Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
Weekly Horoscope: ಫೆಬ್ರವರಿ 22ರಿಂದ ಫೆಬ್ರವರಿ 28ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಫೆಬ್ರವರಿ 22ರಿಂದ ಫೆಬ್ರವರಿ 28ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ವಾರವು ಬಹಳ ಅನುಕೂಲಕರ ದಿನಗಳನ್ನು ತರಲಿದೆ. ವಾರದ ಆರಂಭದಲ್ಲಿ ಏರುಪೇರುಗಳ ಎದುರು ನೋಡಬಹುದಾದರು ಬಳಿಕ ನಿಮ್ಮಲ್ಲಿ ಧನಾತ್ಮಕ ಬದಲಾವಣೆಗಳು ಎದುರಾಗುತ್ತದೆ. ನಿಮ್ಮ ಚಿಂತನೆಯನ್ನು ನವೀಕರಿಸಲು ಅಥವಾ ಬದಲಾಯಿಸಿಕೊಳ್ಳು ಹಲವು ಅವಕಾಶಗಳು ಸಿಗಲಿವೆ. ವ್ಯವಹಾರ ಸಂಬಂಧಿತ ವಿಚಾರವಾಗಿ ತಾಳ್ಮೆಯಿಂದ ಇರುವುದು ಉತ್ತಮ. ನಿಮ್ಮ ವ್ಯಾಪಾರ ಸಂಬಂಧಿತ ವಿಚಾರದಲ್ಲಿ ವಾರದ ಅಂತ್ಯದಲ್ಲಿ ಲಾಭದಾಯಕ ದಿನಗಳಿವೆ. ಆರೋಗ್ಯದ ವಿಚಾರವಾಗಿ ನಿಮ್ಮಲ್ಲಿ ದೊಡ್ಡ ಶುಭ ಸುದ್ದಿ ಬರಲಿದೆ. ದಾಂಪತ್ಯ ವಿಚಾರವಾಗಿಯೂ ಕೂಡ ನಿಮಗೆ ಧನಾತ್ಮಕ ಸಮಯ ಎನ್ನಬಹುದು.
ವೃಷಭ ರಾಶಿ
ಈ ವಾರ ವೃಷಭ ರಾಶಿಯ ಜನರಿಗೆ ಈ ಸಮಯವು ಬಹಳ ಅದೃಷ್ಟದಾಯಕ ಸಮಯ ಆಗಿರಲಿದೆ. ಸ್ವಯಂ-ಆರೈಕೆ ಮತ್ತು ವಿಶ್ರಾಂತಿಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಲು ಮರೆಯಬೇಡಿ. ಈ ವಾರ ನಿಮ್ಮ ಜೀವನದ ವಿವಿಧ ಅಂಶಗಳಲ್ಲಿ ನಿರಂತರ ಪ್ರಗತಿ ಮತ್ತು ಸಾಧನೆಯ ಪ್ರಜ್ಞೆಯನ್ನು ಭರವಸೆ ನೀಡುತ್ತದೆ. ನಿಮ್ಮ ದೇವಾಲಯ ಸಂಬಂಧಿ ವಿಚಾರವಾಗಿ ಪ್ರಯಾಣಗಳಿವೆ. ಮನೆಗಾಗಿ ನೀವು ಮಾಡುವ ಖರ್ಚುಗಳು ದೊಡ್ಡ ಸಂತಸಕ್ಕೆ ಕಾರಣವಾಗಲಿದೆ. ನಿಮ್ಮ ವ್ಯಾಪಾರ ಸಂಬಂಧಿ ಅಡ್ಡಿಗಳು ನಿವಾರಣೆಯಾಗಲಿದೆ. ನಿರುದ್ಯೋಗಿಗಳಿಗೆ ಈ ಸಮಯವು ಬಹಳ ಅನುಕೂಲಕರ ವಾತಾವರಣ ತರಲಿದೆ.

ಮಿಥುನ ರಾಶಿ
ಈ ವಾರ ನಿಮಗೆ ಮಿಶ್ರಫಲದಿಂದ ಕೂಡಿರಲಿದೆ. ಕೆಲವೊಂದು ವಿಚಾರವಾಗಿ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗಬಹುದು. ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗಿದ್ದರೂ ಕೂಡ ನಿಮಗೆ ನೆಮ್ಮದಿ ಸಿಗದೆ ಇರಬಹುದು. ಹಣಕಾಸಿನ ವಿಚಾರದಲ್ಲಿ ನಿಮಗೆ ಶುಭವಾಗುತ್ತದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಬಹುದು. ಆಸ್ಪತ್ರೆ ಸಂಬಂಧಿತ ವಿಚಾರವಾಗಿ ಖರ್ಚು ಮತ್ತು ಓಡಾಟಗಳಿವೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿನ ಮನಸ್ತಾಪಗಳು ದೊಡ್ಡದಾಗಬಹುದು. ಅವಿವಾಹಿತರಲ್ಲಿ ವಿವಾಹ ಸಂಬಂಧಿತ ವಿಚಾರವಾಗಿ ಅಹಿತಕರ ವಾತಾವರಣ ಇರಲಿದೆ.
ಕರ್ಕ ರಾಶಿ
ಈ ವಾರ ಕರ್ಕ ರಾಶಿಯವರಿಗೆ ಉತ್ತಮ ದಿನಗಳಿವೆ. ನೀವು ಅಂದುಕೊಂಡ ಕೆಲಸಗಳ ಮಾಡಿ ಮುಗಿಸುವುರಿ. ಭಾವನಾತ್ಮಕವಾಗಿ ಸಬಲರಾಗಲು, ನೀವು ಸ್ವಯಂಚಾಲಿತ ಸಹಾನುಭೂತಿಯನ್ನು ಅಭ್ಯಾಸ ಮಾಡಬೇಕು. ನಿಮ್ಮ ಹಣಕಾಸು ವಿಚಾರದಲ್ಲಿ ಹೊಸ ಆದಾಯ ಮೂಲ ಹುಡುಕುವುದು ಉತ್ತಮ. ಶುಭ ಕಾರ್ಯ ಸಂಬಂಧಿತ ವಿಚಾರದಲ್ಲಿ ನಿಮಗೆ ಶುಭವಿದೆ. ಮನೆಯ ವಿಚಾರದಲ್ಲಿ ನಿಮಗೆ ಖರ್ಚುಗಳಿವೆ. ವಾಹನ ಸಂಬಂಧಿತ ಸಮಸ್ಯೆಗಳು ಬಗೆಹರಿಯಲಿದೆ. ಆಸ್ತಿ ವಿವಾದಗಳಲ್ಲಿ ಮತ್ತೆ ಚಿಂತೆಗಳಿವೆ. ಕೃಷಿ ಚಟುವಟಿಕೆಗಳು ನಿಧಾನವಾಗಬಹುದು. ವಾರದ ಅಂತ್ಯದಲ್ಲಿ ದೇವಾಲಯ ಭೇಟಿಯ ಸಾಧ್ಯತೆ ಇದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ವಾರ ಅದೃಷ್ಟದ ಸಮಯವನ್ನು ತರಲಿದೆ. ಬಹಳ ವರ್ಷದಿಂದ ನೀವು ಬಯಸಿದ ಸಮಯವೂ ಈ ವಾರದಲ್ಲಿ ಬರಲಿದೆ. ಆರ್ಥಿಕವಗಿ ಸದೃಢರಾಗುತ್ತೀರಿ. ದೇವಾಲಯ ಭೇಟಿಯಂತಹ ಕೆಲಸಕ್ಕೆ ಮುಂದಾಗುತ್ತೀರಿ. ಶುಭ ಕಾರ್ಯ ಸಂಬಂಧಿತ ವಿಚಾರದಲ್ಲಿ ನಿಮಗೆ ಶುಭವಿದೆ. ಕೆಲಸದ ವಿಚಾರದಲ್ಲಿ ಅನುಕೂಲಕರ ಸಮಯ, ಬಡ್ತಿ, ವೇತನ ಹೆಚ್ಚಳ ಸಂಬಂಧ ಸಂತಸದ ಸುದ್ದಿ ಕೇಳಿದ್ದೀರಿ. ದಾಂಪತ್ಯ ವಿಚಾರವಾಗಿಯೂ ಇದು ಧನಾತ್ಮಕ ಸಮಯ ಆಗಿರಲಿದೆ. ಯಾವುದೇ ಹಣಕಾಸಿನ ವಿಚಾರದಲ್ಲೂ ತಾಳ್ಮೆ ಹಾಗೂ ಬುದ್ದಿವಂತಿಕೆಯಿಂದ ಇರುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಈ ವಾರವು ಬಹಳ ಅನುಕೂಲವನ್ನು ತರಬಹುದು. ನೀವು ಮಾಡಬೇಕಿದ್ದ ಕೆಲಸವನ್ನು ಆತ್ಮಸ್ಥೈರ್ಯದಿಂದ ಪೂರೈಸುರಿವಿರಿ. ಸವಾಲಿನ ಕೆಲಸಗಳನ್ನು ಕೂಡ ಸುಲಭವಾಗಿ ಮುಗಿಸಲಿದ್ದೀರಿ. ನಿಮ್ಮ ಹೊಸ ಆದಾಯ ಮೂಲವು ನಿಮಗೆ ಶುಭ ತರಲಿದೆ. ಅನೇಕರಿಗೆ ಈ ವಾರದಲ್ಲಿ ಬಹು ನಿರೀಕ್ಷಿತ ಕೆಲಸದಲ್ಲಿ ಲಾಭ ತರುತ್ತದೆ. ತಂದೆಯ ಸಂಪೂರ್ಣ ಬೆಂಬಲ ಇರಲಿದೆ. ನಿರ್ಮಾಣ ಕಾರ್ಯಗಳಲ್ಲಿ ಲಾಭವಿದೆ. ವಾಹನ ಖರೀದಿ ಅಥವಾ ಮಾರಾಟದಿಂದ ಲಾಭ ಮಾಡಬಹುದು. ಮನೆಯ ವಾತಾವರಣ ಶಾಂತವಾಗಿರಲಿದೆ. ಸಾಲದ ಕುರಿತಾಗಿ ಚಿಂತೆಗಳಿವೆ. ವಾರದ ಅಂತ್ಯದಲ್ಲಿ ಆರೋಗ್ಯದಲ್ಲಿ ಏರುಪೇರು ಸಂಭವ.



Click it and Unblock the Notifications











