Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Weekly Horoscope: ಡಿಸೆಂಬರ್ 01 ರಿಂದ ಡಿಸೆಂಬರ್ 07ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಡಿಸೆಂಬರ್ 01 ರಿಂದ ಡಿಸೆಂಬರ್ 07ರ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...
ಮೇಷ ರಾಶಿ
ಈ ವಾರ ಮೇಷ ರಾಶಿಯವರಿಗೆ ಮಿಶ್ರ ಫಲಿತಾಂಶಗಳ ನೋಡಬಹುದು. ನಿಮ್ಮ ಮೇಲೆ ಅನಿರೀಕ್ಷಿತ ಕೆಲಸದ ಒತ್ತಡಗಳು ಬರುವುದು ನೋಡಬಹುದು. ಹಾಗೆ ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿ ಆತಂಕಗಳು ಆರಂಭವಾಗುವ ವಾರ. ಆರ್ಥಿಕ ವಿಚಾರವಾಗಿ ನೀವು ಕೈಗೊಂಡಿದ್ದ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು. ವಾರದ ಆರಂಭದಲ್ಲಿ ಕೆಲವು ಕೌಟುಂಬಿಕ ಸಮಸ್ಯೆಗಳು ನಿಮಗೆ ಗಮನಾರ್ಹ ಆತಂಕವನ್ನು ಉಂಟುಮಾಡಬಹುದು, ಆದರೆ ಹಿತೈಷಿಯ ಸಹಾಯದಿಂದ, ವಾರದ ಅಂತ್ಯದ ವೇಳೆಗೆ ನೀವು ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಹರಿಸಲು ಸಾಧ್ಯವಾಗುತ್ತದೆ. ವ್ಯವಹಾರ ದೃಷ್ಟಿಕೋನದಿಂದ, ವಾರದ ಉತ್ತರಾರ್ಧವು ಮೊದಲಾರ್ಧಕ್ಕಿಂತ ಸ್ವಲ್ಪ ಉತ್ತಮವಾಗಿರುತ್ತದೆ. ಅನಗತ್ಯ ಪ್ರಯಾಣ, ಖರ್ಚುಗಳನ್ನು ತಡೆಯುವುದು ಉತ್ತಮ.
ವೃಷಭ ರಾಶಿ
ವೃಷಭ ರಾಶಿಯವರು ಈ ವಾರ ಯಾವುದೇ ಕೆಲಸವನ್ನು ಅರ್ಧ ಮನಸ್ಸಿನಿಂದ ಮಾಡಬೇಡಿ. ವಾರದ ಆರಂಭದಲ್ಲಿ ನಿಮ್ಮ ಹಲವು ಕೆಲಸಗಳಲ್ಲಿ ಯಶಸ್ಸು ನೋಡಬಹುದು. ಸೋಮಾರಿತನ ಅಜಾಗರುಕತೆಯಿಂದ ಯಾವುದೇ ಕೆಲಸ ಮಾಡಬೇಡಿ. ವ್ಯಾಪಾರದ ವಲಯದಲ್ಲಿಈ ತಿಂಗಳು ಯಥಾಸ್ಥಿತಿ ಇರಲಿದೆ. ದುಬಾರಿ ಖರ್ಚುಗಳಿಗೆ ನೀವು ಸಿದ್ದತೆ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಉಳಿತಾಯದ ಹಣವನ್ನು ಆದಷ್ಟು ಕಾಪಾಡಿಕೊಳ್ಳಿ. ವಾರದ ಅಂತ್ಯಭಾಗದಲ್ಲಿ ನಿಮ್ಮ ಉದ್ಯೋಗದ ದೃಷ್ಟಿಯಲ್ಲಿ ಶುಭವಿದೆ. ಹೆಚ್ಚುವರಿ ವೇತನದಂತಹ ವಿಶೇಷ ಲಾಭಗಳನ್ನು ನೋಡಬಹುದು. ಪ್ರೀತಿಪಾತ್ರರ ಮನೆಗೆ ಭೇಟಿ ನೀಡುವುದರಿಂದ ಸಂತೋಷದ ವಾತಾವರಣ ಉಂಟಾಗುತ್ತದೆ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ.

ಮಿಥುನ ರಾಶಿ
ಈ ವಾರ ಮಿಥುನ ರಾಶಿಯವರಿಗೆ ಸ್ವಲ್ಪ ಏರಿಳಿತವಾಗಬಹುದು. ವಾರದ ಆರಂಭದಲ್ಲಿ ಯೋಜಿತ ಕಾರ್ಯಗಳನ್ನು ಪೂರ್ಣಗೊಳಿಸಲು ನೀವು ಆತುರಪಡಬೇಕಾಗಬಹುದು. ಆತುರದ ಕಾರ್ಯಗಳಿಂದ ನಿಮ್ಮಲ್ಲಿ ದೊಡ್ಡ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ಉದ್ಯೋಗ ಸಂಬಂಧಿತ ವಿಚಾರವಾಗಿ ಈ ವಾರ ಬಹಳಷ್ಟು ಬದಲಾವಣೆಗಳ ನೋಡಬಹುದು. ವಾರದ ಅಂತ್ಯದಲ್ಲಿ ನಿಮಗೆ ಅನಗತ್ಯ ಖರ್ಚಿನ ಹೊರೆ ಎದುರಾಗಲಿದೆ. ಸಣ್ಣ ಪುಟ್ಟ ವ್ಯವಹಾರ ಮಾಡುವ ಮಂದಿಗೆ ದೊಡ್ಡ ್ರಗತಿಯ ಅವಕಾಶಗಳಿವೆ. ಈ ಸಮಯದಲ್ಲಿ ನಿಮ್ಮ ವೃತ್ತಿ ಮತ್ತು ವ್ಯವಹಾರಕ್ಕಾಗಿ ನಿಮ್ಮ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮವು ಫಲ ನೀಡುತ್ತದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಈ ವಾರ ಮಿಶ್ರವಾಗಿರುತ್ತದೆ. ವಾರದ ಆರಂಭದಲ್ಲಿ ಒಂದು ನಿರ್ದಿಷ್ಟ ಕಾರ್ಯದಲ್ಲಿ ಪ್ರಮುಖ ಅಡಚಣೆಯು ಕೆಲವು ತೊಂದರೆಯನ್ನು ಉಂಟುಮಾಡಬಹುದು. ವೃತ್ತಿ ಸಂಬಂಧಿತ ವಿಚಾರದಲ್ಲಿ ನಿಮ್ಮ ನಿರ್ಧಾರಗಳು ಪ್ರಮುಖ ಎನಿಸಲಿವೆ. ಹಣಕಾಸು ವಿಚಾರದಲ್ಲಿ ಮನಸ್ತಾಪಗಳು ಎದುರಾಗುವ ವಾರ. ಉದ್ಯಮಿಗಳು ವ್ಯವಹಾರದಲ್ಲಿ ಹಿಂಜರಿತವನ್ನು ಎದುರಿಸಬಹುದು. ಈ ವಾರ ಖರ್ಚುಗಳು ಆದಾಯಕ್ಕಿಂತ ಹೆಚ್ಚಾಗಿರುತ್ತವೆ. ಆರೋಗ್ಯ ಮತ್ತು ಸಂಬಂಧಗಳ ಮೇಲೆ ಗಮನ ಹರಿಸಬೇಕಾಗುತ್ತದೆ. ಗೃಹಿಣಿಯರಿಗೆ ಸಂಬಂಧಗಳಲ್ಲಿ ಸಮಸ್ಯೆಗಳು ಎದುರಾಗಬಹುದು. ಬಹು ಸಮಯದಿಂದ ಮುಂದೂಡಿಕೊಂಡು ಬಂದಿದ್ದ ಕೆಲಸವನ್ನು ಈ ಸಮಯದಲ್ಲಿ ಪೂರ್ಣ ಮಾಡುವುದು ಉತ್ತಮ.
ಸಿಂಹ ರಾಶಿ
ಈ ವಾರ ಸಿಂಹ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಈ ವಾರ ನೀವು ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸು ಮತ್ತು ಲಾಭವನ್ನು ನೋಡುತ್ತೀರಿ. ಕೆಲಸದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ನಿಮ್ಮ ಕಠಿಣ ಪರಿಶ್ರಮಗಳು ಈ ವಾರದಂದು ಉತ್ತಮ ಫಲಿತಾಂಶ ತರಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಈ ವಾರ ಬಹಳ ಅನುಕೂಲವಿದೆ. ಬಹುಸಮಯದ ಸಾಲದ ಪ್ರಮಾಣ ಕಡಿಮೆಯಾಗಲಿದೆ. ನೀವು ಮಾಡಲು ಬಯಸಿದ್ದ ಕೆಲಸಕ್ಕೆ ಹಣ ಒಗ್ಗೂಡಲಿದೆ. ನಿರುದ್ಯೋಗಿಗಳಾಗಿದ್ದರೆ ಈ ವಾರ ನಿಮ್ಮ ಪ್ರಯತ್ನಗಳು ಉತ್ತಮ ಪ್ರತಿಫಲ ತರಲಿದೆ. ಬಡ್ತಿ, ಗೌರವ, ವರ್ಗಾವಣೆ ವಿಚಾರದಲ್ಲಿ ಶುಭ ವಾರ. ನಿಮ್ಮ ಭೂಮಿ, ಕಟ್ಟಡ, ವಾಹನ, ವಸ್ತುಗಳ ಖರೀದಿ ವಿಚಾರವಾಗಿ ಹೊಸ ಆರಂಗಳ ನೋಡಬಹುದು. ಕುಟುಂಬದೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಲಿದೆ.
ಕನ್ಯಾ ರಾಶಿ
ಈ ವಾರ ಕನ್ಯಾ ರಾಶಿಯವರಿಗೆ ಅತ್ಯಂತ ಶುಭ ಮತ್ತು ಯಶಸ್ವಿಯಾಗಲಿದೆ. ಈ ವಾರ ನೀವು ಇದ್ದಕ್ಕಿದ್ದಂತೆ ದೊಡ್ಡ ಮೊತ್ತವನ್ನು ಪಡೆಯಬಹುದು. ಅದು ಬ್ಯಾಂಕಿಂಗ್ ವಿಚಾರ ಅಥವಾ ಬೇರೆಯವರಿಗೆ ನೀಡಿರುವ ಹಣ ಮರಳಿ ಪಡೆಯುವ ಸಾಧ್ಯತೆ ಇದೆ. ಪೂರ್ವಜರ ಆಸ್ತಿ ಕುರಿತಾದ ವಿಚಾರದಲ್ಲಿ ನೋವು ಅನುಭವಿಸಬಹುದು. ನ್ಯಾಯಾಲಯ ಸಂಬಂಧಿತ ವಿಚಾರದಲ್ಲಿ ಹಿನ್ನಡೆ ಅನುಭವಿಸಬಹುದು. ಮಕ್ಕಳ ವಿಚಾರದಲ್ಲಿ ಈ ವಾರ ಚಿಂತೆಗಳು ಬರಬಹುದು. ವ್ಯಾಪಾರಿಗಳು ಅನಿರೀಕ್ಷಿತ ಲಾಭ ನೋಡಬಹುದು. ನಿಮ್ಮ ದೀರ್ಘ ಪ್ರಯಾಣಗಳಲ್ಲಿ ಅತ್ಯುತ್ತಮ ಫಲಿತಾಂಶಗಳ ತರಬಹುದು. ವಾರದ ಉತ್ತರಾರ್ಧದಲ್ಲಿ ಮನೆಯಲ್ಲಿ ಧಾರ್ಮಿಕ ಮತ್ತು ಶುಭ ಸಮಾರಂಭಗಳು ನಡೆಯಬಹುದು. ನಿಮ್ಮ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ.



Click it and Unblock the Notifications