Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Weekly Horoscope: ಜನವರಿ 11 ರಿಂದ ಜನವರಿ 18ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಜನವರಿ 11 ರಿಂದ ಜನವರಿ 18ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ಮೇಷ ರಾಶಿ
ಈ ವಾರ ಮೇಷ ರಾಶಿಯವರಿಗೆ ಮೊದಲಾರ್ಧದಲ್ಲಿ ಸ್ವಲ್ಪ ಅಸ್ಥಿರವಾಗಿರುತ್ತದೆ. ನಿಮ್ಮ ಹಲವು ಕೆಲಸ ಕಾರ್ಯಗಳಲ್ಲಿ ವಾರದ ಆರಂಭವು ನಿಧಾನವಾಗುತ್ತದೆ. ಆದ್ರೆ ಮಧ್ಯಾಂತರದಿಂದ ನಿಮಗೆ ಅನುಕೂಲಕರ ದಿನಗಳಿವೆ. ದೈನಂದಿನ ಜೀವನದಲ್ಲಿನ ಅಡೆತಡೆಗಳು ನಿಮ್ಮನ್ನು ಚಿಂತೆಯಲ್ಲಿ ಮುಳುಗುವಂತೆ ಮಾಡಲಿವೆ. ಕೆಲಸದಲ್ಲಿ ನೀವು ಸಕ್ರಿಯವಾಗಿ ಭಾಗಿಯಾಗುವುದು ಕಡಿಮೆಯಾಗುತ್ತದೆ. ಉದ್ಯೋಗದ ಸ್ಥಳದಲ್ಲಿನ ಒತ್ತಡವನ್ನು ಎದುರಿಸಬಹುದು. ಅನಗತ್ಯ ವಸ್ತುಗಳಿಗೆ ಖರ್ಚು ಮಾಡುವುದು ಹೆಚ್ಚಾಗಲಿದೆ. ನಿಮ್ಮ ಉಳಿತಾಯದ ಹಣ, ಹಾಗೆ ಹೂಡಿಕೆಗಳು ಹೆಚ್ಚಾಗುವುದು ನೋಡಬಹುದು. ವಾರಾಂತ್ಯದಲ್ಲಿ ಪ್ರವಾಸ ಕೈಗೊಳ್ಳುವ ಸಾಧ್ಯತೆ ಬಲವಾಗಿದೆ.

ವೃಷಭ ರಾಶಿ
ಈ ವಾರ ವೃಷಭ ರಾಶಿಯ ಜನರಿಗೆ ಮಿಶ್ರಫಲವಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಹಣಕಾಸಿನ ಅಗತ್ಯತೆ ಇರಲಿದೆ. ಹೀಗಾಗಿ ವ್ಯವಹಾರಿಕ ವಿಚಾರಗಳು, ಆರ್ಥಿಕ ವಿಚಾರಗಳಲ್ಲಿ ತೊಡಗುವಾಗ ಎಚ್ಚರಿಕೆಯಿಂದ ಇರುವುದು ಉತ್ತಮ. ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳು ಎದುರಾಗುತ್ತದೆ. ಈ ವಾರ ನೀವು ಸುಧೀರ್ಘ ಪ್ರಯಾಣಗಳ ಮಾಡುವಿರಿ. ವಾರದ ಅಂತ್ಯದಲ್ಲಿ ಗೃಹಿಣಿಯರು ಹಾಗೂ ಮಕ್ಕಳ ಆರೋಗ್ಯದಲ್ಲಿ ಭಿನ್ನತೆ ಇರಲಿದೆ. ವಾಹನ ಸಂಬಂಧಿತ ವಿಚಾರವು ಖರ್ಚುಗಳಿಂದ ಕೂಡಿರಲಿದೆ. ಕೆಲಸದಲ್ಲಿ ದೀರ್ಘಕಾಲದಿಂದ ಇರುವ ಅಡಚಣೆಯನ್ನು ತೆಗೆದುಹಾಕಿದಾಗ ನೀವು ನಿರಾಳರಾಗುತ್ತೀರಿ. ದಾಂಪತ್ಯ ವಿಚಾರದಲ್ಲಿ ಮಿಶ್ರಫಲವಿದೆ.
ಮಿಥುನ ರಾಶಿ
ಈ ವಾರ ಮಿಥುನ ರಾಶಿಯವರಿಗೆ ಸಾಕಷ್ಟು ಒತ್ತಡವಿರಬಹುದು. ನಿಮ್ಮ ಹಣಕಾಸಿನ ವಿಚಾರದಲ್ಲಿ ಹಾಗೆ ಕೆಲಸದ ವಿಚಾರದಲ್ಲಿ ಒತ್ತಡ ಎದುರಿಸುತ್ತೀರಿ. ವ್ಯವಹಾರದ ದೃಷ್ಟಿಯಿಂದ ನಿಮಗೆ ಉತ್ತಮ ದಿನಗಳಿವೆ. ವ್ಯಾಪಾರಿಗಳಿಗೆ ಉತ್ತಮ ಲಾಭದಾಯಕ ದಿನಗಳು ನೋಡಬಹುದು. ಈ ಸಮಯದಲ್ಲಿ ನಿಮಗೆ ಬರಬೇಕಿದ್ದ ಹಣವೊಂದು ನಿಮ್ಮ ಕೈ ಸೇರಲಿದೆ. ಪ್ರವಾಸಗಳು ಹಾಗೆ ಪ್ರಯಾಣಗಳಲ್ಲಿ ಸುಖವಿದೆ. ಉದ್ಯೋಗದಲ್ಲಿರುವವರು ಕೆಲಸದಲ್ಲಿ ತೀವ್ರ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾವುದೇ ಕೆಲಸವನ್ನು ಇತರರಿಗೆ ಒಪ್ಪಿಸುವುದು ವಾರಾಂತ್ಯದಲ್ಲಿ ನಿಮ್ಮ ಖರ್ಚುಗಳ ಮೇಲೆ ನಿಗಾ ಇಡಿ. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗಬಹುದು. ಕುಟುಂಬ ಬೆಂಬಲ ಉತ್ತಮವಾಗಿರಲಿದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಈ ವಾರ ಮಿಶ್ರಫಲ ತರಲಿದೆ. ಕೊನೆಯ ಎರಡು ದಿನಗಳನ್ನು ಹೊರತುಪಡಿಸಿ ವಾರದ ಉಳಿದ ದಿನಗಳು ನಿಮಗೆ ಒತ್ತಡಗಳಿಂದ ತುಂಬಿರಲಿದೆ. ಕೆಲವು ಅಪೇಕ್ಷಿತ ಕೆಲಸಗಳು ನೀವು ಅಂದುಕೊಂಡಂತೆ ನಡೆಯುವುದಿಲ್ಲ. ಮನೆಯ ವಾತಾವರಣ ಅಶಾಂತಿಯಿಂದ ಕೂಡಿರಬಹುದು. ಮನೆಗಾಗಿ ನೀವು ಖರ್ಚು ಮಾಡಬೇಕಾಗುತ್ತದೆ. ಅನೇಕರಲ್ಲಿ ಹಣಕಾಸಿನ ವ್ಯವಹಾರವು ಸಮಸ್ಯೆಗಳ ಆರಂಭಕ್ಕೆ ಕಾರಣವಾಗಬಹುದು. ಪ್ರಯಾಣಗಳು ದೊಡ್ಡ ಸವಾಲುಗಳಿಂದ ಕೂಡಿರಬಹುದು. ನಿಮ್ಮ ಕಠಿಣ ಪರಿಶ್ರಮಗಳ ಕೆಲಸಗಳು ನಿಮಗೆ ಲಾಭದಾಯಕವಾಗಲಿವೆ. ನಿಮ್ಮ ಉಳಿತಾಯದ ಹಣವನ್ನು ಉತ್ತಮ ಕೆಲಸಕ್ಕೆ ಬಳಸುವಿರಿ. ಸಂಬಂಧಿಕರಿಂದ ಶುಭ ಕಾರ್ಯ ಸಂಬಂಧ ಆಹ್ವಾನಗಳು ಬರಬಹುದು.
ಸಿಂಹ ರಾಶಿ
ಈ ವಾರ ಸಿಂಹ ರಾಶಿಯವರಿಗೆ ಒಳ್ಳೆಯ ಸಮಯ. ಈ ವಾರ ನಿಮ್ಮ ಅನೇಕ ಬಯಕೆಗಳನ್ನು ಈಡೇರಿಸಿಕೊಳ್ಳುವಿರಿ. ಆಪ್ತರೊಬ್ಬರ ಭೇಟಿಯಿಂದ ಈ ವಾರ ಮಧುರವಾಗಿರಲಿದೆ. ನಿಮ್ಮ ಕಠಿಣ ಪರಿಶ್ರಮವು ಉತ್ತಮ ಫಲವನ್ನು ತರಲಿದೆ. ಉದ್ಯೋಗದಲ್ಲಿನ ವ್ಯಕ್ತಿಗಳಿಗೆ ಕೌಶಲ್ಯ ಪ್ರದರ್ಶಿಸುವ ಸಮಯ ಆಗಿರಲಿದೆ. ಹಾಗೆ ನಿಮ್ಮ ವೇತನ ಸಂಬಂಧಿತ ವಿಚಾರಗಳಲ್ಲಿ ಶುಭವಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ನಿಮ್ಮ ಸಾಲದ ಪ್ರಮಾಣದಲ್ಲಿ ಇಳಿಕೆಯಾಗುವುದು ನೋಡಬಹುದು. ದಾಂಪತ್ಯ ಸುಖ ನೋಡಬಹುದು. ಹೊಸ ಉದ್ಯೋಗ ಅಥವಾ ಸ್ವಂತ ಉದ್ಯೋಗದಲ್ಲಿ ನಿಮಗೆ ಶುಭಕರ ದಿನವಿದೆ.
ಕನ್ಯಾ ರಾಶಿ
ಈ ವಾರ ಕನ್ಯಾರಾಶಿಯವರಿಗೆ ಸಂತೋಷ ಮತ್ತು ದುಃಖದ ಮಿಶ್ರಣವಾಗಿರುತ್ತದೆ. ವಾರದ ಆರಂಭದಲ್ಲಿ ನಿಮ್ಮ ಕೆಲಸ ಈಡೇರುತ್ತವೆ. ಹಾಗೆ ನಿಮ್ಮ ದೊಡ್ಡ ವ್ಯವಹಾರವೊಂದರಲ್ಲಿ ಧನ ಲಾಭ ನೋಡುವಿರಿ. ಗೃಹಿಣಿಯರು ಈ ದಿನಗಳಲ್ಲಿ ಉತ್ತಮ ಹಣ ಗಳಿಸುವ ಕೆಲಸಗಳ ಮಾಡುವಿರಿ. ಇನ್ನು ವಾರಾಂತ್ಯದ ಸಮಯದಲ್ಲಿ ನಿಮ್ಮ ಕೆಲಸಗಳಲ್ಲಿ ಅನಾರೋಗ್ಯ ಅಡ್ಡಿಯಾಗಬಹುದು. ವಾರದ ಮಧ್ಯದಲ್ಲಿ ನಿಮ್ಮ ಆರೋಗ್ಯವು ಸ್ವಲ್ಪ ದುರ್ಬಲವಾಗಿರಬಹುದು. ಪಂಚೇಂದ್ರಿಯ ವಿಚಾರದಲ್ಲಿ ಎದುರಿಸಿದ್ದ ಹಲವು ಅನಾರೋಗ್ಯ ಸಮಸ್ಯೆಗಳು ದೊಡ್ಡದಾಗಬಹುದು. ಮಕ್ಕಳ ವಿದ್ಯಾಭ್ಯಾಸ ಕುರಿತಾದ ಚಿಂತೆಯೊಂದು ಕಾಡಬಹುದು. ವೈವಾಹಿಕ ಜೀವನದಲ್ಲಿಯೂ ಮುನಿಸುಗಳಿವೆ.



Click it and Unblock the Notifications












