Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
Weekly Horoscope: ಫೆಬ್ರವರಿ 01ರಿಂದ ಫೆಬ್ರವರಿ 07ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಫೆಬ್ರವರಿ 01ರಿಂದ ಫೆಬ್ರವರಿ 07ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ವಾರದಲ್ಲಿ ಬಹಳ ಕಠಿಣ ಪರಿಶ್ರಮ ಹಾಕುವ ಸಮಯ ಆಗಿರಲಿದೆ. ನಿಮ್ಮ ಹಣಕಾಸಿನ ಚಿಂತೆಗಳಿಂದ ಈ ವಾರ ಕಳೆಯುವಿರಿ. ಆಪ್ತರೊಬ್ಬರಿಂದ ನಿಮಗೆ ದೊಡ್ಡ ಮೊತ್ತ ಕೈ ಸೇರಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣವನ್ನು ಪಡೆಯಬಹುದು. ನಿಮಗೆ ಹತ್ತಿರವಿರುವ ಯಾರೊಂದಿಗಾದರೂ ಭಿನ್ನಾಭಿಪ್ರಾಯಗಳು ಅಥವಾ ತಪ್ಪು ತಿಳುವಳಿಕೆಗಳು ಉಂಟಾಗಬಹುದು. ನಿಮ್ಮ ಖರ್ಚುಗಳ ಬಗ್ಗೆ ಜಾಗರೂಕರಾಗಿರುವುದು ಮುಖ್ಯ. ಪ್ರೇಮ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಈ ವಾರ ನಿರ್ಣಾಯಕವಾಗಿರುತ್ತದೆ. ಮನೆಯ ಸದಸ್ಯರೊಬ್ಬರ ಅನಾರೋಗ್ಯದ ಕಾರಣ ನೀವು ಪ್ರಯಾಣ ಮಾಡಬೇಕಾಗಬಹುದು.
ವೃಶ್ಚಿಕ ರಾಶಿ
ಈ ವಾರ ನೀವು ಬಹಳ ಖರ್ಚುಗಳ ಮಾಡಬಹುದು. ಮನೆಗಾಗಿ ಅಥವಾ ವೈಯಕ್ತಿಕ ಖರ್ಚುಗಳು ಹೆಚ್ಚಾಗಬಹುದು. ನೀವು ನಿಯಂತ್ರಿಸಲಾಗದ ಕೆಲವು ವಿಚಾರಗಳು ನಿಮ್ಮಲ್ಲಿ ಚಿಂತೆ ತರಬಹುದು. ವಾರದ ಮಧ್ಯದಲ್ಲಿ ನಿಮ್ಮ ಹಣಕಾಸಿನ ವಿಚಾರವು ದೊಡ್ಡ ಸವಾಲು ತರಬಹುದು. ಕೆಲಸದ ಕಡೆ ಹೆಚ್ಚು ಗಮನವಿಡುವುದು ಉತ್ತಮ. ನಿಮ್ಮ ಆರ್ಥಿಕ ಪರಿಸ್ಥಿತಿ ವಿಶೇಷವಾಗಿ ಕೆಟ್ಟದ್ದಲ್ಲ, ಆದರೆ ನೀವು ಅಸ್ಥಿರತೆಯನ್ನು ಅನುಭವಿಸಬಹುದು. ಅನಿರೀಕ್ಷಿತ ವೆಚ್ಚಗಳು ಅಥವಾ ಪಾವತಿಗಳು ಕಾಳಜಿಯನ್ನು ಉಂಟುಮಾಡಬಹುದು. ಕೆಲಸದ ವಿಚಾರವಾಗಿ ನೀವು ಪ್ರಯಾಣಗಳ ಮಾಡುವಿರಿ. ಹಾಗೆ ವೇತನ ಕುರಿತಾಗಿ ಇದ್ದಂತಹ ಸಮಸ್ಯೆಗಳು ದೂರಾಗುವ ಸಮಯ ಇದಾಗಲಿದೆ.

ಧನು ರಾಶಿ
ಈ ವಾರ ನೀವು ಪ್ರಯಾಣಗಳಲ್ಲಿ ಕಳೆಯುವಿರಿ. ಆಪ್ತರ ವಸ್ತು, ಹಣಕಾಸು ಸಂಬಂಧಿತ ವಿಚಾರವಾಗಿ ಮನಸ್ತಾಪ ಮೂಡಬಹುದು. ವಾರದ ಆರಂಭದಲ್ಲಿನ ಅನಾರೋಗ್ಯ ನಿಧಾನವಾಗಿ ಕಡಿಮೆಯಾಗಲಿದೆ. ವ್ಯಾಪಾರದಲ್ಲಿ ನಿಧಾನಗತಿ ಇರಲಿದೆ. ಕೆಲಸದಲ್ಲಿ ಹೊಸ ಅವಕಾಶಗಳು ಅಥವಾ ಹೊಸ ಸಂಪರ್ಕಗಳು ಉದ್ಭವಿಸಬಹುದು. ಈ ವಾರ ಸಮಾರಂಭಗಳು, ಸಭೆಗಳಲ್ಲಿ ನೀವು ಭಾಗಿಯಾಗುತ್ತೀರಿ. ಸ್ವಂತ ಉದ್ಯೋಗ ಮಾಡುವ ಮಂದಿಗೆ ಈ ವಾರವು ಮಿಶ್ರಫಲಗಳಿಗೆ ಕಾರಣವಾಗುತ್ತಿದೆ. ದೊಡ್ಡ ಹೂಡಿಕೆಗಳ ಮಾಡುವ ಮುನ್ನ ಆಲೋಚಿಸಿ. ಬ್ಯಾಂಕಿಂಗ್ ವಿಚಾರಗಳು, ಆಸ್ತಿ ಕುರಿತ ವಿಚಾರದಲ್ಲಿ ಧನಾತ್ಮಕ ವಿಚಾರಗಳಿವೆ. ಆರೋಗ್ಯ ಕೂಡ ಈ ವಾರದ ಅಂತ್ಯದಲ್ಲಿ ಸುಧಾರಣೆಯಾಗಲಿದೆ.
ಮಕರ ರಾಶಿ
ಈ ವಾರ ಜವಾಬ್ದಾರಿಗಳ ಹೊರೆ ಹೆಚ್ಚಾಗುತ್ತದೆ. ನಿಮ್ಮ ಕೆಲಸಗಳಲ್ಲಿ ಮತ್ತಷ್ಟು ಚಿಂತೆ ಇರಲಿದೆ, ಉದ್ಯೋಗದ ಸ್ಥಳದಲ್ಲಿನ ಒತ್ತಡದ ಕಾರಣ ನೀವು ತಾಳ್ಮೆ ಕಳೆದುಕೊಳ್ಳಬಹುದು. ಈ ಸಮಯವು ಕಠಿಣ ಪರಿಶ್ರಮವನ್ನು ಬಯಸುತ್ತದೆ, ಆದರೆ ಮಾನಸಿಕ ಧೈರ್ಯವೂ ಮುಖ್ಯವಾಗಿದೆ. ಕಚೇರಿ ಅಥವಾ ವ್ಯವಹಾರದಲ್ಲಿ ಶಿಸ್ತು ನಿರ್ಣಾಯಕವಾಗಿರುತ್ತದೆ. ನೀವು ಸೋಮಾರಿಯಾದರೆ, ವಿಷಯಗಳು ಕೈ ತಪ್ಪಬಹುದು. ಕುಟುಂಬ ವಿಚಾರಗಳಲ್ಲಿ ಆದಷ್ಟು ತಾಳ್ಮೆಯಿಂದ ಇರುವುದು ಉತ್ತಮ. ದಾಂಪತ್ಯ ವಿಚಾರದಲ್ಲಿ ನೀವು ನೋವು ಅನುಭವಿಸಬಹುದು. ವಾಹನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ವಾರದ ಅಂತ್ಯದಲ್ಲಿ ನೀವು ಕೈಗೊಳ್ಳುವ ಕೆಲವು ಪ್ರಯಾಣ ಸಂಬಂಧಿ ಕೆಲಸಗಳು ಸಂಪೂರ್ಣ ಯಶಸ್ಸಾಗದೆ ಇರಬಹುದು. ಹಣಕಾಸು ವ್ಯವಹಾರವನ್ನು ಸಹ ಎಚ್ಚರಿಕೆಯಿಂದ ಮಾಡಿ. ಪಂಚೇಂದ್ರಿಯ ಸಂಬಂಧಿ ಅನಾರೋಗ್ಯದಿಂದ ಮುಕ್ತಿ ಪಡೆಯುವ ವಾರ.
ಕುಂಭ ರಾಶಿ
ಈ ವಾರ ನಿಮಗೆ ಅನುಕೂಲಕರ ದಿನಗಳಿವೆ. ನೀವು ಬಹಳ ಸಮಯದಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳನ್ನು ಪೂರ್ಣ ಮಾಡುವಿರಿ. ವಾರದ ಆರಂಭದಿಂದಲೂ ಹಲವು ವಿಚಾರಗಳಲ್ಲಿ ನೀವು ಭಾಗಿಯಾಗುವಿರಿ. ಭವಿಷ್ಯದ ಕೆಲಸಗಳಲ್ಲಿ ನೀವು ತಯಾರಿಗಳ ಮಾಡುವಿರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿಯೇ ಇರುತ್ತದೆ, ಆದರೆ ಅನಿರೀಕ್ಷಿತ ವೆಚ್ಚಗಳು ಕಳವಳಕ್ಕೆ ಕಾರಣವಾಗಬಹುದು. ಆರೋಗ್ಯದ ದೃಷ್ಟಿಯಿಂದ, ನೀವು ಮಾನಸಿಕ ಆಯಾಸ ಮತ್ತು ಆತಂಕವನ್ನು ಅನುಭವಿಸಬಹುದು. ಮನೆಯ ಆರ್ಥಿಕ ವಿಚಾರವೊಂದು ಬಗೆಹರಿಯಲಿದೆ. ಬಹುಸಮಯದ ನಿಮ್ಮ ಬಯಕೆಯೊಂದನ್ನು ಈಡೇರಿಸಿಕೊಳ್ಳುವ ಅವಕಾಶಗಳನ್ನು ಪಡೆಯುತ್ತೀರಿ.
ಮೀನ ರಾಶಿ
ಈ ವಾರ ನಿಮ್ಮ ಹಣಕಾಸು ವಿಚಾರಗಳಲ್ಲಿ ನೆಮ್ಮಿದಿಯ ನೋಡುವಿರಿ, ಆದರೆ ಇದು ತಾತ್ಕಾಲಿಕವಾಗಬಹುದು. ದಾಂಪತ್ಯ ವಿಚಾರವಾಗಿ ಬಹಳ ಸಮಯದ ಕೆಲಸವೊಂದು ಪರಿಪೂರ್ಣವಾಗಲಿದೆ. ಹೂಡಿಕೆ, ಉಳಿತಾಯದ ಕಡೆಗೆ ನಿಮ್ಮ ಒಲವು ಹೆಚ್ಚಾಗುತ್ತದೆ. ಸಂಬಂಧಿಕರೊಂದಿಗೆ ನೀವು ಭಾವನಾತ್ಮಕ ಸಂಬಂಧ ವೃದ್ಧಿಸಿಕೊಳ್ಳುವಿರಿ. ಸ್ವಂತ ವ್ಯಾಪಾರಗಳು ದೊಡ್ಡ ಲಾಭ ನೋಡಬಹುದು. ನಿರುದ್ಯೋಗಿಗಳು ಈ ವಾರದಲ್ಲಿ ಕಠಿಣ ಪರಿಶ್ರಮದ ಮೂಲಕ ಉದ್ಯೋಗ ಪಡೆದುಕೊಳ್ಳಬಹುದು. ಗೃಹಿಣಿಯರಲ್ಲಿ ಕುಟುಂಬ ಜೀವನ ಸಂಬಂದ ಕಿರಿಕಿರಿ ಅನುಭವಿಸಬಹುದು. ನಿಮ್ಮ ಭವಿಷ್ಯ ಕುರಿತಾದ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ವಾರದ ಅಂತ್ಯವು ಹಣಕಾಸು ಒತ್ತಡದಿಂದ ಕೂಡಿರಲಿದೆ.



Click it and Unblock the Notifications











