Weekly Horoscope: ಜನವರಿ 25ರಿಂದ ಫೆಬ್ರವರಿ 01ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!

ಜನವರಿ 25ರಿಂದ ಫೆಬ್ರವರಿ 01ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...

ತುಲಾ ರಾಶಿ

ತುಲಾ ರಾಶಿಯವರು ತಮ್ಮ ಕೆಲಸದಲ್ಲಿ ಯಶಸ್ಸಿಗೆ ಅವಕಾಶಗಳನ್ನು ಪಡೆಯುತ್ತಾರೆ. ಹೊಸ ಉದ್ಯಮಗಳು, ವ್ಯವಹಾರಗಳು, ಕೆಲಸಗಳ ಮಾಡಲು ನಮ್ಮಿಂದ ಆರಂಭ ಸಿಗಲಿದೆ. ಉದ್ಯಮಿಗಳಿಗೆ ಈ ವಾರವು ಹಲವು ರೀತಿಯ ಶುಭ ತರಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ನೋಡಬಹುದು. ನಿಮ್ಮ ಮನೆಗಾಗಿ ಮಾಡುವ ವೆಚ್ಚಗಳು ಕಡಿಮೆಯಾಗಬಹುದು. ಸರ್ಕಾರಿ ಉದ್ಯೋಗದಲ್ಲಿರುವ ಮಮದಿಗೆ ಈ ವಾರದಲ್ಲಿ ಬಹಳಷ್ಟು ಒತ್ತಡಗಳಿವೆ. ನೀವು ಮಾಡಬೇಕಿದ್ದ ಕೆಲಸಗಳನ್ನು ಮತ್ತೆ ಮುಂದೂಡದೆ ಮುಗಿಸುವುದು ಉತ್ತಮ. ದಾಂಪತ್ಯ ವಿಚಾರದಲ್ಲಿ ಶುಭ ಶಕುನಗಳಿವೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರಿಗೆ ಈ ವಾರವು ಮಿಶ್ರಫಲದಿಂದ ಕೂಡಿರಲಿದೆ. ನೀವು ಬಹು ಸಮಯದಿಂದ ಮಾಡಲು ಯತ್ನಿಸಿದ್ದ ಕಲಸವನ್ನು ಮಾಡುವಿರಿ. ಪ್ರಯಾಣಗಳಿಂದ ನಿಮಗೆ ಉತ್ತಮ ಫಲಿತಾಂಶಗಳಿವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ಕೆಲಸಗಳನ್ನು ಮಾಡಿ ಮುಗಿಸುವಿರಿ. ಮನೆಯ ವಿಚಾರವಾಗಿದ್ದ ಸಮಸ್ಯೆಯೊಂದು ಈ ವಾರ ದೂರಾಗಲಿದೆ. ಕೆಲಸದ ಸ್ಥಳದಲ್ಲಿನ ಒತ್ತಡವೊಂದು ನಿವಾರಣೆಯಾಗಲಿದೆ. ವಾರ ಅಂತ್ಯದಲ್ಲಿ ನಿಮ್ಮ ವ್ಯವಹಾರ ಸಂಬಂಧವಾಗಿ ಹೊಸ ಆಲೋಚನೆಗಳು ಬರಲಿವೆ. ಅನೇಕರಲ್ಲಿ ಈ ವಾರ ಅದೃಷ್ಟದಿಂದ ತುಂಬಿರಲಿದೆ. ಹೀಗಾಗಿ ನೀವು ಮಾಡುವ ಕೆಲಸಗಳು ಯಶಸ್ಸು ಪಡೆಯಬಹುದು.

Weekly Horoscope From January 25 To February 01

ಧನು ರಾಶಿ

ಧನು ರಾಶಿಯವರು ಈ ವಾರ ಅನುಕೂಲಕರ ದಿನಗಳ ನೋಡುವಿರಿ. ನಿಮ್ಮ ಸಂಬಳ, ವೇತನ ಕುರಿತಾದ ವಿಚಾರದಲ್ಲಿ ಶುಭವಿದೆ. ಹೊಸ ವಿಷಯಗಳನ್ನು ಕಲಿಯುವ ನಿಮ್ಮ ಬಯಕೆ ಈಡೇರಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ. ಕೌಟುಂಬಿಕ ವಿಚಾರವಾಗಿ ಈ ವಾರ ನಿಮಗೆ ನೆಮ್ಮದಿ ತರಲಿದೆ. ಬಹುಸಮಯದ ಕುಟುಂಬದ ಬೇಡಿಕೆಯೊಂದು ಈ ವಾರ ಪೂರ್ಣವಾಗಲಿದೆ. ಮಕ್ಕಳ ಆರೋಗ್ಯ ಸಂಬಂಧಿತ ವಿಚಾರವಾಗಿ ನೀವು ಆಸ್ಪತ್ರೆಗೆ ತೆರಳುವ ಸಾಧ್ಯತೆಗಳಿವೆ. ಆದಾಯಗಳಿಸುವ ಹೊಸ ಮೂಲವನ್ನು ಕಂಡುಕೊಳ್ಳಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ.

ಮಕರ ರಾಶಿ

ಈ ವಾರ ಮಕರ ರಾಶಿ ಜನರಿಗೆ ಉತ್ತಮವಾಗಿದೆ. ಸ್ವಂತ ಉದ್ಯಮಿಗಳಿಗೆ ಈ ವಾರದಂದು ದೊಡ್ಡ ಲಾಭವಿದೆ. ಕೆಲಸದ ಹೊರೆ ಕಡಿಮೆಯಾಗಲಿದೆ. ಕುಟುಂಬದೊಂದಿನ ನಿಮ್ಮ ಸಂಬಂಧ ಗಟ್ಟಿಯಾಗಲಿದೆ. ದಾಂಪತ್ಯದಲ್ಲಿ ಸಂತಸ ತರುವ ವಾರ. ಆರ್ಥಿಕ ಸ್ಥಿತಿ ಅನುಕೂಲಕರವಾಗುತ್ತಿದೆ. ಮಾನಸಿಕವಾಗಿ ನೀವು ನೆಮ್ಮದಿ ಅನುಭವಿಸಬಹುದು. ವಾರದ ಅಂತ್ಯದಲ್ಲಿ ನೀವು ಪ್ರಯಾಣ ಮಾಡಬೇಕಾಗಿ ಬರಬಹುದು. ಮನೆಗಾಗಿ ಖರ್ಚುಗಳ ಮಾಡುವಿರಿ. ವಾಹನ ಸಂಬಂಧವಾಗಿ ಇದ್ದ ತೊಡಕು ನಿವಾರಣೆಯಾಗಲಿದೆ.

ಕುಂಭ ರಾಶಿ

ಈ ವಾರ ಕುಂಭ ರಾಶಿ ಜನರಿಗೆ ಅತ್ಯಂತ ಶುಭ. ವೇತನ, ಬಡ್ತಿ, ವರ್ಗಾವಣೆ ವಿಚಾರವಾಗಿ ನಿಮಗೆ ಖಚಿತ ಮಾಹಿತಿ, ಸಂತಸದ ವಿಚಾರ ತಿಳಿಯಲಿದೆ. ಹೊಸ ಆದಾಯಗಳು ಬರಲಿವೆ. ಬಹಳ ಸಮಯದ ಹಣವೊಂದು ನಿಮ್ಮ ಕೈ ಸೇರಲಿದೆ. ಹೂಡಿಕೆ ಸಂಬಂಧವಾಗಿ ನೀವು ಆಲೋಚಿಸಬಹುದು. ಸಂಬಂಧಿಕರ ಭೇಟಿಯು ಸಂತಸ ತರಲಿದೆ. ಉದ್ಯಮಿಗಳಿಗೆ ಹೊಸ ಯೋಜನೆಗಳನ್ನು ರೂಪಿಸಲು ಮತ್ತು ಗುರಿಗಳನ್ನು ಹೊಂದಿಸಲು ಅವಕಾಶವಿದೆ. ಮಧುಮೇಹಿಗಳು, ಉಸಿರಾಟ ಸಮಸ್ಯೆಯಂತಹ ಅನಾರೋಗ್ಯ ಹೊಂದಿರುವ ವ್ಯಕ್ತಿಗಳು ಜಾಗರೂಕರಾಗಿಬೇಕಿದೆ. ಕ್ರೀಡಾ ವಲಯದಲ್ಲಿರುವ ಮಂದಿಗೆ ಬಹಳ ಉತ್ತಮ ವಾರವಿದು.

ಮೀನ ರಾಶಿ

ಮೀನ ರಾಶಿಯವರು ಈ ವಾರ ಮಿಶ್ರಫಲ ನೋಡುವಿರಿ. ನಿಮ್ಮ ಹಣಕಾಸಿನ ಒತ್ತಡಗಳು ಕಡಿಮೆಯಾಗುತ್ತದೆ. ಸಾಲದ ಪ್ರಮಾಣ ಇಳಿಕೆಯಾಗಲಿದೆ. ವಾರದ ಅಂತ್ಯದಲ್ಲಿ ನಿಮ್ಮ ಆರೋಗ್ಯ ಸುಧಾರಣೆಯಾಗಲಿದೆ. ಕೆಲಸದ ವಿಚಾರವಾಗಿ ನೀವು ಕೈಗೊಳ್ಳುವ ಪ್ರಯಾಣಗಳು ಫಲ ನೀಡಲಿವೆ. ಮನೆಗಾಗಿ ನೀವು ಬಹು ಸಮಯದಿಂದ ಮಾಡಬೇಕಿದ್ದ ಕೆಲಸವನ್ನು ಪುರ್ಣಗೊಳಿಸುವಿರಿ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ವ್ಯಾಪಾರದಲ್ಲಿ ಶುಭವಿದೆ. ಆದಾಯದಲ್ಲಿನ ಹೆಚ್ಚಳದಿಂದ ಮಾನಸಿಕ ನೆಮ್ಮದಿ ಪಡೆಯಬಹುದು. ಗೃಹಿಣಿಯರಲ್ಲಿ ಈ ವಾರ ಧನಲಾಭ ನೋಡಬಹುದು.

English summary

Weekly Horoscope From January 25 To February 01: Lucky 6 Zodiac Signs In Kannada

Weekly Horoscope From January 25 To February 01: These zodiac get more benefits during this 7 days, read on...
Story first published: Saturday, January 24, 2026, 12:14 [IST]
X
Desktop Bottom Promotion