ವಾರ ಭವಿಷ್ಯ ಪ್ರಕಾರ ಈ ವಾರ(ಡಿಸೆಂಬರ್7-14) ಈ ರಾಶಿಗಳಿಗೆ ಹೆಚ್ಚು ಶುಭವಾಗಿದೆ

ಡಿಸೆಂಬರ್ 7-14ರ ದಿನಗಳ ಈ ವಾರದ ರಾಶಿಫಲ ಪ್ರಕಾರ ಈ 7 ರಾಶಿಗಳಿಗೆ ಹೆಚ್ಚು ಅನುಕೂಲಕರವಾಗಿದೆ:

ವೃಷಭ ರಾಶಿ
ಈ ವಾರ ನಿಮಗೆ ತುಂಬಾ ಉತ್ತಮವಾಗಿರಲಿದೆ, ವಾರದ ಏಳೂ ದಿನಗಳು ಖುಷಿಯಿಂದ ಕಳೆಯಲು ಸಾಧ್ಯವಾಗುವುದು. ಕೆಲಸ ಕಾರ್ಯಗಳು ಚೆನ್ನಾಗಿ ನಡೆಯಲಿದೆ. ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ವಾರದ ಮಧ್ಯದಲ್ಲಿ ಖರ್ಚು ಹೆಚ್ಚು ಬರಬಹುದು, ಆದರೆ ಬಜೆಟ್‌ಗೆ ಹೆಚ್ಚು ಖರ್ಚು ಮಾಡಲು ಹೋಗಬೇಡಿ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ.

December 7 To 14 Weekly Horoscope

ಕರ್ಕ ರಾಶಿ
ಈ ವಾರ ನಿಮಗೆ ತುಂಬಾನೇ ಅನುಕೂಲಕರವಾಗಿದೆ, ಆರ್ಥಿಕ ಸಮಸ್ಯೆವಿದ್ದರೆ ಈ ವಾರ ನಿಮ್ಮ ಸಮಸ್ಯೆ ಕಡಿಮೆಯಾಗಲಿದೆ, ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಮನೆಯವರ ಬೆಂಬಲ ನಿಮಗಿರಲಿದೆ, ವ್ಯಾಪಾರಿಗಳು ತಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣಬಹುದು, ಈ ವಾರ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲ ಸಿಗಲಿದೆ.

ಕನ್ಯಾ ರಾಶಿ
ಈ ವಾರದ ಆರಂಭ ನಿಮಗೆ ತುಂಬಾ ಚೆನ್ನಾ ಗಿರಲಿದೆ, ನಿಮ್ಮ ಕೆಲಸ ಕಾರ್ಯಗಳಿಗೆ ಉತ್ತಮ ಫಲ ಸಿಗಲಿದೆ, ನಿಮ್ಮ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುವುದು. ಖರ್ಚುಗಳು ಬರಬಹುದು, ಆದರೆ ಆರ್ಥಿಕ ಸಮಸ್ಯೆ ಉಂಟಾಗದಂತೆ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗುವುದು. ವಿರೋಧಿಗಳ ಬಗ್ಗೆ ಜಾಗ್ರತೆವಹಿಸಿ.

ತುಲಾ ರಾಶಿ
ವಾರದ ಆರಂಭ ನಿಮಗೆ ತುಂಬಾ ಉತ್ತಮವಾಗಿರಲಿದೆ. ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ, ವಾರದ ಮಧ್ಯದಲ್ಲಿ ಕೆಲಸದಲ್ಲಿ ಒತ್ತಡವಿರಬಹುದು, ತುಂಬಾನೇ ಆಯಾಸ ಉಂಟಾಗಬಹುದು, ಆದರೆ ವಾರಾಂತ್ಯ ನಿಮಗೆ ಚೆನ್ನಾಗಿರಲಿದೆ, ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ಕುಟುಂಬದ ಜೊತೆಗೆ ಸಂತೋಷದಿಂದ ಸಮಯ ಕಳೆಯಲು ಸಾಧ್ಯವಾಗುವುದು.

ವೃಶ್ಚಿಕ ರಾಶಿ
ಈ ವಾರ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ, ಕೆಲಸ ಕಾರ್ಯವನ್ನು ಲವಲವಿಕೆಯಿಂದ ಮಾಡಿ ಮುಗಿಸಲು ಸಾಧ್ಯವಾಗುವುದು, ಕೆಲಸದಲ್ಲಿ ನೀವು ಬಯಸಿದಂತೆ ಉತ್ತಮ ಫಲಿತಾಂಶ ದೊರೆಯಲಿದೆ. ಒಡಹುಟ್ಟಿದವರ ಬೆಂಬಲ ನಿಮಗಿರಲಿದೆ. ಹೂಡಿಕೆಗೆ ಈ ಅವಧಿ ಉತ್ತಮವಾಗಿರಲಿದೆ, ಆಸ್ತಿ ಸಂಬಂಧಿಸಿದ ಹೂಡಿಕೆ ನಿಮಗೆ ಲಾಭ ತರಲಿದೆ.

ಮಕರ ರಾಶಿ
ಮಕರ ರಾಶಿಯವರಿಗೆ ಈ ವಾರ ಅನುಕೂಲಕರವಾಗಿದೆ. ಮಕ್ಕಳ ಸಾಧನೆ ಖುಷಿ ತರಲಿದೆ. ಹೊಸ ಕೆಲಸ ಪ್ರಾರಂಭಿಸಲು ಯೋಚಿಸುತ್ತಿದ್ದರೆ ಅದಕ್ಕೆ ಈ ಅವಧಿ ತುಂಬಾನೇ ಅನುಕೂಲಕರವಾಗಿದೆ. ಹೂಡಿಕೆಗೆ ಈ ಸಮಯ ನಿಮಗೆ ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಇನ್ನು ಸಾಲ ಪಡೆದಿದ್ದರೆ ಅದನ್ನು ಮರಳಿಸಲು ಕೂಡ ಈ ಅವಧಿಯಲ್ಲಿ ಸಾಧ್ಯವಾಗಲಿದೆ.

ಕುಂಭ ರಾಶಿ
ಈ ವಾರ ನಿಮಗೆ ಅನುಕೂಲಕರವಾಗಿರಲಿದೆ, ಆರ್ಥಿಕವಾಗಿ ಪ್ರಯೋಜನ ಪಡೆಯುತ್ತೀರಿ, ವ್ಯಾಪಾರಿಗಳು ಲಾಭ ಗಳಿಸುತ್ತೀರಿ, ಬೇರೆ ಕಡೆ ಕೆಲಸಕ್ಕೆ ಶ್ರಮಿಸುತ್ತಿರುವವರೆಗೆ ಹೊಸ ಅವಕಾಶಗಳು ದೊರೆಯಲಿದೆ, ವಾರದ ಕೊನೆಯಲ್ಲಿ ಕೆಲಸದ ಕಡೆಗೆ, ಖರ್ಚಿನ ಕಡೆಗೆ ಗಮನಹರಿಸುವುದು ಒಳ್ಳೆಯದು ಎಂದು ಸಲಹೆ ನೀಡಲಾಗುವುದು.

ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Horoscope From December 7 To 14: This Week Lucky To 7 Zodiac Signs In Kannada

Weekly Horoscope From December 7 To 14: These 7 zodiac gets more benefits, read on.
Story first published: Saturday, December 7, 2024, 16:04 [IST]
X
Desktop Bottom Promotion