Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಾರ ಭವಿಷ್ಯ: ಈ ವಾರ (ಏಪ್ರಿಲ್ 5-13) 12 ರಾಶಿಗಳಿಗೆ ಹೇಗಿರಲಿದೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ವಾರ ಅಂದರೆ ಏಪ್ರಿಲ್ 5ರಿಂದ 13ರವರೆಗೆ 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಕೆಲಸದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿದೆ. ವ್ಯಾಪಾರಿಗಳಿಗೆ ಈ ವಾರ ಉತ್ತಮವಾಗಿದೆ. ನಿರುದ್ಯೋಗಿಗಳು ಉದ್ಯೋಗವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ವಾರದ ಕೊನೆಯಲ್ಲಿ ನೀವು ಆರ್ಥಿಕ ಲಾಭಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಬೇರೆಯವರ ಸಲಹೆ ಮೇರೆಗೆ ನಿಮ್ಮ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಆರೋಗ್ಯದಲ್ಲಿ ಈ ದಿನ ಮಿಶ್ರಫಲ.
ಅದೃಷ್ಟದ ಬಣ್ಣ: ಕಡು ಹಸಿರು
ಅದೃಷ್ಟದ ಸಂಖ್ಯೆ: 7
ಶುಭ ದಿನ: ಶನಿವಾರ

ವೃಷಭ ರಾಶಿ'
ಈ ವಾರ ನೀವು ಹಣದ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಿ. ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರವು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು. ಆರ್ಥಿಕ ನಷ್ಟದ ಸಾಧ್ಯತೆಯೂ ಇದೆ, ಆದ್ದರಿಂದ ಜಾಗ್ರತೆವಹಿಸಿ. ಇಂದು ಉದ್ಯೋಗ ಅಥವಾ ವ್ಯವಹಾರವಾಗಿರಲಿ, ನಿಮ್ಮ ಬಾಕಿಯಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಉದ್ಯೋಗಿಗಳಿಗೆ ವಾರದ ಆರಂಭಿಕ ದಿನಗಳು ತುಂಬಾ ಕಾರ್ಯನಿರತವಾಗಿರುತ್ತವೆ. ಈ ಅವಧಿಯಲ್ಲಿ, ನಿಮ್ಮ ಕೆಲಸದ ಹೊರೆ ಅಧಿಕವಿರಲಿದೆ. ಉನ್ನತ ಅಧಿಕಾರಿಗಳ ವರ್ತನೆಯು ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ವ್ಯಾಪಾರಿಗಳಿಗೆ ಈ ವಾರ ಬಹಳ ಮುಖ್ಯವಾಗಿರುತ್ತದೆ. ತಂದೆಗೆ ಆರೋಗ್ಯ ಸಮಸ್ಯೆಯಿದ್ದರೆ ತಂದೆಯ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬರುವುದು.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 20
ಶುಭ ದಿನ: ಸೋಮವಾರ
ಮಿಥುನ ರಾಶಿ'
ಈ ಅವಧಿಯಲ್ಲಿ ನೀವು ಅತ್ಯಂತ ಸಮತೋಲಿತ ರೀತಿಯಲ್ಲಿ ವರ್ತಿಸುವಂತೆ ಸಲಹೆ ನೀಡಲಾಗುವುದು. ಈ ದಿನ ನೀವು ಹೆಚ್ಚು ಕಷ್ಟಪಟ್ಟು ಕೆಲಸ ಮಾಡುತ್ತೀರಿ, ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರಿಗಳು ಸಣ್ಣ ಪ್ರವಾಸಗಳನ್ನು ಕೈಗೊಳ್ಳಬೇಕಾಗಬಹುದು. ನಿಮ್ಮ ಈ ಪ್ರಯಾಣವು ತುಂಬಾ ಆಯಾಸದಾಯಕವಾಗಿರುತ್ತದೆ, ಆದರೆ ನೀವು ಸರಿಯಾದ ಫಲಿತಾಂಶಗಳನ್ನು ಪಡೆಯುತ್ತೀರಿ. ಹಣದ ಬಗ್ಗೆ ಹೇಳುವುದಾದರೆ ಈ ವಾರ ನಿಮಗೆ ತುಂಬಾ ಒಳ್ಳೆಯದು. ಹೊಸ ಆದಾಯದ ಮೂಲವನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ಈ ವಾರ ಸ್ವಲ್ಪ ಕಷ್ಟವಾಗಿರಲಿದೆ. ಅನಗತ್ಯ ವಿಷಯಗಳಿಂದ ದೂರವಿರಿ. ಈ ವಾರ ಕಣ್ಣಿನ ಸಮಸ್ಯೆವಿರಬಹುದು
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 4
ಶುಭ ದಿನ: ಬುಧವಾರ
ಕರ್ಕ ರಾಶಿ
ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುವಲ್ಲಿನೀವು ಯಶಸ್ವಿಯಾಗುತ್ತೀರಿ. ಈ ಅವಧಿಯಲ್ಲಿ, ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿಯು ಹೆಚ್ಚಾಗುತ್ತದೆ. ಉದ್ಯೋಗಸ್ಥರು ಈ ಅವಧಿಯಲ್ಲಿ ತಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಪಡೆಯುತ್ತೀರಿ. ನಿಮ್ಮ ಆದಾಯ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಈ ಏಳೂ ದಿನ ಕೆಲವು ಏರಿಳಿತಗಳಿಂದ ಕೂಡಿರುತ್ತದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 19
ಶುಭ ದಿನ: ಶುಕ್ರವಾರ
ಸಿಂಹ ರಾಶಿ
ನಿಮ್ಮ ಆರೋಗ್ಯವು ತುಂಬಾ ಉತ್ತಮವಾಗಿರಲಿದೆ. ಉದ್ಯೋಗಿಗಳಿಗೆ ಈ ಅವಧಿ ತುಂಬಾ ಉತ್ತಮವಾಗಿರಲಿದೆ. ಉದ್ಯೋಗಿಗಳ ಎಲ್ಲಾ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ನಿಮ್ಮ ಕಾರ್ಯನಿರ್ವಹಣೆಯಲ್ಲಿ ದೊಡ್ಡ ಸುಧಾರಣೆ ಕಂಡುಬರಲಿದೆ. ವ್ಯಾಪಾರಿಗಳು ಯಾವುದೇ ರೀತಿಯ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ಈ ಸಮಯದಲ್ಲಿ, ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಉತ್ತಮ ಲಾಭ ಗಳಿಸಲು ಸಾಧ್ಯವಾಗುವುದು. ಹಣದ ವಿಷಯದಲ್ಲಿ ಈ ವಾರ ನಿಮಗೆ ಸ್ವಲ್ಪ ದುಬಾರಿಯಾಗಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 9
ಶುಭ ದಿನ: ಗುರುವಾರ
ಕನ್ಯಾ ರಾಶಿ
ಉದ್ಯೋಗಿಗಳಿಗೆ ಈ ವಾರ ಸ್ವಲ್ಪ ಸವಾಲಿನ ಸಾಧ್ಯತೆಯಿದೆ. ವಾರದ ಆರಂಭವು ವ್ಯಾಪಾರಸ್ಥರಿಗೆ ಉತ್ತಮವಾಗಿರುವುದಿಲ್ಲ. ಈ ವಾರ ನೀವು ದೊಡ್ಡ ನಷ್ಟವನ್ನು ಅನುಭವಿಸಬಹುದು. ನಿಮ್ಮ ವ್ಯವಹಾರದ ನಿರ್ಧಾರಗಳನ್ನು ನೀವು ಬಹಳ ಆಲೋಚಿಸಿ ತೆಗೆದುಕೊಂಡರೆ ಅದು ಉತ್ತಮವಾಗಿರುತ್ತದೆ. ಕುಟುಂಬ ಜೀವನದಲ್ಲಿ ಶಾಂತಿ, ಸಂತೋಷ ಇರುತ್ತದೆ. ಹಣದ ವಿಷಯದಲ್ಲಿ ಈ ವಾರ ನಿಮಗೆ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಈ ಪರಿಸ್ಥಿತಿಯಲ್ಲಿ ನೀವು ಹೆಚ್ಚು ಉಳಿಸಲು ಸಾಧ್ಯವಾಗುವುದು. ನೀವು ಇತ್ತೀಚೆಗೆ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ವಿಶ್ರಾಂತಿ ಕಡೆಗೆ ತುಂಬಾನೇ ಗಮನಹರಿಸಿ.
ಅದಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 16
ಶುಭ ದಿನ: ಮಂಗಳವಾರ
ತುಲಾ ರಾಶಿ
ತುಲಾ ರಾಶಿಯವರಿಗೆ ಈ ವಾರ ಏರಿಳಿತಗಳಿಂದ ಕೂಡಿರಲಿದೆ. ಈ ಅವಧಿಯಲ್ಲಿ ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಅಧಿಕ ಒತ್ತಡವಿರಲಿದೆ. ವಿಶ್ರಾಂತಿಯಿಲ್ಲದ ಕೆಲಸ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಹಣದ ವಿಷಯದಲ್ಲಿ ಈ ವಾರ ಸ್ವಲ್ಪ ದುಬಾರಿಯಾಗಲಿದೆ. ಖರ್ಚುಗಳು ಹೆಚ್ಚಾಗಬಹುದು, ಪಡೆದ ಸಾಲ ಮರಳಿಸಲು ಸಾಧ್ಯವಾಗುವುದು. ನ್ಯಾಯಾಲಕ್ಕೆ ಸಂಬಂಧಿಸಿದ ವಿಷಯಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ಕೇಸರಿ
ಅದೃಷ್ಟದ ಸಂಖ್ಯೆ: 35
ಶುಭ ದಿನ: ಗುರುವಾರ
ವೃಶ್ಚಿಕ ರಾಶಿ
ಉದ್ಯೋಗಿಗಳಿಗೆ ಈ ವಾರ ತುಂಬಾ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ನೀವು ಬಡ್ತಿ ಪಡೆಯಬಹುದು. ಸರ್ಕಾರಿ ಕೆಲಸ ಮಾಡುವವರಿಗೆ ಈ ವಾರ ತುಂಬಾ ಚೆನ್ನಾಗಿದೆ. ವ್ಯಾಪಾರಸ್ಥರು ಇತ್ತೀಚೆಗೆ ಉತ್ತಮ ಲಾಭಕ್ಕಾಗಿ ಕೆಲವು ಬದಲಾವಣೆಗಳನ್ನು ಮಾಡಿದ್ದರೆ, ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯಬಹುದು. ನೀವು ವಿದೇಶದಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಯೋಜಿಸುತ್ತಿದ್ದರೆ ಈ ಅವಧಿಯಲ್ಲಿ ನೀವು ಉತ್ತಮ ಅವಕಾಶಗಳನ್ನು ಪಡೆಯಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ, ಆರೋಗ್ಯ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 10
ಶುಭ ದಿನ: ಶುಕ್ರವಾರ
ಧನು ರಾಶಿ
ನಿಮ್ಮ ಸಂಬಂಧದಲ್ಲಿ ಸಮಸ್ಯೆಯಾಗದಿರಲು ಜಾಗ್ರತೆವಹಿಸಿ. ಈ ಅವಧಿಯಲ್ಲಿ, ನೀವು ನಕಾರಾತ್ಮಕತೆಯನ್ನು ಅನುಭವಿಸಬಹುದು . ನೀವು ಎಲ್ಲಾ ಚಿಂತೆಗಳನ್ನು ಮರೆತು ನಿಮ್ಮ ಗುರಿಯತ್ತ ಗಮನ ಹರಿಸಿದರೆ ಉತ್ತಮ. ವಾರದ ಮಧ್ಯದಲ್ಲಿ ಕೆಲಸದ ಹೊರೆ ಅಧಿಕವಿರಲಿದೆ. ನಿಮ್ಮ ಶ್ರಮಕ್ಕೆ ತಕ್ಕಂತೆ ಫಲ ಸಿಗಲಿದೆ. ವ್ಯಾಪಾರಿಗಳ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ. ಈ ಅವಧಿಯಲ್ಲಿ ಸಾಲ ನೀಡದಂತೆ ಸೂಚಿಸಲಾಗಿದೆ. ನಿಮ್ಮ ಹಾಗೂ ಸಂಗಾತಿಯ ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 22
ಶುಭ ದಿನ: ಶನಿವಾರ
ಮಕರ ರಾಶಿ
ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ಹಣದ ವಿಷಯದಲ್ಲಿ ಈ ವಾರ ನಿಮಗೆ ಸರಾಸರಿಯಾಗಲಿದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಖರ್ಚು ಮಾಡಿದರೆ ಅದು ನಿಮಗೆ ಉತ್ತಮವಾಗಿರುತ್ತದೆ. ಇದಲ್ಲದೆ, ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ಕೆಲಸವನ್ನು ಮಾಡಲು ಹೋದರೆ, ನಿಮ್ಮ ನಿರ್ಧಾರವನ್ನು ಆಲೋಚಿಸಿ ತೆಗೆದುಕೊಳ್ಳಲು ಸಲಹೆ ನೀಡಲಾಗುವುದು. ಉದ್ಯೋಗಸ್ಥರಿಗೆ ಈ ವಾರ ಹೊಸ ಅವಕಾಶಗಳು ದೊರೆಯಲಿದೆ. ವ್ಯಾಪಾರಿಗಳಿಗೆ ಈ ಅವಧಿ ನಿಮಗೆ ಲಾಭದಾಯಕವಾಗಿದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 6
ಶುಭ ದಿನ: ಭಾನುವಾರ
ಕುಂಭ ರಾಶಿ
ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಆ ವ್ಯವಹಾರದ ಮೇಲೆ ಕಣ್ಣಿಡಬೇಕು. ಸ್ವಂತ ವ್ಯಾಪಾರ ಮಾಡುವವರಿಗೆ ಈ ವಾರ ಲಾಭದಾಯಕವಾಗಿದೆ. ನಿಮ್ಮ ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ . ಕೆಲಸದ ವಿಚಾರವನ್ನು ಬೇರೆಯವರ ಜೊತೆ ಹಂಚಿಕೊಳ್ಳಬೇಡಿ. ಹಣದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಶುಭವಾಗಿದೆ. ಕಡಿಮೆ ಶ್ರಮದಿಂದ ಉತ್ತಮ ಹಣ ಗಳಿಸಬಹುದು. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಆರೋಗ್ಯ ತುಂಬಾ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 11
ಶುಭ ದಿನ: ಮಂಗಳವಾರ
ಮೀನ ರಾಶಿ
ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದಾಗಿ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ನೀವು ಅಸ್ತಮಾದಿಂದ ಬಳಲುತ್ತಿದ್ದರೆ ವಿಶೇಷ ಕಾಳಜಿ ವಹಿಸಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಬಲದ ಮೇಲೆ, ನೀವು ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಲು ಯಶಸ್ವಿಯಾಗುತ್ತೀರಿ. ತಂದೆ ಜೊತೆ ಕೆಲ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಹೆಚ್ಚು ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ ಈ ವಾರ ಉತ್ತಮವಾಗಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 25
ಶುಭ ದಿನ: ಸೋಮವಾರ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











