Weekly Horoscope: ಫೆಬ್ರವರಿ 16ರಿಂದ ಫೆಬ್ರವರಿ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!

ಫೆಬ್ರವರಿ 16ರಿಂದ ಫೆಬ್ರವರಿ 22ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...

ಮೇಷ ರಾಶಿ

ಈ ವಾರ ಮೇಷ ರಾಶಿಯವರಿಗೆ ಮಿಶ್ರ ಫಲಗಳಿಂದ ತುಂಬಿದೆ. ಈ ವಾರದಲ್ಲಿ ನಿಮ್ಮ ಅನೇಕ ಕೆಲಸಗಳು ಅಡ್ಡಿಗಳಿಂದ ತುಂಬಿರಲಿದೆ. ಕೆಲವೊಂದನ್ನು ಮುಂದೂಡುತ್ತೀರಿ. ಮತ್ತೆ ಕೆಲವು ಅರ್ಧಕ್ಕೆ ನಿಲ್ಲಬಹುದು. ತಾಳ್ಮೆಯಿಂದ ಇರಬೇಕಾಗುತ್ತದೆ. ನಿಮ್ಮ ಮಾತುಗಳು ನಿಮ್ಮ ಪರವಾಗಿ ಪ್ರಭಾವ ಬೀರಬಹುದಾದರೂ, ನಿಮ್ಮ ಕಾರ್ಯಗಳು ಮತ್ತು ನಡವಳಿಕೆಯು ನಿಮ್ಮ ಪ್ರಗತಿಯನ್ನು ಹಾಳುಮಾಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ವಾರದ ಆರಂಭದಲ್ಲಿ ಆರೋಗ್ಯ ಸಂಬಂಧಿತ ವಿಚಾರವಾಗಿ ಚಿಂತೆಗಳು ಬರಬಹುದು. ಅದ್ರಲ್ಲೂ ಮಕ್ಕಳ ಅನಾರೋಗ್ಯ ವಿಚಾರದಲ್ಲಿ ನೀವು ಆಸ್ಪತ್ರೆ ಹಾಗೂ ಖರ್ಚುಗಳ ನಿಭಾಯಿಸಬೇಕಾಗುತ್ತದೆ. ವಾರದ ಉತ್ತರಾರ್ಧದಲ್ಲಿ ತಮ್ಮ ಆರೋಗ್ಯ ಮತ್ತು ಸಂಬಂಧಗಳ ಬಗ್ಗೆ ಜಾಗರೂಕರಾಗಿರಬೇಕು. ಹಠಾತ್ ಖರ್ಚುಗಳು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಆರೋಗ್ಯಕರ ಪ್ರೇಮ ಸಂಬಂಧವನ್ನು ಕಾಪಾಡಿಕೊಳ್ಳಲು ನಿಮ್ಮ ಸಂಗಾತಿಯೊಂದಿಗೆ ಸಂವಹನವನ್ನು ಕಾಪಾಡಿಕೊಳ್ಳಬೇಕಿದೆ.

Weekly Horoscope From February 16 To February 22

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ವಾರ ಏರಿಳಿತಗಳಿಂದ ತುಂಬಿರಬಹುದು. ಈ ವಾರ ನೀವು ಗೊಂದಲದ ಸ್ಥಿತಿಯಲ್ಲಿ ಯಾವುದೇ ಕೆಲಸಗಳು, ನಿರ್ಧಾರಗಳ ತೆಗೆದುಕೊಳ್ಳಬೇಡಿ. ವಾರದ ಆರಂಭದಲ್ಲಿ ಅದೃಷ್ಟದ ಕೊರತೆಯಿಂದಾಗಿ ನೀವು ಕೆಲಸಕ್ಕೆ ಸಂಬಂಧಿಸಿದ ತೊಂದರೆಗಳ ಎದುರಿಸಬಹುದು. ಹಣಕಾಸು ವಿಚಾರದಲ್ಲಿನ ಒತ್ತಡ ಮುಂದುವರೆಯಲಿದೆ. ವಾರದ ಮಧ್ಯಂತರದಲ್ಲಿ ನೀವು ಪ್ರಮುಖ ವಿಚಾರವೊಂದಕ್ಕೆ ಪ್ರಯಾಣ ಮಾಡಬೇಕಾಗುತ್ತದೆ. ಪ್ರೀತಿಪಾತ್ರರೊಂದಿಗಿನ ವಾದದಿಂದಾಗಿ ನೀವು ಅಸಮಾಧಾನಗೊಳ್ಳಬಹುದು. ವಾರಾಂತ್ಯವು ಅನಿರೀಕ್ಷಿತ ಸಮಸ್ಯೆಗಳ ತರಬಹುದು. ವ್ಯಾಪಾರಿಗಳು ಈ ವಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಕೌಟುಂಬಿಕ ಸಮಸ್ಯೆಗಳು ಸುಧಾರಿಸುವ ಲಕ್ಷಣಗಳಿವೆ.

ಮಿಥುನ ರಾಶಿ

ಈ ವಾರ ಮಿಥುನ ರಾಶಿಯವರಿಗೆ ಮಿಶ್ರ ಫಲವಿದೆ. ವಾರದ ಆರಂಭವು ಅನುಕೂಲಕರವಾಗಿರಲಿದೆ, ಆದ್ರೆ ನೀವು ಬಯಸಿದ ಹಲವು ಕೆಲಸಗಳಲ್ಲಿ ಯಶಸ್ಸು ಸಿಗದೆ ಇರಬಹುದು. ವೃತ್ತಿ ಮತ್ತು ವ್ಯವಹಾರದಲ್ಲಿ ಅಪೇಕ್ಷಿತ ಯಶಸ್ಸು ಪಡೆಯಲು ನೀವು ಮತ್ತಷ್ಟು ಶ್ರಮ ಹಾಕಬೇಕಾಗುತ್ತದೆ. ಮಕ್ಕಳ ವಿಚಾರವಾಗಿ ನೀವು ಬಹಳಷ್ಟು ಚಿಂತೆ ಮಾಡುವ ವಾರವಿದು. ಉದ್ಯೋಗ ಸ್ಥಳದಲ್ಲಿನ ಒತ್ತಡದಿಂದ ನೀವು ವಿಶ್ರಾಂತಿ ಪಡೆಯುವುದು ಮುಖ್ಯ. ಮನೆಯ ಹಿರಿಯ ಸದಸ್ಯರ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಹಣಕಾಸಿನ ಮೂಲವಾಗಿದ್ದ ಕೆಲಸವೊಂದು ನಿಮ್ಮಲ್ಲಿ ಸವಾಲುಗಳ ತರಬಹುದು. ನಿಮ್ಮ ಸಾಲದ ಪ್ರಮಾಣ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಕರ್ಕ ರಾಶಿ

ಈ ವಾರ ಕರ್ಕ ರಾಶಿಯವರಿಗೆ ಅತ್ಯಂತ ಶುಭವಾಗಿರುತ್ತದೆ. ವಾರವು ಕೆಲವು ಬಹುನಿರೀಕ್ಷಿತ ಶುಭ ಸುದ್ದಿಗಳೊಂದಿಗೆ ಪ್ರಾರಂಭವಾಗುತ್ತದೆ. ನಿಮ್ಮ ಹಣಕಾಸು, ವ್ಯಾಪಾರ, ನ್ಯಾಯಾಲಯ, ಆಸ್ತಿ ಕುರಿತಾದ ವಿಚಾರದಲ್ಲಿ ಶುಭವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶಗಳು ಅನುಕೂಲಕರವಾಗಿರಬಹುದು. ಉನ್ನತ ಶಿಕ್ಷಣಕ್ಕೆ ಇರುವ ಅಡೆತಡೆಗಳು ದೂರವಾಗುತ್ತವೆ. ವಾರದ ಉತ್ತರಾರ್ಧದಲ್ಲಿ ಪ್ರಯಾಣಗಳಿವೆ. ಕುಟುಂಬದೊಂದಿಗಿನ ಪ್ರವಾಸವು ಸಂತಸಕ್ಕೆ ಕಾರಣವಾಗಲಿದೆ. ನಿಮ್ಮ ದೈನಂದಿನ ಕೆಲಸದಲ್ಲಿದ್ದ ಅಡ್ಡಿಗಳು ಈ ವಾರ ನಿವಾರಣೆಯಾಗಲಿದೆ. ತಂದೆಯಿಂದ ನಿಮಗೆ ವಿಶೇಷ ಪ್ರೀತಿ, ಸಹಕಾರ ಮತ್ತು ಬೆಂಬಲ ಸಿಗುತ್ತದೆ. ನಿಮ್ಮ ಪ್ರೇಮ ಸಂಬಂಧಗಳಲ್ಲಿ ಪರಸ್ಪರ ನಂಬಿಕೆ ಹೆಚ್ಚಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಈ ವಾರ ಒಂದಿಷ್ಟು ಒತ್ತಡಗಳು ಇರಲಿದೆ. ನೀವು ಉತ್ಸಾಹಕ್ಕಿಂತ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಯಾವುದೇ ಕೆಲಸಗಳಲ್ಲಿ ತೊಡಗುವ ಮುನ್ನ ಆಲೋಚಿಸಿ. ಅನಗತ್ಯ ಖರ್ಚುಗಳಿಂದ ಹೊರಬನ್ನಿ. ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಿದೆ. ತಾಳ್ಮೆಯಿಂದ ಇದ್ದಷ್ಟು ಈ ವಾರ ನಿಮಗೆ ಉತ್ತಮವಾಗಿರಲಿದೆ. ಹಣಕಾಸು ವಿಚಾರದಲ್ಲಿ ಚಿಂತೆಗಳಿವೆ. ವಾರದ ಮಧ್ಯದಲ್ಲಿ ನೀವು ಪ್ರಯಾಣಗಳಲ್ಲಿ ತೊಡಗಬಹುದು. ಹಿಂದಿನ ಅನಾರೋಗ್ಯ ಸಮಸ್ಯೆಗಳು ನಿಮಗೆ ಮತ್ತೆ ಕಾಡಬಹುದು. ದಾಂಪತ್ಯ ವಿಚಾರದಲ್ಲಿನ ಮನಸ್ತಾಪಗಳು ದೊಡ್ಡದಾಗಬಹುದು. ಮನೆಯಲ್ಲಿನ ವಾತಾವರಣ ಏರಿಳಿತದಿಂದ ಕೂಡಿರಬಹುದು.

ಕನ್ಯಾ ರಾಶಿ

ಈ ವಾರ ಕನ್ಯಾ ರಾಶಿಯವರಿಗೆ ಮಿಶ್ರ ಫಲವಿದೆ. ಕೆಲಸದಲ್ಲಿ ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಮೇಲಿನ ಆರೋಪಗಳಿಂದ ನೀವು ಮುಕ್ತರಾಗುತ್ತೀರಿ. ನಿಮ್ಮ ದೊಡ್ಡ ವ್ಯವಹಾರ ಮತ್ತು ಒಪ್ಪಂದಗಳಲ್ಲಿ ಯಶಸ್ಸುಗಳಿವೆ. ಬಹುಸಮಯದ ಕೆಲಸವೊಂದನ್ನು ಪೂರ್ಣ ಮಾಡುವಿರಿ. ಇದರಿಂದ ಲಾಭವಿದೆ. ನಿಮ್ಮ ಹೊಸ ಆದಾಯ ಮೂಲದಿಂದ ಲಾಭದ ಹಣ ಬರಬಹುದು. ನಿಮ್ಮ ಹೂಡಿಕೆ ಹೆಚ್ಚಾಗಲಿದೆ. ಸಂಗಾತಿಯೊಂದಿಗಿನ ಕಲಹಗಳು ಸರಿಹೋಗಲಿವೆ. ವಾಹನ ಖರೀದಿಯ ಲಾಭವಿದೆ. ಖರ್ಚುಗಳಿಂದ ಖುಷಿ ಪಡೆಯುವ ವಾರವಿದು.

English summary

Weekly Horoscope From February 16 To February 22 List Of Lucky Zodiac Signs In Kannada

Weekly Horoscope From February 16 To February 22: These zodiac get more benefits during this 7 days, read on...
X
Desktop Bottom Promotion