Latest Updates
-
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ
Weekly Horoscope: ಜನವರಿ 18 ರಿಂದ ಜನವರಿ 25ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಜನವರಿ 18 ರಿಂದ ಜನವರಿ 25ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ತುಲಾ ರಾಶಿ
ಈ ವಾರ ತುಲಾ ರಾಶಿಯವರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಉತ್ತಮವಾಗಿರಲಿದೆ. ಈ ವಾರ ಷೇರು ಮಾರುಕಟ್ಟೆ, ಷೇರುಗಳು ಮತ್ತು ರಿಯಲ್ ಎಸ್ಟೇಟ್ ಮೂಲಕ ಉತ್ತಮ ಹಣ ಪಡೆಯುವ ಅವಕಾಶ ಇರಲಿದೆ. ನಿಮ್ಮ ಉಳಿತಾಯದಲ್ಲಿ ಏರಿಕೆ ನೋಡಬಹುದು. ಹಾಗೆ ಹೂಡಿಕೆಗಳು ಧನಾತ್ಮಕವಾಗಿರಲಿದೆ. ಪಾಲುದಾರಿಕೆ ವ್ಯವಹಾರಗಳು ಲಾಭದಾಯಕದತ್ತ ತಿರುಗಲಿವೆ. ವಿದ್ಯಾರ್ಥಿಗಳು ಈ ಸಮಯದಲ್ಲಿ ಶುಭ ಸುದ್ದಿಗಳ ಕೇಳಬಹುದು. ಆಪ್ತರೊಬ್ಬರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಬಹುದು. ಹಲವು ಪ್ರಕಾರವಾಗಿ ನಿಮಗೆ ಹಣ ಹರಿದು ಬರುವ ಸಾಧ್ಯತೆ ಇದೆ. ಹೊಸ ಆದಾಯ ಮೂಲವನ್ನು ಹುಡುಕಿಕೊಳ್ಳಬಹುದು. ವಾರದ ಅಂತ್ಯದಲ್ಲಿ ಅನಾರೋಗ್ಯ ಕಾಡಬಹುದು.
ವೃಶ್ಚಿಕ ರಾಶಿ
ಈ ವಾರ ನಿಮಗೆ ಒಂದು ಪ್ರಮುಖ ತಿರುವು ಪಡೆಯುವ ಸಾಧ್ಯತೆ ಇದೆ. ನಿಮ್ಮ ಆತ್ಮವಿಶ್ವಾಸ ಮತ್ತು ಕೆಲಸದಲ್ಲಿ ನಿಮ್ಮ ಪ್ರಮಾಣಿಕತೆಯ ಕಾರಣದಿಂದ ಪ್ರಶಂಸೆಗಳ ಕೇಳಬಹುದು. ನಿಮ್ಮ ಕೌಶಲಗಳು, ಸಂವಹನದಿಂದ ಹಲವು ಸಮಸ್ಯೆಗಳ ಬಗೆಹರಿಸಲಿದ್ದೀರಿ. ಆಪ್ತರೊಬ್ಬರೊಂದಿಗೆ ಪ್ರಯಾಣ, ಪ್ರವಾಸ ಮಾಡುವ ಸಮಯವೂ ಇದಾಗಿರಲಿದೆ. ಭವಿಷ್ಯದ ಯೋಜನೆಗಳಿಗೆ ಹಣ ಒಟ್ಟು ಮಾಡುವ ಮೂಲಕ ಒಂದಿಷ್ಟು ಲಾಭಕರ ಕೆಲಸಗಳಲ್ಲಿ ನೀವು ಭಾಗಿಯಾಗುತ್ತೀರಿ. ವಾರದ ಅಂತ್ಯದಲ್ಲಿ ಮನೆಯ ಸದಸ್ಯರೊಬ್ಬರಲ್ಲಿ ಅನಾರೋಗ್ಯ ನೋಡಬಹುದು. ನಿಮ್ಮ ಖರ್ಚುಗಳು ಹೆಚ್ಚಾಗುವ ಸಮಯವೂ ಇದೆ. ವಾಹನ ಕುರಿತ ಖರ್ಚುಗಳಿವೆ.

ಧನು ರಾಶಿ
ಧನು ರಾಶಿಯವರಿಗೆ ಈ ವಾರ ತುಂಬಾ ಅದೃಷ್ಟಶಾಲಿಯಾಗಿರಬಹುದು. ನಿಮ್ಮ ಹೂಡಿಕೆ ಲಾಭದಾಯಕವಾಗಿ ನಿಮ್ಮ ಕೈ ಸೇರಬಹುದು. ಕುಟುಂಬದಲ್ಲಿದ್ದ ಹಣಕಾಸು ಒತ್ತಡವೊಂದು ನಿವಾರಣೆಯಾಗಲಿದೆ. ಮಕ್ಕಳ ಕುರಿತಾಗಿ ನಮ್ಮಲ್ಲಿ ಇದ್ದಂತಹ ದೊಡ್ಡ ಒತ್ತಡವೊಂದು ದೂರಾಗಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಕೆಲಸವೊಂದಕ್ಕೆ ಕುಟುಂಬಸ್ಥರ ಬೆಂಬಲ ಪಡೆಯುವಿರಿ. ವಾರದ ಅಂತ್ಯದಲ್ಲಿ ನೀವು ಕೆಲಸವೊಂದರ ಕುರಿತಾಗಿ ಪ್ರಯಾಣ ಮಾಡುವಿರಿ. ಅನೇಕರು ಈ ವಾರ ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗಬೇಕಾಗುತ್ತದೆ. ಮನೆಯಲ್ಲಿ ಶುಭ ಕಾರ್ಯ ಸಂಬಂಧವಾಗಿ ನಿರ್ಧಾರವೊಂದನ್ನು ತೆಗೆದುಕೊಳ್ಳುವಿರಿ.
ಮಕರ ರಾಶಿ
ಮಕರ ರಾಶಿಯವರಿಗೆ ವಾರದ ಆರಂಭವು ಸ್ವಲ್ಪ ಸವಾಲಿನದ್ದಾಗಿರಬಹುದು. ಕೌಟುಂಬಿಕ ಉದ್ವಿಗ್ನತೆಗಳು ಉಂಟಾಗಬಹುದು. ಹಣಕಾಸಿನ ಪರಿಸ್ಥಿತಿಯೂ ಪ್ರತಿಕೂಲ ಪರಿಣಾಮ ಬೀರಬಹುದು. ಆದಾಗ್ಯೂ, ವಾರದ ಅಂತ್ಯದ ವೇಳೆಗೆ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ವಾಣಿಜ್ಯವು ಹೊಸ ಒಪ್ಪಂದಗಳಿಗಾಗಿ ಎದುರು ನೋಡುತ್ತಿದೆ.ಇದರ ಮೂಲಕ ನೀವು ಗಮನಾರ್ಹ ಲಾಭವನ್ನು ಗಳಿಸಬಹುದು. ನಿಮ್ಮ ಆತ್ಮವಿಶ್ವಾಸವೂ ವೇಗವಾಗಿ ಹೆಚ್ಚಾಗಬಹುದು. ತಂದೆ ತಾಯಿಯ ಜೊತೆಗೆ ನೀವು ಮನಸ್ತಾಪಗಳ ಹೊಂದಿದ್ದರೆ ಈ ಸಮಯದಲ್ಲಿ ಬಗೆಹರಿಯಲಿದೆ. ದೇವಾಲಯ, ಪುಣ್ಯ ಕ್ಷೇತ್ರ ಭೇಟಿಯ ಸಾಧ್ಯತೆ ಇರಲಿದೆ. ಮನೆಗಾಗಿ ನೀವು ದುಬಾರಿ ಖರ್ಚುಗಳ ಮಾಡಬೇಕಾಗುತ್ತದೆ.
ಕುಂಭ ರಾಶಿ
ಈ ವಾರ ಕುಂಭ ರಾಶಿಯ ಜನರಿಗೆ ಆರಾಮದಾಯಕವಾಗಿರಲಿದೆ. ವಿದೇಶದಲ್ಲಿ ವ್ಯಾಪಾರ ವ್ಯವಹಾರದ ಕನಸು ಕಂಡವರಿಗೆ ಈ ವಾರ ಧನಾತ್ಮಕವಾಗಿರಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯವಾಗಬಹುದು. ವಾರದ ಮಧ್ಯದಲ್ಲಿ ಯಾವುದೇ ರೀತಿಯ ಹೂಡಿಕೆ ಮಾಡುವುದನ್ನು ತಪ್ಪಿಸಿ. ಇದು ನಷ್ಟ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ವಾಹನ ಲಾಭವಿದೆ. ಹಲವು ಸಮಯದಿಂದ ಹಣಕಾಸಿನ ಸಮಸ್ಯೆಯಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸವನ್ನು ಪೂರ್ಣ ಮಾಡುವಿರಿ. ವೃತ್ತಿ ಸಂಬಂಧಿತ ವಿಚಾರಗಳು ತೃಪ್ತಿದಾಯಕವಾಗಿರಲಿದೆ.
ಮೀನ ರಾಶಿ
ಈ ವಾರ ಮೀನ ರಾಶಿಯ ಜನರಿಗೆ ಸವಾಲುಗಳಿಂದ ತುಂಬಿರಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಪ್ರತಿಕೂಲ ಪರಿಣಾಮ ಬೀರಬಹುದು. ಹಲವು ಕೆಲಸಗಳು ಹಣಕಾಸಿನ ಸಮಸ್ಯೆಯ ಕಾರಣದಿಂದಾಗಿ ನೆರವೇರದೆ ಇರಬಹುದು. ಆರ್ಥಿಕವಾಗಿ ನಿಮ್ಮ ಖರ್ಚುಗಳು ಹೆಚ್ಚಾಗಲಿದೆ. ಹೆಚ್ಚುವರಿ ಕೆಲಸಗಳು ನಿಮಗೆ ಮತ್ತಷ್ಟು ಜವಾಬ್ದಾರಿಗಳ ತರಲಿವೆ. ಸ್ವಂತ ಉದ್ಯೋಗದಲ್ಲಿ ನಿಮಗೆ ಬಹಳಷ್ಟು ಕೆಲಸಗಳ ಮಾಡುವುದು ಬಾಕಿ ಉಳಿಯಲಿದೆ. ಆರೋಗ್ಯ ವಿಚಾರವಾಗಿ ಈ ವಾರದಲ್ಲಿ ಚಿಂತೆಗಳು ಕಾಡಬಹುದು. ಪ್ರಯಾಣಗಳ ಮಾಡುವಾಗ ಎಚ್ಚರಿಕೆಯಿಂದ ಇರಬೇಕಿದೆ.



Click it and Unblock the Notifications












