Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಜೂನ್ 30 ರಿಂದ ಜುಲೈ 07ರ ವಾರ ಭವಿಷ್ಯ: ಯಾವ ರಾಶಿಯವರಿಗೆ ಅದೃಷ್ಟದ ಕಾಲ!?
ಜೂನ್ 30 ರಿಂದ ಜುಲೈ 07ರ ನಿಮ್ಮ ವಾರ ಭವಿಷ್ಯ ಇಲ್ಲಿದೆ...
ಮೇಷ ರಾಶಿ
ಮೇಷ ರಾಶಿಯವರಿಗೆ ಈ ವಾರವು ಬಹಳ ಅನುಕೂಲಕರವಾಗಿರಲಿದೆ, ನಿಮ್ಮ ಅನೇಕ ಸಮಸಯೆಗಳನ್ನು ಈ ವಾರ ಬಗೆಹರಿಸಿಕೊಳ್ಳುವಿರಿ. ಅದರಲ್ಲು ನಿಮ್ಮ ಹಣಕಾಸಿನ ಪರಿಸ್ಥಿತಿಯು ಈ ವಾರದಲ್ಲಿ ಸುಧಾರಣೆಯಾಗಲಿದೆ. ಹಾಗೆ ವ್ಯಾಪಾರ ಸಂಬಂಧ ಸಮಸ್ಯೆಗಳು ನಿವಾರಣೆಯಾಗಲಿದೆ. ದೊಡ್ಡ ನಿರ್ಧಾರಗಳಿಂದ ನಿಮಗೆ ಯಶಸ್ಸು ಸಿಗಲಿದೆ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ನಿಮಗೆ ಗೆಲುವಾಗಲಿದೆ. ಸರ್ಕಾರಿ ದಾಖಲಾತಿಗಳು, ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಇರಲಿದೆ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ವಾರವು ಉತ್ತಮ ದಿನ ಇರಲಿದೆ. ವಾರದ ಮೊದಲಾರ್ಧದಲ್ಲಿ ನಿಮ್ಮ ಹಣಕಾಸು ವಿಚಾರದಲ್ಲಿ ಧನಾತ್ಮಕ ಬೆಳವಣಿಗೆ ನೋಡಬಹುದು. ಹಾಗೆ ನಿಮ್ಮ ವ್ಯಾಪಾರಗಳು ಪ್ರಗತಿಯಾಗಲು ಈ ಸಮಯ ಬಹಳ ಸಹಾಯವಾಗಲಿದೆ. ಅವಿವಾಹಿತರು ಈ ವಾರದಲ್ಲಿ ಐಷಾರಾಮಿ ವಸ್ತುವನ್ನು ಖರೀದಿಸುವ ಸಾಧ್ಯತೆ ಹೆಚ್ಚಾಗಿದೆ. ವಾರದ ದ್ವಿಯಾರ್ಧದಲ್ಲಿ ನಿಮಗೆ ಔದ್ಯೋಗಿಕ ಸಂಬಂಧಿ ಯಶಸ್ಸು ಪಡೆಯುಲು ನೆರವು ಸಿಗಲಿದೆ. ನೀವು ಯಾವುದಾದರು ಮುಖ್ಯ ಕೆಲಸದಕ್ಕೆ ಬ್ಯಾಂಕ್‌ನಿಂದ ಹಣ ಪಡೆಯುವ ಉದ್ದೇಶ ಹೊಂದಿದ್ದರೆ ಈ ವಾರ ಲಾಭ ನೋಡಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿ ಈ ವಾರದಲ್ಲಿ ಮಿಶ್ರ ಫಲ ನೋಡುವಿರಿ. ಬಹಳ ದಿನಗಳಿಂದ ನೀವು ಬಯಸಿದ್ದ ವಸ್ತುವೊಂದನ್ನು ಖರೀದಿಸಲು ಈ ವಾರ ಬಹಳ ಅನುಕೂಲಕರ ದಿನ. ನಿಮ್ಮ ಅದಾಯಕ್ಕಿಂತಲೂ ಹೆಚ್ಚು ಖರ್ಚು ಇರಲಿದೆ. ಹಾಗೆ ವ್ಯಾಪಾರದಲ್ಲಿ ಲಾಭ ಮಾಡಲು ಇದು ಬಹಳ ಉತ್ತಮ ಸಮಯ. ನೀವು ಉದ್ಯೋಗ ಬದಲಿಸುವ ಬಯಕೆ ಹೊಂದಿದ್ದರೆ ಮುಂದೂಡುವುದು ಉತ್ತಮ. ಸಮಸ್ಯೆಗಳಿಂದ ಪಾರಾಗಲು ಆಪ್ತರೊಬ್ಬರ ಸಹಕಾರ ಪಡೆಯಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಈ ವಾರವು ಬಹಳ ಅದ್ಭುತ ಲಾಭಗಳಿಗೆ ಕಾರಣವಾಗಲಿದೆ. ನಿಮ್ಮ ಅನೇಕ ಕೆಲಸಗಳಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ಪ್ರವಾಸದಲ್ಲಿ ತೊಡಗುವ ಸಾಧ್ಯತೆ ಇದೆ. ದೇವಾಲಯ ಭೇಟಿ, ಶುಭ ಕಾರ್ಯಗಳಿಗೆ ನೀವು ತೆರಳಬೇಕಾಗಬಹುದು. ಆಪ್ತರೊಬ್ಬರಿಂದ ಅನಿರೀಕ್ಷಿತ ಧನಲಾಭದ ನಿರೀಕ್ಷೆ ಇದೆ. ಹಲವು ಕೆಲಸಗಲ್ಲಿ ನಿಮ್ಮ ಪ್ರಯತ್ನ ಫಲದಾಯಕವಾಗಲಿದೆ. ದೂರ ಪ್ರಯಾಣಗಳಲ್ಲಿ ನಿಮಗೆ ಸುಖವಿದೆ. ವಾರದ ಅಂತ್ಯದಲ್ಲಿ ವ್ಯಾಪಾರ ಸಂಬಂಧಿ ಲಾಭ ನೋಡಬಹುದು. ಆರೋಗ್ಯ ಸುಧಾರಣೆಯಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇದು ನೀವು ಅಂದುಕೊಂಡಂತೆ ನಡೆಯುವ ವಾರ ಎನ್ನಬಹುದು. ನಿಮ್ಮ ಬಹು ವರ್ಷಗಳ ಆಸೆಯೊಂದನ್ನು ಈ ಸಮುದಲ್ಲಿ ಈಡೇರಿಸಿಕೊಳ್ಳಿ. ಸಿಂಹ ರಾಶಿಯವರಲ್ಲಿ ಔದ್ಯೋಗಿಕ ವಿಚಾರದಲ್ಲಿ ಬಹಳ ಸಂತಸದ ವಾರ ಆಗಿರಲಿದೆ. ಹಣಕಾಸು ಸ್ಥಿತಿ ಉತ್ತಮವಾಗಲಿದೆ. ಕೆಲ ವಿಚಾರಗಳಲ್ಲಿ ನಿಮ್ಮ ನಿರ್ಲಕ್ಷ್ಯವು ಪರಿಣಾಮಕಾರಿಯಾಗಬಹುದು. ದಾಂಪತ್ಯದಲ್ಲಿ ಸಂತದ ಇರಲಿದೆ. ವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು. ಯಾರಿಗೂ ಈ ವಾರ ಸಾಲ ನೀಡಲು ಮುಂದಾಗಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಈ ವಾರವು ಬಹಳ ಅನುಕೂಲಕರವಾಗಿರಲಿದೆ. ವಾರದ ಆರಂಭವು ನಿಮ್ಮ ಸಂತಸಕ್ಕೆ ಕಾರಣವಾಗಲಿದೆ. ಆದ್ರೆ ವಾರದ ಕೊನೆಯಲ್ಲಿ ಕೌಟುಂಬಿಕ ಒತ್ತಡಗಳು ಹೆಚ್ಚಾಗಬಹುದು. ದೂರ ಸಂಬಂಧಿಕರೊಬ್ಬರ ಭೇಟಿಯೂ ನಿಮ್ಮ ಆಲೋಚನೆಯಲ್ಲಿ ಬದಲಾವಣೆ ತರಬಹುದು. ಮನೆ ಕಟ್ಟಿಸುವವರಲ್ಲಿ ಉತ್ತಮ ವಾರ. ಹಿಂದಿನ ತಪ್ಪನ್ನೇ ಮತ್ತೆ ಮಾಡುವುದು ನಿಮಗೆ ಹಣಕಾಸು ಸಮಸ್ಯೆಗೆ ಕಾರಣವಾಗಬಹುದು. ಗೃಹಿಣಿಯರಲ್ಲಿ ಈ ವಾರ ಖರ್ಚುಗಳಿಗೆ ಕಾರಣವಾಗಬಹುದು.
ತುಲಾ ರಾಶಿ
ತುಲಾ ರಾಶಿಯ ಮಂದಿ ಈ ವಾರದಲ್ಲಿ ಸಮಸ್ಯೆಗಳ ನೋಡಬಹುದು. ಈ ವಾರದಲ್ಲಿ ನಿಮ್ಮ ಹಣಕಾಸು ಸ್ಥಿತಿ ಏರಿಳಿತವಾಗಬಹುದು. ನೀವು ಸಾಲ ನೀಡಿದ್ದ ಹಣವನ್ನು ಮರಳಿ ಪಡೆಯುವುದು ಕಷ್ಟವಾಗಬಹುದು. ವಿವಾಹ ಸಂಬಂಧಿ ಸಮಸ್ಯೆ ಕಾಡಬಹುದು. ಮನೆಯಲ್ಲಿ ಶುಭ ಕಾರ್ಯ ಸಂಬಂಧವಾಗಿ ಗೊಂದಲ ಇರಬಹುದು. ನಿಮ್ಮ ಅನಾರೋಗ್ಯ ಸಂಬಂಧವಾಗಿ ಖರ್ಚು ಹೆಚ್ಚಾಗಬಹುದು. ಆಪ್ತರೊಬ್ಬರಿಂದ ನಿಮಗೆ ಉದ್ಯೋಗ ಸಂಬಂಧಿ ಸಹಾಯ ಪಡೆಯಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ವಾರ ಸವಾಲುಗಳ ಎದುರಿಸಬಹುದು. ವಿವಾಹಿತರಲ್ಲಿ ಅಧಿಕ ಖರ್ಚು ನೋಡಬಹುದು. ಮಕ್ಕಳ ಭವಿಷ್ಯ ಕುರಿತಾದ ಚಿಂತೆ ಕಾಡಬಹುದು. ಅದ್ರಲ್ಲೂ ಮಕ್ಕಳ ಔದ್ಯೋಗಿಕ ಹಾಗೂ ವಿವಾಹ ಸಂಬಂಧಿ ಚಿಂತೆ ದೊಡ್ಡದಾಗಬಹುದು. ನಿಮ್ಮ ಪ್ರಯಾಣಗಳಲ್ಲಿ ಅಶುಭ ಫಲ ನೋಡಬಹುದು. ದೈನಂದಿನ ಕೆಲಸ ಕಾರ್ಯಗಳಲ್ಲಿ ನಿಮಗೆ ಅಡೆತಡೆ ಕಾಡಬಹುದು. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ಸಜ್ಜನರ ಸಂಘದಿಂದ ನಿಮಗೆ ಈ ವಾರದಲ್ಲಿ ಲಾಭವಾಗಲಿದೆ.
ಧನು ರಾಶಿ
ಧನು ರಾಶಿಯ ಮಂದಿಗೆ ಈ ವಾರವು ಅನುಕೂಲಕರ ಎನ್ನಬಹುದು. ನೀವು ವಾಹನ ಲಾಭ ನೋಡಬಹುದು, ಇದು ಬಹಳ ಸಮಯದ ಕನಸಾಗಿದ್ದರೆ ಈ ವಾರ ವಾಹನ ಖರೀದಿಗೆ ಸೂಕ್ತ ಕಾಲ ಆಗಿರಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ನಿವೇಶನ, ಆಸ್ತಿ, ಮನೆ ಖರೀದಿ ವಿಚಾರವಾಗಿ ನಿಮ್ಮಲ್ಲಿ ಧನಾತ್ಮಕ ಫಲಿತಾಂಶ ನೋಡಬಹುದು. ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ನಿಮಗೆ ಹೆಚ್ಚಾಗಬಹುದು, ಹೀಗಾಗಿ ಆಸ್ಪತ್ರೆಯ ಖರ್ಚು ಹೆಚ್ಚಾಗಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ವಾರ ಬಹಳ ಲಾಭದಾಯಕವಾಗಬಹುದು. ಆದ್ರೆ ಈ ವಾರ ನೀವು ಬಹಳ ಶ್ರಮ ಹಾಕಬೇಕಾಗುತ್ತದೆ. ನಿಮ್ಮ ಕಠಿಣ ಸಮಯವು ಉತ್ತಮ ಫಲಿತಾಂಶ ತರಲಿದೆ. ಈ ವಾರ ನಿಮ್ಮ ಹಣಕಾಸು ಪರಿಸ್ಥಿತಿಗಳು ಸುಧಾರಿಸಲಿದೆ. ಅದ್ರಲ್ಲೂ ನಿಮ್ಮ ಸಾಲದ ಸಮಸ್ಯೆಗಳು ಬಗೆಹರಿಯಲಿದೆ. ವ್ಯಾಪಾರ, ವ್ಯವಹಾರದಲ್ಲಿನ ಮಂದಿಗೆ ಈ ವಾರ ಬಹಳ ಅನುಕೂಲಕರ ಪರಿಸ್ಥಿತಿ ತರಲಿವೆ. ನಿಮ್ಮ ಅದಾಯ ಹೆಚ್ಚಾಗುವಂತಹ ಕೆಲಸಗಳ ಮಾಡುವಿರಿ. ಆಧ್ಯಾತ್ಮಿಕ ವಿಚಾರಗಳಲ್ಲಿ ನಿಮ್ಮ ಒಲವು ಹೆಚ್ಚಲಿವೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ವಾರ ಮಿಶ್ರ ಫಲ ಇರಲಿದೆ. ನಿಮ್ಮ ಮೇಲೆ ವೈಯಕ್ತಿಕ ಮತ್ತು ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರಲಿದೆ. ಈ ವಾರ ಜನರೊಂದಿಗೆ ಸಣ್ಣ ವಿಷಯಗಳಲ್ಲಿ ಮನಸ್ತಾಪ ಉಂಟಾಗಬಹುದು. ಕಷ್ಟದ ಸಮಯದಲ್ಲಿ ಧೈರ್ಯವನ್ನು ಕಳೆದುಕೊಳ್ಳಬೇಡಿ. ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ದೀರ್ಘ ಪ್ರಯಾಣ ಸಾಧ್ಯ. ಪ್ರಯಾಣದ ಸಮಯದಲ್ಲಿ ವಸ್ತುಗಳ ಕುರಿತಾದ ಎಚ್ಚರಿಕೆ ಇಡಿ. ನಿಮ್ಮದಲ್ಲದ ವಸ್ತುವಿಗೆ ಅಥವಾ ಅನಗತ್ಯ ವಿವಾರವಾಗಿ ಖರ್ಚು ಹೆಚ್ಚಾಗಬಹುದು. ಪೋಷಕರ ಆರೋಗ್ಯಕರ ಮೇಲೆ ನಿಗಾ ಇಡುವುದು ಉತ್ತಮ. ವಾರದ ಅಂತ್ಯವು ನಿಮಗೆ ಕಷ್ಟಗಳ ತರಬಹುದು.
ಮೀನ ರಾಶಿ
ಮೀನ ರಾಶಿಯವರು ಈ ವಾರವು ಮಿಶ್ರಫಲ ನೋಡಬಹುದು. ಈ ಸಮಯದಲ್ಲಿ ಬಹಳ ಹಿಂದಿನಿಂದ ಕಾಡುತ್ತಿದ್ದ ಕೌಟುಂಬಿಕ ಅಥವಾ ದಾಂಪತ್ಯ ಸಮಸ್ಯೆಯೊಂದು ಬಗೆಹರಿಯಬಹುದು. ನಿಮ್ಮ ಪ್ರಯಾಣಗಳಲ್ಲಿ ಯಶಸ್ಸು ಪಡೆಯಬಹುದು. ನಿಮ್ಮ ಬಹಳ ಸಮಯದ ಆಸೆಯೊಂದನ್ನು ಈಡೇರಿಸಿಕೊಳ್ಳಬಹುದು. ಗೃಹಿಣಿಯರಲ್ಲಿ ಈ ವಾರವು ಹಣಕಾಸು ಲಾಭಕ್ಕೆ ಕಾರಣವಾಗಬಹುದು. ಮಕ್ಕಳ ಕುರಿತಾದ ಚಿಂತೆ ಹೆಚ್ಚಾಗಬಹುದು, ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











