Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ವಾರ ಭವಿಷ್ಯ: ಈ ವಾರದ (ಜನವರಿ19-25) ರಾಶಿಫಲ ಪ್ರಕಾರ ದ್ವಾದಶ ರಾಶಿಗಳ ರಾಶಿಫಲ
ಈ ವಾರದ (ಜನವರಿ 19-25) ಭವಿಷ್ಯ ನೋಡುವುದಾದರೆ ಕೆಲ ರಾಶಿಗಳಿಗೆ ಅದ್ಭುತವಾಗಿದೆ, ಇನ್ನು ಕೆಲವರಿಗೆ ಸವಾಲಿನ ಸಮಯ. ಈ ವಾರ ಯಾವ ರಾಶಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಈ ವಾರ ನಿಮಗೆ ತುಂಬಾನೇ ಒತ್ತಡ ಅನಿಸಬಹುದು, ಇನ್ನು ಪ್ರತಿಕೂಲ ಸಂದರ್ಭದಲ್ಲಿ ತಾಳ್ಮೆಯಿಂದ ನಡೆದುಕೊಳ್ಳುವಂತೆ ಸಲಹೆ ನೀಡಲಾಗುವುದು, ಏನಾದರೂ ಸಹಾಯ ಬೇಕೆಂದರೆ ಕೇಳಲು ಹಿಂಜರಿಯಬೇಡಿ. ನಿಮಗೆ ವಹಿಸಿರುವ ಕೆಲಸವನ್ನು ಹೆಚ್ಚು ಶ್ರಮ ಹಾಕಿ ಪೂರ್ಣಗೊಳಿಸಲು ಪ್ರಯತ್ನಿಸಿ.

ವೃಷಭ ರಾಶಿ
ಈ ವಾರ ಗ್ರಹಗಳ ಸ್ಥಾನವು ನಿಮಗೆ ಅನುಕೂಲಕರವಾಗಿದೆ,ಹಾಗಾಗಿ ವೃತ್ತಿ ಜೀವನದಲ್ಲಿ ತುಂಬಾನೇ ಅನುಕೂಲಕರವಾದ ಫಲಿತಾಂಶ ಪಡೆಯುತ್ತೀರಿ. ಇನ್ನು ಈ ವಾರ ಆರ್ಥಿಕವಾಗಿ ನಿಮಗೆ ಪ್ರಯೋಜನಕಾರಿಯಾಗಿದೆ, ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ.
ಮಿಥುನ ರಾಶಿ
ಕೆಲಸದ ಜಾಗದಲ್ಲಿ ನಿಮ್ಮ ಐಡಿಯಾಗಳನ್ನು ಮೆಚ್ಚಿಕೊಳ್ಳಬಹುದು, ನಿಮ್ಮ ವೃತ್ತಿ ಕೌಶಲ್ಯಕ್ಕೆ ಉತ್ತಮ ಮನ್ನಣೆ ಸಿಗಲಿದೆ. ಅಲ್ಲದೆ ಈ ವಾರ ಸಿಕ್ಕ ಅವಕಾಶಗಳನ್ನು ಬಿಡಬೇಡಿ, ಅದನ್ನು ಉತ್ತಮವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ, ಇದರಿಂದ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ.
ಕರ್ಕ ರಾಶಿ
ನಿಮ್ಮ ಭಾವನೆಗಳನ್ನು ಸಂಗಾತಿಯ ಜೊತೆ ಹಂಚಿಕೊಳ್ಳಲು ಹಿಂಜರಿಯಬೇಡಿ,ಈ ವಾರ ಭಾವನಾತ್ಮಕವಾಗಿ ಸ್ವಲ್ಪ ದುರ್ಬಲರಾಗಿರುತ್ತೀರಿ, ನಿಮ್ಮ ಮನಸ್ಸನ್ನು ಆಪ್ತರ ಜೊತೆ ತೆರೆದುಕೊಂಡರೆ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಆರ್ಥಿಕವಾಗಿ ಈ ದಿನ ಉತ್ತಮವಾಗಿರಲಿದೆ.
ಸಿಂಹ ರಾಶಿ
ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ, ಪ್ರೀತಿಯನ್ನು ಹೇಳಿಕೊಳ್ಳಬೇಕೆಂದಿದ್ದರೆ ಈ ವಾರ ನಿಮಗೆ ಅನುಕೂಲಕರವಾಗಿದೆ. ಕೆಲಸ ಕಾರ್ಯದ ಕಡೆಗೆ ಗಮನಹರಿಸಿ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಈ ಅವಧಿಯಲ್ಲಿ ದೂರದ ಪ್ರಯಾಣ ಒಂಟಿಯಾಗಿ ಮಾಡುವುದನ್ನು ತಪ್ಪಿಸಿ, ಶನಿವಾರದ ದಿನ ನಿಮಗೆ ಅನುಕೂಲಕರವಾಗಿದೆ.
ಕನ್ಯಾ ರಾಶಿ
ಈ ವಾರ ಅನುಕೂಲಕರವಾಗಿದೆ, ವೃತ್ತಿ ಬದುಕಿನಲ್ಲಿ ಹೊಸ ಅವಕಾಶಗಳು ದೊರೆಯಲಿದೆ. ಮಕ್ಕಳ ಕಡೆಯಿಂದ ಖುಷಿಯ ಸುದ್ದಿ ಪಡೆಯುತ್ತೀರಿ. ಭಾನುವಾರ ಖರ್ಚು ಹೆಚ್ಚು ಬರಬಹುದು, ಉಳಿದ ದಿನಗಳು ಆರ್ಥಿಕವಾಗಿ ಅನುಕೂಲಕರವಾಗಿರಲಿದೆ, ಸಂಬಂಧದ ದೃಷ್ಟಿಯಿಂದ ನೋಡುವುದಾದರೆ ಈ ವಾರ ನಿಮಗೆ ಅನುಕೂಲಕರವಾಗಿದೆ.
ತುಲಾ ರಾಶಿ
ವೃತ್ತಿ ಹಾಗೂ ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡಲು ಸಾಧ್ಯವಾಗಲಿದೆ. ಕೆಲಸದ ಒತ್ತಡ ಅಧಿಕವಿರಲಿದೆ, ಆದರೆ ಸಹೋದ್ಯೋಗಿಗಳ ಸಹಾಯದಿಂದ ಆ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸಲು ಸಾಧ್ಯವಾಗಲಿದೆ.ಆರ್ಥಿಕವಾಗಿ ಈ ವಾರ ಅನುಕೂಲಕರವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ಈ ವಾರ ಪ್ರಮುಖ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಈ ವಾರ ನಿಮ್ಮ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ಆರ್ಥಿಕ ದೃಷ್ಟಿಯಿಂದ ಈ ವಾರ ನಿಮಗೆ ಅನುಕೂಲಕರವಾಗಿದೆ. ವಾರದ ಮಧ್ಯದಲ್ಲಿ ಕೆಲ ಅನಗ್ಯತ ಖರ್ಚು ಬರಬಹುದು. ಕೆಲಸದ ದೃಷ್ಟಿಯಿಂದ ಗುರುಆರ, ಶುಕ್ರವಾರ, ಶನಿವಾರದ ದಿನ ನಿಮಗೆ ಅತ್ಯಂತ ಅನುಕೂಲಕರವಾಗಿದೆ.
ಧನು ರಾಶಿ
ಈ ವಾರ ನಿಮ್ಮ ಪ್ರಮುಖ ಸಮಸ್ಯೆಗೆ ಪರಿಹಾರ ಸಿಗಲಿದೆ. ವಿದೇಶ ಪ್ರಯಾಣ ಮಾಡುವವರು ಕೆಲ ಅಡೆತಡೆ ಎದುರಿಸಬಹುದು. ಈ ವಾರ ಕುಟುಂಬಕ್ಕಾಗಿ ಹೆಚ್ಚು ಹಣ ಖರ್ಚಾಗಬಹುದು. ಕುಟುಂಬದಲ್ಲಿ ಅನಗ್ಯತ ಸಮಸ್ಯೆ ಬರಬಹುದು, ಆದರೆ ವಾರದ ಕೊನೆಯಲ್ಲಿ ಎಲ್ಲವೂ ಸರಿಯಾಗಲಿದೆ.
ಮಕರ ರಾಶಿ
ಈ ವಾರ ನಿಮಗೆ ಅನುಕೂಲಕರವಾಗಿದೆ, ಧಾರ್ಮಿಕ ಕಾರ್ಯಗಳ ಕಡೆಗೆ ಒಲವು ಹೆಚ್ಚಾಗಲಿದೆ. ಆರ್ಥಿಕವಾಗಿ ತುಂಬಾ ಉತ್ತಮವಾಗಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ವೃತ್ತಿ ಬದುಕು ಕೂಡ ಚೆನ್ನಾಗಿರಲಿದೆ, ಒಟ್ಟಿನಲ್ಲಿ ಈ ವಾರ ನಿಮಗೆ ಅನುಕೂಲಕರವಾಗಿರಲಿದೆ.
ಕುಂಭ ರಾಶಿ
ವಾರದ ಆರಂಭ ಸ್ವಲ್ಪ ಸವಾಲಿನಿಂದ ಕೂಡಿರಬಹುದು, ನಿಮ್ಮ ಸ್ಪರ್ಧಿಗಳಿಂದಾಗಿ ಸಮಸ್ಯೆ ಎದುರಿಸಬಹುದು, ಆದರೆ ನಂತರ ಎಲ್ಲವೂ ಸರಿಯಾಗಲಿದೆ. ವ್ಯಾಪಾರಿಗಳು ಧನ ಲಾಭ ಪಡೆಯಬಹುದು. ಕುಟುಂಬದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ. ಮಂಗಳವಾರ ಹಾಗೂ ಬುಧವವಾರ ಶುಭ ದಿನವಾಗಿದೆ.
ಮೀನ ರಾಶಿ
ಈ ವಾರ ಆಸ್ತಿ ಸಂಬಂಧಿತ ಸಮಸ್ಯೆ ಇದ್ದರೆ ಅದು ಬಗೆಹರಿಯುವ ಸೂಚನೆಯಿದೆ. ವಾರದ ಮಧ್ಯದಲ್ಲಿ ಖರ್ಚು ಸ್ವಲ್ಪ ಹೆಚ್ಚಿರಬಹುದು, ಕೆಲಸದಲ್ಲಿಯೂ ಕೆಲ ಸವಾಲುಗಳು ಬರಬಹುದು, ಆದರೆ ಗುರುವಾರದ ನಂತರ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು, ಕೆಲಸದಲ್ಲಿ ಉತ್ತಮ ಫಲ ಪಡೆಯಲು ಸಾಧ್ಯವಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications