Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Weekly Horoscope: ಜನವರಿ 25ರಿಂದ ಫೆಬ್ರವರಿ 01ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ರಾಶಿಫಲ
ಜನವರಿ 25ರಿಂದ ಫೆಬ್ರವರಿ 01ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ಮೇಷ ರಾಶಿ
ಈ ವಾರ ಮೇಷ ರಾಶಿಯವರು ತಮ್ಮ ವೇಗದ ಜೀವನದಿಂದ ವಿರಾಮ ತೆಗೆದುಕೊಳ್ಳಬೇಕು. ಈ ವಾರ ನಿಮ್ಮ ಎಲ್ಲಾ ಕೆಲಸಗಳು ದೊಡ್ಡ ಚಿಂತೆಯನ್ನು ತರಬಹುದು. ಅದ್ರಲ್ಲೂ ನೀವು ಬಹಳ ಸಮಯದಿಂದ ಮುಗಿಸದೆ ಬಾಕಿ ಉಳಿಸಿಕೊಂಡಿದ್ದ ಹಲವು ಕೆಲಸಗಳು ಮತ್ತೆ ಮುಂದಕ್ಕೆ ಹೋಗಬಹುದು. ಮಾನಸಿಕ ಒತ್ತಡದ ಕಾರಣದಿಂದ ನೀವು ಬಹಳಷ್ಟು ಕೆಲಸದಲ್ಲಿ ಹಿನ್ನಡೆ ನೋಡಬಹುದು. ಆರ್ಥಿಕ ವಿಚಾರದಲ್ಲಿಯೂ ಈ ಇಡೀ ವಾರದಲ್ಲಿ ನಿಮಗೆ ಉತ್ತಮ ಫಲವಿಲ್ಲ. ಹಣಕಾಸಿನ ಒತ್ತಡ, ವ್ಯವಹಾರದ ಒತ್ತಡದಿಂದ ಸಮಯ ಕಳೆಯುವಿರಿ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಿದರು ಸಹ ಒಂದಿಷ್ಟು ಸಮಸ್ಯೆಗಳ ಎದುರಿಸುವುರಿ. ಆರೋಗ್ಯದ ವಿಚಾರದಲ್ಲಿ ಕೂಡ ನೀವು ಮಿಶ್ರಫಲ ನೋಡುವಿರಿ. ವಾರದ ಅಂತ್ಯದಲ್ಲಿ ನೀವು ಪ್ರಯಾಣಗಳ ಮಾಡುವಿರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಈ ವಾರ ಒತ್ತಡದಿಂದ ಕೂಡಿರಲಿದೆ.
ವೃಷಭ ರಾಶಿ
ಈ ವಾರ ಸಮತೋಲನದಿಂದ ಕೂಡಿರಲಿದೆ. ನಿಮ್ಮ ಕೆಲಸಗಳು ಎಂದಿನಂತೆ ಸಾಗಲಿದೆ. ವಾರದ ಆರಂಭದಲ್ಲಿ ಸಂತಸವಿದೆ. ಆದ್ರೆ ವಾರಾಂತ್ಯದಲ್ಲಿ ಕೆಲವು ವಿಚಾರಗಳು ನಿಮಗೆ ಹೊಸ ಸಮಸ್ಯೆಗಳ ಆಹ್ವಾನಿಸಬಹುದು. ನಿಮ್ಮ ಆರೋಗ್ಯ ಕ್ರಮೇಣ ಸುಧಾರಿಸುತ್ತದೆ, ಆದರೂ ನೀವು ಕೆಲವೊಮ್ಮೆ ಮಾನಸಿಕ ಆತಂಕವನ್ನು ಅನುಭವಿಸಬಹುದು. ನಿಮ್ಮ ಆಲೋಚನೆಗಳನ್ನು ಆಪ್ತ ಅಥವಾ ವಿಶ್ವಾಸಾರ್ಹ ಸ್ನೇಹಿತನೊಂದಿಗೆ ಹಂಚಿಕೊಳ್ಳುವುದು ನಿಮಗೆ ಹಗುರವಾಗಿರಲು ಸಹಾಯ ಮಾಡುತ್ತದೆ. ವ್ಯಾಪಾರಿಗಳು ಈ ವಾರದಲ್ಲಿ ಅನೇಕ ಬಗೆಯ ಸಮಸ್ಯೆಗಳ ಎದುರು ನೋಡುವಿರಿ. ಸ್ವಂತ ಉದ್ಯೋಗದಲ್ಲಿ ಯಥಾಸ್ಥಿತಿ ಇರಲಿದೆ.

ಮಿಥುನ ವಾರ
ಮಿಥುನ ರಾಶಿಯವರು ಈ ವಾರ ಹಲವು ಬಗೆಯ ಅಡ್ಡಿ ಆತಂಕಗಳ ಎದುರಿಸಬಹುದು. ನೀವು ಹಣಕಾಸಿನ ವ್ಯವಹಾರ ಸಂಬಂಧ ಆಪ್ತರೊಬ್ಬರ ಬಳಿ ಭಿನ್ನಮತ ಎದುರಿಸುವಿರಿ. ವಿವಾಹ ಸಂಬಂಧಿ ವಿಚಾರಗಳಲ್ಲಿ ತರಾತುರಿ ನಿರ್ಧಾರಗಳ ತೆಗೆದುಕೊಳ್ಳಬೇಡಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಬಹು ಸಮಯದ ಒಂದು ಕೆಲಸವನ್ನು ಈ ವಾರ ಪೂರ್ಣ ಮಾಡುವಿರಿ. ಕುಟುಂಬದಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಬೆಂಬಲ ಸಿಗಲಿದೆ. ಇದು ಗುರಿ ಸಾಧಿಸಲು ನಿಮಗೆ ಸಹಕಾರಿಯಾಗಲಿದೆ. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತವು ನಿಮಗೆ ಚಿಂತೆ ಹೆಚ್ಚಾಗುವಂತೆ ಮಾಡಲಿದೆ. ವಾಹನ ವಿಚಾರವಾಗಿ ಬಹಳ ಎಚ್ಚರಿಕೆಯಿಂದ ಇರಬೇಕಾದ ವಾರವಾಗಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ವಾರವು ಬಹಳ ಅನುಕೂಲಕರ ಸಮಯವಿದೆ. ನೀವು ಮಾಡಬೇಕಿದ್ದ ಹಲವು ಕೆಲಸಗಳನ್ನು ಪೂರ್ಣ ಮಾಡುವಿರಿ. ಶುಭ ಕಾರ್ಯ ಸಂಬಂಧವಾಗಿ ಮನೆಯಲ್ಲಿ ಚರ್ಚೆಗಳು ನಡೆಯಬಹುದು. ಆಪ್ತರೊಬ್ಬರಿಂದ ನಿಮಗೆ ಶುಭ ಸುದ್ದಿ ಇದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಉತ್ತಮ. ವಾಹನ ಖರೀದಿ ಅಥವಾ ಮಾರಾಟ ವಿಚಾರವನ್ನು ಮುಂದೂಡುವುದು ಉತ್ತಮ. ದಾಂಪತ್ಯ ವಿಚಾರವಾಗಿ ಈ ವಾರವು ಬಹಳ ಕಠಿಣವಾಗಿರಲಿದೆ. ಇಬ್ಬರ ನಡುವಿನ ವಿಚಾರದಲ್ಲಿ ಮನಸ್ತಾಪ ಅಥವಾ ಭಿನ್ನಮತಗಳು ಎದುರಾಗಬಹುದು. ವಾರಾಂತ್ಯದಲ್ಲಿ ಆರೋಗ್ಯ ಸಂಬಂಧಿತ ವಿಚಾರದಲ್ಲಿ ಸಮಸ್ಯೆಗಳು ಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ವಾರ ಉತ್ತಮ ಸಮಯ. ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳಿವೆ. ದುಬಾರಿ ವಸ್ತು ಖರೀದಿ ಸಾಧ್ಯ. ನೀವು ಕುಟುಂಬ ಬೆಂಬಲವನ್ನು ಪಡೆಯುತ್ತೀರಿ. ದೀರ್ಘಕಾಲದ ಕಾಯಿಲೆಗಳು ಸುಧಾರಿಸುತ್ತವೆ, ಆದರೆ ಬದಲಾಗುತ್ತಿರುವ ಹವಾಮಾನದ ಪರಿಣಾಮಗಳನ್ನು ನಿರ್ಲಕ್ಷಿಸಬೇಡಿ. ದುರಾಸೆಯು ಆರ್ಥಿಕ ವಿಷಯಗಳಲ್ಲಿ ಹಾನಿಕಾರಕವಾಗಬಹುದು. ಈ ಅವಧಿಯು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಬಹುದು. ನಿಮ್ಮ ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿ ಅಥವಾ ಸಂತೋಷವನ್ನು ನೀವು ಪಡೆಯಬಹುದು. ಕೆಲಸ ಬದಲಾಯಿಸುವ ನಿಮ್ಮ ಬಯಕೆಗಳಿಗೆ ಮರುಜೀವ ಬರಬಹುದು. ಸಾಲದ ಪ್ರಮಾಣ ಇಳಿಕೆಯಾಗುವ ಲಕ್ಷಣಗಳಿವೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಅನುಕೂಲವಿದೆ. ಅನೇಕ ಕ್ಷೇತ್ರಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಅನುಭವಿಸಬಹುದು. ಅವರು ತಮ್ಮ ವೃತ್ತಿಜೀವನದ ಬಗ್ಗೆ ಸ್ವಲ್ಪ ಒತ್ತಡವನ್ನು ಅನುಭವಿಸಬಹುದು, ಅದು ಅವರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ, ನಿಮ್ಮ ಬಗ್ಗೆ ಹೆಚ್ಚಿನ ಗಮನ ಹರಿಸಿ. ನಿಮ್ಮ ಕುಟುಂಬದಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯಬಹುದು. ನಿಮ್ಮ ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು. ಆಸ್ತಿ ಅಥವಾ ವಾಹನಕ್ಕೆ ಸಂಬಂಧಿಸಿದ ಲಾಭಗಳು ಸಾಧ್ಯ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ ಮತ್ತು ಅವರ ಕಠಿಣ ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.



Click it and Unblock the Notifications