Weekly Horoscope: ಜನವರಿ 18 ರಿಂದ ಜನವರಿ 25ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!

ಜನವರಿ 18 ರಿಂದ ಜನವರಿ 25ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...

ಮೇಷ ರಾಶಿ

ಈ ವಾರ ಮೇಷ ರಾಶಿ ಜನರಲ್ಲಿ ವಾರದ ಆರಂಭವು ಅತ್ಯಂತ ಶ್ರಮದಾಯಕವಾಗಬಹುದು. ಉದ್ಯೋಗದಲ್ಲಿರುವ ಮಂದಿಗೆ ಸಾಕಷ್ಟು ಒತ್ತಡಗಳು ಎದುರಾಗಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರ ಸಾಕಷ್ಟು ಉತ್ತಮವಾಗಿರುತ್ತದೆ. ಸೃಜನಶೀಲ ವಿಚಾರಗಳು ವೇಗವಾಗಿ ಹೆಚ್ಚಾಗಬಹುದು, ಇದು ಕೆಲಸದಲ್ಲಿ ಗಮನಾರ್ಹ ಬೆಳವಣಿಗೆಗೆ ಕಾರಣವಾಗಬಹುದು. ವಾರದ ಮಧ್ಯಂತರದಲ್ಲಿ ನಿಮಗೆ ಹಣಕಾಸಿನ ವಿಚಾರವಾಗಿ ಹಲವು ಆಲೋಚನೆಗಳು ಬರಲಿವೆ. ಹಣಕಾಸು ವಿಚಾರವಾಗಿ ಕುಟುಂಬದೊಂದಿಗೆ ಇದ್ದಂತಹ ಮನಸ್ತಾಪಗಳು ದೊಡ್ಡದಾಗಬಹುದು. ಉದ್ಯೋಗದಲ್ಲಿ ಇದ್ದ ಒತ್ತಡ ಮತ್ತಷ್ಟು ಹೆಚ್ಚುವುದು ನಿಮ್ಮ ಮಾನಸಿಕ ನೆಮ್ಮದಿ ಹಾಳು ಮಾಡಬಹುದು. ಆಪ್ತರಿಂದ ನಿಮಗೆ ಬರಬೇಕಿದ್ದ ವಸ್ತುವಳು ಮತ್ತಷ್ಟು ವಿಳಂಬವಾಗಬಹುದು. ಪ್ರೇಮ ಪ್ರಕರಣ, ದಾಂಪತ್ಯದಲ್ಲೂ ಮಿಶ್ರಫಲ ನೋಡಬಹುದು.

ವೃಷಭ ರಾಶಿ

ವೃಷಭ ರಾಶಿಯವರು ಈ ವಾರ ಅನುಕೂಲಕರ ದಿನಗಳ ನೋಡುವಿರಿ. ನಿಮ್ಮ ಕೆಲಸಗಳು ಸರಾಗವಾಗಿ ನಡೆಯಲಿವೆ. ಕೃಷಿ ಸಂಬಂಧಿತ ವಿಚಾರಗಳಲ್ಲಿ ಗೆಲುವಿದೆ. ಬಹುಸಮಯದ ಬಾಕಿ ಉಳಿದ ಕೆಲಸಗಳು ಈ ಸಮಯದಲ್ಲಿ ಮಾಡಿ ಮುಗಿಸುವಿರಿ. ವಾರದ ಆರಂಭದಲ್ಲಿ ಹಣಕಾಸು ವಿಚಾರದಲ್ಲಿ ಒತ್ತಡಗಳಿವೆ. ಅದ್ರೆ ಮಧ್ಯಂತರದಿಂದ ನಿಮ್ಮಲ್ಲಿ ಸುಧಾರಣೆಗಳ ನೋಡಬಹುದು. ಉತ್ತಮ ವ್ಯಾಪಾರ ಅವಕಾಶಗಳನ್ನು ಸಹ ಪಡೆಯಬಹುದು. ನಿಮ್ಮ ಪ್ರೇಮ ಜೀವನವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ನಿಮ್ಮ ಅದೃಷ್ಟ ಮನೆಯಲ್ಲಿ ಶುಕ್ರನ ಸ್ಥಾನವು ಹೊಸ ಉದ್ಯೋಗಾವಕಾಶಗಳನ್ನು ತೆರೆಯಬಹುದು. ಆಪ್ತರಿಂದ ನಿಮಗೆ ಶುಭ ಸುದ್ದಿ ಬರಲಿವೆ. ನಿರುದ್ಯೋಗಿಗಳು ಈ ವಾರದಂದು ಉತ್ತಮ ಅವಕಾಶಗಳ ಪಡೆಯಬಹುದು.

Weekly Horoscope From January 18 To January 25

ಮಿಥುನ ರಾಶಿ

ಈ ವಾರ ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಅನಿರೀಕ್ಷಿತ ಆರ್ಥಿಕ ಲಾಭಗಳು, ಅವಕಾಶಗಳು ಮತ್ತು ಅವಕಾಶಗಳು ತರಲಿದೆ. ಗುರು ಈ ರಾಶಿಯ ಲಗ್ನ ಮನೆಯಲ್ಲಿರುತ್ತಾನೆ. ಇದು ನಿಮಗೆ ಹೊಸ ಉದ್ಯೋಗ ಅಥವಾ ಬಡ್ತಿ ಸೇರಿದಂತೆ ಹಲವು ವೃತ್ತಿಪರ ಅವಕಾಶಿಗಳಿಗೆ ಕಾರಣವಾಗಬಹುದು. ನಿಮ್ಮ ಅನಗತ್ಯ ವೆಚ್ಚಗಳು ಕಡಿಮೆಯಾಗುವುದು ನೋಡಬಹುದು. ವಾರದ ಅಂತ್ಯದಲ್ಲಿ ನೀವು ಮಾಡಬೇಕಿದ್ದ ಹಲವು ಕೆಲಸಗಳನ್ನು ಮಾಡುವುದು ಬಾಕಿ ಉಳಿಸಿಕೊಳ್ಳಬಹುದು. ಕೆಲಸಗಳಿಗಾಗಿ ನೀವು ಪ್ರಯಾಣಗಳ ಮಾಡಬೇಕಾಗುತ್ತದೆ. ಆರೋಗ್ಯ ವಿಚಾರದಲ್ಲಿ ನಿಮಗೆ ಶುಭವಿದೆ. ಅನಗತ್ಯ ಪ್ರಯಾಣಗಳನ್ನು ಮುಂದೂಡುವುದು ಉತ್ತಮವಾಗಿದೆ.

ಕರ್ಕಾಟಕ ರಾಶಿ

ವಾರದ ಆರಂಭವು ಕರ್ಕ ರಾಶಿಯವರಿಗೆ ಮಿಶ್ರಫಲಗಳ ತರಲಿದೆ. ನೀವು ಮಾನಸಿಕ ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಮಂಗಳ ಮತ್ತು ಸೂರ್ಯನ ಸಂಯೋಗವು ನಿಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ವಾರದ ಮಧ್ಯದಲ್ಲಿ ಷೇರು ಮಾರುಕಟ್ಟೆ, ವ್ಯಾಪಾರ ಇತ್ಯಾದಿಗಳ ಮೂಲಕ ಗಮನಾರ್ಹ ಲಾಭವನ್ನು ಗಳಿಸಬಹುದು. ನಿಮ್ಮ ಹಲವು ಹಣಕಾಸು ವಿಚಾರಗಳು ಶುಭವಾಗುತ್ತವೆ. ಪ್ರಯಾಣಗಳಲ್ಲಿ ನಿಮಗೆ ಅಶುಭವಾಗಬಹುದು, ಅದ್ರಲ್ಲೂ ನಿಮ್ಮ ಅಮೂಲ್ಯ ವಸ್ತುಗಳು ಕಳೆದುಕೊಳ್ಳಬಹುದು. ದಾಂಪತ್ಯ ವಿಚಾರವಾಗಿ ನೀವು ಅನುಭವಿಸಿದ್ದ ಸಮಸ್ಯೆಗಳು ದೂರಾಗಬಹುದು.

ಸಿಂಹ ರಾಶಿ

ಈ ವಾರ ಸಿಂಹ ರಾಶಿಯವರಿಗೆ ಸವಾಲುಗಳಿಂದ ತುಂಬಿರಬಹುದು. ಪ್ರತಿಕೂಲ ಆರೋಗ್ಯ ಪರಿಣಾಮಗಳಿಂದ ಹಿಡಿದು ಕೆಲಸದ ಒತ್ತಡದವರೆಗೆ ಸವಾಲುಗಳು ಎದುರಾಗಬಹುದು. ನಿಮ್ಮ ಒತ್ತಡದ ಕೆಲಸದಿಂದ ಹೊರಬರಲು ಹಲವು ರೀತಿಯ ಪ್ರಯತ್ನಗಳು ಫಲ ನೀಡದೆ ಇರಬಹುದು. ಪ್ರೇಮಿಗಳಿಗೆ ಈ ವಾರ ಉತ್ತಮವಾಗಿರಲಿದೆ. ವಾರದ ಕೊನೆಯಲ್ಲಿ ನಿಮಗೆ ಅಗತ್ಯವಾಗಿ ಬೇಕಿದ್ದ ವಸ್ತುವೊಂದನ್ನು ಖರೀದಿಸುವಿರಿ. ಪಂಚೇಂದ್ರಿಯ ಸಂಬಂಧಿತ ಅನಾರೋಗ್ಯ ಸಮಸ್ಯೆಗಳ ನೀವು ಎದುರಿಸಿದ್ದರೆ ಈ ವಾರ ಅದರಿಂದ ಮುಕ್ತರಾಗುತ್ತೀರಿ. ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಪ್ರೇಮಿಗಳಿಗೆ ಈ ಸಮಯದಲ್ಲಿ ಶುಭ ಸಮಾಚಾರಗಳಿವೆ. ವಾಹನ ಕುರಿತ ವಿಚಾರವು ಶುಭವಾಗಿ ಮುಕ್ತಾಯವಾಗಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ವಾರ ಸಾಕಷ್ಟು ಶುಭವಿದೆ. ನಿಮ್ಮ ಹಲವು ವಿಚಾರಗಳು ನೀವು ಅಂದುಕೊಂಡ ಫಲಿತಾಂಶ ನೀಡಲಿವೆ. ಅದ್ರಲ್ಲೂ ಹಣ‍ಕಾಸಿನ ವಿಚಾರದಲ್ಲಿ ನೀವು ಬಯಸಿದ ದಿನವಾಗಿ ನೋಡಬಹುದು. ಪ್ರಯಾಣಗಳ ಮಾಡುವುದು ಲಾಭಕರ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಅನೇಕರಿಗೆ ಈ ಸಮಯವು ಅಚ್ಚರಿಯ ಫಲಿತಾಂಶ ತರಲಿದೆ. ಕೌಟುಂಬಿಕ ವಿಚಾರಗಳಲ್ಲಿ ನಿಮಗೆ ಸಂತಸದ ವಾತಾವರಣ ಇರಲಿದೆ. ಉದ್ಯೋಗದಲ್ಲಿರುವವರಿಗೆ ಈ ಅವಧಿಯು ಪ್ರಯೋಜನಕಾರಿಯಾಗಬಹುದು. ನೀವು ಕುಟುಂಬ ಮತ್ತು ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು. ಒಟ್ಟಾರೆಯಾಗಿ, ಈ ವಾರ ಮಿಶ್ರವಾಗಿರುತ್ತದೆ.

English summary

Weekly Horoscope From January 18 To January 25: Prediction Of 6 Zodiac Signs

Weekly Horoscope From January 18 To January 25: These zodiac get more benefits during this 7 days, read on...
X
Desktop Bottom Promotion