Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Weekly Horoscope: ಜನವರಿ 04 ರಿಂದ ಜನವರಿ 11ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಜನವರಿ 04 ರಿಂದ ಜನವರಿ 11ರ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ಮೇಷ ರಾಶಿ
ಈ ವಾರ ಮೇಷ ರಾಶಿಯವರಿಗೆ ಶಕ್ತಿ ಮತ್ತು ಸವಾಲುಗಳ ಮಿಶ್ರಣ ತರುತ್ತದೆ. ಆರೋಗ್ಯದ ದೃಷ್ಟಿಯಿಂದ ವಾರದ ಆರಂಭದಲ್ಲಿ ಆಯಾಸ, ತಲೆನೋವು ಅಥವಾ ರಕ್ತದೊತ್ತಡ ಸಮಸ್ಯೆಗಳು ಉದ್ಭವಿಸಬಹುದು. ಹಣಕಾಸಿನ ವಿಚಾರಗಳು ಸ್ಥಿರವಾಗಿರಲಿದೆ. ಆದರೆ ಅನಿರೀಕ್ಷಿತ ವೆಚ್ಚಗಳು ನಿಮಗೆ ಸಮಸ್ಯೆಗಳ ತರಬಹುದು. ಬಜೆಟ್ ನಿರ್ವಹಣೆಯ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರವು ಉತ್ತಮ ಫಲಿತಾಂಶ ತರಲಿದೆ. ವೃತ್ತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಅನುಕೂಲಕರ ಸಮಯವಿದು. ಪ್ರಣಯ ಸಂಬಂಧಗಳಲ್ಲಿ ಭಾವನಾತ್ಮಕ ಸಂಪರ್ಕ ಹೆಚ್ಚಾಗುತ್ತದೆ. ಕುಟುಂಬದಲ್ಲಿನ ಕಲಹ ವಿಚಾರಗಳು ನಿಮ್ಮ ಮಾತುಗಾರಿಕೆಯ ಮೂಲಕ ನಿವಾರಣೆಯಾಗಲಿದೆ.
ವೃಷಭ ರಾಶಿ
ಈ ವಾರ ವೃಷಭ ರಾಶಿಯವರಿಗೆ ತುಲನಾತ್ಮಕವಾಗಿ ಸ್ಥಿರ ಮತ್ತು ಆಹ್ಲಾದಕರವಾಗಿರುತ್ತದೆ. ಓಡಾಟಗಳು, ಪ್ರಯಾಣಗಳು, ಹಾಗೆ ನಿಮ್ಮ ಆರ್ಥಿಕ ಸ್ಥಿತಿ ನಿರ್ಧರಿಸುವ ಅಂಶಗಳು ಬದಲಾಗುತ್ತದೆ. ಬಾಕಿ ಇರುವ ಹಣವನ್ನು ಪಡೆಯುವ ಬಲವಾದ ಸಾಧ್ಯತೆಗಳಿವೆ. ನಿಮ್ಮ ವ್ಯವಹಾರದಲ್ಲಿ ವಿಸ್ತರಣಾ ಯೋಜನೆಗಳು ಯಶಸ್ವಿಯಾಗುತ್ತವೆ ಮತ್ತು ಉದ್ಯೋಗದಲ್ಲಿರುವವರಿಗೆ ಪ್ರಶಂಸೆ ಸಿಗಬಹುದು. ವೃತ್ತಿಜೀವನದಲ್ಲಿ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ನಿಮಗೆ ಒಲಿಯಲಿದೆ. ಕುಟುಂಬ ಸಾಮರಸ್ಯ ಮೇಲುಗೈ ಸಾಧಿಸುತ್ತದೆ ಮತ್ತು ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾಗುತ್ತದೆ.

ಮಿಥುನ ರಾಶಿ
ಈ ವಾರ ಮಿಥುನ ರಾಶಿಯವರಿಗೆ ಮಾನಸಿಕ ಏರಿಳಿತಗಳಿಂದ ತುಂಬಿರಬಹುದು. ಒತ್ತಡ, ನಿದ್ರಾಹೀನತೆ ಅಥವಾ ಕಿರಿಕಿರಿ ಉಂಟಾಗುವ ಸಮಯ ಎನ್ನಬಹುದು. ಹಣಕಾಸು ಚಿಂತೆಗಳು ದೊಡ್ಡದಾಗುತ್ತದೆ. ಹಾಗೆ ನಿಮ್ಮ ಆರೋಗ್ಯ ಸಂಬಂಧಿತ ಚಿಂತೆಯಿಂದ ನೀವು ಇಡೀ ವಾರ ಒತ್ತಡ ಮತ್ತು ಗೊಂದಲದಲ್ಲಿ ಕಳೆಯಬಹುದು. ವಾಹನ ವಿಚಾರದಲ್ಲಿ ಹಣ ಖರ್ಚಾಗುವ ನಿರೀಕ್ಷೆಗಳಿವೆ. ಹಠಾತ್ ವೆಚ್ಚಗಳು, ವ್ಯವಹಾರಿಕ ಲಾಭದಿಂದ ಬಂದ ಹಣ ಕೂಡ ಬೇರೊಂದು ಕಡೆ ವ್ಯಯಿಸಬೇಕಾಗುತ್ತದೆ. ನಿಮ್ಮ ಸಾಲದ ಪ್ರಮಾಣ ಮತ್ತೆ ಏರಿಕೆಯಾಗಬಹುದು. ಕುಟುಂಬದಲ್ಲಿ ಹಳೆಯ ಭಿನ್ನಾಭಿಪ್ರಾಯಗಳು ದೂರಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ವಾರ ಭಾವನಾತ್ಮಕವಾಗಿರುತ್ತದೆ. ಆದರೆ ಉದರ ಸಂಬಂಧಿತ ಸಮಸ್ಯೆಗಳಿಗೆ ನೀವು ತುತ್ತಾಗುವ ನಿರೀಕ್ಷೆ ಇದೆ. ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಕೆಲಸದ ಸ್ಥಳದಲ್ಲಿ ಸ್ಥಿರತೆ ಇರುತ್ತದೆ, ಆದರೆ ಪ್ರಗತಿ ನಿಧಾನವಾಗಿ ಕಾಣಿಸಬಹುದು. ವೃತ್ತಿ ಬದಲಾವಣೆ ಅಥವಾ ಹೊಸ ಉದ್ಯೋಗದ ಲಕ್ಷಣಗಳು ಕಂಡುಬರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಾಳ್ಮೆ ಕಾಪಾಡಿಕೊಳ್ಳಬೇಕು. ಹೊಸ ವಸ್ತು ಖರೀದಿಯಲ್ಲಿ ಎಚ್ಚರಿಕೆ ವಹಿಸಿ. ಆಪ್ತರಿಂದ ಹಣಕಾಸಿನ ನೆರವು ಸಿಗುವ ಸಮಯ ಆಗಲಿದೆ. ಅವಿವಾಹಿತರಲ್ಲಿ ಖರ್ಚುಗಳಿವೆ. ಪ್ರಯಾಣಗಳನ್ನು ಮಾಡುವ ಸನ್ನಿವೇಶಗಳು ಬರಲಿವೆ.
ಸಿಂಹ ರಾಶಿ
ಈ ವಾರ ಸಿಂಹ ರಾಶಿಯವರಿಗೆ ಆತ್ಮವಿಶ್ವಾಸ ಮತ್ತು ಯಶಸ್ಸನ್ನು ಸೂಚಿಸುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ, ಆದರೆ ನಿಮ್ಮ ಹೃದಯ ಮತ್ತು ರಕ್ತದೊತ್ತಡದ ಬಗ್ಗೆ ಜಾಗರೂಕರಾಗಿರಿ. ಯಾರಿಂದಾದರು ಸಾಲ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡ ಎದುರಿಸುವಿರಿ. ನಿಮ್ಮ ಕೆಲಸದ ಸ್ಥಳದಲ್ಲಿನ ದೊಡ್ಡ ಸಮಸ್ಯೆಯೊಂದನ್ನು ನೀವು ಬಗೆಹರಿಸಬಹುದು. ಹಣ ಖರ್ಚು ಮಾಡುವ ಮೊದಲು ಅದರ ಪರಿಣಾಮವನ್ನು ಅರಿಯುವುದು ಉತ್ತಮ. ಪ್ರಯಾಣಗಳ ಮುಂದೂಡುತ್ತೀರಿ. ಸರ್ಕಾರಿ ಕೆಲಸದಲ್ಲಿರುವ ಮಂದಿಯ ಆರೋಗ್ಯದಲ್ಲಿ ಸುಧಾರಣೆ ನೋಡಬಹುದು. ನಿಮ್ಮ ಹೊಸ ವೃತ್ತಿ ಪ್ರಯತ್ನಗಳನ್ನು ಮುಂದುವರೆಸುವುದು ಉತ್ತಮ.
ಕನ್ಯಾ ರಾಶಿ
ಈ ವಾರ ಕನ್ಯಾ ರಾಶಿಯವರಿಗೆ ಮಿಶ್ರಫಲವಿದೆ. ಹಳೆಯ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಆದಾಯ ಮತ್ತು ಖರ್ಚಿನ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲಾಗುತ್ತದೆ. ದಾಂಪತ್ಯ ವಿಚಾರದಲ್ಲಿನ ಸಣ್ಣ ಪುಟ್ಟ ಮನಸ್ಥಾಪಗಳು ಈ ಸಮಯದಲ್ಲಿ ನಿವಾರಣೆಯಾಗಲಿದೆ. ವೃತ್ತಿ ಕೆಲಸದಲ್ಲಿನ ಹಲವು ವಿಚಾರಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ನಿರುದ್ಯೋಗಿಗಳು ಆಪ್ತರೊಬ್ಬರ ಸಹಕಾರದಿಂದಾಗಿ ಸೂಕ್ತ ಉದ್ಯೋಗ ಪಡಯುವ ಬಲವಾದ ಸಾಧ್ಯತೆ ಇದೆ. ಅನಿರೀಕ್ಷಿತ ಪ್ರಯಾಣಗಳು ನಿಮ್ಮಲ್ಲಿ ಒತ್ತಡದ ದಿನಗಳನ್ನು ತರಬಹುದು. ಉಳಿತಾಯ ಸಂಬಂಧಿತ ವಿಚಾರವಾಗಿ ನೀವು ಸವಾಲು ಎದುರಿಸಬಹುದು.



Click it and Unblock the Notifications




