Weekly Horoscope: ಜನವರಿ 04 ರಿಂದ ಜನವರಿ 11ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!

ಜನವರಿ 04 ರಿಂದ ಜನವರಿ 11ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...

ತುಲಾ ರಾಶಿ

ಈ ವಾರ ತುಲಾ ರಾಶಿಯವರಿಗೆ ಮಿಶ್ರ ಫಲಿತಾಂಶಗಳ ನೋಡಬಹುದು. ಆರೋಗ್ಯದ ದೃಷ್ಟಿಯಿಂದ ಚರ್ಮ, ಬೆನ್ನು ಅಥವಾ ಕೀಲು ಸಮಸ್ಯೆಗಳು ಎದುರಾಗಬಹುದು. ವ್ಯವಹಾರದಲ್ಲಿ ಪಾಲುದಾರಿಕೆ ವ್ಯವಹಾರಗಳಲ್ಲಿ ಶುಭವಿದೆ. ವೃತ್ತಿ ಸಂದರ್ಶನಗಳು ಅಥವಾ ಆಯ್ಕೆಗಳಲ್ಲಿ ಯಶಸ್ಸು ಸಾಧ್ಯ. ಪ್ರಯಾಣ ಆಹ್ಲಾದಕರವಾಗಿರುತ್ತದೆ. ಪ್ರೇಮ ಸಂಬಂಧಗಳು ಸಿಹಿ ಮತ್ತು ಸಾಮರಸ್ಯದಿಂದ ಉಳಿಯುತ್ತವೆ. ಕುಟುಂಬದ ವಾತಾವರಣವು ಶಾಂತಿಯುತವಾಗಿರುತ್ತದೆ. ಮನೆಯಿಂದ ಹೊರಗೆ ಕೆಲಸ ಮಾಡುವ ಮಂದಿಗೆ ಈ ವಾರವು ಬಹಳಷ್ಟು ಖರ್ಚುಗಳಿಗೆ ಕಾರಣವಾಗಲಿದೆ. ಪ್ರೇಮಿಗಳಿಗೆ ಶುಭಕರ ದಿನಗಳಿವೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ವಾರ ಸಾಮಾನ್ಯವಾಗಿರಲಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ಹೊಸ ವ್ಯವಹಾರಗಳು, ವ್ಯಾಪಾರ ಪ್ರಗತಿ ನೋಡಬಹುದು. ಹಠಾತ್ ಆರ್ಥಿಕ ಲಾಭಗಳು ಸಾಧ್ಯ. ತಾಂತ್ರಿಕ ಕ್ಷೇತ್ರಗಳಲ್ಲಿ ತೊಡಗಿರುವವರು ಯಶಸ್ಸನ್ನು ಕಾಣುತ್ತಾರೆ. ಪ್ರಯಾಣವು ಪ್ರಯೋಜನಕಾರಿಯಾಗುತ್ತದೆ. ಮನೆಯಲ್ಲಿ ಮುಕ್ತ ಮಾತುಕತೆಗಳು ನಡೆಯಲಿವೆ. ಹಣಕಾಸು ವಿಚಾರದಲ್ಲಿ ನಿಮಗೆ ನೋವಿನ ವಿಚಾರಗಳು ಕೇಳಿ ಬರಲಿವೆ. ಕೆಲಸವೊಂದರ ಕಾರಣಕ್ಕೆ ಸಂಬಂಧಿಕರ ಭೇಟಿ ಮಾಡಲು ನೀವು ಮುಂದಾಗುತ್ತೀರಿ.

Weekly Horoscope From January 04 To January 11

ಧನು ರಾಶಿ

ಈ ವಾರ ಧನು ರಾಶಿಯವರಿಗೆ ಶುಭ ಸಂಕೇತಗಳಿವೆ. ನೀವು ಬಹು ಸಮಯದಿಂದ ಮಾಡಬೇಕೆಂದು ಬಯಸಿದ್ದ ವಿಚಾರದಲ್ಲಿ ಶುಭವಾಗುತ್ತದೆ. ಹೊಸ ಆದಾಯಗಳು, ಆದಾಯ ಮೂಲಗಳು ಹುಡುಕಿ ಬರಲಿವೆ. ಮನೆಯ ಸದಸ್ಯರೊಬ್ಬರ ಅನಾರೋಗ್ಯ ಸಂಬಂಧವಾಗಿ ಪ್ರಯಾಣ ಹಾಗೂ ಖರ್ಚುಗಳ ಮಾಡುವಿರಿ. ಮಕ್ಕಳ ಕುರಿತಾದ ಚಿಂತೆಯೊಂದು ಮತ್ತೆ ಕಾಡಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ. ಮನೆಯ ದೊಡ್ಡ ವಿಚಾರವೊಂದಕ್ಕೆ ನಿಮ್ಮ ಅಭಿಪ್ರಾಯ ಪ್ರಮುಖವಾಗಲಿದೆ, ಹಾಗೆ ಖರ್ಚುಗಳ ಮಾಡಬೇಕಾಗುತ್ತದೆ. ವಾಹನ ಸಂಬಂಧಿತ ವಿಚಾರದಲ್ಲಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ.

ಮಕರ ರಾಶಿ

ಮಕರ ರಾಶಿಯವರಿಗೆ ಈ ವಾರ ಶುಭ ಸಂಕೇತಗಳಿವೆ. ವಾರದ ಆರಂಭದಲ್ಲಿ ನಿಮಗೆ ಹಣಕಾಸಿನ ಲಾಭವಿದೆ. ನೀವುಮಾಡಬೇಕಿದ್ದ ಕೆಲಸ ಕಾರ್ಯಗಳಲ್ಲಿ ಲಾಭವಿದೆ. ಹಾಗೆ ನಿಮ್ಮಿಂದ ದೊಡ್ಡ ನಿರ್ಧಾರಗಳ ತೆಗೆದುಕೊಳ್ಳುವ ಆತ್ಮವಿಶ್ವಾಸ ನೋಡಬಹುದು. ಕೀಲು ಅಥವಾ ಮೂಳೆ ಸಂಬಂಧಿತ ನೋವು ಅಥವಾ ಅನಾರೋಗ್ಯ ಕಾಡಬಹುದು. ಆಧ್ಯಾತ್ಮಿಕವಾಗಿ ನೀವು ಆಸಕ್ತಿ ಹೊಂದುವ ಸಮಯವಿದು. ನಿರುದ್ಯೋಗಿ ಯುವತಿಯರಿಗೆ ಈ ವಾರದ ಪ್ರಯತ್ನದಲ್ಲಿ ಪ್ರತಿಫಲ ಸಿಗಲಿದೆ. ಬ್ಯಾಂಕಿಂಗ್, ಆಸ್ತಿ ಸಂಬಂಧಿತ ವಿಚಾರದಲ್ಲಿ ನಿಮಗೆ ಅನುಕೂಲಕರ ಸಮಯವಿದು. ವಾರದ ಅಂತ್ಯದಲ್ಲಿ ಹಣಕಾಸಿನ ಸಮಸ್ಯೆಗೆ ತುತ್ತಾಗಬಹುದು. ದಾಂಪತ್ಯ ವಿಚಾರದಲ್ಲಿ ದೊಡ್ಡ ಸವಾಲು ಎದುರಿಸಬೇಕಾಗುಯತ್ತದೆ.

ಕುಂಭ ರಾಶಿ

ಈ ವಾರ ಕುಂಭ ರಾಶಿಯವರಿಗೆ ಹೊಸ ಯೋಜನೆಗಳನ್ನು ಸೂಚಿಸುತ್ತದೆ. ಮಾನಸಿಕ ಶಾಂತಿ ಮೇಲುಗೈ ಸಾಧಿಸುತ್ತದೆ. ಆದಾಯ ಮತ್ತು ಖರ್ಚು ಸಮತೋಲನದಲ್ಲಿರುತ್ತದೆ. ಮಕ್ಕಳ ವಿದ್ಯಭ್ಯಾಸದ ಕುರಿತಾದ ಚಿಂತೆ ಇದೆ. ವ್ಯಾಪಾರಿ ವಲಯವು ದೊಡ್ಡ ಒಪ್ಪಂದಕ್ಕೆ ಮುಂದಾಗಬಹುದು. ಆಪ್ತರೊಬ್ಬರಿಗೆ ನಿಮ್ಮಿಂದ ಸಹಾಯವಾಗಲಿದೆ. ಅಂದುಕೊಂಡಿದ್ದ ಕೆಲಸವನ್ನು ಮಾಡಿ ಮುಗಿಸುವುದು ಮತ್ತೆ ಮುಂದೂಡುತ್ತೀರಿ. ವಾರದ ಅಂತ್ಯದಲ್ಲಿ ದಾಂಪತ್ಯ ಸಂಬಂಧ ಕಲಹವಿದೆ. ನಿಮ್ಮ ಸಮಾಜಮುಖಿ ಕೆಲಸಗಳಿಂದ ಉತ್ತಮ ಲಾಭವಿದೆ. ನಿಮ್ಮ ಮನೆಗೆ ಅತಿಥಿಗಳ ಆಗಮನವಾಗುವುದು ನೋಡಬಹುದು.

ಮೀನ ರಾಶಿ

ಈ ವಾರ ಮೀನ ರಾಶಿಯವರಿಗೆ ಆಧ್ಯಾತ್ಮಿಕ ಮತ್ತು ಸೃಜನಶೀಲವಾಗಿರುತ್ತದೆ. ಶೀತ, ಕೆಮ್ಮು ಅಥವಾ ಸಣ್ಣ ಜ್ವರದಂತಹ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ವಾರದ ಆರಂಭದಲ್ಲಿ ನಿಮಗೆ ಹಣಕಾಸಿನ ಸವಾಲುಗಳಿವೆ. ನೀವು ಬಯಸಿದ ಮೊತ್ತವೊಂದು ಕೈ ಸೇರದೆ ಇರಬಹುದು. ಆಧ್ಯಾತ್ಮಿಕ ಪ್ರಯಾಣ ಸಾಧ್ಯ. ಪ್ರೇಮ ಸಂಬಂಧಗಳಲ್ಲಿ ಭಾವನಾತ್ಮಕ ಸಂಪರ್ಕವು ಗಾಢವಾಗುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ ಮತ್ತು ನಿಮ್ಮ ಮಗುವಿನ ಭವಿಷ್ಯದ ಬಗ್ಗೆ ಶುಭ ಚಿಹ್ನೆಗಳು ಕಂಡುಬರುತ್ತವೆ. ಆಸ್ತಿ ಸಂಬಂಧಿತ ವಿಚಾರದಲ್ಲಿ ಈ ವಾರ ಪ್ರಮುಖ ವಿಚಾರದಲ್ಲಿ ಭಾಗಿಯಾಗುತ್ತೀರಿ.

English summary

Weekly Horoscope From January 04 To January 11: Prediction Of 6 Zodiac Signs

Weekly Horoscope From January 04 To January 11: These zodiac get more benefits during this 7 days, read on...
X
Desktop Bottom Promotion