Weekly Horoscope: ಡಿಸೆಂಬರ್ 22 ರಿಂದ ಡಿಸೆಂಬರ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ನಿಮ್ಮ ರಾಶಿಫಲ

ಡಿಸೆಂಬರ್ 22ರಿಂದ ಡಿಸೆಂಬರ್ 29ರ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...

ತುಲಾ ರಾಶಿ

ತುಲಾ ರಾಶಿಯವರಿಗೆ ಈ ವಾರ ಸ್ವಲ್ಪ ಏರಿಳಿತದ ವಾರ ಆಗಿರಲಿದೆ. ಮನೆ ಅಲಂಕಾರ ಅಥವಾ ಮನೆ ದುರಸ್ತಿಗಾಗಿ ಗಣನೀಯ ಪ್ರಮಾಣದ ಹಣವನ್ನು ಖರ್ಚು ಮಾಡಬಹುದು. ಈ ಅವಧಿಯು ನಿಮ್ಮ ವ್ಯವಹಾರದಲ್ಲಿ ಕೆಲವು ಏರಿಳಿತಗಳ ಅವಧಿಯಾಗಿದ್ದು, ನಿಮ್ಮ ಆದಾಯ ಮತ್ತು ವೆಚ್ಚಗಳಲ್ಲಿ ಅಸಮತೋಲನವಿರುತ್ತದೆ. ಕಾಗದ ಪತ್ರ, ಸರ್ಕಾರಿ ದಾಖಲೆಗಳ ವಿಚಾರದಲ್ಲಿ ಈ ವಾರ ಓಡಾಟಗಳು ಹೆಚ್ಚಾಗಲಿವೆ. ಶುಭ ಕಾರ್ಯ ಸಂಬಂಧಿತ ವಿಚಾರವಾಗಿ ಚರ್ಚೆಗಳಲ್ಲಿ ನೀವು ಭಾಗಿಯಾಗುತ್ತೀರಿ. ಸಮಾಜಮುಖಿ ಕಾರ್ಯಗಳು ನಿಮ್ಮಿಂದ ಅಪೇಕ್ಷಿಸಬಹುದು. ಕುಟುಂಬಸ್ಥರೊಂದಿಗೆ ದೇವಾಲಯ ಭೇಟಿಯ ಸಾಧಯತೆ ಇದೆ. ಕುಟುಂಬದ ಕಿರಿಯ ಸದಸ್ಯರ ಆರೋಗ್ಯದ ಕಡೆ ಗಮನವಿಡಿ.

ವೃಶ್ಚಿಕ ರಾಶಿ

ಈ ವಾರ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲವಿದೆ. ನೀವು ಕೆಲಸಕ್ಕೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸಬಹುದು. ಅದ್ರಲ್ಲೂ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುವ ಘಟನೆಗಳು ನಡೆಯಬಹುದು. ಉದರ ಸಂಬಂಧಿ ಅನಾರೋಗ್ಯ ಎದುರಿಸುತ್ತಿದ್ದ ಮಂದಿ ಈ ಸಮಯದಲ್ಲಿ ದೊಡ್ಡ ಹಿನ್ನಡೆ ಅನುಭವಿಸಬಹುದು. ಮನೆಯಲ್ಲಿ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಬಹಳಷ್ಟು ಭಿನ್ನಾಭಿಪ್ರಾಯಗಳು ಎದುರಾಗಲಿದೆ. ಖರ್ಚುಗಳ ಮೇಲೆ ಹಿಡಿಯ ಸಾಧಿಸಬೇಕಾಗುತ್ತದೆ. ಕಠಿಣ ಪರಿಶ್ರಮಗಳಲ್ಲಿ ನಮಗೆ ಶುಭವಿದೆ. ವಾಹನ ಲಾಭವನ್ನು ನಿರೀಕ್ಷಿಸಬಹುದು. ಯಾರಿಂದಾದರು ಸಾಲ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡ ಎದುರಿಸಬಹುದು.

Weekly Horoscope From December 22 To December 29

ಧನು ರಾಶಿ

ಈ ವಾರ ಧನು ರಾಶಿ ಜನರಿಗೆ ಸಾಕಷ್ಟು ಕಾರ್ಯನಿರತರಾಗಬೇಕಾದ ವಾರ. ವಾರದ ಆರಂಭದಲ್ಲಿ ನೀವು ವೃತ್ತಿ ಅಥವಾ ವ್ಯವಹಾರ ಉದ್ದೇಶಗಳಿಗಾಗಿ ದೀರ್ಘ ಪ್ರಯಾಣವನ್ನು ಕೈಗೊಳ್ಳಬೇಕಾಗಬಹುದು. ನಿಮ್ಮ ವೈಯಕ್ತಿಕ ಪ್ರವಾಸವನ್ನು ವ್ಯಾಪಾರ ಪ್ರವಾಸವಾಗಿ ಪರಿವರ್ತಿಸುವ ಸಾಧ್ಯತೆಯಿದೆ. ನಿಮ್ಮ ಹಣಕಾಸಿನ ವ್ಯವಹಾರದಲ್ಲಿದ್ದ ದೊಡ್ಡ ಅಡಚಣೆಯೊಂದು ನಿವಾರಣೆಯಾಗಲಿದೆ. ಮಕ್ಕಳ ಕುರಿತಾದ ಹಾಗೆ ಮನೆಯ ಕುರಿತಾದ ಚಿಂತೆಯೊಂದು ವಾರದ ಮಧ್ಯಂತರದವರೆಗೂ ನಿಮಗೆ ಕಾಡಬಹುದು. ಉದ್ಯೋಗ ಸಂಬಂಧವಾಗಿ ಈ ಹಿಂದೆ ಮಾಡಿದ್ದ ತಪ್ಪಗಳ ತಿದ್ದುಕೊಳ್ಳುವುದು ಉತ್ತಮ. ವಾಹನ ಸಂಬಂಧವಾಗಿ ಈ ವಾರ ಖರ್ಚುಗಳಿವೆ. ಹಿತ ಶತ್ರುಗಳಿಂದ ಹಾಗೆ ಸಾಲ ನೀಡುವ ಕೆಲಸದಿಂದ ದೂರವಿರಿ. ವೈವಾಹಿಕ ಸಂಬಂಧದಲ್ಲಿ ಶುಭವಾಗುತ್ತದೆ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ.

ಮಕರ ರಾಶಿ

ಮಕರ ರಾಶಿ ಜನರಿಗೆ ಈ ವಾರ ದುಬಾರಿಯಾಗಬಹುದು. ನಿಮ್ಮ ಆರೋಗ್ಯದಲ್ಲಿನ ಏರುಪೇರು ವಾರದ ಆರಂಭದಲ್ಲಿ ಚಿಂತೆ ಹಾಗೂ ಕೆಲಸಗಳಲ್ಲಿ ಹಿನ್ನಡೆ ತರಲು ಕಾರಣಾಗಲಿದೆ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿವಾದಗಳು ನಿಮ್ಮನ್ನು ಚಿಂತೆಗೀಡು ಮಾಡಬಹುದು. ಪೂರ್ವಜರ ಆಸ್ತಿ ಸಂಬಂಧಿತ ಕಲಹಗಳು ನಿವಾರಣೆಯಾಗಬಹುದು. ಅವಿವಾಹಿತರು ಹಲವು ಅಡ್ಡಿಗಳಿಂದ ದೂರಾಗಬಹುದು. ನೀವು ಹೊಸ ಉದ್ಯಮವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ನೀವು ಸಂಪನ್ಮೂಲಗಳ ಕೊರತೆಯ ಎದುರಿಸಬೇಕಾಗುತ್ತದೆ. ನಿಮ್ಮ ಪ್ರೇಮ ಸಂಬಂಧದಲ್ಲಿನ ತೊಂದರೆಗಳನ್ನು ಹಗುರವಾಗಿ ಪರಿಗಣಿಸಬೇಡಿ. ದೇವಾಲಯ ಭೇಟಿಯ ಬಲವಾದ ಸಾಧ್ಯತೆಗಳಿವೆ.

ಕುಂಭ ರಾಶಿ

ಈ ವಾರ ಕುಂಭ ರಾಶಿಯವರಿಗೆ ಶುಭ ಸಂಕೇತಗಳಿವೆ. ಹಲವು ದಿನದಿಂದ ಅಪೂರ್ಣವಾಗಿದ್ದ ಕೆಲಸಗಳು ಈ ವಾರ ಪೂರ್ಣವಾಗಲಿವೆ. ನಿಮ್ಮ ಹಲವು ವಿಚಾರಗಳಲ್ಲಿ ಇದ್ದಂತಹ ಅಪಾಯಗಳು ದೂರಾಗಲಿವೆ. ನಿಮ್ಮ ಹಣಕಾಸು ಸಂಬಂಧಿತ ಕಷ್ಟಗಳನ್ನು ನಿವಾರಿಸಿಕೊಳ್ಳ ದೊಡ್ಡ ಅವಕಾಶವನ್ನು ನೀವು ಪಡೆಯಬಹುದು. ಕುಟುಂಬದಲ್ಲಿನ ಹಣಕಾಸು ಕುರಿತಾದ ಸಮಸ್ಯೆಯೊಂದನ್ನು ನೀವು ನಿವಾರಿಸಿಕೊಳ್ಳುವಿರಿ, ಉದ್ಯಮಿಗಳು ಈ ವಾರ ಉತ್ತಮ ಆದಾಯವನ್ನು ಹೊಂದಲಿದ್ದಾರೆ. ಹೊಸ ಆದಾಯ ಮೂಲದಲ್ಲಿ ನಿಮಗೆ ಲಾಭದಾಯಕ, ಹೂಡಿಕೆ, ಉಳಿತಾಯಗಳು ಹೆಚ್ಚಾಗುವುದು ನೋಡಬಹುದು. ಪ್ರೇಮಿಗಳು ಈ ಸಮಯದಲ್ಲಿ ಶುಭ ಸುದ್ದಿಗಳ ಪಡೆಯುವುದು ಖಚಿತ.

ಮೀನ ರಾಶಿ

ಈ ವಾರ ಮೀನ ರಾಶಿಯವರಿಗೆ ಅತ್ಯಂತ ಶುಭಕರವಾಗಿರುತ್ತದೆ. ಈ ವಾರ ನೀವು ಅಧಿಕಾರ ಮತ್ತು ಮಾಲಿಕತ್ವ ಪ್ರದರ್ಶಿಸಬಹುದು. ನಿಮ್ಮ ಸ್ಥಗಿತಗೊಂಡ ಕೆಲಸಗಳು ವೇಗ ಪಡೆದುಕೊಳ್ಳಲಿದೆ. ವಾರದ ಮಧ್ಯಂತರವು ನಿಮಗೆ ಹಣಕಾಸಿನ ವಿಚಾರದಲ್ಲಿ ಅಡ್ಡಿಗಳ ತರಬಹುದು. ಆದ್ರೆ ಅದರಿಂದ ನೀವು ಯಶಸ್ವಿಯಾಗಿ ಹೊರಬರುತ್ತೀರಿ. ಸಮಯಕ್ಕೆ ಸರಿಯಾಗಿ ನಿಮ್ಮ ಬಳಿ ಪ್ರಮುಖ ಕೆಲಸವೊಂದಕ್ಕೆ ಹಣ ಸಂದಾಯ ಆಗುವುದು ನೋಡಬಹುದು. ಕೆಲಸದಲ್ಲಿ ಮಹತ್ವಾಕಾಂಕ್ಷೆಯ ಫಲಿತಾಂಶ ಪಡೆಯಲಿದ್ದೀರಿ. ನಿಮ್ಮಿಂದಾಗಿ ಕುಟುಂಬ ಸದಸ್ಯರೊಬ್ಬರಿಗೆ ಹಣಕಾಸಿನ ಸಹಾಯ ನೀಡಬಹುದು.

English summary

Weekly Horoscope From December 22 To December 29: Lucky Zodiac Signs In Kannada

Weekly Horoscope From December 22 To December 29: These zodiac get more benefits during this 7 days, read on...
Story first published: Sunday, December 21, 2025, 13:31 [IST]
X
Desktop Bottom Promotion