Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
ಜುಲೈ 06ರಿಂದ ಜುಲೈ 12ರ ವಾರ ಭವಿಷ್ಯ: ಯಾರಿಗೆಲ್ಲಾ ಈ ವಾರ ಧನಲಾಭ ಗೊತ್ತಾ?
ಜುಲೈ 06ರಿಂದ ಜುಲೈ 12ರ ನಿಮ್ಮ ವಾರ ಭವಿಷ್ಯ ಇಲ್ಲಿದೆ...
ಮೇಷ ರಾಶಿ
ಮೇಷ ರಾಶಿಯವರಿಗೆ ಈ ವಾರ ತುಂಬಾ ಕಷ್ಟಗಳು ಬರಬಹುದು. ನಿಮ್ಮ ವೃತ್ತಿಜೀವನದಲ್ಲಿ ಅಡೆತಡೆಗಳು ಎದುರಾಗಬಹುದು. ಸಣ್ಣ ಕೆಲಸಗಳನ್ನು ಸಹ ಪೂರ್ಣಗೊಳಿಸಲು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ವಾರದ ಆರಂಭದಲ್ಲಿ ನೀವು ಸಣ್ಣ ಪ್ರವಾಸದಲ್ಲಿ ಭಾಗಿಯಾಗುತ್ತೀರಿ. ನಿಮ್ಮ ಅನೇಕ ಕೆಲಸಗಳಲ್ಲಿ ಧನಾತ್ಮಕ ಬದಲಾವಣೆಗಳು ನಡೆಯಬಹುದು. ಹಾಗೆ ಇದರಿಂದ ಬರುವ ಫಲಿತಾಂಶದಿಂದ ನಿಮಗೆ ಬಹಳ ಲಾಭವಿಲ್ಲದಿದ್ದರೂ ತೃಪ್ತಿದಾಯಕ ದಿನಗಳಿವೆ. ದಾಂಪತ್ಯ ಸಂಬಂಧವಾಗಿ ಸಣ್ಣ ಪುಟ್ಟ ಸಮಸ್ಯೆಗಳು ದೊಡ್ಡದಾಗಿ ಕಾಡಬಹುದು. ಮಕ್ಕಳ ಕುರಿತ ಚಿಂತೆ ಕಾಡಬಹುದು.
ವೃಷಭ ರಾಶಿ
ವೃಷಭ ರಾಶಿಯವರು ಈ ವಾರದಂದು ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯುತ್ತಾರೆ. ಹಾಗೆ ಈ ಸಮಯ ಬಹ ಅನುಕೂಲಕರವಾಗಿರಲಿದೆ. ನಿಮ್ಮ ಸುತ್ತಮುತ್ತಲಿನ ವಾತಾವರಣವು ನಿಮ್ಮ ಕೆಲಸಗಳಿಗೆ ಪೂರಕವಾಗಿರಲಿದೆ. ಉದ್ಯಮಿಗಳಿಗೆ ಈ ವಾರ ಅದೃಷ್ಟಗಳ ತರಲಿದೆ, ಹಾಗೆ ನಿಮಗೆ ಬೇಕಿರುವ ವಸ್ತುವೊಂದನ್ನು ನೀವು ಖರೀದಿಸಬಹುದು. ವಾಹನ ಸಂಬಂಧಿಸಿದ ಲಾಭ ನಿಮಗಿದೆ. ಉದ್ಯೋಗ ಬದಲಾಯಿಸುವವರು, ಹುಡುಕುತ್ತಿರುವವರು ಕೂಡ ಉತ್ತಮ ಅವಕಾಶ ಪಡೆಯಬಹುದು.

ಮಿಥುನ ರಾಶಿ
ಮಿಥುನ ರಾಶಿಯವರು ಈ ವಾರದಲ್ಲಿ ಮಿಶ್ರ ಫಲ ನೋಡಲಿದ್ದೀರಿ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಸಣ್ಣ ಪುಟ್ಟ ಅಡೆತಡೆ ಎದುರಾಗಲಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಹೊಸ ಸಮಸ್ಯೆಗಳ ಎದುರಿಸಬೇಕಾಗಬಹುದು. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ವಾರ ತುಂಬಾ ಪ್ರಯೋಜನಕಾರಿಯಾಗಲಿದೆ. ನಿಮ್ಮ ಬುದ್ಧಿವಂತಿಕೆಯಿಂದಾಗಿ ಬಾಕಿ ಇರುವ ಕೆಲಸವನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ವೈವಾಹಿಕ ಜೀವನ ಸಂತೋಷವಾಗಿರುತ್ತದೆ. ಮನೆಯ ಸದಸ್ಯರಲ್ಲಿ ಅನಾರೋಗ್ಯ ಕಾಡಬಹುದು.
ಕರ್ಕ ರಾಶಿ
ಕರ್ಕ ರಾಶಿಯವರು ಈ ವಾರ ಅಸಮತೋಲನದಿಂದ ತುಂಬಿರುತ್ತದೆ. ನೀವು ಕೆಲಸದಲ್ಲಿ ಅನಗತ್ಯ ಸಮಸ್ಯೆಗಳ ಎದುರಿಸುತ್ತೀರಿ. ಪ್ರತಿಸ್ಪರ್ಧಿಗಳ ಕುರಿತಾದ ಚಿಂತೆ ಕಾಡಬಹುದು. ಉದ್ಯಮಿಗಳು, ವ್ಯಾಪಾರಿಗಳಿಗೆ ಈ ವಾರ ಬಹಳ ಕಷ್ಟಕರ ದಿನ ಎನ್ನಬಹುದು. ನಿಮ್ಮ ಹಣಕಾಸಿನ ಸ್ಥಿತಿಗಳು ಸುಧಾರಿಸುವ ಬದಲಾಗಿ ಮತ್ತಷ್ಟು ಸಮಸ್ಯೆಗಳ ತರಬಹುದು. ನಿಮ್ಮ ಪ್ರಯಾಣಗಳಲ್ಲಿ ನೀವು ಅಂದುಕೊಂಡ ಫಲಿತಾಂಶ ಸಿಗದೆ ಇರಬಹುದು. ಕಠಿಣ ಪರಿಶ್ರಮದ ಹೊರತಾಗಿತೂ ನಿಮಗೆ ಬೇಕಾದ ತೃಪ್ತಿಕರ ಫಲಿತಾಂಶ ಸಿಗದೆ ಇರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ವಾರ ಬಹಳ ಅನುಕೂಲಕರ ದಿನಗಳಿವೆ. ನಿಮ್ಮ ಪೂರ್ವ ನಿಯೋಜಿತ ಕಾರ್ಯಗಳಲ್ಲಿ ಉತ್ತಮ ಲಾಭವಾಗಲಿದೆ. ನಿಮ್ಮ ಹಣಕಾಸು ವ್ಯವಹಾರಗಳು ಅತ್ಯಂತ ಶುಭಕರವಾಗಲಿದೆ. ತಂದೆ ತಾಯಿಯ ಆರೋಗ್ಯದ ಕಡೆಗೆ ಗಮನವಿಡಿ. ಶತ್ರುಗಳಿಂದ ನಿಮಗೆ ಅನಿರೀಕ್ಷಿತ ಸಮಸ್ಯೆ ಎದುರಾಗಬಹುದು. ಕೆಲಸ ಬದಲಾಯಿಸಲು ಇಚ್ಛಿಸಿದ್ದ ಮಂದಿಗೆ ಉತ್ತಮ ಅವಕಾಶ ಒದಗಿ ಬರಲಿದೆ. ವಾಹನ ಖರೀದಿ ಸಂಬಂಧವಾಗಿ ಆಪ್ತರೊಬ್ಬರಿಂದ ಶುಭ ಸುದ್ದಿ ಕೇಳುವಿರಿ. ವ್ಯಾಪಾರಿಗಳಿಗೆ ಉತ್ತಮ ವಾರ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಈ ವಾರ ಮಿಶ್ರಫಲದ ದಿನವಾಗಿರಲಿದೆ. ನಿಮ್ಮ ಬಹುತೇಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗಿರಲಿದೆ. ಈ ವಾರ ಸೋಮಾರಿತನವನ್ನು ಬಿಟ್ಟರೆ ನಿಮ್ಮ ಕೆಲಸಗಳಲ್ಲಿ ಉತ್ತಮ ಫಲಿತಾಂಶಗಳ ನೋಡಬಹುದು. ನೀವು ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಸಂಬಂಧಗಳನ್ನು ಗೌರವಿಸಬೇಕು. ಸ್ನೇಹಿತರಿಂದ ಹೆಚ್ಚಿನ ನಿರೀಕ್ಷೆ ಇಡುವುದು ನಿರಾಸೆ ಮೂಡಿಸಬಹುದು. ಹಣಕಾಸು ವಿಚಾರವಾಗಿ ನಿಮಗೆ ಬಹಳ ಅನುಕೂಲ ಇರುವುದಿಲ್ಲ ಹಾಗೆ ಕಷ್ಟಗಳು ಕೂಡ ಕಾಡುವುದಿಲ್ಲ. ಆರೋಗ್ಯದ ಬಗ್ಗೆ ಹೆಚ್ಚು ಗಮನವಿಡಿ.
ತುಲಾ ರಾಶಿ
ತುಲಾ ರಾಶಿಯವರು ಈ ವಾರ ನೀವು ಪ್ರತಿಯೊಂದು ಕೆಲಸದಲ್ಲೂ ಅಪೇಕ್ಷಿತ ಯಶಸ್ಸು ಮತ್ತು ಲಾಭವನ್ನು ಪಡೆಯುತ್ತೀರಿ. ನಿಮ್ಮ ಹಲವು ಹೊಸ ಪ್ರಯತ್ನಗಳು ಫಲ ನೀಡಲಿವೆ. ಮನೆಗಾಗಿ ಯಾವುದಾದರು ದುಬಾರಿ ವಸ್ತುವನ್ನು ಖರೀದಿಸಬಹುದು. ಬಹಳ ಸಮಯದಿಂದ ನೀವು ವಾಹನ ಕುರಿತಾದ ಯಾವುದಾದರು ಕನಸು ಹೊಂದಿದ್ದರೆ ನಿಮಗೆ ಶುಭವಾಗಲಿದೆ. ಕುಟುಂಬ ಸದಸ್ಯರ ನಡುವೆ ಬಹಳ ಮನಸ್ತಾಪಗಳು ಮೂಡಬಹುದು. ಹಾಗೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಣ್ಣ ಪುಟ್ಟ ವಿಚಾರಗಳಿಗೂ ಮನಸ್ತಾಪ ಇರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ವಾರದ ಆರಂಭದಲ್ಲಿ ನೀವು ಇದ್ದಕ್ಕಿದ್ದಂತೆ ಕೆಲವು ದೊಡ್ಡ ಖರ್ಚುಗಳ ಮಾಡಬೇಕಾಗಬಹುದು. ಈ ವಾರ ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಈ ವಾರ ಬಹಳ ಕಷ್ಟಗಳ ತರುವಂತಹ ಸಮಯ ಆಗಿರಲಿದೆ. ನೀವು ಹಣಕಾಸು ವಿಚಾರವಾಗಿ ಬಹಳ ಎಚ್ಚರಿಕೆಯಿಂದ ಇರಬೇಕು. ಅದ್ರಲ್ಲೂ ಹೂಡಿಕೆಗಳ ಕುರಿತಾಗಿ ಎಚ್ಚರಿಕೆ ಅಗತ್ಯ. ಸರ್ಕಾರಿ ಕೆಲಸದಲ್ಲಿ ನಿಮಗೆ ಶುಭಕರ ಲಾಭವಿದೆ. ವಾರದ ದ್ವಿತಿಯಾರ್ಧದಲ್ಲಿ ಬಹಳ ಅನುಕೂಲಗಳು ಇರಲಿದೆ.
ಧನು ರಾಶಿ
ಧನು ರಾಶಿಯವರು ಈ ವಾರ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಚಿಂತೆಗಳು ಅಥವಾ ತೊಂದರೆಗಳು ನಿವಾರಣೆಯಾಗುತ್ತವೆ. ಪ್ರಯಾಣದಲ್ಲಿ ಉತ್ತಮ ಲಾಭಗಳ ನೋಡಬಹುದು, ಹಾಗೆ ಪ್ರಯಾಣವು ಆಹ್ಲಾದಕರವಾಗಿರುತ್ತದೆ. ನಿರುದ್ಯೋಗಿಗಳಲ್ಲಿ ಈ ವಾರವು ಬಹಳ ಅನುಕೂಲ ತರಲಿದೆ. ಮನೆಯ ವಾತಾವರಣ ಸಂತಸದಿಂದ ಕೂಡಿರಲಿದೆ. ಗೃಹಿಣಿಯರಲ್ಲಿ ಹಣಕಾಸು ವಿಚಾರವಾಗಿ ಒತ್ತಡ ಎದುರಾಗಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ಸಮಯದಲ್ಲಿ ಅನುಕೂಲಕರ ದಿನಗಳಿವೆ. ವಾರದ ಬಹುತೇಕ ದಿನಗಳಲ್ಲಿ ನೀವು ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸು ನೋಡಬಹುದು. ನೀವು ಸಮಯದೊಳಗೆ ಎಲ್ಲಾ ಕೆಲಸಗಳ ಮಾಡಿ ಮುಗಿಸುವುದು ಬಹಳ ಉತ್ತಮ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು ನಿಮಗೆ ಒತ್ತಡ ತರಬಹುದು, ಆಹಾರ ಸಂಬಂಧವಾಗಿ ಈ ವಾರ ಖರ್ಚು ಹೆಚ್ಚಾಗಲಿದೆ. ವಾರದ ಅಂತ್ಯದಲ್ಲಿ ಹಣಕಾಸಿನ ವಿಚಾರದಲ್ಲಿ ಕೆಲವೊಂದು ಸಮಸ್ಯೆ ಎದುರಿಸುತ್ತೀರಿ.
ಕುಂಭ ರಾಶಿ
ಕುಂಭ ರಾಶಿಯ ಮಂದಿ ಈ ವಾರ ಮಿಶ್ರ ಫಲ ಅನುಭವಿಸಲಿದ್ದೀರಿ. ಬಹಳ ಕೆಲಸಗಳಲ್ಲಿ ನಿಮಗೆ ಅನುಕೂಲಕರ ವಾತಾವರಣ ಇರಲಿದೆ. ಕಲಾವಿದರಲ್ಲಿ ಈ ವಾರ ಬಹಳ ಲಾಭ ನೋಡಬಹುದು. ಆಧ್ಯಾತ್ಮಿಕ ವಿಚಾರವಾಗಿ ನಿಮಗೆ ಬಹಳ ಉತ್ತಮ ವಾರ. ಹಲವು ದಿನಗಳಿಂದ ಬಯಸಿದ್ದಂತಹ ವಸ್ತುವೊಂದನ್ನು ನೀವು ಖರೀದಿಸಬಹುದು. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಬಹಳ ಸುಖಕರ ದಿನ. ರಾಜಕೀಯ, ಸಮಾಜಸೇವೆಯಂತಹ ಕೆಲಸದಲ್ಲಿ ಭಾಗಿಯಾಗುವವರಿಗೆ ಕೀರ್ತಿ ತರುವಂತಹ ಸಮಯವಾಗಿರಲಿದೆ. ಈ ವಾರದ ಅಂತ್ಯದಲ್ಲಿ ಯಾರಿಗೂ ಸಾಲ ನೀಡಲು ಮುಂದಾಗಬೇಡಿ.
ಮೀನ ರಾಶಿ
ಮೀನ ರಾಶಿಯವರಿಗೆ ಈ ವಾರವು ಬಹಳ ಅನುಕೂಲಕರ ವಾರವಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮ ಸ್ಥಿತಿಯಲ್ಲಿರಲಿದೆ. ವ್ಯಾಪಾರಿಗಳಲ್ಲಿ ದೊಡ್ಡ ವ್ಯವಹಾರಗಳು ನಡೆಯಲಿವೆ. ನೀವು ಪ್ರವಾಸ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ದೀರ್ಘಕಾಲದಿಂದ ನಿಮಗೆ ಕಾಡಿದ್ದ ಅನಾರೋಗ್ಯವೊಂದು ಈ ವಾರ ಬಗೆಹರಿಯಬಹುದು. ಗೃಹಿಣಿಯರಲ್ಲಿ ಆರ್ಥಿಕ ಲಾಭ ನೋಡಬಹುದು. ದೊಡ್ಡ ಖರ್ಚುಗಳನ್ನು ನಿಭಾಯಿಸುವುದು ಉತ್ತಮ. ನವ ದಂಪತಿಗಳಲ್ಲಿ ಶುಭ ಸುದ್ದಿ ಕೇಳಿಬರಲಿದೆ. ಔದ್ಯೋಗಿಕ ಸಂಬಂಧಿ ಸಮಸ್ಯೆಗಳು ನಿವಾರಣೆ ಆಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications












