Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Weekly Horoscope: ಡಿಸೆಂಬರ್ 01 ರಿಂದ ಡಿಸೆಂಬರ್ 07ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಡಿಸೆಂಬರ್ 01 ರಿಂದ ಡಿಸೆಂಬರ್ 07ರ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ತುಲಾ ರಾಶಿ
ಈ ವಾರ ತುಲಾ ರಾಶಿಯವರಿಗೆ ಶುಭ ಮತ್ತು ಅದೃಷ್ಟವನ್ನು ತರಲಿದೆ. ಈ ವಾರ ನೀವು ಯಶಸ್ಸು ಪಡೆಯುವ ಸಲುವಾಗಿ ಮಾಡುವ ಕೆಲಸಗಳು ಶುಭ ತರಲಿದೆ. ವೃತ್ತಿ ಮತ್ತು ವ್ಯವಹಾರಕ್ಕೆ ಲಾಭವಾಗುತ್ತದೆ. ನಿರುದ್ಯೋಗಿಗಳು ಬಯಸಿದ ಉದ್ಯೋಗವನ್ನು ಪಡೆಯಬಹುದು. ಅನೇಕರಲ್ಲಿ ಈ ವಾರವು ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗುವಂತೆ ಮಾಡಲಿದೆ. ವಾರದ ಮಧ್ಯಭಾಗದಲ್ಲಿ ನಿಮ್ಮ ಆರೋಗ್ಯದಲ್ಲಿನ ಏರುಪೇರು ನಿಮಗೆ ಖರ್ಚುಗಳು ಹೆಚ್ಚಾಗುವಂತೆ ಮಾಡಬಹುದು. ವಾರದ ಅಂತ್ಯದಲ್ಲಿ ಕುಟುಂಬಸ್ಥರೊಂದಿಗೆ ಪ್ರಯಾಣಗಳ ಕೈಗೊಳ್ಳಬಹುದು. ಮಕ್ಕಳ ಭವಿಷ್ಯದ ಕುರಿತಾಗಿ ಈ ವಾರ ನಿರ್ಧಾರ ತೆಗೆದುಕೊಳ್ಳುತ್ತೀರಿ.
ವೃಶ್ಚಿಕ ರಾಶಿ
ಈ ವಾರ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲ ನೋಡಬಹುದು. ನಿಮ್ಮ ಹಣ ಮತ್ತು ಸಮಯ ಎರಡನ್ನೂ ಎಚ್ಚರಿಕೆಯಿಂದ ಬಳಸಿಕೊಳ್ಳಿ. ವಾರದ ಆರಂಭದಲ್ಲಿ ಹಣಕಾಸು ಸಂಬಂಧಿತ ವಿಚಾರದಲ್ಲಿ ತೊಡಕುಗಳಿವೆ. ಅದರಲ್ಲಿ ನಿಮ್ಮ ಕೆಲಸಗಳು ತಡವಾಗುವುದು ಅಥವಾ ಮುಂದೂಡಬೇಕಾಗಿ ಬರಬಹುದು. ನೀವು ಕಟ್ಟಡ ಅಥವಾ ಭೂಮಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಅದರ ದಾಖಲೆಗಳನ್ನು ಪರಿಶೀಲಿಸಿ ಮತ್ತು ಹಣಕಾಸಿನ ವಹಿವಾಟುಗಳಲ್ಲಿ ಬಹಳ ಜಾಗರೂಕರಾಗಿರಿ. ಉದ್ಯಮಿಗಳು ದೊಡ್ಡ ಹೂಡಿಕೆ ಮಾಡಲು ಸಿದ್ದತೆ ಮಾಡಿಕೊಳ್ಳಬಹುದು. ಕಚೇರಿ ಕೆಲಸವು ಒತ್ತಡವನ್ನು ಉಂಟುಮಾಡಬಹುದು. ಪ್ರೇಮ ಸಂಬಂಧಗಳಲ್ಲಿ ಜಾಗರೂಕರಾಗಿರಬೇಕು.

ಧನು ರಾಶಿ
ಧನು ರಾಶಿಯ ಜನರಿಗೆ ಈ ವಾರ ಸಾಕಷ್ಟು ಒತ್ತಡವಿರಬಹುದು. ವಾರದ ಆರಂಭದಲ್ಲಿ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಸಮಸ್ಯೆಯು ನಿಮಗೆ ಆತಂಕವನ್ನು ತರಬಹುದು. ನಿಮ್ಮ ಪ್ರಯಾಣಗಳಲ್ಲಿ ಖರ್ಚುಗಳು ನೀವು ಅಂದುಕೊಂಡಿದ್ದಕ್ಕಿಂತ ಹೆ್ಚ್ಚಾಗುವುದು ಭವಿಷ್ಯದ ದಿನದಲ್ಲಿ ಆರ್ಥಿಕ ಬಿಕ್ಕಟ್ಟು ತರಲು ಕಾರಣವಾಗಬಹುದು. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಮತ್ತಷ್ಟು ಮುಂದೂಡಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯೂ ಸವಾಲಿನಲ್ಲಿ ಸಿಲುಕಬಹುದು. ಕುಟುಂಬದಲ್ಲಿ ಅನಾರೋಗ್ಯ ಸಮಸ್ಯೆಗಳು ಕಂಡುಬರಬಹುದು. ಅದ್ರಲ್ಲೂ ಮಕ್ಕಳ ಆರೋಗ್ಯದಲ್ಲಿ ಏರುಪೇರು ನೋಡಬಹುದು. ವಾರದ ಅಂತ್ಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ವಾರ ಅತ್ಯಂತ ಶುಭವಾಗಿರುತ್ತದೆ. ವಾರದ ಆರಂಭದಲ್ಲಿ ನಿಮ್ಮ ಹಲವು ಕೆಲಸಗಳನ್ನು ಅನುಭವದ ಆಧಾರದಲ್ಲಿ ಮುಗಿಸುವಿರಿ. ನೀವು ಧಾರ್ಮಿಕ ಮತ್ತು ಶುಭ ಚಟುವಟಿಕೆಗಳಲ್ಲಿ ಭಾಗವಹಿಸಲು ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಉದ್ಯೋಗದಲ್ಲಿರುವವರಿಗೆ ಇಡೀ ವಾರ ಅನುಕೂಲಕರವಾಗಿರುತ್ತದೆ. ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ ನೋಡಬಹುದು. ವಾಹನ ಲಾಭದ ನಿರೀಕ್ಷೆ ಇದೆ. ಉದ್ಯೋಗ ಸಂಬಂಧಿತ ವಿಚಾರವಾಗಿ ನೀವು ಪ್ರಯಾಣ ಮಾಡಬೇಕಾಗುತ್ತದೆ. ವೃತ್ತಿ ಸಂಬಂಧಿತ ವಿಚಾರದಲ್ಲಿ ಮೇಲುಗೈ ಇರಲಿದೆ. ವಾರದ ಅಂತ್ಯದಲ್ಲಿ ಹಣಕಾಸು ಸಮಸ್ಯೆ ಬರಬಹುದು. ನಿಮ್ಮ ದಾಂಪತ್ಯ ವಿಚಾರದಲ್ಲಿನ ಅಡೆತಡೆಗಳು ನಿವಾರಣೆಯಾಗುವ ವಾರವಿದು.
ಕುಂಭ ರಾಶಿ
ಈ ವಾರ ಕುಂಭ ರಾಶಿಯ ಜನರಿಗೆ ಹೊಸ ಅವಕಾಶಗಳ ತರಲಿದೆ. ನೀವು ಬಹಳ ದಿನಗಳಿಂದ ಉದ್ಯೋಗವನ್ನು ಹುಡುಕುತ್ತಿದ್ದರೆ ಆಪ್ರ ಸಹಾಯದಿಂದ ನೀವು ಬಯಸಿದ ಉದ್ಯೋಗವನ್ನು ಪಡೆಯಬಹುದು. ವಾರದ ಆರಂಭದಲ್ಲಿ ನಿಮ್ಮ ಹಲವು ಸವಾಲುಗಳನ್ನು ಎದುರಿಸುವ ಕುರಿತಾಗಿ ಚಿಂತೆ ಮಾಡುವಿರಿ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗಿ ಬರಬಹುದು. ಸಮಾಜದಲ್ಲಿ ನಿಮ್ಮ ಗೌರವ ಘನತೆ ಹೆಚ್ಚಾಗುವ ಸಮಯವಿದು. ವಿವಾಹಿತ ಯುವಕರು ಮತ್ತು ಯುವತಿಯರಿಗೆ ಉತ್ತಮ ಸಂಬಂಧಗಳು ಬರಬಹುದು. ವ್ಯವಹಾರ ಸಂಬಂಧಿತ ವಿಚಾರವು ವೇಗವಾಗಲಿದೆ. ಸಂಬಂಧಗಳು ಗಟ್ಟಿಯಾಗಲಿವೆ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ.
ಮೀನ ರಾಶಿ
ಈ ವಾರ ಮೀನ ರಾಶಿಯವರಿಗೆ ಏರಿಳಿತಗಳಿಂದ ತುಂಬಿರುತ್ತದೆ. ಈ ವಾರ ನಿಮ್ಮ ಜೀವನದ ಪ್ರಮುಖ ಘಟನೆಗಳು ನಡೆಯಬಹುದು. ವಾರದ ಆರಂಭದಲ್ಲಿ ಪ್ರಯಾಣಗಳ ಮಾಡುವಿರಿ. ನಿಮ್ಮ ಅನೇಕ ಕೆಲಸಗಳನ್ನು ಪೂರ್ಣ ಮಾಡದೆ ಇರಬಹುದು. ಸ್ಪರ್ಧಾತ್ಮಕ ವಿಚಾರದಲ್ಲಿ ನಿಮಗೆ ಶುಭವಿದೆ. ಆರ್ಥಿಕ ದೃಷ್ಟಿಕೋನದಿಂದ ವಾರದ ಮೊದಲಾರ್ಧವು ಸವಾಲುಗಳಿಂದ ತುಂಬಿರಬಹುದು. ಯಾವುದೇ ನಿಯೋಜಿತ ಕೆಲಸವನ್ನು ವಿಳಂಬ ಮಾಡುವುದನ್ನು ತಪ್ಪಿಸಬೇಕು. ಈ ವಾರ ಯಾವುದೇ ತರಾತುರಿಯ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಸಂಬಂಧಗಳಲ್ಲಿ ಮಧುರತೆ ಕಾಪಾಡಿಕೊಳ್ಳಲು ಪ್ರಯತ್ನಿಸಿ. ಆರೋಗ್ಯದ ದೃಷ್ಟಿಯಲ್ಲಿ ಈ ವಾರವು ನಿಮಗೆ ಬಹಳ ಅನುಕೂಲ ತರಲಿದೆ.



Click it and Unblock the Notifications











