Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Weekly Horoscope: ಡಿಸೆಂಬರ್ 29 ರಿಂದ ಜನವರಿ 05ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ರಾಶಿಫಲ
ತುಲಾ ರಾಶಿ
ಈ ವಾರ ನಿಮಗೆ ಅನುಕೂಲಕರ ವಾತಾವರಗಳಿವೆ. ನಿಮ್ಮ ಎಲ್ಲಾ ಪ್ರಯಾಣಗಳು ಸುಖಕರವಾಗುತ್ತದೆ. ಪ್ರಭಾವಿ ವ್ಯಕ್ತಿಯೊಬ್ಬರನ್ನು ನೀವು ಭೇಟಿಯಾಗು ಸಂದರ್ಭ ಒದಗಿ ಬರಲಿದೆ. ಕೃಷಿ ಸಂಬಂಧಿತ ವಿಚಾರದಲ್ಲಿ ನಿಮಗೆ ಶುಭವಾಗುತ್ತದೆ. ಆರೋಗ್ಯ, ಸಂಪತ್ತು ಮತ್ತು ಸಂಬಂಧಗಳು ಎಂಬ ಮೂರು ಕ್ಷೇತ್ರಗಳಲ್ಲಿಯೂ ಬಲಗಳು ಕಂಡುಬರುತ್ತವೆ. ವಾರದ ಮಧ್ಯಭಾಗವು ಗಮನಾರ್ಹ ಆರ್ಥಿಕ ಲಾಭಗಳ ತರಲಿದೆ. ಮನೆ ನಿರ್ಮಾಣ, ವಾಹನ ಖರೀದಿ, ರಿಯಲ್ ಎಸ್ಟೇಟ್ ಸಂಬಂಧಿತ ವಿಚಾರದಲ್ಲಿ ಶುಭವಾಗುತ್ತದೆ. ನಿಮ್ಮ ದೊಡ್ಡ ಕೆಲಸವೊಂದಕ್ಕೆ ಹಣಕಾಸು ನಿಮ್ಮ ಕೈ ಸೇರಲಿದೆ. ಆರೋಗ್ಯ ಸುಧಾರಣೆ ಇದೆ.
ವೃಶ್ಚಿಕ ರಾಶಿ
ಈ ವಾರ ವೃಶ್ಚಿಕ ರಾಶಿಯವರಿಗೆ ಅತ್ಯಂತ ಶುಭ ಮತ್ತು ಸಕಾರಾತ್ಮಕ ದಿನಗಳ ನೋಡಬಹುದು. ವಾರದ ಆರಂಭದಲ್ಲಿ ನೀವು ಸಂಪೂರ್ಣ ಕುಟುಂಬ ಬೆಂಬಲವನ್ನು ಪಡೆಯುತ್ತೀರಿ. ಇದು ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ನಿಮ್ಮ ಹಲವು ಹಣಕಾಸಿನ ವಿಚಾರಗಳು ಈ ವಾರದಲ್ಲಿ ವೇಗ ಪಡೆದುಕೊಳ್ಳುತ್ತವೆ. ಹೊಸ ಸಾಲ ಮಾಡುವುದು ಅಥವಾ ಹಣ ಗಳಿಸುವ ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಬಹುದು. ಪ್ರೇಮಿಗಳಿಗೆ ಅಥವಾ ದಾಂಪತ್ಯ ಸಂಬಂಧಿತ ವಿಚಾರದಲ್ಲಿ ಈ ವಾರವು ನಿಮಗೆ ಸಾಮಾನ್ಯ ಫಲಿತಾಂಶಗಳ ತರಲಿದೆ. ವೃತ್ತಿ ಪರರಿಗೆ ಈ ವಾರ ಪ್ರಯಾಣಗಳಿಂದ ತುಂಬಿರಲಿದೆ. ಆಸ್ಪತ್ರೆ ಸಂಬಂಧಿ ವಿಚಾರದಲ್ಲಿ ಹಣ ಖರ್ಚು ಮಾಡಬೇಕಾಗುತ್ತದೆ. ವ್ಯಾಪಾರ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ತೊಡಗಿರುವವರಿಗೆ ಮೆಚ್ಚುಗೆಯೊಂದಿಗೆ ದೊಡ್ಡ ಆರ್ಡರ್ ಅಥವಾ ಹೊಸ ಅವಕಾಶ ಸಿಗಬಹುದು. ನಿಮ್ಮ ಮಾತು ಪರಿಣಾಮಕಾರಿಯಾಗಿರುತ್ತದೆ. ನಿಮಗಾಗಿ ಹಲವು ವಿಚಾರಗಳಲ್ಲಿ ಅಥವಾ ದೊಡ್ಡ ಸಮಸ್ಯೆಗಳಿಂದ ಪಾರಾಗಲು, ಪರಿಹಾರ ಪಡೆಯಲು ಈ ವಾರದಲ್ಲಿ ಮುಂದಾಗಬಹುದು.

ಧನು ರಾಶಿ
ಈ ವಾರ ಮತ್ತು ವಾರದ ಆರಂಭವು ಧನು ರಾಶಿಯವರಿಗೆ ಅತ್ಯುತ್ತಮವಾಗಿರುತ್ತದೆ. ವಾರದ ಆರಂಭಿಕ ದಿನಗಳಲ್ಲಿ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಧನಾತ್ಮಕ ವಿಚಾರಗಳ ಕೇಳುವಿರಿ, ಮನೆಯಲ್ಲಿನ ದೊಡ್ಡ ಸಮಸ್ಯೆಯೊಂದು ದೂರಾಗಲಿದೆ. ಅದ್ರಲ್ಲೂ ಬಹು ಸಮಯದಿಂದ ನಿಮಗೆ ಸಾಲದ ಸಮಸ್ಯೆ ಅಥವಾ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದರೆ ಈ ಸಮಯದಲ್ಲಿ ಅದರಿಂದ ತಾತ್ಕಾಲಿಕ ಪರಿಹಾರ ಪಡೆಯಬಹುದು. ವಾರದ ಮಧ್ಯಾಂತರದಲ್ಲಿ ನಿಮ್ಮ ನಿಮ್ಮ ಆರೋಗ್ಯ ಸಂಬಂಧ ಖರ್ಚುಗಳಿವೆ. ಪ್ರಯಾಣಗಳಲ್ಲಿ ನೀವು ಅಂದುಕೊಂಡ ಫಲಿತಾಂಶ ಸಿಗದೆ ಇರಬಹುದು. ಅವಿವಾಹಿತರಲ್ಲಿ ಖರ್ಚುಗಳು ಹೆಚ್ಚಾಗುವ ವಾರವಿದು. ಉದ್ಯೋಗದಲ್ಲಿರುವವರಿಗೆ ಹೊಸ ವ್ಯಾಪಾರ ಪಾಲುದಾರರನ್ನು ಸೂಚಿಸುತ್ತದೆ. ಹೊಸ ಹೂಡಿಕೆ ಆಯ್ಕೆಗಳು ಹೊರಹೊಮ್ಮುತ್ತವೆ ಮತ್ತು ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.
ಮಕರ ರಾಶಿ
ವೃತ್ತಿ ಮತ್ತು ಹಣಕಾಸಿನ ವಿಷಯದಲ್ಲಿ ಮಕರ ರಾಶಿಯವರಿಗೆ ಈ ವಾರ ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಐಟಿ, ಸಾಫ್ಟ್‌ವೇರ್, ಹಾರ್ಡ್‌ವೇರ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ಬಡ್ತಿ, ವೇತನ ಹೆಚ್ಚಳದಂತಹ ವಿಚಾರಗಳು ಕೇಳಿ ಬರಲಿವೆ. ವಾರದ ಕೊನೆಯಲ್ಲಿ ವಿದೇಶ ಪ್ರವಾಸ, ವೈಯಕ್ತಿಕ ಅಥವಾ ವ್ಯವಹಾರದ ದೃಷ್ಟಿಯಲ್ಲಿ ಲಾಭಕರ. ಆಧ್ಯಾತ್ಮಿಕ ಒಲವು ಹೆಚ್ಚಾಗುತ್ತದೆ. ದಾಂಪತ್ಯದಲ್ಲಿನ ಮುನಿಸುಗಳು ಕಡಿಮೆಯಾಗುವುದು ನೋಡಬಹುದು. ಮನೆಯ ಮುಖ್ಯ ವಸ್ತುವೊಂದು ದುರಸ್ಥಿಯಾಗಬಹುದು.
ಕುಂಭ ರಾಶಿ
ಈ ಅವಧಿಯು ಸಾಧನೆಗಳು ಮತ್ತು ಆರ್ಥಿಕ ಲಾಭಗಳಿಂದ ತುಂಬಿರುತ್ತದೆ. ವಾರದ ಆರಂಭವು ಹಣಕಾಸಿನ ಸಮಸ್ಯೆಯಿಂದ ಕೂಡಿರಬಹುದು. ಆದ್ರೆ ಕೆಲ ದಿನದಲ್ಲಿ ನಿಮ್ಮ ಹಲವು ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಪಡೆಯಲಿದ್ದೀರಿ. ನಿಮ್ಮಿಂದಾಗಿ ದೊಡ್ಡ ಲಾಭದ ಕೆಲಸಗಳು ನಡೆಯಲಿದೆ. ವ್ಯಾಪಾರ ವಹಿವಾಟುಗಳು ಯಶಸ್ವಿಯಾಗುತ್ತವೆ. ನಿರುದ್ಯೋಗಿಗಳೂ ಈ ವಾರದಲ್ಲಿ ಉತ್ತಮ ಅವಕಾಶಗಳ ಪಡೆಯಬಹುದು. ನಿಮ್ಮ ಮನೆ, ವಸ್ತು ಖರೀದಿಯಂತಹ ಬಯಕೆಗಳ ಈಡೇರಿಸಿಕೊಳ್ಳಲು ಇದು ಅತ್ಯಂತ ಶುಭ ಸಮಯ ಆಗಿರಲಿದೆ. ದಾಂಪತ್ಯದಲ್ಲಿನ ಮನಸ್ತಾಪಗಳು ವಾರದ ಅಂತ್ಯದಲ್ಲಿ ಕೊನೆಯಾಗಬಹುದು. ಹೂಡಿಕೆ ಹಾಗೂ ಉಳಿತಾಯದಲ್ಲಿ ನಿಮಗೆ ಉತ್ತಮ ದಿನಗಳಿವೆ.
ಮೀನ ರಾಶಿ
ಮೀನ ರಾಶಿಯವರು ಕೆಲವು ಮಾನಸಿಕ ಆತಂಕ ಮತ್ತು ಆರೋಗ್ಯ ಕಾಳಜಿಗಳೊಂದಿಗೆ ಈ ವಾರವನ್ನು ಕಳೆಯಬಹುದು. ಅದ್ರಲ್ಲೂ ಮನೆಯ ವಿಚಾರವೊಂದು ನಿಮಗೆ ಚಿಂತೆ ತರಬಹುದು. ಮಕ್ಕಳ ಆರೋಗ್ಯ ಸಂಬಂಧಿತ ವಿಚಾರದಲ್ಲಿ ಪ್ರಯಾಣಗಳ ಮಾಡಬೇಕಾಗುತ್ತದೆ. ಉದ್ಯೋಗದಲ್ಲಿರುವ ವ್ಯಕ್ತಿಗಳು ವಾರದ ಮಧ್ಯದಲ್ಲಿ ಪ್ರಶಂಸೆ, ಬಡ್ತಿ ಅಥವಾ ಹೊಸ ಉದ್ಯೋಗಾವಕಾಶವನ್ನು ಪಡೆಯಬಹುದು. ಈ ಸಮಯವು ನಿರುದ್ಯೋಗಿಗಳಿಗೆ ವಿಶೇಷವಾಗಿ ಅನುಕೂಲಕರವಾಗಿರುತ್ತದೆ. ವ್ಯಾಪಾರಿಗಳಿಗೆ ಹಳೆಯ ಸಾಲ ಮರುಪಾವತಿಯಾಗುವ ಸಮಯವಿದು. ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಮಿಶ್ರಫಲವಿದೆ. ಶನಿಯ ಪ್ರಭಾವ ನಿಮ್ಮಲ್ಲಿ ಮುಂದುವರೆಯಲಿದೆ.



Click it and Unblock the Notifications




