Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
Weekly Horoscope: ಫೆಬ್ರವರಿ 08ರಿಂದ ಫೆಬ್ರವರಿ 15ರ ವರೆಗೆ ಮೇಷದಿಂದ ಕನ್ಯಾ ರಾಶಿಯವರೆಗಿನ ವಾರ ಭವಿಷ್ಯ
ಫೆಬ್ರವರಿ 08ರಿಂದ ಫೆಬ್ರವರಿ 15ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ವಾರವು ಮಿಶ್ರಫಲದಿಂದ ಕೂಡಿರಲಿದೆ. ನೀವು ಮಾಡಬೇಕಿದ್ದ ಕೆಲಸಗಳಲ್ಲಿನ ಅಡ್ಡಿಗಳಿಂದ ನಿಮಗೆ ಮಿಶ್ರಫಲವಿದೆ. ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳುವುದು ಹಾಗೆ ವಾರದ ಅಂತ್ಯದಲ್ಲಿ ಪ್ರಯಾಣ ಮಾಡುವುದು ನೋಡಬಹುದು. ನಿಮ್ಮ ದೈನಂದಿನ ದಿನಚರಿಯಲ್ಲಿ ಸ್ವಲ್ಪ ಶಿಸ್ತು ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಹಣಕಾಸಿನ ಆದಾಯ ಸ್ಥಿರವಾಗಿರುತ್ತದೆ, ಆದರೆ ಮನೆ ಅಥವಾ ಕುಟುಂಬಕ್ಕೆ ಸಂಬಂಧಿಸಿದ ಅನಿರೀಕ್ಷಿತ ವೆಚ್ಚಗಳು ಉದ್ಭವಿಸಬಹುದು. ನಿಮ್ಮ ಕಠಿಣ ಪರಿಶ್ರಮವು ಕೆಲಸದಲ್ಲಿ ಗೋಚರಿಸುತ್ತದೆ. ಪ್ರಯಾಣ ಸಾಧ್ಯ, ಆದರೆ ಅತಿಯಾದ ಕಾರ್ಯನಿರತ ಚಟುವಟಿಕೆಗಳು ಆಯಾಸಕರವಾಗಬಹುದು. ಕುಟುಂಬದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಬೆಲೆ ಸಿಗುತ್ತದೆ. ಆರೋಗ್ಯದ ವಿಚಾರವಾಗಿ ವಾರದ ಅಂತ್ಯದಲ್ಲಿ ಸಣ್ಣ ಪುಟ್ಟ ವಿಚಾರದಲ್ಲಿ ಏರಳಿತವಿದೆ.
ವೃಷಭ ರಾಶಿ
ಈ ವಾರ ವೃಷಭ ರಾಶಿಯವರಿಗೆ ಸ್ಥಿರತೆ ಮತ್ತು ಆತ್ಮವಿಶ್ವಾಸ ತರುವ ವಾರ. ನಿಮ್ಮ ಕೆಲಸಗಳು ಅಂದುಕೊಂಡಂತೆ ನೆರವೇರಲಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣಕಾಸು ವಿಚಾರವಾಗಿ ಈ ವಾರ ಬಹಳ ಒತ್ತಡ ಅಥವಾ ಚಿಂತೆ ಕಾಡಲಿದೆ. ನಿಮ್ಮ ಖರ್ಚುಗಳಿಗೆ ಕಡಿವಾಣ ಹಾಕದಿದ್ದರೆ ದೊಡ್ಡ ಸವಾಲುಗಳು ಎದುರಾಗಬಹುದು. ಮನೆಗಾಗಿ ನೀವು ದುಬಾರಿ ವಸ್ತು ಖರೀದಿ ಸಂಭವವಿದೆ. ಆರ್ಥಿಕ ಪರಿಸ್ಥಿತಿಗಳು ಸಮತೋಲನದಲ್ಲಿರುತ್ತವೆ, ಆದರೆ ಇದೀಗ ಪ್ರಮುಖ ಹೂಡಿಕೆಗಳು ಅಥವಾ ಅಪಾಯಗಳನ್ನು ತಪ್ಪಿಸುವುದು ಬುದ್ಧಿವಂತವಾಗಿದೆ. ಕೆಲಸದಲ್ಲಿ ಪ್ರಗತಿ ಕ್ರಮೇಣವಾಗಿರುತ್ತದೆ ಮತ್ತು ಸಹೋದ್ಯೋಗಿಗಳ ಬೆಂಬಲವು ಕೆಲಸವನ್ನು ಸುಲಭಗೊಳಿಸುತ್ತದೆ. ನಿರುದ್ಯೋಗಿಗಳು ಈ ವಾರ ಉತ್ತಮ ಅವಕಾಶಗಳ ಪಡೆಯುವ ಸಾಧ್ಯತೆ ಇದೆ. ಉಳಿತಾಯದ ಕಡೆ ಹೆಚ್ಚು ಆಸಕ್ತಿ ಹೊಂದಿರುತ್ತೀರಿ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ವಾರ ಸ್ವಲ್ಪ ಅಸ್ಥಿರ ಪರಿಸ್ಥಿತಿ ಇರಲಿದೆ. ನಿಮ್ಮ ಕೆಲಸ ಕಾರ್ಯಗಳನ್ನು ಸಮಯದೊಳಗೆ ಮಾಡಬೇಕಾಗುತ್ತದೆ. ನಿಗದಿತ ಹಾಗೆ ಪೂರ್ವ ನಿಗದಿತ ಕಾರ್ಯಗಳಲ್ಲಿ ಮಿಶ್ರಫಲ ನೋಡುವಿರಿ. ಯಾರೊಂದಿಗಾದರು ನಿಮ್ಮ ಹಣಕಾಸಿನ ವಿಚಾರಗಳು ನೀವು ಅಂದುಕೊಂತೆ ಇರಲಿದೆ. ನಿಮ್ಮ ಕೌಶಲ್ಯಗಳು ನಿಮ್ಮ ಕೆಲಸಗಳಿಗೆ ನೆರವಾಗಲಿದೆ. ಸ್ವರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದವರಿಗೆ ಈ ವಾರ ಬಹಳ ಅನುಕೂಲವಿದೆ. ಕೌಟುಂಬಿಕ ವಿಚಾರವಾಗಿ ನೀವು ಬಹಳಷ್ಟು ಕೆಲಸ ಮಾಡಬೇಕಾಗುತ್ತದೆ. ವಾಹನ ವಿಚಾರದಲ್ಲಿ ಲಾಭಕ್ಕಿಂತ ಹೆಚ್ಚು ವ್ಯಯಿಸಬೇಕಾಗಬಹುದು.
ಕರ್ಕಾಟಕ ರಾಶಿ
ಈ ವಾರ ಕರ್ಕಾಟಕ ರಾಶಿಯವರಿಗೆ ಭಾವನಾತ್ಮಕ ದಿನಗಳಿವೆ. ಈ ವಾರದಲ್ಲಿ ನಿಮ್ಮ ಆರೋಗ್ಯ ಸುಧಾರಣೆಯು ನಿಮ್ಮ ಕೆಲಸದಲ್ಲಿ ತೊಡಗುವಿಕೆಗೆ ಸಹಾಯ ಮಾಡಲಿದೆ. ವ್ಯಾಪಾರಿ ವಲಯವು ದೊಡ್ಡ ಒಪ್ಪಂದಗಳಲ್ಲಿ ಭಾಗಿಯಾಗಬಹುದು. ಹೊಸ ವ್ಯವಹಾರ ಸಂಬಂಧ ನಿಮಗೆ ಲಾಭವಿದೆ. ವಾರದ ಆರಂಭದಲ್ಲಿನ ಪ್ರಯಾಣಗಲು ಸುಖಕರವಾಗಲಿವೆ. ಸಂಗಾತಿಯೊಂದಿಗಿನ ನಿಮ್ಮ ಭಾವನಾತ್ಮಕ ಸಂಪರ್ಕವು ಗಾಢವಾಗುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಸ್ಥಿರತೆಯ ಪ್ರಜ್ಞೆ ಮೇಲುಗೈ ಸಾಧಿಸುತ್ತದೆ. ಧಾರ್ಮಿಕ ಪ್ರವಾಸದ ಸಾಧ್ಯತೆಗಳಿವೆ. ಕುಟುಂಬದ ವಾತಾವರಣವು ಸಾಮರಸ್ಯದಿಂದ ಕೂಡಿರುತ್ತದೆ. ಮಕ್ಕಳ ಕುರಿತಾದ ಚಿಂತೆಗಳು ಇರಬಹುದು. ವಾರದ ಅಂತ್ಯದಲ್ಲಿ ಆರ್ಥಿಕ ವಿಚಾರಗಳಲ್ಲಿ ಹಿನ್ನಡೆ ನೋಡುವಿರಿ.
ಸಿಂಹ ರಾಶಿ
ಈ ವಾರ ಸಿಂಹ ರಾಶಿಯವರಿಗೆ ನಿಮ್ಮ ಆತ್ಮವಿಶ್ವಾಸವನ್ನು ಕೇಂದ್ರೀಕರಿಸುವ ಸಮಯ. ನಿಮ್ಮ ಬಹುಸಮಯದ ಚಿಂತೆಯೊಂದು ಶಾಶ್ವತವಾಗಿ ದೂರಾಗಲಿದೆ. ಹಣಕಾಸು ವಿಚಾರವಾಗಿ ಬಹಳ ಸಮಯದಿಂದ ಇದ್ದಂತಹ ಅಡ್ಡಿಗಳನ್ನು ನಿವಾರಿಸಿಕೊಳ್ಳುವಿರಿ. ಹೊಸ ವಸ್ತುಗಳ ಖರೀದಿಸುವಿರಿ. ನಿಮ್ಮ ಅನೇಕ ಕೆಲಸಗಳಲ್ಲಿ ಪ್ರಾಮಾಣಿಕ ಪ್ರಯತ್ನವು ಉತ್ತಮ ಫಲಿತಾಂಶಗಳ ತರಲಿದೆ. ಅನೇಕರಲ್ಲಿ ಈ ವಾರ ಪ್ರಯಾಣಗಳ ಮಾಡುವ ದಿನಗಳ ಹೊಂದಿದೆ. ಆರೋಗ್ಯದಲ್ಲಿನ ಸುಧಾರಣೆ ಕೆಲಸದ ಮೇಲೆ ಕೇಂದ್ರೀಕರಿಸಲು ಸಹಕಾರಿಯಾಗಲಿದೆ. ಕುಟುಂಬದಲ್ಲಿನ ಚಿಂತೆಯನ್ನು ನೀವು ದೂರ ಮಾಡುವಿರಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒಲಿದು ಬರುವ ಸಮಯ ಇದಾಗುತ್ತಿದೆ.
ಕನ್ಯಾ ರಾಶಿ
ಈ ವಾರ ನಿಮ್ಮ ಕೆಲಸದಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳಲು ನಿಮಗೆ ಅವಕಾಶವಿರುತ್ತದೆ. ಪ್ರೇಮ ಸಂಬಂಧಗಳು ಆಕರ್ಷಕವಾಗಿರುತ್ತವೆ, ಆದರೆ ತಾಳ್ಮೆಯೊಂದಿಗೆ ವ್ಯವಹರಿಸಿ. ನಿಮ್ಮ ಕಠಿಣ ಪರಿಶ್ರಮವನ್ನು ಗುರುತಿಸಲಾಗುತ್ತದೆ. ಆರೋಗ್ಯ ಸುಧಾರಿಸಲಿದೆ. ಹಣಕಾಸಿನ ವಿಷಯಗಳಲ್ಲಿ ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ. ವ್ಯವಹಾರ ವಿಸ್ತರಣೆ ಯೋಜನೆಗಳನ್ನು ತೆಗೆದುಕೊಳ್ಳಬಹುದು. ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ಮಕ್ಕಳ ಶಿಕ್ಷಣದ ಕುರಿತಾದ ವಿಚಾರದಲ್ಲಿ ಧನಾತ್ಮಕ ಬದಲಾವಣೆಗಳ ನೋಡುವಿರಿ. ಬಹುಸಮಯದಿಂದ ಬಾಕಿ ಉಳಿಸಿಕೊಂಡಿದ್ದ ಕೆಲವೊಂದನ್ನು ಪೂರ್ಣ ಮಾಡುವುದು ಉತ್ತಮ.



Click it and Unblock the Notifications