Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Weekly Horoscope: ಜನವರಿ 11 ರಿಂದ ಜನವರಿ 18ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಜನವರಿ 11 ರಿಂದ ಜನವರಿ 18ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ತುಲಾ ರಾಶಿ
ಈ ವಾರ ತುಲಾ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಪ್ರಯೋಗಗಳತ್ತ ಗಮನಹರಿಸಬಹುದು. ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ ಮತ್ತು ಫಲಪ್ರದವಾಗುತ್ತವೆ. ವ್ಯವಹಾರದಲ್ಲಿ ತೊಡಗಿರುವವರಿಗೆ ವಾರದ ಆರಂಭವು ಅತ್ಯಂತ ಶುಭವಾಗಿರುತ್ತದೆ. ವ್ಯಾಪಾರಿಗಳು ಈ ವಾರ ಲಾಭ ಮಾಡುವ ಸಮಯ ಆಗಿರಲಿದೆ. ನಿಮ್ಮ ವ್ಯವಹಾರದಲ್ಲಿನ ಬೆಳವಣಿಗೆಯು ನಿಮಗೆ ನೆಮ್ಮದಿ ತರಲಿದೆ. ತಂದೆ ಅಥವಾ ತಾಯಿಯ ಆರೋಗ್ಯದಲ್ಲಿನ ಏರುಪೇರು ಸುಧಾರಣೆಯಾಗಲಿದೆ. ಉದ್ಯೋಗ ಬದಲಾವಣೆಯ ಬಗ್ಗೆ ಯೋಚಿಸುತ್ತಿರುವ ಉದ್ಯೋಗಿಗಳಿಗೆ ಪ್ರತಿಷ್ಠಿತ ಸಂಸ್ಥೆಯಿಂದ ಉತ್ತಮ ಕೊಡುಗೆ ಸಿಗಬಹುದು. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷದ ಸಮಯಗಳನ್ನು ಕಳೆಯಲು ನಿಮಗೆ ಅವಕಾಶಗಳಿವೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ವಾರದಲ್ಲಿ ಶುಭವಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರುವ ಸಮಯ ಇದಾಗಿರಲಿದೆ. ನಿಮ್ಮ ದೊಡ್ಡ ಪ್ರಯತ್ನಗಳು ಫಲ ನೀಡುವ ಸಮಯ. ಹಣಕಾಸು ವ್ಯವಹಾರದಲ್ಲಿ ನಿಮಗೆ ಲಾಭದಾಯಕ ದಿನಗಳಿವೆ. ವಾರಾಂತ್ಯದಲ್ಲಿ ನಿಮ್ಮ ದೊಡ್ಡ ಕೆಲಸವೊಂದರಿಂದ ಲಾಭ ಪಡೆಯಬಹುದು. ದಾಂಪತ್ಯ ವಿಚಾರದಲ್ಲಿ ನಿಮ್ಮಲ್ಲಿ ಮಾನಸಿಕ ನೆಮ್ಮದಿ ಹದಗೆಡಬಹುದು. ಪ್ರೇಮಿಗಳಿಗೆ ಉತ್ತಮ ಸಮಯವಲ್ಲ. ಯಾರಿಗೂ ಸಾಲ ನೀಡುವ ಕೆಲಸ ಮಾಡಬೇಡಿ. ಹಾಗೆ ಮನೆ ಸಂಬಂಧಿತ ಖರ್ಚುಗಳು ಈ ವಾರ ಹೆಚ್ಚಾಗಬಹುದು.
ಧನು ರಾಶಿ
ಈ ವಾರ ಧನು ರಾಶಿ ಜನರಿಗೆ ಅದೃಷ್ಟ ತರುತ್ತದೆ. ಜನರು ನಿಮ್ಮ ಕೆಲಸ ಮತ್ತು ನಿರ್ಧಾರಗಳನ್ನು ಅಪಾರವಾಗಿ ಹೊಗಳುತ್ತಾರೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಶುಭವಾಗುವ ವಾರವಿದು. ಆಸ್ಪತ್ರೆ ಕುರಿತಾದ ವಿಚಾರಗಳಲ್ಲಿ ನಿಮಗೆ ಶುಭವಾಗುತ್ತದೆ. ವ್ಯಾಪಾರ ಅಥವಾ ಸ್ವಂತ ಉದ್ಯೋಗ ಮಾಡುವ ನಿಮ್ಮ ಆಲೋಚನಗಳಿಗೆ ಹೊಸ ಆರಂಭಗಳು ಸಿಗಲಿವೆ. ನ್ಯಾಯಾಲಯದ ಪ್ರಕರಣದ ತೀರ್ಪು ನಿಮ್ಮ ಪರವಾಗಿ ಬರಬಹುದು. ಪೂರ್ವಜರ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ಸಾಧ್ಯತೆಯಿದೆ. ಪ್ರಣಯ ಸಂಬಂಧದಲ್ಲಿ ಮಧುರ ಕ್ಷಣಗಳಿವೆ. ವಾಹನ ಸಂಬಂಧಿತ ವಿಚಾರದಲ್ಲಿ ವಾರದ ಅಂತ್ಯದಲ್ಲಿ ಖರ್ಚುಗಳು ಹೆಚ್ಚಾಗಬಹುದು. ದೂರ ಪ್ರಯಾಣಗಳ ಮಾಡುವಿರಿ.
ಮಕರ ರಾಶಿ
ಈ ವಾರ ಮಕರ ರಾಶಿಯವರಿಗೆ ಶುಭ ಮತ್ತು ಅದೃಷ್ಟವನ್ನು ತರುವ ವಾರ. ನೀವು ಬಹುದಿನದ ಬಯಕೆಗಳನ್ನು ಈ ವಾರ ಈಡೇರಿಸಿಕೊಳ್ಳಬಹುದು. ವಾಹನ ಖರೀದಿಯ ಯೋಗವಿದೆ. ವಾರದ ಮೊದಲಾರ್ಧವು ನಿಮ್ಮನ್ನು ಎಲ್ಲಾ ರೀತಿಯ ಚಿಂತೆಗಳಿಂದ ಮುಕ್ತಗೊಳಿಸುತ್ತದೆ. ಉದ್ಯೋಗದಲ್ಲಿರುವವರಿಗೆ ಅಪೇಕ್ಷಿತ ಬಡ್ತಿ ಅಥವಾ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆಯ ಬಗ್ಗೆ ಒಳ್ಳೆಯ ಸುದ್ದಿ ಬರಬಹುದು. ಈ ವಾರ ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳು, ಫೈನಾನ್ಸ್, ಸಾಲ ವ್ಯವಹಾರಗಳಲ್ಲಿ ಶುಭವಾಗಲಿದೆ. ಈ ವಾರ ವಿದ್ಯಾರ್ಥಿಗಳಿಗೆ ಅತ್ಯಂತ ಶುಭವೆಂದು ಸಾಬೀತುಪಡಿಸುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ಸಾಮರಸ್ಯ ಮೇಲುಗೈ ಸಾಧಿಸುತ್ತದೆ.
ಕುಂಭ ರಾಶಿ
ಈ ವಾರ ಕುಂಭ ರಾಶಿಯ ಸ್ಥಳೀಯರಿಗೆ ಸಾಕಷ್ಟು ಫಲಪ್ರದವಾಗಿರುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರವು ಸಾಮಾನ್ಯ ವೇಗದಲ್ಲಿ ಮುಂದುವರಿಯುತ್ತದೆ, ಆದರೆ ನಿಮ್ಮ ಪ್ರಗತಿ ಮತ್ತು ಲಾಭದ ಬಗ್ಗೆ ನೀವು ಅತೃಪ್ತರಾಗುತ್ತೀರಿ. ಉದ್ಯೋಗದ ಸ್ಥಳದಲ್ಲಿನ ಒತ್ತಡದಿಂದ ನಿಮಗೆ ನಿರಾಳತೆ ಇರಲಿದೆ. ನಿಮಗಾಗಿ ದುಬಾರಿ ವಸ್ತುವೊಂದನ್ನು ಖರೀದಿಸುವಿರಿ. ಅನೇಕರಿಗೆ ಈ ಸಮಯವು ಪ್ರಯಾಣಗಳ ಮಾಡುವ ಸಮಯ ಆಗುತ್ತದೆ. ಆಪ್ತರ ಭೇಟಿಯಿಂದ ನಿಮ್ಮಲ್ಲಿದ್ದ ಸಮಸ್ಯೆಯೊಂದು ದೂರಾಗಲಿದೆ. ಗೃಹಿಣಿಯರಲ್ಲಿ ವಾರಾಂತ್ಯಕ್ಕೆ ಅನಾರೋಗ್ಯ ಸಮಸ್ಯೆ ಕಾಡಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಈ ವಾರ ಅತ್ಯಂತ ಶುಭಕರವಾಗಿರುತ್ತದೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ಅನಿರೀಕ್ಷಿತ ಯಶಸ್ಸು ಮತ್ತು ಲಾಭವನ್ನು ಅನುಭವಿಸುವಿರಿ. ನಿಮ್ಮ ಅನೇಕ ಕೆಲಸಗಳಲ್ಲಿ ಆಹ್ಲಾದಕರ ಸಮಯ ನೋಡಬಹುದು. ಉದ್ಯಮಿಗಳು ಈ ವಾರ ಗಮನಾರ್ಹ ಲಾಭವನ್ನು ಕಾಣುವ ಸಾಧ್ಯತೆಯಿದೆ. ಹೂಡಿಕೆ ದೃಷ್ಟಿಕೋನದಿಂದ ವಾರದ ಉತ್ತರಾರ್ಧವು ಅನುಕೂಲಕರವಾಗಿರುತ್ತದೆ. ಅವಿವಾಹಿತರಿಗೆ ವಾರದ ಕೊನೆಯಲ್ಲಿ ಖರ್ಚುಗಳಿವೆ. ಸಂಬಂಧಗಳಲ್ಲಿ ಹಲವು ರೀತಿ ಮನಸ್ತಾಪ ಎದುರಾಗಬಹುದು. ಕೃಷಿಕರಿಗೆ ಈ ವಾರ ಅದೃಷ್ಟಕರವಿದೆ. ಹಳೆಯ ಸ್ನೇಹಿತರ ಭೇಟಿಯಿಂದ ನೆಮ್ಮದಿ ಇರಲಿದೆ.



Click it and Unblock the Notifications












