Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಆಗಸ್ಟ್ 16ರಿಂದ ಆಗಸ್ಟ್ 22ರ ವಾರ ಭವಿಷ್ಯ: ನಿಮ್ಮ ರಾಶಿಯಲ್ಲಿ ಯಾವ ಫಲವಿದೆ?
ಆಗಸ್ಟ್ 16 ರಿಂದ ಆಗಸ್ಟ್ 22ರ ನಿಮ್ಮ ವಾರ ಭವಿಷ್ಯ ಇಲ್ಲಿದೆ...
ಮೇಷ ರಾಶಿ
ಮೇಷ ರಾಶಿಯವರು ಈ ವಾರದ ಆರಂಭದಲ್ಲಿ ಸಮಸ್ಯೆಗಳ ಎದುರಿಸಬಹುದು. ಅದ್ರಲ್ಲೂ ಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ನಿಮಗೆ ಬಹಳ ಅನುಕೂಲ ಇರುವುದಿಲ್ಲ. ಆಪ್ತರೊಬ್ಬರಿಂದ ದೊಡ್ಡ ಸಮಸ್ಯೆಗಳು ಎದುರಿಸಬೇಕಾಗಬಹುದು. ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಒಳ್ಳೆಯದು. ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ಸಮನ್ವಯ ಹೆಚ್ಚಾಗುತ್ತದೆ. ಇದು ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಕಾರಣವಾಗುತ್ತದೆ. ಕು ಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ಇಡುವುದು ಸೂಕ್ತ. ವಾರದ ಅಂತ್ಯದಲ್ಲಿ ವ್ಯವಹಾರ ವಿಚಾರವಾಗಿ ಉತ್ತಮ ದಿನಗಳು ಬರಬಹುದು. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ.
ವೃಷಭ ರಾಶಿ
ವೃಷಭ ರಾಶಿಯವರು ಈ ವಾರ ಸಂಬಂಧಗಳಿಗೆ ಬಹಳ ಮುಖ್ಯವಾದ ವಾರವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರ ಬಗ್ಗೆ ಹೆಚ್ಚಿನ ಗಮನ ಕೊಡಿ. ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ಸಹಕಾರವು ಯಶಸ್ಸನ್ನು ತರುತ್ತದೆ. ಅನಿರೀಕ್ಷಿತ ಲಾಭಗಳು ಎದುರಾಗುತ್ತವೆ. ಬಹಳಷ್ಟು ಸಮಯದಿಂದ ಕಾಡುತ್ತಿದ್ದ ಸಮಸ್ಯೆಯೊಂದು ದೂರಾಗಲಿದೆ. ವಾರದ ಅಂತ್ಯದಲ್ಲಿ ಹಣಕಾಸು ವಿಚಾರವಾಗಿ ಸಮಸ್ಯೆ ಬರಬಹುದು. ಕೌಟುಂಬಿಕ ವಿಚಾರವಾಗಿ ನಿಮಗೆ ಉತ್ತಮ ವಾರವಲ್ಲ. ಅನಿರೀಕ್ಷಿತ ಪ್ರವಾಸಗಳಿಂದ ವಿಚಲಿತರಾಗಬಹುದು.

ಮಿಥುನ ರಾಶಿ
ಈ ವಾರದ ಆರಂಭದಲ್ಲಿ ನೀವು ಪ್ರಮುಖ ಚಿಂತೆಗಳಿಂದ ಮುಕ್ತರಾಗುತ್ತೀರಿ. ಕೆಲಸದಲ್ಲಿನ ಈ ತೊಂದರೆಗಳು ದೂರವಾಗುತ್ತವೆ. ಕಚೇರಿಯಲ್ಲಿ ಇದ್ದ ಸಮಸ್ಯೆಯೊಂದು ಪರಿಹಾರವಾಗಲಿದೆ. ನ್ಯಾಯಾಲಯ ಪ್ರಕರಣಗಳು, ಆಸ್ತಿ ಕುರಿತಾದ ವಿಚಾರದಲ್ಲಿ ನಿಮಗೆ ಉತ್ತಮ ವಾರವಾಗಿರಲಿದೆ. ಅದ್ರಲ್ಲೂ ಬ್ಯಾಂಕ್ ಸಂಬಂಧಿ ವಿಚಾರವಾಗಿ ನೀವು ಬಯಸಿದಂತೆ ನೆರವೇರಲಿದೆ. ಉದ್ಯಮಿಗಳಿಗೆ ಉತ್ತಮ ವಾರವಾಗಿದೆ. ಪ್ರೀತಿ ಪ್ರೇಮದ ವಿಚಾರವಾಗಿ ನಿಮಗೆ ಅತ್ಯುತ್ತಮ ವಾರ ಎನ್ನಬಹುದು, ಆದ್ರೆ ಸಹೋದರರೊಂದಿಗಿನ ಸಂಬಂಧದಲ್ಲಿ ಮನಸ್ತಾನ ಮೂಡಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ವಾರ ಕೆಲಸದಲ್ಲಿ ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶಗಳು ಸಿಗುತ್ತವೆ. ಉನ್ನತ ಅಧಿಕಾರಿಗಳು ನಿಮ್ಮ ಕೌಶಲ್ಯದಿಂದ ಪ್ರಭಾವಿತರಾಗುತ್ತಾರೆ. ವ್ಯಾಪಾರಿಗಳಿಗೆ ಇಂದು ಉತ್ತಮ ಸಮಯ. ಹೂಡಿಕೆ ಮಾಡುವಾಗ ನೀವು ಬಹಳ ಎಚ್ಚರಿಕೆಯಿಂದ ಇರಬೇಕಿದೆ. ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಪ್ರಯಾಣಗಳಲ್ಲಿ ನೀವು ಅಂದುಕೊಂಡಂತೆ ಯಶಸ್ಸು ಅಥವಾ ಫಲಿತಾಂಶ ಸಿಗದೆ ಇರಬಹುದು. ವ್ಯಾಪಾರಿಗಳಿಗೆ ಉತ್ತಮ ವಾರವಾಗಿರಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ವಾರ ಬಹಳ ಅನುಕೂಲಕರವಾಗಿದೆ. ನಿಮ್ಮ ಹಣಕಾಸಿನ ವ್ಯವಹಾರ ನಿಮಗೆ ತೃಪ್ತಿ ತರಲಿದೆ, ನಿಮಗೆ ಹೊಸ ವಸ್ತು ಖರೀದಿಸಬಹುದು. ನಿಮ್ಮ ಓಡಾಟಗಳು ಹೆಚ್ಚಾಗುತ್ತವೆ. ವಾರದ ಉದ್ದಕ್ಕೂ ನೀವು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತೀರಿ. ನಿಮ್ಮ ಪೂರ್ವ ನಿಯೋಜಿತ ಕಾರ್ಯದಲ್ಲಿ ನೀವು ಬಹಳಷ್ಟು ಶ್ರಮ ಹಾಕುತ್ತೀರಿ. ವ್ಯಾಪಾರಿಗಳಿಗೆ ಪ್ರಗತಿ ಕಾಣುವ ಕಾಲವಿದು. ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಈ ವಾರ ಅನುಕೂಲವಿದೆ. ಗೃಹಿಣಿಯರಲ್ಲಿ ಹಣಕಾಸಿನ ನೆಮ್ಮದಿ ಇರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಈ ವಾರ ಬಹಳಷ್ಟು ಪ್ರಯಾಣದಲ್ಲಿ ಭಾಗಿಯಾಗುವಿರಿ. ಸಮಾಜಮುಖಿ ಕಾರ್ಯಗಳಲ್ಲಿ ನಿಮಗೆ ಉತ್ತಮ ಹೆಸರು ಬರಬಹುದು. ರಾಜಕೀಯವಾಗಿ ಗುರುತಿಸಿಕೊಂಡವರಿಗೆ ಉತ್ತಮ ಸಮಯ. ನಿಮ್ಮ ಸುತ್ತಲಿನ ಜನರ ಕುರಿತು ಜಾಗೃತೆ ಇರಲಿ. ಹಣಕಾಸು ವ್ಯವಹಾರ ಮಾಡುವಾಗ ಮತ್ತಷ್ಟು ಎಚ್ಚರಿಕೆ ಅಗತ್ಯ. ವಿವಾಹಿತರಲ್ಲಿ ಖರ್ಚು ದುಪ್ಪಟ್ಟಾಗಬಹುದು. ದೇವಾಲಯ ಭೇಟಿಯಂತಹ ಕೆಲಸಕ್ಕೆ ಮುಂದಾಗುವುದು ನಿಮ್ಮಲ್ಲಿ ಶಾಂತಿ ತರಲಿದೆ.
ತುಲಾ ರಾಶಿ
ಈ ವಾರ ತುಲಾ ರಾಶಿಯವರಿಗೆ ಏರಿಳಿತಗಳಿಂದ ತುಂಬಿದ ವಾರ. ಈ ಸಮಯದಲ್ಲಿ ನೀವು ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಪ್ರತಿಯೊಂದು ಖರ್ಚುಗಳನ್ನು ಬಹಳಷ್ಟು ಆಲೋಚಿಸಿ ಮಾಡಬೇಕಿದೆ. ನಿಮ್ಮ ಕೆಲಸಗಳನ್ನು ಇತರರಿಗೆ ವಹಿಸುವುದನ್ನು ತಪ್ಪಿಸಬೇಕು. ದೊಡ್ಡ ಹೂಡಿಕೆಗಳ ತಪ್ಪಿಸಬೇಕಿದೆ. ವ್ಯಾಪಾರಿಗಳು ಈ ಸಮಯದಲ್ಲಿ ದೊಡ್ಡ ಲಾಭ ನೋಡುತ್ತಾರೆ. ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಲಿವೆ. ಪ್ರಯಾಣದಲ್ಲಿ ನಿಮ್ಮ ಬಯಕೆಗಳು ಈಡೇರಲಿದೆ.
ವೃಶ್ಚಿಕ ರಾಶಿ
ಈ ವಾರದ ಆರಂಭದಲ್ಲಿ ವೃಶ್ಚಿಕ ರಾಶಿಯವರಿಗೆ ಕೆಲಸದಲ್ಲಿ ಸಮಸ್ಯೆಗಳು ಎದುರಾಗಬಹುದು. ವಾಹನ ಸಂಬಂಧಿ ವಿಚಾರದಲ್ಲಿ ಬಹಳ ಎಚ್ಚರಿಕೆ ಇಡಬೇಕು. ಗೃಹಿಣಿಯರು ತಮ್ಮ ಕೆಲಸಗಳ ವಿಷಯವಾಗಿ ಎಚ್ಚರಿಕೆಯಿಂದ ಇರಬೇಕಿದೆ. ಮಕ್ಕಳ ಕುರಿತಾದ ಚಿಂತೆಯಲ್ಲಿ ಈ ವಾರ ಕಳೆಯುವಿರಿ. ವಾರದ ಉತ್ತರಾರ್ಧವು ಉದ್ಯಮಿಗಳಿಗೆ ಶುಭವಾಗಿರುತ್ತದೆ. ಕೆಲಸದಲ್ಲಿರುವವರಿಗೆ ಉನ್ನತ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ಸಂಬಂಧಿಕರ ಕಡೆಯಿಂದ ಶುಭ ಸುದ್ದಿ ಕೇಳಬಹುದು. ಹೊಸದಾಗಿ ಉದ್ಯೋಗ ಹುಡುಕುತ್ತಿದ್ದ ಮಂದಿಗೆ ಈ ವಾರ ಉತ್ತಮ ಅವಕಾಶಗಳು ಒಲಿದು ಬರಬಹುದು.
ಧನು ರಾಶಿ
ಧನು ರಾಶಿಯ ಜನರಿಗೆ ಈ ವಾರ ಬಹಳ ಉತ್ತಮವಾಗಿರಲಿದೆ. ವಾರದ ಆರಂಭದಲ್ಲಿ ನಿಮ್ಮ ವ್ಯವಹಾರಗಳು, ಕೆಲಸಗಳು ಧನಾತ್ಮಕವಾಗಿ ಆರಂಭವಾಗಲಿವೆ. ವಾರದ ಮಧ್ಯಂತರದಿಂದ ನಿಮ್ಮಲ್ಲಿ ಹಣಕಾಸು ಕುರಿತಾದ ಒತ್ತಡ ಬರಬಹುದು. ಪೂರ್ವ ನಿಯೋಜಿತ ಕೆಲಸಗಳಿಂದ ನಿಮಗೆ ಕಠಿಣ ಸಮಯ ಎದುರಾಗಬಹುದು. ಸರ್ಕಾರಿ ನೌಕರರಿಗೆ ಸಮಸ್ಯೆಗಳು ಬರಬಹುದು. ಕೌಟುಂಬಿಕ ವಿಚಾರದಲ್ಲಿ ನೀವು ತಾಳ್ಮೆಯಿಂದ ಇರುವುದು ಉತ್ತಮ. ದುಂದು ವೆಚ್ಚಗಳ ಕಡಿಮೆ ಮಾಡುವುದು ಬಹಳ ಉತ್ತಮ.
ಮಕರ ರಾಶಿ
ಮಕರ ರಾಶಿಯವರಿಗೆ ಈ ವಾರ ಮಿಶ್ರ ಫಲ ತರಲಿದೆ. ವ್ಯವಹಾರದ ವಿಷಯದಲ್ಲಿ ಮಕರ ರಾಶಿಯವರಿಗೆ ಈ ವಾರ ಒಳ್ಳೆಯದಾಗಿರುತ್ತದೆ. ಆದರೆ ನಿಮ್ಮಲ್ಲಿ ವ್ಯವಹಾರಿಕವಾಗಿ ಆಸಕ್ತಿ ಕಡಿಮೆಯಾಗುವ ಕೆಲವು ಅಡ್ಡಿ ಆತಂಕ ಎದುರಾಗಬಹುದು. ಸಾಲ ಮರುಪಾವತಿಗಾಗಿ ನಿಮ್ಮ ಮೇಲೆ ಒತ್ತಡ ಬರಬಹುದು. ವಾಹನ ಸಂಬಂಧವಾಗಿ ಖರ್ಚು ಹೆಚ್ಚಾಗಬಹುದು. ನಿಮ್ಮದಲ್ಲದ ಖರ್ಚುಗಳು ಹೆಚ್ಚಾಗುವ ವಾರವಿದು. ಹೊಸ ವಸ್ತುಗಳ ಖರೀದಿಗೆ ನೀವು ಮುಂದಾಗುವುದು ನೋಡಬಹುದು.
ಕುಂಭ ರಾಶಿ
ಈ ವಾರ ಕುಂಭ ರಾಶಿಯವರಿಗೆ ತುಂಬಾ ಶುಭವಾಗಿರುತ್ತದೆ. ನೀವು ಸ್ವಲ್ಪ ಸಮಯದಿಂದ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದರೆ, ಈ ವಾರ ಪರಿಹಾರ ಸಿಗುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳ ಪಡೆಯುತ್ತೀರಿ. ಆಧ್ಯಾತ್ಮಕಿ ವಿಚಾರದಲ್ಲಿ ನಿಮಗೆ ಆಸಕ್ತಿ ಹೆಚ್ಚಾಗಲಿದೆ. ಆಸ್ತಿ, ಹಣಕಾಸು ಕುರಿತಾದ ವಿಚಾರದಲ್ಲಿ ನಿಮಗೆ ಲಾಭದಾಯಕ ವಾರ ಎನ್ನಬಹುದು. ಬ್ಯಾಂಕಿಂಗ್ ವಿಚಾರದಲ್ಲಿ ಯಶಸ್ಸು ಇದೆ. ಗಿರವಿ ಇಟ್ಟಿದ್ದ ಚಿನ್ನವನ್ನು ಬಿಡಿಸಬಹುದು. ನಿಮ್ಮ ಆದಾಯ ಹೆಚ್ಚಳದಿಂದ ನೆಮ್ಮದಿ ಇರಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ವಾರ ಉತ್ತಮವಾಗಿರಲಿದೆ. ನಿಮ್ಮ ಹಲವು ವಿಚಾರಗಳಲ್ಲಿ ಧನಾತ್ಮಕತೆ ನೋಡಬಹುದು. ನಿಮ್ಮ ಸಾಲಗಳು ಮರುಪಾವತಿಯಾಗಲಿವೆ. ನಿಮ್ಮ ಆರ್ಥಿಕ ಸಮಸ್ಯೆಗಳಿಂದ ಉಂಟಾಗಿದ್ದ ಒತ್ತಡ ಕಡಿಮೆಯಾಗಲಿದೆ. ಆರೋಗ್ಯ ಸುಧಾರಣೆ ನೋಡಬಹುದು. ಆದರೆ ಮನೆಯ ಸದಸ್ಯೆ ಆರೋಗ್ಯದಲ್ಲಿ ಏರುಪೇರು ಸಂಭವದ ನಿರೀಕ್ಷದೆ ಇದೆ. ಹಲವು ದಿನದಿಂದ ನೀವು ಬಯಸಿದ್ದ ವಿಚಾರದಲ್ಲಿ ಗೆಲುವು ಪಡೆಯಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











