Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಆಗಸ್ಟ್ 10ರಿಂದ ಆಗಸ್ಟ್ 16ರ ವಾರ ಭವಿಷ್ಯ: ಯಾವ ರಾಶಿಯವರಿಗೆ ಈ ವಾರ ಅದೃಷ್ಟ?
ಆಗಸ್ಟ್ 10 ರಿಂದ ಆಗಸ್ಟ್ 16ರ ನಿಮ್ಮ ವಾರ ಭವಿಷ್ಯ ಇಲ್ಲಿದೆ...
ಮೇಷ ರಾಶಿ
ಮೇಷ ರಾಶಿಯವರಿಗೆ ಈ ವಾರವು ಬಹಳ ಅನುಕೂಲಕರ ದಿನಗಳ ತರಲಿದೆ. ಪ್ರೀತಿ ಮತ್ತು ವ್ಯವಹಾರಕ್ಕೆ ಎಲ್ಲಾ ವಿಚಾರದಲ್ಲೂ ನಿಮಗೆ ಅತ್ಯುತ್ತಮ ದಿನಗಳಿವೆ. ವಾರದ ಆರಂಭದಲ್ಲಿ ನಿಮ್ಮ ಆದಾಯದಲ್ಲಿ ಏರಿಳಿತ ನೋಡಬಹುದು. ಆದರೆ ನಿಮ್ಮಲ್ಲಿ ಹಣದ ಹರಿವು ಹೆಚ್ಚಾಗಲಿದೆ. ಪ್ರಯಾಣಗಳಲ್ಲಿ ದೊಡ್ಡ ಮಟ್ಟ ಶುಭ ಇಲ್ಲದಿದ್ದರೂ ನಿಮಗೆ ಶುಭಕರವಾಗಿರಲಿದೆ. ಕೌಟುಂಬಿಕ ವಿಚಾರದಲ್ಲಿ ನಿಮಗೆ ಗೊಂದಲದ ವಾತಾವರಣೆ ಎದುರಾಗಬಹುದು. ವಾರದ ಅಂತ್ಯದಲ್ಲಿ ನಿಮಗೆ ಸವಾಲುಗಳಿದ್ದರೂ ನೀವು ಅದನೆಲ್ಲಾ ಎದುರಿಸುತ್ತೀರಿ. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ. ಆಪ್ತರೊಬ್ಬರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ.
ವೃಷಭ ರಾಶಿ
ಆರೋಗ್ಯ ವಿಚಾರವಾಗಿ ಈ ವಾರ ನಿಮಗೆ ಬಹಳ ಉತ್ತಮ ದಿನಗಳಿವೆ. ಮಕ್ಕಳ ಕುರಿತಾಗಿ ಇದ್ದ ಸಮಸ್ಯೆ ಅಥವಾ ಚಿಂತೆಯೊಂದು ದೂರಾಗಲಿದೆ ವ್ಯಾಪಾರಿಗಳಿಗೆ ಬಹಳ ಉತ್ತಮ ವಾರ, ನಿಮ್ಮ ವ್ಯವಹಾರ ಪ್ರಗತಿಯಾಗಲಿದೆ. ವಾರದ ಆರಂಭದಲ್ಲಿ ನ್ಯಾಯಾಲಯ ಸಂಬಂಧಿ ವಿಚಾರದಲ್ಲಿ ಶುಭವಿದೆ. ರಾಜಕೀಯ ಕ್ಷೇತ್ರದಲ್ಲಿರುವವರು ಈ ವಾರ ಬಹಳಷ್ಟು ನಾಯಕತ್ವ ಗುಣಗಳಿಂದ ಹೆಸರು ಗಳಿಸಬಹುದು. ಹಣದ ವಿಚಾರದಲ್ಲಿ ನಿಮ್ಮಲ್ಲಿ ಸಮಾಧಾನಕರ ಪರಿಸ್ಥತಿ ಇರಲಿದೆ. ವ್ಯವಹಾರಗಳಿಗೆ ನೀವು ಹೆಚ್ಚು ಓಡಾಡುತ್ತೀರಿ. ಉಳಿತಾಯ ಹೆಚ್ಚಾಗುವ ಜೊತೆಗೆ ನಿಮ್ಮಿಂದ ಬಹಳಷ್ಟು ಹೂಡಿಕೆಗೆ ನೀವು ಮುಂದಾಗುತ್ತೀರಿ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ವಾರವು ಬಹಳ ಅನುಕೂಲಕರವಾಗಿಲಿದೆ. ನಿಮ್ಮ ಹಲವು ಯೋಜನೆಗಳು ಯಶಸ್ವಿಯಾಗಲಿವೆ. ವ್ಯವಹಾರವು ಧನಾತ್ಮಕ ವಿಚಾರಗಳಿಂದ ತುಂಬಿರಲಿದೆ. ನಿಮ್ಮ ಗೌರವಕ್ಕೆ ಹಾನಿಯಾಗುವ ಘಟನೆಗಳು ನಡೆಯಲಿವೆ. ನಿಮ್ಮ ಪ್ರಯಾಣವು ತೊಂದರೆದಾಯಕವಾಗಬಹುದು. ವ್ಯವಹಾರದಲ್ಲಿ ಏರಿಳಿತಗಳು ಸಂಭವಿಸಲಿದೆ. ಹೊಸ ಆದಾಯ ಮೂಲಗಳು ನಿಮಗೆ ಶುಭ ತರಲಿವೆ. ಶನಿಯ ಆಶೀರ್ವಾದ ಪಡೆಯಹುದು. ಇದರಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ಣ ಮಾಡುವಿರಿ. ಹಣಕಾಸು ವಿಚಾರವಾಗಿ ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ. ಪ್ರಯಾಣಗಳಿಗೆ ನೀವು ತಯಾರಿ ನಡೆಸುತ್ತೀರಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆಈ ವಾರ ಅನುಕೂಲಕರ ದಿನಗಳಿವೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಲಾಭದಾಯಕ ಹಾಗೆ ವ್ಯಾಪಾರವು ಬಹಳಷ್ಟು ಪ್ರಗತಿ ಹೊಂದಲಿದೆ. ಆರ್ಥಿಕ ವಿಚಾರಗಳು ಬಹಳ ಅನುಕೂಲಕರವಾಗಿರಲಿದೆ. ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳು ಮುಗಿಯಲಿವೆ. ಅವಿವಾಹಿತರಿಗೆ ಈ ವಾರವು ಶುಭ ಸುದ್ದಿಗಳು ಕೇಳಿಬರಲಿವೆ. ನಿಮ್ಮ ಅದೃಷ್ಟ ನಿಮಗೆ ಉತ್ತಮ ಸಂಪರ್ಕಗಳು ಉಂಟಾಗಲು ಸಹಾಯ ಮಾಡಲಿದೆ. ಕಚೇರಿ ವಿಚಾರದಲ್ಲಿ ನಿಮಗೆ ಉತ್ತಮ ಸಮಯ ಆಗಿರಲಿದೆ. ನಿರುದ್ಯೋಗಿಗಳಿಗೆ ಈ ವಾರವು ಬಹಳ ಅನುಕೂಲಕರ ಅವಕಾಶಗಳ ತರಲಿವೆ.
ಸಿಂಹ ರಾಶಿ
ಸಿಂಹ ರಾಶಿಯವರು ಈ ವಾರ ಅದೃಷ್ಟ ಪರೀಕ್ಷೆ ಎದುರಿಸಬಹುದು. ನಿಮ್ಮ ಹಲವು ಕೆಲಸಗಳು ಸುಸೂತ್ರವಾಗಿ ನಡೆಯಲಿದೆ. ವ್ಯಾಪಾರಿಗಳಿಗೆ ಬಹಳ ದೊಡ್ಡ ಲಾಭಗಳು ಕಾದಿವೆ. ಹಣಕಾಸಿನ ವಿಚಾರದಲ್ಲಿ ಈ ವಾರ ಬಹಳ ಉತ್ತಮವಾಗಿರಲಿದೆ. ಮನೆಯವರ ಜೊತೆ ನೀವು ಪ್ರವಾಸ ಕೈಗೊಳ್ಳಬಹುದು. ದೇವಾಲಯ ಭೇಟಿಗೆ ಮುಂದಾಗಬಹುದು. ದಾಂಪತ್ಯ ವಿಚಾರದಲ್ಲಿ ನಿಮಗೆ ಉತ್ತಮ ಸಮಯ. ಮನೆಗಾಗಿ ಹೊಸ ವಸ್ತುಗಳ ಖರೀದಿಗೆ ಮುಂದಾಗಬಹುದು. ನೀವು ಉನ್ನತ ಅಧಿಕಾರಿಗಳ ಬೆಂಬಲದಿಂದ ಉತ್ತಮ ಅವಕಾಶ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ, ಬಡ್ತಿ ವಿಚಾರದಲ್ಲಿ ಉತ್ತಮ ಸಮಯ ಆಗಿರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ವಾರ ಬಹಳ ಓಡಾಟದ ಸಮಯ. ನಿಮ್ಮಲ್ಲಿ ಮಂಗಳನ ಸಂಚಾರದಿಂದ ಈ ವಾರ ಒಂದಿಷ್ಟು ಸಮಸ್ಯೆ ಎದುರಿಸಬಹುದು. ಆಸ್ತಿ ವಿಚಾರವಾಗಿ, ಹಣದ ವಿಚಾವಾಗಿ ನಿಮಗೆ ಅನುಕೂಲಕ ಇರುವುದಿಲ್ಲ. ಈ ಕುರಿತಾದ ವಿಚಾರದಲ್ಲಿ ಒತ್ತಡ ಹೆಚ್ಚಾಗಬಹುದು. ಸಾಲಗಾರರು ನಿಮಗೆ ಸಮಸ್ಯೆ ತರಬಹುದು. ಕೆಲಸವು ಅಡೆತಡೆಗಳೊಂದಿಗೆ ಪೂರ್ಣಗೊಳ್ಳುತ್ತದೆ. ಪ್ರೀತಿ ಮತ್ತು ವೈವಾಹಿಕ ಸಂಬಂಧದಲ್ಲಿ ದೂರವಾಗುವ ಸಾಧ್ಯತೆ ಇರುತ್ತದೆ. ಸಾಧ್ಯವಾದಷ್ಟು ದೊಡ್ಡ ವ್ಯವಹಾರಗಳು, ಒಪ್ಪಂದಗಳಿಂದ ದೂರವಿರಿ. ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು.
ತುಲಾ ರಾಶಿ
ತುಲಾ ರಾಶಿಯ ಮಂದಿಗೆ ಈ ವಾರವು ಮಿಶ್ರ ಫಲವಾಗಿರಲಿದೆ. ಪ್ರೀತಿ ವಿಚಾರವಾಗಿ ನೋವಿನ ದಿನಗಳಿವೆ. ವಾರದ ಆರಂಭದಲ್ಲಿ ಬಹಳ ಖರ್ಚು ನೋಡಬಹುದು. ಅನಗತ್ಯ ವಿಚಾರವಾಗಿ ಖರ್ಚುಗಳು ಹೆಚ್ಚಾಗಬಹುದು. ಆಪ್ತರೊಬ್ಬರಿಗೆ ನೀವು ಹಣಕಾಸಿನ ಸಹಾಯ ಮಾಡಬೇಕಾಗಿ ಬರಬಹುದು. ಹಲವರಿಗೆ ಈ ವಾರ ಆರ್ಥಿಕವಾಗಿ ಮಿಶ್ರ ಫಲವಿದೆ. ನೀವು ಕಠಿಣ ಪರಿಶ್ರಮದ ಆಧಾರದ ಮೇಲೆ ಉತ್ತಮ ಯಶಸ್ಸನ್ನು ಸಾಧಿಸುವಿರಿ. ನೀವು ಕೆಲಸದಲ್ಲಿದ್ದರೆ, ನಿಮ್ಮ ಪ್ರಗತಿಯ ಕನಸು ನನಸಾಗುತ್ತದೆ. ನೀವು ಸಾಲ ತೆಗೆದುಕೊಳ್ಳುವುದನ್ನು ಅಥವಾ ಹಣವನ್ನು ಸಾಲವಾಗಿ ನೀಡುವುದನ್ನು ತಪ್ಪಿಸಬೇಕು. ನಿಮ್ಮ ಪೋಷಕರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ವಾರ ಏರಿಳಿತಗಳಿಂದ ಕೂಡಿರಲಿದೆ. ಉತ್ತಮ ಲಾಭಕ್ಕಾಗಿ ಉದ್ಯಮಿಗಳು ತಮ್ಮ ವ್ಯವಹಾರ ಯೋಜನೆಗಳ ಬಗ್ಗೆ ಯೋಚಿಸಲು ಸೂಚಿಸಲಾಗುತ್ತದೆ. ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ವ್ಯಯಿಸಬೇಕಾಗುತ್ತದೆ. ಈ ಸಮಯ ಪ್ರೇಮ ವಿಷಯಗಳಲ್ಲಿ ವಿವಾದಗಳು ಇರಬಹುದು. ನಿಮ್ಮ ಸಂಗಾತಿಯೊಂದಿಗಿನ ತಪ್ಪು ತಿಳುವಳಿಕೆ ಹೆಚ್ಚಾಗಬಹುದು. ಪೂರ್ವಜರ ಆಸ್ತಿ ಸಂಬಂಧಿಸಿದಂತೆ ನಿಮಗೆ ಉತ್ತಮ ಸಮಯವಲ್ಲ. ನ್ಯಾಯಾಲಯ ಸಂಬಂಧಿ ವಿಚಾರವಾಗಿ ನಿಮಗೆ ತಕ್ಕ ಪ್ರತಿಫಲ ಸಿಗದೆ ಇರಬಹುದು. ಸಣ್ಣಪುಟ್ಟ ಅನಾರೋಗ್ಯ ವಿಚಾರವಾಗಿ ನಿಮಗೆ ಅನಾನುಕೂಲತೆ ಇದೆ. ಹಣದ ವಿಚಾರದಲ್ಲಿ ಎಚ್ಚರಿಕೆಯ ನಿರ್ಧಾರಗಳ ತೆಗೆದುಕೊಳ್ಳಿ.
ಧನು ರಾಶಿ
ಧನು ರಾಶಿಯ ಜನರಿಗೆ ಬಹಳ ತೃಪ್ತಿದಾಯಕ ವಾರ ಎನ್ನಬಹುದು. ನಿಮ್ಮ ಸಂಬಂಧವನ್ನು ಸುಧಾರಿಸುವ ನಿಮ್ಮ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ವಾರದ ಕೊನೆಯಲ್ಲಿ ನೀವು ಆರ್ಥಿಕ ಸಮಸ್ಯೆಗಳನ್ನು ಸಹ ಎದುರಿಸಬಹುದು. ಸಂಬಂಧಗಳ ವಿಷಯದಲ್ಲಿ ಈ ವಾರ ನಿಮಗೆ ಒಳ್ಳೆಯದು. ವಾರದ ಕೊನೆಯಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಬರಬಹುದು. ಅವಿವಾಹಿತರು ತಮ್ಮ ಸಂಗಾತಿಯ ಜೊತೆಗೆ ಕಲಹದಲ್ಲಿ ತೊಡಗಬಹುದು. ನಿಮ್ಮ ಬಾಕಿ ಇರುವ ಕೆಲಸವನು ಪೂರ್ಣ ಮಾಡುವಿರಿ. ಉದ್ಯೋಗ ಸಂಬಂಧಿ ಸಮಸ್ಯೆಯೊಂದು ಬಗೆಹರಿಯಲಿದೆ. ಮನೆಯ ಹಿರಿಯೊಬ್ಬರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ವಾರವು ಮಿಶ್ರ ಫಲದಿಂದ ಕೂಡಿರಲಿದೆ. ವಾರದ ಮಧ್ಯದಲ್ಲಿ ನೀವು ನಿಮ್ಮ ಕುಟುಂಬದೊಂದಿಗೆ ಹೊರಗೆ ಹೋಗಬಹುದು. ಈ ವಾರ ನೀವು ಮನೆಯ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುತ್ತೀರಿ. ಹಣದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಹಣದ ಖರ್ಚು ಕೂಡ ಅಗತ್ಯಕ್ಕಿಂತ ಹೆಚ್ಚಾಗಿ ಮಾಡಬಹುದು. ಅವಿವಾಹಿತರಲ್ಲಿ ಈ ವಾರದಲ್ಲಿ ದೊಡ್ಡ ಸಮಸ್ಯೆಗಳ ತರಬಹುದು. ಅದ್ರಲ್ಲೂ ನಿಮ್ಮ ಮನೆಗಾಗಿ ನೀವು ಖರೀದಿಸುವ ವಸ್ತುವಿನ ವಿಚಾರದಲ್ಲಿ ಮನಸ್ತಾಪ ಮೂಡಬಹುದು. ವ್ಯಾಪಾರಿಗಳಿಗೆ ಈ ವಾರ ಅಧಿಕ ಲಾಭ ತರಬಹುದು. ಪ್ರಯಾಣಗಳು ಲಾಭದಾಯಕವಾಗಬಹುದು.
ಕುಂಭ ರಾಶಿ
ಕುಂಭ ರಾಶಿಯ ಜನರಿಗೆ ಈ ವಾರವು ಉತ್ತಮವಾಗಿರಲಿದೆ. ಅದ್ರಲ್ಲೂ ವ್ಯಾಪಾರಿಗಳಿಗೆ ಬಹಳ ಉತ್ತಮ ದಿನಗಳಿವೆ. ಕೆಲಸದಲ್ಲಿ ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಬಾಕಿ ಇರುವ ಕೆಲಸದ ಹೊರೆ ಭಾರವಾಗಿರುತ್ತದೆ, ಆದರೆ ನಿಮ್ಮ ಕಠಿಣ ಪರಿಶ್ರಮವು ಫಲ ನೀಡುತ್ತದೆ. ಹಳೆಯ ಸಾಲಗಳನ್ನು ತೀರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೀರಿ ಮತ್ತು ನಿಮ್ಮ ಕಠಿಣ ಪರಿಶ್ರಮದ ಪ್ರಯೋಜನಗಳನ್ನು ಪಡೆಯುತ್ತೀರಿ. ಆರೋಗ್ಯವು ಉತ್ತಮವಾಗಿರುತ್ತದೆ. ಆದ್ರೆ ನಿಯಮಿತ ಪರೀಕ್ಷೆಯನ್ನು ತಪ್ಪಿಸಬೇಡಿ. ನಿಮ್ಮ ಸಂಗಾತಿಯ ಆರೋಗ್ಯವು ಸುಧಾರಿಸುತ್ತದೆ. ಈ ವಾರ ಹಣದ ವಿಷಯದಲ್ಲಿ ನಿಮಗೆ ಉತ್ತಮವಾಗಿರುತ್ತದೆ.
ಮೀನ ರಾಶಿ
ಮೀನ ರಾಶಿಯ ಮಂದಿಯು ಈ ವಾರ ಬಹಳಷ್ಟು ಓಡಾಟದಲ್ಲಿ ಕಳೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ವಿವಿಧ ಆಲೋಚನೆಗಳು ಮನಸ್ಸಿಗೆ ಬರಬಹುದು. ನಿಮ್ಮ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರಪಡಬೇಡಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಇರುತ್ತದೆ. ವಾರದ ಅಂತ್ಯದ ವೇಳೆಗೆ ನೀವು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತೀರಿ.



Click it and Unblock the Notifications











