ಜುಲೈ 13 ರಿಂದ ಜುಲೈ 19ರ ವಾರ ಭವಿಷ್ಯ: ಯಾವ ರಾಶಿಯವರಿಗೆ ಈ ವಾರ ಧನಲಾಭ?

ಈ ವಾರ ಗ್ರಹಗತಿಗಳ ಸ್ಥಾನವೂ ಯಾರಿಗೆಲ್ಲ ಶುಭಕರವಾಗಿದೆ ನೋಡಿ...

ಮೇಷ ರಾಶಿ

ಈ ವಾರ ಯಾವುದೇ ಕೆಲಸ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಸಣ್ಣ ನಿರ್ಲಕ್ಷ್ಯ ಕೂಡ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. ಹಣಕಾಸು ವಿಚಾರವಾಗಿ ಈ ವಾರ ನಿಮಗೆ ಉತ್ತಮವಾಗಿರಲಿದೆ. ಆರ್ಥಿಕ ಬಲ ನೀಡುವಂತಹ ಹಲವು ಕೆಲಸಗಳಲ್ಲಿ ನೀವು ಭಾಗಿಯಾಗುತ್ತೀರಿ. ವ್ಯಪಾರಗಳು ಲಾಭದತ್ತ ಮುಖ ಮಾಡಲಿವೆ. ನಿಮ್ಮ ಹೆಚ್ಚಿನ ಸಮಯವನ್ನು ಅನಗತ್ಯ ವಿಷಯಗಳಿಗೆ ಕಳೆಯಲಾಗುತ್ತದೆ. ಈ ವಾರದ ಮಧ್ಯದಲ್ಲಿ ನೀವು ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆರೋಗ್ಯದ ವಿಚಾರದಲ್ಲೂ ಈ ವಾರ ನಿರ್ಲಕ್ಷ್ಯ ಮಾಡಬೇಡಿ. ಈ ವಾರ ಕೆಲಸ ಕಾರ್ಯಗಳು ತಡವಾಗಲು ಅನಾರೋಗ್ಯ ಕಾರಣವಾಗಬಹುದು. ಸಂಬಂಧಗಳು ಚೆನ್ನಾಗಿರಲಿವೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ವಾರ ಸಂತೋಷದಾಯಕವಾಗಿರಲಿದೆ. ಪ್ರಭಾವಿ ವ್ಯಕ್ತಿ ಅಥವಾ ಆಪ್ತ ಸ್ನೇಹಿತರ ಸಹಾಯದಿಂದ ಹಿಂದಿನ ಸಮಸ್ಯೆ ಬಗೆಹರಿಯುತ್ತದೆ. ನೀವು ಉದ್ಯಮಿಯಾಗಿದ್ದರೆ ಈ ವಾರ ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಬೇಕಿದೆ. ವಾರದ ಮೊದಲಾರ್ಧದಲ್ಲಿ ನೀವು ದೂರದ ಪ್ರಯಾಣ ಮಾಡಬೇಕಾಗಬಹುದು. ಆಪ್ತರೊಬ್ಬರಿಂದ ಹಣಕಾಸಿನ ನೆರವು ಸಿಗಬಹುದು. ಹೀಗಾಗಿ ವಾರದ ಉತ್ತರಾರ್ಧವು ನಿಮ್ಮಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ.

Weekly Horoscope From July 13 To July 19 Lucky To These Zodiac Signs

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ವಾರ ಉತ್ತಮವಾಗಿರುತ್ತದೆ. ಕುಟುಂಬದ ವಾತಾವರಣ ಆಹ್ಲಾದಕರವಾಗಿರುತ್ತದೆ. ವೈವಾಹಿಕ ಸಂಬಂಧಗಳಲ್ಲಿ ಬಯಸಿದಂತಹ ಸಮಯವಿದು ಎನ್ನಬಹುದು. ವ್ಯಾಪಾರಿಗಳ ದೊಡ್ಡ ಮಟ್ಟದ ನಿರೀಕ್ಷೆಯೊಂದು ಈಡೇರಬಹುದು. ಭವಿಷ್ಯದ ಕಾರಣದಿಂದ ನೀವು ಈ ವಾರ ಪ್ರಮುಖ ಕೆಲಸದಲ್ಲಿ ಭಾಗಿಯಾಗುತ್ತೀರಿ. ಆರೋಗ್ಯ ಸುಧಾರಿಸಲಿದೆ. ಪ್ರವಾಸ, ದೇವಾಲಯ ಭೇಟಿಯಂತಹ ಕೆಲಸದಲ್ಲಿ ಈ ವಾರ ಭಾಗಿಯಾಗುತ್ತೀರಿ. ಹೀಗಾಗಿ ಖರ್ಚುಗಳಿದ್ದರೂ ನೆಮ್ಮದಿ ಪಡೆಯಬಹುದು.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ವಾರ ಮಿಶ್ರ ಫಲದ ವಾರ ಎನ್ನಬಹುದು. ಕುಟುಂಬಸ್ಥರೊಂದಿಗಿನ ಮನಸ್ತಾಪವು ಹೆಚ್ಚಾಗಬಹುದು. ನಿಮ್ಮ ಉದ್ಯೋಗ ಸಂಬಂಧಿ ಸಮಸ್ಯೆಗಳು ಹೆಚ್ಚಾಗಬಹುದು. ನಿರುದ್ಯೋಗಿಗಳಾಗಿದ್ದರೆ ಈ ವಾರದಲ್ಲಿ ಉತ್ತಮ ಅವಕಾಶ ಪಡೆಯುತ್ತೀರಿ. ದಾಂಪತ್ಯದಲ್ಲಿದ್ದ ಮನಸ್ತಾಪಗಳು ಅಥವಾ ಭಿನ್ನಾಭಿಪ್ರಾಯಗಳ ಪರಿಹರಿಸಿಕೊಳ್ಳಲು ಇದು ಸೂಕ್ತ ಸಮಯ ಆಗಿರಲಿದೆ. ಪ್ರಯಾಣಗಳ ಮಾಡಬೇಕಾಗುತ್ತದೆ. ಹಣಕಾಸು ವಿಚಾರವಾಗಿ ಆದಾಯದಷ್ಟೇ ಖರ್ಚು ಕೂಡ ಇರಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ವಾರ ಒತ್ತಡದಿಂದ ಕೂಡಿರುತ್ತದೆ. ಜೀವನದಲ್ಲಿ ವಿವಿಧ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೀವು ನಿರತರಾಗಿರುತ್ತೀರಿ. ಸಣ್ಣದಾದ ಹಣಕಾಸು ಸಮಸ್ಯೆಯೊಂದು ಈ ವಾರ ದೊಡ್ಡ ಮಟ್ಟದಲ್ಲಿ ಕಾಡಬಹುದು. ಆಪ್ತರೊಬ್ಬರಿಗೆ ನೀವು ಸಹಾಯ ಮಾಡುವ ದಿಕ್ಕಿನಲ್ಲಿ ನಿಮಗೆ ಸಮಸ್ಯೆ ಬರಬಹುದು. ವೃತ್ತೀಪರರಗೆ ಉತ್ತಮ ವಾರ, ನಿಮ್ಮ ಕೆಸಲಗಳು ಸಮಯಕ್ಕೆ ಸರಿಯಾಗಿ ಪೂರ್ಣ ಮಾಡಬಹುದು. ಯಾರೊಂದಿಗೂ ಹಣಕಾಸು ಹಾಗೆ ವ್ಯಾಪಾರ ಸಂಬಂಧ ಒಪ್ಪಂದ, ಮನವಿ, ವ್ಯವಹಾರದಲ್ಲಿ ಭಾಗಿಯಾಗುವಾಗ ಎಚ್ಚರಿಕೆಯಿಂದ ಇರಿ. ಬಹುಕಾಲದ ಆಸೆಯೊಂದನ್ನು ನೀವು ಈಡೇರಿಸಿಕೊಳ್ಳಬಹುದು. ವಾಹನ ಲಾಭದ ನಿರೀಕ್ಷೆ ಇದೆ.

ಕನ್ಯಾ ರಾಶಿ

ಈ ವಾರ ಕನ್ಯಾ ರಾಶಿ ಜನರು ಸಾಕಷ್ಟು ಯಶಸ್ಸನ್ನು ಅನುಭವಿಸುತ್ತಾರೆ. ನೀವು ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಕಾಣುತ್ತೀರಿ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳ ಪೂರ್ಣ ಮಾಡುವಿರಿ. ದೈನಂದಿನ ಆದಾಯದ ಹೆಚ್ಚಳವು ನಿಮ್ಮಲ್ಲಿ ನೆಮ್ಮದಿ ತರಲಿದೆ. ಪೂರ್ವ ನಿಯೋಜಿತ ಕೆಲಸಗಳಲ್ಲಿ ನಿಮಗೆ ಅನಿರೀಕ್ಷಿತ ಗೆಲುವು ಇರಲಿದೆ. ಆಸ್ತಿ, ಕಾನೂನು ಹೋರಾಟ ಸಂಬಂಧವಾಗಿ ಉತ್ತಮ ವಾರವಲ್ಲ. ಕೃಷಿಕರಲ್ಲಿ ಈ ವಾರ ಉತ್ತಮ ಸ್ಥಿತಿ ನೋಡಬಹುದು. ಮುಖ್ಯ ವಿಚಾರವೊಂದಕ್ಕೆ ನೀವು ಬಯಸಿದ್ದ ಹಣ ನೀವು ಪಡೆಯಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಆರ್ಥಿಕ ಸಮಸ್ಯೆಯಿಂದ ಅರ್ಧಕ್ಕೆ ನಿಂತ ಕೆಲಸವೊಂದನ್ನು ಪೂರ್ಣ ಮಾಡವಿರಿ. ಕೌಟುಂಬಿಕ ಸಮಸ್ಯೆಯೊಂದು ತಣ್ಣಗಾಗಲಿದೆ.

ತುಲಾ ರಾಶಿ

ತುಲಾ ರಾಶಿಯವರು ಈ ವಾರದಲ್ಲಿ ತಮ್ಮ ಮುಖ್ಯ ಕೆಲಸಗಳಲ್ಲಿ ಭಾಗಿಯಾಗುತ್ತಾರೆ. ಪ್ರಯಾಣಗಳು ಸಂತೋಷಕ್ಕೆ ಕಾರಣವಾಗಲಿದೆ. ಕುಟುಂಬ ಸದಸ್ಯರು ಇಲ್ಲವೆ ಆಪ್ತರಿಂದ ಧನ ಸಹಾಯ ಪಡೆಯುವ ಬಲವಾದ ಸಾಧ್ಯತೆ ಇದೆ. ಮನೆ ನಿರ್ಮಾಣದಲ್ಲಿ ನೀವು ತೊಡಗಿದ್ದರೆ ಉತ್ತಮ ಕಾಲ. ಪ್ರೀತಿ, ಪ್ರೇಮದ ವಿಚಾರದಲ್ಲಿ ಈ ವಾರ ನೀವು ಅಂದುಕೊಂಡಂತೆ ಇರಲಿದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳ ನಿರ್ಲಕ್ಷಿಸಬೇಡಿ. ಕುಟುಂಬಸ್ಥರೊಂದಿಗನ ಮನಸ್ತಾಪಗಳ ಬಗೆಹರಿಸಿಕೊಳ್ಳು ಪ್ರಯತ್ನಿಸಿ. ಉಳಿತಾಯ, ಹೂಡಿಕೆಯಲ್ಲಿ ನಿಮ್ಮ ಪಾಲುಗಳು ಹೆಚ್ಚಾಗಬಹುದು. ಬ್ಯಾಂಕಿಂಗ್, ಹಣಕಾಸು ವ್ಯವಹಾರಗಳಲ್ಲಿ ನಿಮಗೆ ಉತ್ತಮ ಕಾಲವಾಗಲಿದೆ. ವಾರದ ಅಂತ್ಯದಲ್ಲಿ ಮಾನಸಿಕ ನೆಮ್ಮದಿ ಕಡುವಂತಹ ಘಟನೆಗಳ ನೋಡಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ವಾರದ ಮೊದಲಾರ್ಧ ಸಾಧಾರಣವಾಗಿದ್ದರೆ, ದ್ವಿತೀಯಾರ್ಧವು ಅದೃಷ್ಟದಿಂದ ತುಂಬಿರುತ್ತದೆ. ವಾರದ ಆರಂಭದಲ್ಲಿ, ನೀವು ಕೆಲಸಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳ ಎದುರಿಸಬಹುದು. ಕೆಲಸದಲ್ಲಿ ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಕಡಿಮೆ ಬೆಂಬಲದ ಕಾರಣ ಒತ್ತಡ ಹೆಚ್ಚಾಗಬಹುದು. ವಾರದ ಮಧ್ಯದಿಂದ ಸಂದರ್ಭಗಳಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತದೆ. ಅವಿವಾಹಿತರಲ್ಲಿ ಈ ವಾರವು ಖರ್ಚು ಅಧಿಕವಾಗಲಿದೆ. ಸಮಯಕ್ಕೆ ತಕ್ಕಂತೆ ಕೆಲಸಗಳು ಮುಗಿಯದೆ ಇರಬಹುದು. ಮನೆಗಾಗಿ ವಸ್ತುವೊಂದನ್ನು ಖರೀದಿಸುವ ನಿಮ್ಮ ಬಯಕೆ ಮತ್ತೆ ಮುಂದೂಡಬೇಕಾಗಬಹುದು.

ಧನು ರಾಶಿ

ಧನು ರಾಶಿಯವರಿಗೆ ಈ ವಾರದ ಆರಂಭವು ಸಮಸ್ಯೆಗಳ ತಂದರೆ ವಾರದ ಅಂತ್ಯವು ನಿಮಗೆ ನೆಮ್ಮದಿಕರ ವಾತಾವರಣಕ್ಕೆ ಕಾರಣವಾಗಲಿದೆ. ಯಾವುದೇ ಕೆಲಸದಲ್ಲಿ ಪುನರಾವರ್ತೀತ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಿ. ಹಣಕಾಸು ವಿಚಾರವಾಗಿ ನೀವು ಯಾರನ್ನೂ ಸುಲಭಬಾಗಿ ನಂಬಬೇಡಿ. ವಾರದ ಆರಂಭದಲ್ಲಿ ನೀವು ಹಣದ ಕೊರತೆಯಿಂದಾಗಿ ಕಷ್ಟಪಡಬೇಕಾಗುತ್ತದೆ. ನೀವು ಸಾಲಗಳ ತಿರಿಸಲು ಮುಂದಾಗುವುದು ಉತ್ತಮ. ಕೆಲಸದ ಸ್ಥಳದಲ್ಲಿ ಹೊರೆ ಹೆಚ್ಚಾಗಬಹುದು, ಇದು ಇತ್ತಡ ತರಬಹುದು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ಆರೋಗ್ಯದ ಕಡೆಗಿನ ನಿರ್ಲಕ್ಷ್ಯವು ಖರ್ಚುಗಳಿಗೆ ದಾರಿಯಾಗಬಹುದು.

ಮಕರ ರಾಶಿ

ಈ ವಾರ ಮಕರ ರಾಶಿಯವರಿಗೆ ಅದೃಷ್ಟಶಾಲಿಯಾಗಿರುತ್ತಾರೆ. ವಾರದ ಆರಂಭದಲ್ಲಿ ಯೋಜಿಸಲಾದ ಕೆಲಸ ಸರಿಯಾಗಿ ಪೂರ್ಣಗೊಳ್ಳುವುದನ್ನು ನೀವು ನೋಡುತ್ತೀರಿ. ವಿವಿಧ ಮೂಲಗಳಿಂದ ಆದಾಯ ಗಳಿಸುವ ಅವಕಾಶವಿರುತ್ತದೆ. ನಿಮ್ಮ ಉನ್ನತ ಅಧಿಕಾರಿಗಳು ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳನ್ನು ಮೆಚ್ಚುತ್ತಾರೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ. ನಿಮ್ಮ ಬಹುದಿನಗಳ ಬಯಕೆಯೊಂದನ್ನು ಈಡೇರಿಸಿಕೊಳ್ಳುವಿರಿ. ನೀವು ಬಯಸಿರುವ ಪ್ರವಾಸವೂ ಮತ್ತೆ ಮುಂದೂಡಬಹುದು.

ಕುಂಭ ರಾಶಿ

ಈ ವಾರ ನೀವು ನಿಮ್ಮ ಆರೋಗ್ಯ ಮತ್ತು ಸಂಬಂಧಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ನಿಮ್ಮ ಆರೋಗ್ಯವು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮದ ಫಲಿತಾಂಶಗಳು ಸ್ವಲ್ಪ ತಡವಾಗಬಹುದು, ಮಕ್ಕಳ ಕುರಿತಾದ ಚಿಂತೆ ಹೆಚ್ಚಾಗಬಹುದು. ನೀವು ಬಯಸಿದಂತಹ ಆದಾಯ ಸಿಗದ ಕಾರಣ ವಾರದ ಅಂತ್ಯದಲ್ಲಿ ಒತ್ತಡ ಕಾಡಬಹುದು. ಕುಟುಂಬಸ್ಥರಿಂದ ನಿಮ್ಮ ಮೇಲೆ ಹಣಕಾಸು ಕುರಿತಾದ ಒತ್ತಡ ಇರಬಹುದು.

ಮೀನ ರಾಶಿ

ಈ ವಾರ ಮೀನ ರಾಶಿಯವರಿಗೆ ಏರಿಳಿತಗಳಿಂದ ತುಂಬಿರುತ್ತದೆ. ಈ ವಾರ ಹಣಕಾಸು ವಿಚಾರವಾಗಿ ನೀವು ಬಹಳ ಅನಾನುಕೂಲತೆ ನೋಡುವಿರಿ. ನೀವು ಅಂದುಕೊಂಡ ಪೂರ್ವ ನಿಯೋಜಿತೆ ಕೆಲಸದಕ್ಕೆ ಹಣಕಾಸಿನ ಕೊರತೆ ಕಾಡಬಹುದು. ಆಪ್ತರ ಕಡೆಯಿಂದ ನೆರವು ದೂರಾಗಬಹುದು. ಮೂಳೆ, ಸೊಂಟ, ಕೀಲು ಸಂಬಂಧಿ ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಈ ವಾರ ಸಂಬಂಧಗಳ ವಿಷಯದಲ್ಲಿ ಸಾಧಾರಣವಾಗಿರುತ್ತದೆ. ಕುಟುಂಬದಲ್ಲಿ ವಿವಾದಗಳು ಹೆಚ್ಚಾಗಬಹುದು. ಒಡಹುಟ್ಟಿದವರೊಂದಿಗೆ ಭಿನ್ನಾಭಿಪ್ರಾಯದ ಸಾಧ್ಯತೆ ಇದೆ.

English summary

Weekly Horoscope From July 13 To July 19: Lucky To These Zodiac Signs

Weekly Horoscope From July 13 To July 19: These 12 zodiac get more benefits during this 7 days, read on...
Story first published: Sunday, July 13, 2025, 10:35 [IST]
X
Desktop Bottom Promotion