Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
Weekly Horoscope: ಡಿಸೆಂಬರ್ 14 ರಿಂದ ಡಿಸೆಂಬರ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ನಿಮ್ಮ ರಾಶಿಫಲ
ಡಿಸೆಂಬರ್ 14 ರಿಂದ ಡಿಸೆಂಬರ್ 22ರ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ತುಲಾ ರಾಶಿ
ತುಲಾ ರಾಶಿಯವರು ಈ ವಾರ ಮಿಶ್ರಫಲ ನೋಡಬಹುದು. ಈ ವಾರ ಸವಾಲುಗಳಿಂದ ಬೆದರುವ ಬದಲು, ನೀವು ಅವುಗಳನ್ನು ಧೈರ್ಯದಿಂದ ಎದುರಿಸುವಿರಿ. ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುತ್ತಿರುವಾಗ ಆಪ್ತರಿಂದ ಸಹಕಾರ ಪಡೆಯಬಹುದು. ವಾರದ ಮೊದಲಾರ್ಧದಲ್ಲಿ ನೀವು ಬಹಳ ಪ್ರಯಾಣಗಳಲ್ಲಿ ತೊಡಗಬಹುದು. ನಿಮ್ಮ ಆಪ್ತರೊಬ್ಬರಿಗೆ ನೀಡಿದ್ದ ಹಣಕಾಸು ವಿಚಾರವಾಗಿ ಮಾತುಗಕತೆಗಳಲ್ಲಿ ಮನಸ್ತಾಪಗಳು ಮೂಡಬಹುದು. ವಾರದ ಅಂತ್ಯದ ಸಮಯದಲ್ಲಿ ಮನೆಗಾಗಿ ನೀವು ಬಹಳಷ್ಟು ಖರ್ಚು ಮಾಡುವಿರಿ. ಆರೋಗ್ಯ ಮತ್ತು ಸಂಬಂಧಗಳಿಗೂ ಪ್ರತಿಕೂಲವಾಗಿರುತ್ತದೆ. ತುಲಾ ರಾಶಿಯವರು ಈ ವಾರ ತಮ್ಮ ಆಹಾರ ಮತ್ತು ಜೀವನಶೈಲಿಯ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ.
ವೃಶ್ಚಿಕ ರಾಶಿ
ಈ ವಾರ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ನಿಮ್ಮ ವ್ಯವಹಾರಗಳಲ್ಲಿ ಈ ವಾರ ಶುಭವಿದೆ. ನಿಮ್ಮ ಹಲವು ಕೆಲಸಗಳಲ್ಲಿ ಈ ವಾರ ಯಾರೊಂದಿಗಾದರು ಅನಗತ್ಯ ಪ್ರವಾಸದಿಂದಾದ ಆಯಾಸ ಅನುಭವಿಸಬಹುದು. ವ್ಯವಹಾರದಲ್ಲಿರುವವರಿಗೆ ಈ ವಾರ ಸಾಮಾನ್ಯವಾಗಿ ಫಲಪ್ರದವಾಗಿರುತ್ತದೆ. ಮಾರುಕಟ್ಟೆ ಸಂಬಂಧಿಸಿದ ವ್ಯಕ್ತಿಗಳಾಗಿದ್ದರೆ ಈ ವಾರದ ಅಂತ್ಯದಲ್ಲಿ ದೊಡ್ಡ ವ್ಯವಹಾರಗಳಿಂದ ದೂರ ಉಳಿಯುವುದು ಉತ್ತಮ. ನಿಮ್ಮ ಹಲವು ಅನಾರೋಗ್ಯ ಸಮಸ್ಯೆಗಳ ನಿರ್ಲಕ್ಷ್ಯ ಮಾಡುವುದು ದುಬಾರಿ ಬೆಲೆ ತೆರೆಬೇಕಾಗಬಹುದು. ಮಕ್ಕಳ ಕುರಿತಾದ ಚಿಂತೆಯೊಂದು ವಾರವಿಡಿ ಕಾಡಬಹುದು. ಹಣಕಾಸಿನ ವಹಿವಾಟುಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ.

ಧನು ರಾಶಿ
ಈ ವಾರ ಧನು ರಾಶಿ ಜನರಿಗೆ ಶುಭ ಮತ್ತು ಅದೃಷ್ಟವನ್ನು ತರುತ್ತದೆ. ಈ ವಾರ ಅದೃಷ್ಟವು ನಿಮಗೆ ಸಂಪೂರ್ಣವಾಗಿ ಅನುಕೂಲಕರವಾಗಿರುತ್ತದೆ. ವ್ಯವಹಾರದಲ್ಲಿ ತೊಡಗಿರುವ ಮಂದಿಗೆ ಈ ವಾರ ಬಹಳ ಅನುಕೂಲವಿದೆ. ನಿಮ್ಮ ಹೊಸ ವ್ಯವಹಾರಗಳು ಲಾಭದಾಯಕವಾಗಬಹುದು. ಹಾಗೆ ಎಲ್ಲರೊಂದಿಗಿದ್ದ ನಿಮ್ಮ ಸಮಸ್ಯೆಗಳು ಪರಿಹಾರವಾಗಬಹುದು. ದಾಂಪತ್ಯ ಸಂಬಂಧಿತ ವಿಚಾರವಾಗಿ ಮನೆಯಲ್ಲಿ ಅಶಾಂತಿ ಕಾಡಬಹುದು, ಆದ್ರೆ ವಾರಾಂತ್ಯದಲ್ಲಿ ನಿವಾರಣೆ ನೋಡಬಹುದು. ಆರ್ಥಿಕವಾಗಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಪ್ರವಾಸ ಕೈಗೊಳ್ಳಬಹುದು. ನಿಮ್ಮ ಆಪ್ತರಿಂದ ಶುಭ ಸುದ್ದಿಗಳ ಕೇಳಬಹುದು.
ಮಕರ ರಾಶಿ
ಮಕರ ರಾಶಿಯವರು ಈ ವಾರ ಸ್ವಲ್ಪ ಅಸ್ಥಿರವಾಗಿರುತ್ತದೆ. ನಿಮ್ಮ ಹಣಕಾಸು ವಿಚಾರವಾಗಿ ವಾರದ ಆರಂಭವೂ ಚಿಂತೆ ತರಬಹುದು. ಹಲವು ದಿನಗಳಿಂದ ಮಾಡಬೇಕಿದ್ದ ಕೆಲಸಗಳು ಮತ್ತೆ ಮುಂದೂಡುತ್ತೀರಿ. ಆಪ್ತರಿಂದ ಬರಬೇಕಿದ್ದ ಹಣ ಕೂಡ ಕೈ ಸೇರಬಹುದು. ವಾರದ ಆರಂಭದಲ್ಲಿ ಹಠಾತ್ ವೆಚ್ಚಗಳು ಉಂಟಾಗಬಹುದು. ಮನೆ ದುರಸ್ತಿ ಅಥವಾ ಯಾರಿಗಾದರೂ ಚಿಕಿತ್ಸೆ ನೀಡಲು ನೀವು ಗಣನೀಯ ಪ್ರಮಾಣದ ಹಣವನ್ನು ಖರ್ಚು ಮಾಡಬೇಕಾಗಬಹುದು. ನಿಮ್ಮ ದೊಡ್ಡ ವ್ಯವಹಾರಗಳಲ್ಲಿ ಮೂರನೆ ವ್ಯಕ್ತಿಯ ಹಸ್ತಕ್ಷೇಪ ತಡೆಯಬೇಕಿದೆ. ನೀವು ಅನಗತ್ಯ ಪ್ರಯಾಣವನ್ನು ಕೈಗೊಳ್ಳಬೇಕಾಗಬಹುದು. ಪ್ರೀತಿಯ ವಿಚಾರವಾಗಿ ಈ ವಾರ ಅನುಕೂಲಕರ ಸಮಯಗಳ ತರಲಿದೆ. ಮನೆಯಲ್ಲಿ ನಿಮ್ಮ ಹಣಕಾಸಿನ ವಿಚಾರಕ್ಕೆ ಬೆಂಬಲವಿದೆ.
ಕುಂಭ ರಾಶಿ
ಈ ವಾರ ಕುಂಭ ರಾಶಿಯವರಿಗೆ ಶುಭ ಮತ್ತು ಪ್ರಯೋಜನಕಾರಿ ಫಲಿತಾಂಶಗಳನ್ನು ತರಲಿದೆ. ನಿಮ್ಮ ಹಲವು ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಿದ್ದರೆ ಈ ವಾರ ಪೂರ್ಣ ಮಾಡುವಿರಿ. ಯಾರಿಂದಾದರು ಹಣ ಪಡೆಯುವುದು ಬಾಕಿ ಉಳಿದರೆ ಈ ವಾರದಲ್ಲಿ ಪಡೆಯುತ್ತೀರಿ. ಆಪ್ತರಿಂದ ಶುಭ ಸುದ್ದಿ ಕೇಳುವಿರಿ. ವಾಹನ ವಿಚಾರವಾಗಿ ನಿಮಗೆ ಶುಭವಾಗುವುದು ಖಚಿತ. ವ್ಯವಹಾರಕ್ಕಾಗಿ ಕೈಗೊಂಡ ಪ್ರಯಾಣಗಳು ಆಹ್ಲಾದಕರ ಮತ್ತು ಲಾಭದಾಯಕವೆಂದು ಸಾಬೀತುಪಡಿಸುತ್ತವೆ. ವ್ಯಾಪಾರ ವಿಸ್ತರಣೆಯ ಯೋಜನೆಗಳು ನನಸಾಗುತ್ತವೆ. ಈ ವಾರ ನಿಮ್ಮ ಮಾರಾಟ ಮತ್ತು ಲಾಭದಲ್ಲಿ ಹೆಚ್ಚು ಸುಲಭವಾಗಿ ನೆರವೇರಲಿವೆ.
ಮೀನ ರಾಶಿ
ಈ ವಾರ ಮೀನ ರಾಶಿಯವರಿಗೆ ಮಿಶ್ರ ಫಲ ನೀಡಲಿದೆ. ಆರ್ಥಿಕ ವಿಚಾರದಲ್ಲಿ ಏರಿಳಿತ ನೋಡಬಹುದು. ಉದ್ಯೋಗದಲ್ಲಿರುವ ಮಂದಿಗೆ ಹಲವು ಸಮಸ್ಯೆಗಳು ಎದುರಾಗಬಹುದು. ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ನೀವು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ಈ ವಾರ ನೀವು ಮಾರುಕಟ್ಟೆ ನಿಧಾನಗತಿಯನ್ನು ಎದುರಿಸಬಹುದು. ವಾರದ ಮಧ್ಯದಿಂದ ನಿಮ್ಮ ಹಣಕಾಸು ವಿಚಾರಗಳಲ್ಲಿ ಅಡೆತಡೆಗಳ ನೋಡಬಹುದು. ಪ್ರಯಾಣಗಳು ದುಬಾರಿಯಾಗಬಹುದು. ದುಬಾರಿ ವಸ್ತುಗಳ ಖರೀದಿಯಲ್ಲಿ ನಿಮಗೆ ಸಮಸ್ಯೆಗಳು ಬರಬಹುದು. ಮನೆಯಲ್ಲಿ ನಿಮ್ಮ ಪರವಾದ ವಾತಾವರಣ ಇರಲಿದೆ. ವಾರದ ಅಂತ್ಯದಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳ ಎದುರಿಸಬಹುದು.



Click it and Unblock the Notifications











