Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Weekly Horoscope: ಫೆಬ್ರವರಿ 22ರಿಂದ ಫೆಬ್ರವರಿ 28ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಫೆಬ್ರವರಿ 22ರಿಂದ ಫೆಬ್ರವರಿ 28ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ತುಲಾ ರಾಶಿ
ತುಲಾ ರಾಶೀಯ ಜನರಿಗೆ ಈ ವಾರ ಬಹಳ ಅನುಕೂಲವಿದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ಸ್ವಲ್ಪ ಸಡಿಲತೆ ಇರುತ್ತದೆ, ಅದನ್ನು ಸುಧಾರಿಸಬೇಕಾಗುತ್ತದೆ. ನಿಮ್ಮ ಆಹಾರ ಮತ್ತು ನಿದ್ರೆಯ ಬಗ್ಗೆ ವಿಶೇಷ ಗಮನ ಕೊಡಿ. ಕೆಲಸದ ಯೋಜನೆಗಳು ನಿರೀಕ್ಷಿಸಿದಷ್ಟು ಈಡೇರದೇ ಇರಬಹುದು, ಇದು ನಿಮ್ಮನ್ನು ಸ್ವಲ್ಪ ಖಿನ್ನತೆಗೆ ಒಳಪಡಿಸಬಹುದು. ಆದಾಗ್ಯೂ, ಉದ್ಯೋಗವನ್ನು ಹುಡುಕುತ್ತಿರುವವರಿಗೆ ಕೆಲವು ಸಕಾರಾತ್ಮಕ ಸುದ್ದಿಗಳು ಬರಬಹುದು. ನಿಮ್ಮ ಪೂರ್ವ ನಿಯೋಜಿತ ಕೆಲಸಗಳಲ್ಲಿ ಶುಭವಿದೆ. ಹಣಕಾಸು ವಿಚಾರದಲ್ಲಿ ನೀವು ತಪ್ಪುಗಳ ಮಾಡದೆ ಎಚ್ಚರವಹಿಸಿ.
ವೃಶ್ಚಿಕ ರಾಶಿ
ಈ ವಾರ ನಿಮಗೆ ಮಿಶ್ರಫಲಗಳಿಂದ ತುಂಬಿರಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಅಥವಾ ವ್ಯವಹಾರದ ವಿಚಾರದಲ್ಲಿ ಈ ಸಮಯವು ಧನಾತ್ಮಕವಾಗಿರಲಿದೆ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆ ಈಡೇರಲಿದೆ. ಪ್ರೇಮಿಗಳಿಗೆ ಅಥವಾ ದಾಂಪತ್ಯ ವಿಚಾರವಾಗಿ ಅಡ್ಡಿಗಳು ಎದುರಾಗಲಿದೆ. ಹೊಸ ಆದಾಯ ಹುಡುಕುತ್ತಿದ್ದರೆ ಈ ಸಮಯದಲ್ಲಿ ನಿಮಗೆ ಶುಭವಿದೆ. ನಿಮ್ಮ ಅನಾರೋಗ್ಯ ಸಂಬಂಧವಾಗಿ ಖರ್ಚುಗಳಿವೆ. ಸವಾಲುಗಳನ್ನು ಎದುರಿಸುವುದರಿಂದ ಸಮಸ್ಯೆಗಳನ್ನು ದೂರಾಗಿಸಬಹುದು. ವಾರದ ಅಂತ್ಯದಲ್ಲಿನ ಪ್ರಯಾಣಗಳು ಶುಭವಾಗಲಿದೆ.

ಧನು ರಾಶಿ
ಈ ವಾರ ಧನು ರಾಶಿಯವರು ಮಾನಸಿಕ ಪ್ರಕ್ಷುಬ್ಧತೆಯಿಂದ ಮುಕ್ತರಾಗುವ ಸಮಯ. ಕಳೆದ ಕೆಲವು ದಿನಗಳ ಆತಂಕ ನಿವಾರಣೆಯಾಗುತ್ತದೆ. ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ಸಮನ್ವಯವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿರುತ್ತದೆ. ವಾರದ ಆರಂಭವು ಸ್ವಲ್ಪ ಭಾವನಾತ್ಮಕವಾಗಿರಬಹುದು, ಆದರೆ ಅನುಭವದಿಂದ ಕಲಿಯುವುದು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ವಾಹನ ಖರೀದಿ ಸಂಬಂಧಿಸಿದಂತೆ ಈ ವಾರ ನಿಮಗೆ ಶುಭವಾಗುವುದು ನೋಡಬಹುದು. ದೂರ ಪ್ರಯಾಣಗಳ ಮಾಡಬೇಕಾಗುತ್ತದೆ, ದೇವಾಲಯ ಭೇಟಿಯ ಸಾಧ್ಯತೆಯೂ ಇದೆ.
ಮಕರ ರಾಶಿ
ಈ ವಾರ ಮಕರ ರಾಶಿಯವರಿಗೆ ಸಂತೋಷ ಮತ್ತು ಸ್ಥಿರತೆಯನ್ನು ತರುತ್ತದೆ. ಕುಟುಂಬದಲ್ಲಿನ ದೊಡ್ಡ ಮಟ್ಟದ ಆರ್ಥಿಕ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಆರ್ಥಿಕ ಸ್ಥಿತಿಗಳು ಸುಧಾರಿಸಲಿದೆ. ಹೊಸ ಕೆಲಸ ಹುಡುಕುವ ಹಾಗೆ ಹೊಸ ಕೆಲಸ ಆರಂಭಿಸಿದ್ದರೆ ಈ ವಾರದಲ್ಲಿ ಅದರಿಂದ ಶುಭವಿದೆ. ಪ್ರೇಮ ಸಂಬಂಧಗಳು ಬಲವಾಗುತ್ತವೆ. ಸ್ವಂತ ಉದ್ಯೋಗ ಮಾಡುತ್ತಿದ್ದ ಮಂದಿಗೆ ಈ ವಾರವು ಲಾಭದಾಯಕ. ಮಕ್ಕಳ ಕುರಿತಾದ ಚಿಂತೆಯೊಂದು ದೂರಾಗಲಿದೆ. ನಿಮ್ಮ ದೈನಂದಿನ ಕೆಲಸದಲ್ಲಿನ ಅಡ್ಡಿಗಳಿಂದ ನಿಮಗೆ ಮನಸ್ಸಿನ ಶಾಂತಿ ಹಾಳಾಗಬಹುದು. ದಾಂಪತ್ಯ ವಿಚಾರದಲ್ಲಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ನೀವು ಮಾತುಕತೆಯ ಬಳಸುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ವಾರದ ಆರಂಭದಲ್ಲಿ ಬಹಳ ಶುಭವಿದೆ. ಯಾರಿಂದಾದರು ಹಣ ಸಿಗುವ ಸಾಧ್ಯತೆ ಹೆಚ್ಚಾಗಿರಲಿದೆ. ವೃತ್ತಿ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ನಿಮ್ಮ ಬುದ್ಧಿವಂತಿಕೆಯ ಬಳಸಿಕೊಂಡು ವ್ಯವಹಾರ ಮಾಡುವುದು ಉತ್ತಮ. ಉದ್ಯೋಗ ಸಂಬಂಧಿತ ವಿಚಾರದಲ್ಲಿ ನಿಮಗೆ ಇದ್ದಂತಹ ಸಮಸ್ಯೆಗಳು ದೂರಾಗಲಿದೆ. ಯಾರ ಬಳಿಯಾದರು ಹಣಕ್ಕಾಗಿ ಬೇಡಿಕೆ ಇಟ್ಟಿದರೆ ವಾರದ ಅಂತ್ಯದಲ್ಲಿ ಅದು ಫಲಿಸಬಹುದು. ಮನೆಗಾಗಿ ವಸ್ತು ಖರೀದಿಗೆ ನೀವು ಮುಂದಾಗಬಹುದು. ಯಾರಿಗಾದರು ಸಾಲ ನೀಡಿದ್ದರೆ ಮರಳಿ ಪಡೆಯಬಹುದು. ವಾಹನ ಖರೀದಿ ಲಾಭವಿದೆ. ಸರ್ಕಾರಿ ದಾಖಲಾತಿ ವಿಚಾರವಾಗಿ ನೀವು ಪ್ರಯಾಣಗಳ ಮಾಡುವಿರಿ.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ವಾರ ಬಹಳ ಅನುಕೂಲವಿದೆ. ನಿಮ್ಮ ಎಲ್ಲಾ ಕೆಲಸಗಳು ಅಂದುಕೊಂಡಂತೆ ನೆರವೇರಲಿದೆ. ಹಾಗೆ ವಾರದ ಮಧ್ಯಭಾಗದಿಂದ ನಿಮ್ಮ ಹಣಕಾಸಿನ ವಿಚಾರವು ನಿಮಗೆ ಶುಭ ತರಲಿದೆ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ ಮತ್ತು ಆರ್ಥಿಕ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಆಪ್ತರಿಂದ ನಿಮಗೆ ಸಹಕಾರಿಯಾದ ವಾರವಿದು. ದೇವಾಲಯ ಭೇಟಿಯ ಸಾಧ್ಯತೆ ಇದೆ. ನಿರುದ್ಯೋಗ ವಿಚಾರದಲ್ಲಿ ಆಪ್ತರಿಂದ ಅವಕಾಶ ಕುರಿತಾಗಿ ಮಾಹಿತಿಗಳು ಶುಭ ತರಲಿದೆ.



Click it and Unblock the Notifications