ಆಗಸ್ಟ್ 25ರಿಂದ ಆಗಸ್ಟ್ 31ರ ವಾರ ಭವಿಷ್ಯ: ಯಾರಿಗೆಲ್ಲಾ ಈ ವಾರ ಅದೃಷ್ಟ!

ಆಗಸ್ಟ್ 25 ರಿಂದ ಆಗಸ್ಟ್ 31ರ ನಿಮ್ಮ ವಾರ ಭವಿಷ್ಯ ಇಲ್ಲಿದೆ...

ಮೇಷ ರಾಶಿ

ಮೇಷ ರಾಶಿಯವರಿಗೆ ಈ ವಾರ ಅದೃಷ್ಟ. ವಾರದ ಆರಂಭದಲ್ಲಿ ಯೋಜಿಸಲಾದ ಕೆಲಸ ಸರಿಯಾಗಿ ಪೂರ್ಣಗೊಳ್ಳುವುದನ್ನು ನೀವು ನೋಡುತ್ತೀರಿ. ನಿಮ್ಮ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ. ಸಾಲವಾಗಿ ನೀಡಿದ ಹಣವು ನಿಮಗೆ ಹಿಂತಿರುಗಿ ಬರಬಹುದು. ವಿವಿಧ ರೀತಿಯಲ್ಲಿ ಆದಾಯ ಮೂಲಗಳ ನೀವು ನೋಡುವಿರಿ. ಉನ್ನತ ಅಧಿಕಾರಿಗಳಿಂದ ನಿಮಗೆ ಶುಭ ಸುದ್ದಿ ಕೇಳಬಹುದು. ರಾಜಕೀಯದಲ್ಲಿ ಸಕ್ರಿಯರಾಗಿರುವ ವ್ಯಕ್ತಿಗಳಿಗೆ ಈ ವಾರ ಅನುಕೂಲಕರ. ಕುಟುಂಬಸ್ಥರ ಕಡೆಯಿಂದ ನಿಮಗೆ ಶುಭ ಸುದ್ದಿ ಇದೆ.

ವೃಷಭ ರಾಶಿ

ಈ ವಾರದಲ್ಲಿ ನಿಮಗೆ ಅನುಕೂಲಕರ ದಿನಗಳ ಜೊತೆಗೆ ಒಂದಿಷ್ಟು ಅನಾನುಕೂಲಗಳು ಕೂಡ ಇರಲಿವೆ. ನಿಮ್ಮ ಹಣ ಗಳಿಸುವ ಆಲೋಚನೆಗಳು ಫಲ ನೀಡಬಹುದು. ಸಾಮಾನ್ಯ ಕೆಲಸಗಾರರಲ್ಲಿ ದೊಡ್ಡ ಮಟ್ಟದ ಸಮಸ್ಯೆ ಇರಬಹುದು. ಅದ್ರಲ್ಲೂ ಕುಟುಂಬಕ್ಕೆ ಅಗತ್ಯವಾದ ಹಣಕಾಸಿನ ವಿಚಾರದಲ್ಲಿ ಒತ್ತಡ ಬರಬಹುದು. ವ್ಯಾಪಾರಿಗಳಿಗೆ ಈ ವಾರ ಶುಭ ಸೂಚನೆಗಳಿಗೆ. ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ ನೋಡಬಹುದು.

Weekly Horoscope From August 25 To August 31 Lucky To These Zodiac Signs

ಮಿಥುನ ರಾಶಿ

ಈ ವಾರ ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಉತ್ತಮ ಅವಕಾಶಗಳು ಸಿಗುತ್ತವೆ. ನಿಮ್ಮ ಕಠಿಣ ಪರಿಶ್ರಮದ ಲಾಭ ಪಡೆಯುತ್ತೀರಿ. ಕೆಲಸದ ವಿಷಯದಲ್ಲಿ ನೀವು ಬಹಳಷ್ಟು ಓಡಾಡುತ್ತೀರಿ. ಕೌಟುಂಬಿಕ ಕಲಹಗಳು ನಡೆಯಬಹುದು. ವ್ಯವಹಾರಿಕಾವಾಗಿ ನಿಮಗೆ ಉತ್ತಮ ವಾರವಾಗಿರಲಿದೆ. ಹಣಕಾಸಿನ ವಿಚಾರದಲ್ಲಿ ಕುರುಡಾಗಿ ಯಾರನ್ನು ನಂಬಬೇಡಿ. ನೀವು ಸಾಲ ಮಾಡಬಹುದು. ಪ್ರೇಮ ವಿಚಾರದಲ್ಲಿ ಅನುಕೂಲವಿದೆ. ವೈವಾಹಿಕ ಜೀವನ ಕೂಡ ನಿಮಗೆ ಉತ್ತಮವಾಗಿರಲಿದೆ.

ಕರ್ಕ ರಾಶಿ

ಈ ವಾರ ಕರ್ಕ ರಾಶಿಯವರಿಗೆ ಸ್ವಲ್ಪ ಕಷ್ಟಕರವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಹಣಕಾಸಿನ ವಿಚಾರದಲ್ಲಿ ತರಾತುರಿಯ ನಿರ್ಧಾರಗಳ ತೆಗದುಕೊಳ್ಳಬೇಡಿ. ನೀವು ವ್ಯವಹಾರದಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಹಾಗೆ ಮಾಡುವ ಮೊದಲು ನಿಮ್ಮ ಹಿತೈಷಿಗಳ ಸಲಹೆಯನ್ನು ಪಡೆಯಬೇಕು. ನೀವು ನಿಮ್ಮ ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಬೇಕು. ನಿಮ್ಮ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಇರಬೇಕು. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗಬಹುದು.

ಸಿಂಹ ರಾಶಿ

ಈ ವಾರ ನಿಮ್ಮ ಆರ್ಥಿಕ ಬಲ ಬಲವಾಗುತ್ತದೆ. ಖರ್ಚು ಹೆಚ್ಚಾಗಬಹುದು. ನಿಮ್ಮ ಅನೇಕ ಕೆಲಸಗಳಲ್ಲಿ ಯಶಸ್ಸಿನ ಹಾದಿ ಸಿಗಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಸಿಗಲಿದೆ. ಖರ್ಚು ಹೆಚ್ಚಾಗುವ ಕಾರಣಕ್ಕೆ ನಿಮ್ಮಲ್ಲಿ ಒತ್ತಡ, ಗೊಂದಲ ಇರಬಹುದು. ಆದ್ರೆ ವಾರದ ಅಂತ್ಯದಿಂದ ನಿಮಗೆ ಅನುಕೂಲಕ ದಿನವಿದೆ. ಶ್ರಮಾಯಕ ಕೆಲಸಗಳಲ್ಲಿ ನೀವು ಇಡೀ ವಾರ ಕಳೆಯುತ್ತೀರಿ. ವಾಹನ ಖರೀದಿಯ ವಿಚಾರವಾಗಿ ನಿಮಗೆ ಅನುಕೂಲಕರ ದಿನವಾಗುತ್ತಿದೆ.

ಕನ್ಯಾ ರಾಶಿ

ಈ ವಾರ ನಿಮ್ಮ ವೃತ್ತಿಜೀವನದಲ್ಲಿ ನಿರೀಕ್ಷಿತ ಫಲಿತಾಂಶಗಳು ಸಿಗದ ಕಾರಣ ನೀವು ಹಲವು ಬಾರಿ ನಿರಾಶೆ ಉಂಟಾಗಬಹುದು, ಅದ್ರಲ್ಲೂ ಪ್ರೀತಿ ಪ್ರೇಮದ ವಿಚಾರವಾಗಿ ಹಾಗೆ ಆಪ್ತರೊಬ್ಬರ ಭೇಟಿಯ ವಿಚಾರದಲ್ಲಿ ನಿಮಗೆ ನಿರಾಶೆ ಕಾದಿದೆ. ಕಲಸದ ಸ್ಥಳದಲ್ಲಿದ್ದ ದೊಡ್ಡ ಸಮಸ್ಯೆ ಅಥವಾ ಅಡೆತಡೆಯೊಂದು ನಿವಾರಣೆಯಾಗುವುದು ನೋಡಬಹುದು. ಪತಿ ಪತ್ನಿಯ ನಡುವೆ ಕಲಹಕ್ಕೆ ಕಾರಣವಾಗುವ ಹಲವು ಅಂಶಗಳು ಎದುರಾಗಬಹುದು. ಕೆಲಸದ ಕಾರಣದಿಂದಾಗಿ ನೀವು ಬಹಳಷ್ಟು ಪ್ರಯಾಣ ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಈ ವಾರ ಬಹಳ ಅನುಕೂಲಕರ ವಾಗಿರಲಿದೆ. ವ್ಯಾಪಾರಿಗಳಲ್ಲಿಯೂ ಹೊಸತನ ತರುವ ವಾರವಾಗಿದೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ವಾರವು ಮಿಶ್ರಫಲದಿಂದ ಕೂಡಿರಲಿದೆ. ಯೋಜಿತ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದರಿಂದ ನಿಮ್ಮ ಉತ್ಸಾಹ ಮತ್ತು ಧೈರ್ಯ ಹೆಚ್ಚಾಗುತ್ತದೆ. ನಿಮ್ಮ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಹಾಗೂ ಪ್ರಶಂಸೆ ಸಿಗಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಉತ್ತಮ ಸಮಯ. ವಾರದ ಅಂತ್ಯದ ವೇಳೆಗೆ ಹಣಕಾಸು ಕುರಿತಾದ ಒತ್ತಡ ಇರಲಿದೆ. ಸಾಲ ಮರುಪಾವತಿಗೆ ಒತ್ತಡ ಬರಬಹುದು. ನಿಮಗೆ ಬರಬೇಕಿದ್ದ ಹಣಕಾಸು ಮುಂದೂಡಬಹುದು. ಗೃಹಿಣಿಯರ ಆರೋಗ್ಯ ಏರುಪೇರು ಸಂಭವವಿದೆ.

ವೃಶ್ಚಿಕ ರಾಶಿ

ಈ ವಾರದ ಆರಂಭ ನಿಮಗೆ ಶುಭ ಸೂಚನೆಗಳ ತರುವುದಿಲ್ಲ. ಆದ್ರೆ ವಾರದ ಅಂತ್ಯದ ದಿನಗಳಲ್ಲಿ ನಿಮಗೆ ಉತ್ತಮ ಲಾಭವಿದೆ. ನಿಮ್ಮ ಹಲವು ಕೆಲಸಗಳನ್ನು ಈ ವಾರದಲ್ಲಿ ಪೂರ್ಣ ಮಾಡುವಿರಿ. ವಾಹನ ಕುರಿತಾದ ನಿಮ್ಮ ಬಯಕೆ ಈಡೇರಬಹುದು. ಆಪ್ತರೊಬ್ಬರಿಗೆ ಹಣ ನಿಮ್ಮ ಕೈಸೇರಬಹುದು. ಸರ್ಕಾರಿ ಕೆಲಸ ಮಾಡುವವರಿಗೆ ಬಡ್ತಿ ಭಾಗ್ಯವಿದೆ. ಅನಾರೋಗ್ಯ ಕುರಿತಾದ ಖರ್ಚು ಕಡಿಮೆಯಾಗಲಿದೆ. ವೈವಾಹಿಕ ಜೀವನದಲ್ಲಿ ಯಾವುದಾದರು ವಸ್ತುವಿನ ಕುರಿತಾಗಿ ನಿಮ್ಮಲ್ಲಿ ಮನಸ್ತಾಪ ಬರುವ ಸಾಧ್ಯತೆ ಇದೆ. ಪ್ರಯಾಣ ಮಾಡುವಿರಿ.

ಧನು ರಾಶಿ

ಧನು ರಾಶಿಯವರ ಸಂಬಂಧಗಳ ವಿಷಯದಲ್ಲಿ ಈ ವಾರ ಆಹ್ಲಾದಕರ ವಾರವಾಗಿರುತ್ತದೆ. ಪ್ರೀತಿ ಮತ್ತು ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ಪ್ರೀತಿಪಾತ್ರರ ಜೊತೆ ಸಂತೋಷದ ಸಮಯ ಕಳೆಯಲು ನಿಮಗೆ ಅವಕಾಶ ಸಿಗುತ್ತದೆ. ಬಹಳ ದಿನಗಳಿಂದ ಸಿಲುಕಿದ್ದ ಹಣಕಾಸು ಸಮಸ್ಯೆ ಬಗೆಹರಿಯಲಿದೆ. ವಾಹನ ಸಂಬಂಧ ಇದ್ದ ಸಮಸ್ಯೆ ಕೂಡ ದೂರಾಗುವ ನಿರೀಕ್ಷೆ ಇದೆ. ಆಪ್ತರ ಭೇಟಿಯಾಗುತ್ತೀರಿ. ನಿರುದ್ಯೋಗಿಗಳಿಗೆ ಆಪ್ತರ ಸಹಕಾರದಿಂದಾಗಿ ಉದ್ಯೋಗ ಸಿಗಬಹುದು. ಮಕ್ಕಳ ಕುರಿತಾಗಿ ಇದ್ದ ಚಿಂತೆಯೊಂದಕ್ಕೆ ನೀವು ತಾತ್ಕಾಲಿಕ ಪರಿಹಾರ ಪಡೆಯುತ್ತೀರಿ. ಕಚೇರಿ ಕೆಲಸಗಳು ಕಠಿಣವಾಗಬಹುದು.

ಮಕರ ರಾಶಿ

ವಾರದ ಆರಂಭದಲ್ಲಿ ಮಕರ ರಾಶಿಯವರು ಪ್ರಯಾಣಗಳ ತಪ್ಪಿಸುವುದು ಉತ್ತಮ. ಹಾಗೆ ನಿಮ್ಮದಲ್ಲದ ವಿಚಾರದಲ್ಲಿ ಖರ್ಚು ಮಾಡುವುದನ್ನು ಕೂಡ ತಪ್ಪಿಸಿದರೆ ಮುಂದಿನ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು. ಮನೆಗಾಗಿ ಅಥವಾ ನಿಮ್ಮ ವೈಯಕ್ತಿಕ ವಿಚಾರಕ್ಕಾಗಿ ವಸ್ತುವೊಂದನ್ನು ಖರೀದಿಸಬಹುದು. ಇದರಿಂದ ನಿಮಗೆ ಸಂತೋಷ ಇರಲಿದೆ. ವೃತ್ತಿ ವಿಚಾರವಾಗಿ ಎಚ್ಚರಿಕೆಯಿಂದ ಇರುವುದು ಒಳಿತು. ವಾಹನ ಲಾಭವಿದೆ. ನಿಮ್ಮ ವ್ಯಾಪಾರ ಹಾಗೂ ವ್ಯವಹಾರದಲ್ಲಿ ಮೂರನೇ ವ್ಯಕ್ತ ಹಸ್ತಕ್ಷೇಪವು ಸಮಸ್ಯೆ ತರಬಹುದು. ವಾರದ ಅಂತ್ಯದಲ್ಲಿ ಅನಾರೋಗ್ಯ ಸಮಸ್ಯೆ ಕಾಡಬಹುದು.

ಕುಂಭ ರಾಶಿ

ಈ ವಾರ ಕುಂಭ ರಾಶಿಯವರಿಗೆ ಮಧ್ಯಮವಾಗಿರುತ್ತದೆ. ನೀವು ಯಾವುದೇ ಆತುರದ ಹೆಜ್ಜೆಗಳನ್ನು ಇಡುವುದನ್ನು ತಪ್ಪಿಸಬೇಕು. ವಾರದ ಮಧ್ಯದಲ್ಲಿ ನಿಮ್ಮ ಕೆಲಸದಲ್ಲಿ ಕೆಲವು ಹಠಾತ್ ಅಡೆತಡೆಗಳು ಬರಬಹುದು. ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಯಶಸ್ಸಿಗೆ ನೀವು ಸ್ವಲ್ಪ ಕಾಯಬೇಕಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಜಾಗೃತೆಯಿಂದ ಇರಬೇಕು. ಆಹಾರ ಸಂಬಂಧಿ ಖರ್ಚುಗಳನ್ನು ನಿಭಾಯಿಸಬೇಕು. ಭವಿಷ್ಯದ ದಿನಗಳಿಗಾಗಿ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತೀರಿ. ಅವಿವಾಹಿತರಿಗೆ ವಿವಾಹ ಸಂಬಂಧ ಶುಭ ಸುದ್ದಿ ಇದೆ.

ಮೀನ ರಾಶಿ

ಈ ವಾರ ನೀವು ಹೆಚ್ಚು ಶ್ರಮಿಸುತ್ತೀರಿ, ನಿಮಗೆ ಹೆಚ್ಚಿನ ಲಾಭಗಳು ಸಿಗುತ್ತವೆ. ವಾಹನ ಚಲಾವಣೆಯ ಸಮಯದಲ್ಲಿ ಈ ವಾರ ಬಹಳ ಎಚ್ಚರಿಕೆಯಿಂದ ಇರಬೇಕು. ನಿಮ್ಮ ದೊಡ್ಡ ಶ್ರಮದಾಯಕ ಕೆಲಸಗಳಲ್ಲಿ ನಿಮಗೆ ಲಾಭವಿದೆ. ವೃತ್ತಿಪರತೆಗೆ ಸಂಬಂಧಿಸಿದಂತೆ ಶುಭ ಸುದ್ದಿ ಕೇಳುವಿರಿ. ಅನೇಕ ಕೆಲಸಗಳಲ್ಲಿ ನಿಮಗೆ ಹಣಕಾಸಿನ ಕೊರತೆ ಎದುರಾಗಬಹುದು, ಆದ್ರೆ ಅನ್ನು ನಿಭಾಯಿಸುತ್ತೀರಿ. ಮನೆಯ ಹಿರಿ ಸದಸ್ಯರ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ. ಗೃಹಿಣಿಯರಲ್ಲಿ ಖರ್ಚು ಹೆಚ್ಚಾಗುವ ಸಮಯವಿದು.

(ಹಕ್ಕುತ್ಯಾಗ: ಈ ಲೇಖನದಲ್ಲಿ ಉಲ್ಲೇಖಿಸಲಾದ ರತ್ನಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ಸಲಹೆಗೆ ಬದಲಿಯಾಗಿ ಪರಿಗಣಿಸಬಾರದು. ಹಾಗೆ ಈ ಲೇಖನಕ್ಕೆ ಸಂಬಂಧಿಸಿದ್ದಂತೆ ಯಾವುದೇ ವಿಚಾರಕ್ಕೆ ಬೋಲ್ಡ್ ಸ್ಕೈ ಕನ್ನಡ ಜವಾಬ್ದಾರಿಯಾಗಿರುವುದಿಲ್ಲ)

English summary

Weekly Horoscope From August 25 To August 31: Lucky To These Zodiac Signs

Weekly Horoscope From August 25 To August 31: These zodiac get more benefits during this 7 days, read on...
Story first published: Monday, August 25, 2025, 8:18 [IST]
X
Desktop Bottom Promotion