಿಯಾಗಬಹುದು. ಮನೆಗಾಗಿ ದುಬಾರಿ ವಸ್ತುವೊಂದನ್ನು ನೀವು ಖರೀದಿಸಬಹುದು. ಬಾಕಿ ಉಳಿದಿರುವ ಹಲವು ಕೆಲಸಗಳನ್ನು ಈ ವಾರ ಮಾಡಿ ಮುಗಿಸುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ವಾರ ಸಕಾರಾತ್ಮಕವಾಗಿರಲಿದೆ. ವಾರದ ಆರಂಭದಲ್ಲಿ ಹಠಾತ್ ಹಣ ಲಾಭದ ಸಾಧ್ಯತೆಗಳು ಇರುತ್ತವೆ. ನಿಮ್ಮ ಉದ್ಯೋಗದಲ್ಲಿ ಒತ್ತಡ ಇರಬಹುದು. ಹಾಗೆ ನಿಮ್ಮ ಅನೇಕ ಕೆಲಸಗಳಲ್ಲಿ ಬಹುತೇಕ ಯಶಸ್ಸು ಪಡೆಯಲಿದ್ದೀರಿ. ವ್ಯಾಪಾರಿಗಳಿಗೆ ಬಹಳ ಉತ್ತಮ ಸಮಯ ಆಗಿರಲಿದೆ. ಹಣಕಾಸು ವಿಚಾರವಾಗಿ ಆಪ್ತರು ದಾರಿ ತಪ್ಪಿಸಬಹುದು. ಉದ್ಯೋಗ ಬದಲಾಯಿಸುವ ನಿಮ್ಮ ಆಲೋಚನೆಗೆ ಧನಾತ್ಮಕ ಬದಲಾವಣೆ ಇರಲಿದೆ. ಆರೋಗ್ಯದ ಕುರಿತು ನೀವು ವಿಶೇಷ ಗಮನ ಹರಿಸಬೇಕು. ವಾಹನ ವಿಚಾರದಲ್ಲಿ ಉತ್ತಮ ವಾರ.
ಕನ್ಯಾ ರಾಶಿ
ಈ ವಾರ ಕನ್ಯಾರಾಶಿ ಮಂದಿಗೆ ಸ್ವಲ್ಪ ಮಟ್ಟಿನ ಹಿನ್ನಡೆಗಳ ನೋಡಬಹುದು, ನಿಮ್ಮ ಪ್ರಯಾಣಗಳು ಶುಭಕರ ಆಗಿರದೆ ಇರಬಹುದು. ನಿಮ್ಮ ವೈಯಕ್ತಕ ಕೆಲಸದ ಕಾರಣಕ್ಕಾಗಿ ಹಣ ಖರ್ಚಾಗುತ್ತದೆ. ಆದ್ರೆ ನೀವು ಸಾಲ ಮಾಡಬೇಕಾಗಿ ಬರಬಹುದು. ಉಳಿತಾಯದ ಪ್ರಮಾಣ ಕಡಿಮೆಯಾಗಬಹುದು. ವ್ಯಾಪಾರಿಗಳಿಗೆ ಮಿಶ್ರ ಫಲದ ವಾರ. ನಿಮ್ಮ ದೈನಂದಿನ ಕೆಲಸಗಳಲ್ಲಿನ ಶ್ರಮವು ನಿಮಗೆ ತಕ್ಕ ತೃಪ್ತಿ ನೀಡುವ ಪ್ರಲಿತಾಂಶ ನೀಡದೆ ಇರಬಹುದು. ಅವಿವಾಹಿತರಿಗೆ ಈ ವಾರ ಬಹಳ ಅನುಕೂಲ ಉಂಟಾಗಬಹುದು. ವಾಹನ ಸಂಬಂಧಿ ಖರ್ಚು ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ವಾರ ತುಂಬಾ ಶುಭವಾಗಲಿದೆ. ಪೂರ್ವ ನಿಯೋಜಿತ ಕೆಲಸಗಳಲ್ಲಿ ನೀವು ಅಂದುಕೊಂಡ ಯಶಸ್ಸು ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಸಹಕರಗಳು ಇರಲಿದೆ. ಆಸ್ತಿ, ಮನೆ ವಿಚಾರದಲ್ಲಿ ನಿಮ್ಮ ಕೈ ಮೇಲಾಗಲಿದೆ. ಪಾಳುದಾರಿಕೆ ವ್ಯವಹಾರದಲ್ಲಿದ್ದವರ ಲಾಭಾಂಶ ಹೆಚ್ಚಾಗಲಿದೆ. ಸಾಲ ಮರುಪಾವತಿ ಮಾಡುವಿರಿ. ಆಪ್ತರಿಂದ ನಿಮಗೆ ಸಹಕಾರ ಇರಲಿದೆ. ಹೂಡಿಕೆಯಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ವೃತ್ತೀಪರ ವಿಚಾರಗಳಲ್ಲಿ ಶುಭ ದಿನಗಳಿವೆ. ಗೃಹಿಣಿಯರು ಹಣಕಾಸು ವಿಚಾರವಾಗಿ ಬಹಳ ಎಚ್ಚರಿಕೆಯ ವ್ಯವಹಾರ ಮಾಡಬೇಕಾದ ದಿನಗಳು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ವಾರ ಮಿಶ್ರ ಫಲಗಳಿವೆ. ನಿಮ್ಮ ಆತಂಕಗಳು ದೂರಾಗುವ ಸಂಭವವಿದೆ. ವಿವಾಹಿತರಲ್ಲಿ ಹಣಕಾಸು ವಿಚಾರವಾಗಿ ಗೊಂದಲ ಅಥವಾ ಆತಂಕ ಇರಬಹುದು. ಆಪ್ತರೊಬ್ಬರ ಅನಾರೋಗ್ಯ ಸಂಬಂಧವಾಗಿ ನೀವು ದೂರ ಪ್ರಯಾಣಕ್ಕೆ ಮುಂದಾಗಬಹುದು. ವ್ಯಾಪಾರಿಗಳಿಗೆ ಸಾಮಾನ್ಯ ದಿನಗಳಿಗೆ. ಆದಾಯದಷ್ಟೇ ಖರ್ಚುಗಳು ಕೂಡ ಎದುರಾಗುತ್ತವೆ. ಶುಭ ಕಾರ್ಯ ಸಂಬಂಧವಾಿ ಮಾತುಕತೆಯಲ್ಲಿ ನೀವುಗಳು ಭಾಗಿಯಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಕುರಿತು ಗಮನವಿಡಿ. ಮನೆಗಾಗಿ ನೀವು ಖರೀದಿಸುವ ವಸ್ತು ನಿಮಗೆ ತೃಪ್ತಿ ತರಲಿದೆ.
ಧನು ರಾಶಿ
ಧನು ರಾಶಿಯವರು ಈ ವಾರ ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚು ಓಡಾಡಬೇಕಾಗಬಹುದು. ಅತಿಯಾದ ಕೆಲಸವು ನಿಮಗೆ ಒತ್ತಡ ತರಬಹುದು. ಕೃಷಿಕರಿಗೆ ಈ ವಾರ ಬಹಳ ಉತ್ತಮ ಸಮಯ ಆಗಿರಲಿದೆ. ಹಾಗೆ ಗೃಹಿಣಿಯರು ಎದುರಿಸಿದ್ದ ಹಣಕಾಸಿನ ಸಮಸ್ಯೆಯೊಂದು ಬಗೆಹರಿಯಲಿದೆ. ವಾಹನ ಸಂಬಂಧಿ ಅಪಾಯ ಎದುರಿಸಬೇಕಾಗಬಹುದು. ಆಪ್ತರಿಂದ ಹಣಕಾಸಿನ ನೆರವಿಗಾಗಿ ನೀವು ದೂರವಾಣಿ ಕರೆ ಸ್ವೀಕರಿಸಬಹುದು. ನಿಮ್ಮ ಮಾತು ಮತ್ತು ವ್ಯವಹಾರ ಕೌಶಲ್ಯದಿಂದಾಗಿ ನೀವು ಬಯಸಿದ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಮಕರ ರಾಶಿ
ಮಕರ ರಾಶಿಯವರು ಈ ವಾರ ಅನಗತ್ಯ ವಿಷಯಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಬೇಕು. ಮನೆಯಲ್ಲಿ ಅಥವಾ ಕಚೇರಿಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗಬಹುದು. ತಾಳ್ಮೆ ಮತ್ತು ವಿವೇಚನೆಯನ್ನು ಬಳಸಿಕೊಂಡು ನೀವು ಎಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವೇತನ ಸಂಬಂಧವಾಗಿ ನಿಮಗೆ ಶುಭ ಸುದ್ದಿ ಬರಬಹುದು. ಕುಟುಂಬದಲ್ಲಿದ್ದ ಹಣಕಾಸು ಒತ್ತಡವೊಂದು ನಿವಾರಣೆಯಾಗಲಿದೆ. ಅನಾರೋಗ್ಯ ಸಂಬಂಧವಾಗಿ ಖರ್ಚು ಮಾಡಬೇಕಾಗಿ ಬರಬಹುದು.
ಕುಂಭ ರಾಶಿ
ಕುಂಭ ರಾಶಿಯ ಮಂದಿ ಈ ವಾರದಲ್ಲಿ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರೆ ಅದರಲ್ಲಿ ವಿಶೇಷ ಯಶಸ್ಸನ್ನು ಪಡೆಯಬಹುದು. ಈ ವಾರ ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಆಪ್ತರಿಂದ ಪರಿಹಾರ ಪಡೆಯಬಹುದು. ವಾರದ ಅಂತ್ಯದಲ್ಲಿ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕೌಟುಂಬಿಕ ವಿಚಾರವಾಗಿ ನೀವು ತಾಳ್ಮೆ ಕಳೆದುಕೊಳ್ಳುತ್ತೀರಿ. ದಾಂಪತ್ಯ ವಿಚಾರದಲ್ಲಿ ಮನಸ್ತಾಪಗಳು ಮೂಡುವಂತಹನ ಘಟನೆಗಳು ನಡೆಯಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಈ ವಾರ ಶುಭ ಮತ್ತು ಅಶುಭ ಲಾಭಗಳಿವೆ. ನೀವು ನಿರೀಕ್ಷಿಸದೆ ಇದ್ದಂತಹ ಆದಾಯ ನಿಮ್ಮದಾಗಬಹುದು. ಅನಾರೋಗ್ಯ ಕಾರಣದಿಂದಾಗಿ ನಿಮ್ಮ ಕೆಲಸಗಳಲ್ಲಿ ಅಡ್ಡಿ ನೋಡಬಹುದು. ನಿಮ್ಮದಲ್ಲದ ವಿಚಾರದಲ್ಲಿ ಪ್ರಯಾಣ ಮಾಡಬೇಕಾಗಿ ಬರಬಹುದು. ಈ ವಾರ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲವೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ದೊಡ್ಡ ಸಾಲವನ್ನು ಮರುಪಾವತಿಸಿದ ನಂತರ ನೀವು ನಿರಾಳವಾಗಿರುತ್ತೀರಿ. ಕುಟುಂಬದಲ್ಲಿ ಹಿತವಾದ ವಾತಾವರಣ ಇರಲಿದೆ. ವಾಹನ ಲಾಭವ ನಿರೀಕ್ಷೆ ಇಡಬಹುದು.



Click it and Unblock the Notifications











