Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Weekly Horoscope: ಡಿಸೆಂಬರ್ 29 ರಿಂದ ಜನವರಿ 05ರ ವರೆಗೆ ಮೇಷದಿಂದ ಕನ್ಯಾರಾಶಿವರೆಗಿನ ನಿಮ್ಮ ರಾಶಿಫಲ
ಮೇಷ ರಾಶಿ
ಮೇಷ ರಾಶಿಯವರಿಗೆ ಈ ವಾರದ ಆರಂಭದಲ್ಲಿ ಹಣಕಾಸು ಒತ್ತಡಗಳಿವೆ. ನಿಮ್ಮ ಹಲವು ಕೆಲಸಗಳಿ ಮುಂದೂಡಲ್ಪಡುತ್ತದೆ. ಹಾಗೆ ಹಲವು ವ್ಯವಹಾರಗಳು ತಟಸ್ಥ ಸ್ಥಿತಿ ತಲುಪಲಿವೆ. ಈ ಸಮಯದಲ್ಲಿ ನಿಮ್ಮ ಆರೋಗ್ಯವು ಸುಧಾರಿಸಲಿದೆ. ಆತ್ಮವಿಶ್ವಾಸದಿಂದ ಹಲವು ಕೆಲಸಗಳನ್ನು ಮಾಡಿ ಮುಗಿಸುವಿರಿ. ವಾರದ ಮಧ್ಯದಲ್ಲಿ ನಿಮ್ಮ ಹೂಡಿಕೆಗಳು ಮತ್ತೆ ಉತ್ತಮ ಸ್ಥಿತಿ ತಲುಪಲಿವೆ. ಹಾಗೆ ಬಹು ಸಮಯದಿಂದ ಮಾಡಲು ಬಯಸಿದ್ದ ಕೆಲಸಗಳನ್ನು ಈ ವಾರದ ಮಧ್ಯದಲ್ಲಿ ಮಾಡಿ ಮುಗಿಸುವಿರಿ. ವಾರಾಂತ್ಯದಲ್ಲಿ ಹಲವು ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಪ್ರಯಾಣಗಳಲ್ಲಿ ಸುಖವಿರಲಿದೆ. ವಾಹನ ಕುರಿತಾದ ಲಾಭಗಳು ದ್ವಿಗುಣವಾಗುವುದು. ವಾರಾಂತ್ಯದಲ್ಲಿ ಧನಲಾಭವೂ ಇದೆ.
ವೃಷಭ ರಾಶಿ
ನಿಮಗೆ ಈ ವಾರ ಮಿಶ್ರಫಲದಿಂದ ಕೂಡಿರಲಿದೆ. ಬಹು ಸಮಯದ ನಿಮಗೆ ಅಡ್ಡಿಯಾದ ವಿಚಾರವೊಂದು ಕೆಲಸಕ್ಕೆ ಮತ್ತೆ ಅಡ್ಡಿಗಳ ತರಬಹುದು. ವಾರದ ಆರಂಭದಲ್ಲಿ ಹಣಕಾಸು ವಿಚಾರದಲ್ಲಿ ಸವಾಲುಗಳು ಮೂಡಬಹುದು. ಕಾಲೋಚಿತ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಮಾನಸಿಕ ಒತ್ತಡಗಳು, ಆರೋಗ್ಯ ಸಮಸ್ಯೆಗಳು, ಆರ್ಥಿಕ ಒತ್ತಡಗಳು ವಾರಾದ ಮಧ್ಯದಲ್ಲಿ ಮತ್ತಷ್ಟು ಹೆಚ್ಚಾಗಬಹುದು. ವಾರಾಂತ್ಯದಲ್ಲಿ ನೀವು ಅಂದುಕೊಂಡಿದ್ದ ಕೆಲಸವೊಂದನ್ನು ಮಾಡಿ ಮುಗಿಸುವಿರಿ. ವಾಹನ ಕುರಿಯಾಗಿ ಇದ್ದಂತಹ ಖರ್ಚುಗಳು ಕಡಿಮೆಯಾಗಲಿದೆ. ದಾಂಪತ್ಯ ವಿಚಾರವಾಗಿ ನಿಮಗೆ ದೊಡ್ಡ ಅಡ್ಡಿಗಳನ್ನು ನಿವಾರಿಸಿಕೊಳ್ಳುವ ಮಾರ್ಗ ಸಿಗಲಿದೆ. ಮನೆ ಬದಲಾಯಿಸುವುದು, ಹೊಸ ವಸ್ತು ಖರೀದಿಯಲ್ಲೂ ಶುಭವಿದೆ.

ಮಿಥುನ ರಾಶಿ
ಈ ವಾರ ಮಿಥುನ ರಾಶಿಯವರಿಗೆ ಮಿಶ್ರ ಫಲಿತಾಂಶಗಳ ತರಲಿದೆ. ನೀವು ಬಹು ಸಮಯದ ಕೆಲಸಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸುವಿರಿ. ನಿಮ್ಮ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ವಾರವಿದು. ಕುಟುಂಬಸ್ಥರೊಂದಿಗೆ ಪ್ರವಾಸಕ್ಕೆ ತೆರಳಬಹುದು. ನಿಮ್ಮ ಹಲವು ವ್ಯವಹಾರಗಳಲ್ಲಿ ಮನೆಯವರ ಬೆಂಬಲ ನೋಡಬಹುದು. ವಾರದ ಆರಂಭದಲ್ಲಿ ನೀವು ಆತ್ಮವಿಶ್ವಾಸದ ಕೊರತೆ ಮತ್ತು ಮಾನಸಿಕ ಒತ್ತಡವನ್ನು ಅನುಭವಿಸಬಹುದು, ಇದು ನಿರ್ಧಾರಗಳನ್ನು ಅನಿರ್ದಿಷ್ಟವಾಗಿಸುತ್ತದೆ. ವಾರದ ಮಧ್ಯಭಾಗವು ಹಳೆಯ ಹೂಡಿಕೆಗಳಿಂದ ಲಾಭ ಮತ್ತು ನಿಮ್ಮ ವೃತ್ತಿಪರ ಜೀವನದಲ್ಲಿ ಪ್ರಗತಿಯನ್ನು ಸೂಚಿಸುತ್ತದೆ. ವಾರದ ಅಂತ್ಯದ ವೇಳೆಗೆ ಸ್ಥಳಾಂತರ, ಪ್ರಯಾಣ ಅಥವಾ ಹಠಾತ್ ಆರ್ಥಿಕ ಲಾಭದ ಸಾಧ್ಯತೆಗಳಿವೆ.
ಕರ್ಕ ರಾಶಿ
ವಾರದ ಆರಂಭದಲ್ಲಿ ನಿಮಗೆ ಶುಭವಿದೆ. ನಿಮ್ಮ ಕೆಲಸ ಕಾರ್ಯಗಳು ಬಹಳ ಅನುಕೂಲಕರವಾಗಿ ಇರಲಿದೆ. ಕೆಲವು ಆರೋಗ್ಯ ವೆಚ್ಚಗಳು, ಪ್ರಯಾಣಗಳು, ಮನೆಗಾಗಿ ಖರ್ಚುಗಳ ಮಾಡಬೇಕಾಗುತ್ತದೆ. ವಾರದ ಮಧ್ಯದಲ್ಲಿ ಉದ್ಯೋಗ, ವ್ಯವಹಾರ ಮತ್ತು ಆದಾಯದಲ್ಲಿ ಸ್ಪಷ್ಟ ಸುಧಾರಣೆ ಕಂಡುಬರುತ್ತದೆ. ವಿದೇಶಿ ಕೆಲಸ, ವೀಸಾಗಳು, ಬಡ್ತಿಗಳು ಅಥವಾ ಅಂತರರಾಷ್ಟ್ರೀಯ ಸಂಪರ್ಕಗಳನ್ನು ಬಲಪಡಿಸುವ ಸಾಧ್ಯತೆಗಳಿವೆ. ವಾರಾಂತ್ಯದಲ್ಲಿನ ಖರ್ಚುಗಳು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಹಲವು ಆರ್ಥಿಕ ವಿಚಾರಗಳಲ್ಲಿ ಒತ್ತಡ ನೋಡಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡಕ್ಕೆ ಸಿಲುಕಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ವಾರದ ಆರಂಭವು ಸ್ವಲ್ಪ ಸವಾಲಿನದ್ದಾಗಿರಬಹುದು, ಇದು ಮಾನಸಿಕ ಅತೃಪ್ತಿ ಮತ್ತು ಒತ್ತಡದ ಭಾವನೆಗಳಿಗೆ ಕಾರಣವಾಗಬಹುದು. ಆದಾಗ್ಯೂ ವಾರ ಮುಂದುವರೆದಂತೆ ಸಂದರ್ಭಗಳು ಹೆಚ್ಚಾಗಿ ನಿಮ್ಮ ಪರವಾಗಿ ತಿರುಗುತ್ತವೆ. ವಾರದ ಮಧ್ಯಭಾಗವು ಷೇರು ಮಾರುಕಟ್ಟೆ, ಹೂಡಿಕೆಗಳು ಮತ್ತು ಸೃಜನಶೀಲ ಕ್ಷೇತ್ರಗಳಿಂದ ಲಾಭವನ್ನು ಸೂಚಿಸುತ್ತದೆ. ವಾರದ ಅಂತ್ಯದ ವೇಳೆಗೆ ನಿಮ್ಮ ಹಣಕಾಸು ವ್ಯವಹಾರವು ನಿಮ್ಮ ಪರವಾಗಿರಲಿದೆ. ಸಾಲ ಮರುಪಾವತಿ ಆಗಲಿದೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಅನುಕೂಲವಿದೆ. ಕುಟುಂಬಕ್ಕಾಗಿ ನೀವು ಹಣ ವ್ಯಯಮಾಡುತ್ತೀರಿ. ವ್ಯಾಪಾರಿಗಳು ಈ ವಾರದಂದು ಮಿಶ್ರಫಲ ಅನುಭವಿಸಲಿದ್ದಾರೆ.
ಕನ್ಯಾ ರಾಶಿ
ವಾರದ ಮೊದಲಾರ್ಧವು ಕನ್ಯಾ ರಾಶಿಯವರಿಗೆ ವಿಶೇಷವಾಗಿ ಆರೋಗ್ಯ ಮತ್ತು ಸಂಬಂಧಗಳ ಕುರಿತಾದ ವಿಚಾರದಲ್ಲಿ ಉತ್ತಮವಾಗಿರುತ್ತದೆ. ವಾರದ ಮಧ್ಯಭಾಗವು ಆರ್ಥಿಕ ಲಾಭಗಳು ಆಸ್ತಿ ಸಂಬಂಧಿತ ಲಾಭಗಳು ಮತ್ತು ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ.ಈ ವಾರದಲ್ಲಿ ಕುಟುಂಬಸ್ಥರು, ಸ್ನೇಹಿತರೊಂದಿಗೆ ನೀವು ತಾಳ್ಮೆಯಿಂದ ವರ್ತಿಸುವುದು ಉತ್ತಮ. ಕುಟುಂಬ ಸಂತೋಷ, ಸಾಮಾಜಿಕ ಕಾರ್ಯಕ್ರಮಗಳು, ಪಾರ್ಟಿಗಳು ಅಥವಾ ಪ್ರಯಾಣವನ್ನು ತರಲಿದೆ. ವಿದ್ಯಾರ್ಥಿಗಳು ಓದಿನತ್ತ ಗಮನಹರಿಸಬೇಕು. ನಿಮ್ಮ ವ್ಯವಹಾರದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪವು ದೊಡ್ಡ ಹೊಡೆತ ನೀಡಬಹುದು. ಪ್ರೇಮಿಗಳಿಗೆ ಈ ವಾರ ಬಹಳ ಅನುಕೂಲವಿದೆ.



Click it and Unblock the Notifications











