Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ವಾರ ಭವಿಷ್ಯ ಪ್ರಕಾರ ಈ ವಾರ (ಏಪ್ರಿಲ್ 27-ಮೇ 03) ಯಾವ ರಾಶಿಗೆ ಹೇಗಿರಲಿದೆ?
ಏಪ್ರಿಲ್ 27-03 ಮೇ ವರೆಗಿನ ನಿಮ್ಮ ವಾರ ಭವಿಷ್ಯದಲ್ಲಿ ಏನಿದೆ ನೋಡಿ.
ಮೇಷ ರಾಶಿ
ಮೇಷ ರಾಶಿಯವರಿಗೆ ಈ ವಾರವು ಬಹಳ ವಿಶ್ರಾಂತಿಯೊಂದಿಗೆ ಆರಂಭಗೊಳ್ಳಲ್ಲಿದೆ. ನೀವು ದಣಿದಿದ್ದರೆ ಈ ಸಮಯದಲ್ಲಿ ಸೋಮಾರಿತನ ಕಾಡಲಿದೆ. ಇದರಿಂದ ಪಗ್ರತಿಯ ಅವಕಾಶ ಕಳೆದುಕೊಳ್ಳುತ್ತೀರಿ. ಅನೇಕ ರೀತಿಯಲ್ಲಿ ನಿಮ್ಮ ವ್ಯಾಪಾರ ಸಂಬಂಧಿ ಚಿಂತೆಗಳಲ್ಲಿ ನೀವು ಮುಳುಗಬಹುದು. ಅಥವಾ ಕುಟುಂಬ ಸಂಬಂಧಿ ಚಿಂತೆಯೊಂದರ ಹಿಂದೆ ಬೀಳುತ್ತೀರಿ. ಉದ್ಯೋಗ ಹುಡುಕುವವರಿಗೆ ಕಷ್ಟವಾಗಬಹುದು. ಆದರೆ ಈಗಾಗಲೇ ಉದ್ಯೋಗದಲ್ಲಿರುವ ಮಂದಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ವಾರದ ಮಧ್ಯದಿಂದ ನಿಮಗೆ ಒಂದಿಷ್ಟು ಒಳಿತು ನೋಡಬಹುದು. ಮಾನಸಿಕವಾಗಿ ನೀವು ಬಲಗೊಳ್ಳುತ್ತೀರಿ. ಒತ್ತಡ ನಿವಾರಣೆಯಾಗಲಿದೆ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಹದಗೆಡಬಹುದು.
ವೃಷಭ ರಾಶಿ
ವೃಷಭ ರಾಶಿಯವರು ಈ ಸಮಯದಲ್ಲಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಮನೆಗಾಗಿ ಇಲ್ಲವೆ ವೈಯಕ್ತಿಕ ಕೆಲಸಕ್ಕಾಗಿ ಹಣ ವ್ಯಯಿಸಬೇಕಾಗುತ್ತದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಅಡ್ಡಿಯಾಗುತ್ತಿದ್ದ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಮನೆ ಖರೀದಿಸುವ ಆಸೆ ಇದ್ದರೆ ಅದು ನನಸಾಗುವತ್ತ ಕೆಲವೊಂದು ವಿಚಾರಗಳು ನಡೆಯಲಿವೆ. ಈ ವಾರ ನಿಮಗೆ ಆರ್ಥಿಕವಾಗಿ ತುಂಬಾ ಒಳ್ಳೆಯದಾಗಲಿದೆ. ಆರೋಗ್ಯ ಸಾಮಾನ್ಯವಾಗಲಿದೆ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ಕುಟುಂಬ ಸದಸ್ಯರು ಅಥವಾ ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.

ಮಿಥುನ ರಾಶಿ
ಮಿಥುನ ರಾಶಿಯಯವರು ಈ ವಾರ ಬಹಳ ಶ್ರಮವಹಿಸಿ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಿಮ್ಮ ಶ್ರಮದ ಪ್ರತಿಫಲ ಅನುಭವಿಸಲು ಈ ವಾರ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ವ್ಯಾಪಾರಿಗಳಿಗೆ ಈ ವಾರ ಬಹಳ ಲಾಭದಾಯಕ. ನೀವು ಏಕಾಏಕಿ ಪ್ರವಾಸ ಕೈಗೊಳ್ಳಬಹುದು. ಮನೆಗಾಗಿ ದೊಡ್ಡ ವಸ್ತುವೊಂದನ್ನು ಖರೀದಿಸಬೇಕಾಗುತ್ತದೆ. ಹಲವು ರೀತಿಯಲ್ಲಿ ಹೊಸ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ದುಡಿಯುವ ಜನರ ಆದಾಯ ಹೆಚ್ಚಾಗುತ್ತದೆ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗೆ ನೀವು ಒಳಗಾಗಬಹುದು. ದಾಂಪತ್ಯದಲ್ಲಿ ಸುಖವಿರಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರು ಈ ವಾರ ಅನಗತ್ಯ ಚರ್ಚೆಗಳಿಂದಾಗಿ ಕಿರಿ ಕಿರಿ ಅನುಭವಿಸಬೇಕಾಗುತ್ತದೆ. ಹೀಗಾಗಿ ಮಾತನಾಡುವಾಗ ಬಹಳ ಎಚ್ಚರಿಕೆಯ ಹೆಜ್ಜೆ ಇಡಿ. ಯಾರ ಕೆಲಸದಲ್ಲೂ ತಪ್ಪು ಹುಡುಕುವ ಕೆಲಸ ಮಾಡಬೇಡಿ. ಪ್ರಭಾವಿಗಳ ಭೇಟಿಯಾಗುವ ಸಂಭವವಿದೆ. ಬಹಳ ಸಮಯದಿಂದ ಬಾಕಿ ಉಳಿದ ಕೆಲಸವನ್ನು ಪೂರ್ಣ ಮಾಡುವಿರಿ. ಉದ್ಯಮಿಗಳಿಗೆ ವ್ಯಾಪಾರಿಗಳಿಗೆ ತಾವು ಬಯಸಿದಂತೆ ಕೆಲಸಗಳು ನಡೆಯಲಿದೆ. ಹಾಗೆ ಲಾಭ ಮಾಡುವ ನಿಮ್ಮ ಉದ್ದೇಶಿತ ಕೆಲಸದಲ್ಲಿ ಹಿನ್ನಡೆ ಆದರೂ ಮುಂದೊಂದು ದಿನ ಅದರಿಂದ ಲಾಭದಾಯಕ ದಿನಗಳ ನೋಡುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರು ಈ ವಾರದ ಆರಂಭದಲ್ಲಿ ಒತ್ತಡ ಅನುಭವಿಸುತ್ತಾರೆ. ಆದರೆ ವಾರದ ಕೊನೆಯಲ್ಲಿ ನಿಮ್ಮ ಎಲ್ಲಾ ಕೆಲಸಗಳಲ್ಲಿ ಸಫಲತೆ ಇರಲಿದೆ. ಹಾಗೆ ವಿದ್ಯಾರ್ಥಿಗಳಿಗೆ ಇದು ಉತ್ತಮ ದಿನವಾಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ತ್ವರಿತ ಬದಲಾವಣೆಗಳನ್ನು ನೋಡುತ್ತೀರಿ. ಅನಿರೀಕ್ಷಿತವಾಗಿ ಹಣ ಹೊಂದಿಸುತ್ತೀರಿ. ಬ್ಯಾಂಕಿಂಗ್ ಕೆಲಸಗಳಲ್ಲಿ ಯಶಸ್ಸು ನೋಡಬಹುದು. ನೀವು ಉದ್ಯೋಗ ಹುಡುಕುತ್ತಿದ್ದರೆ, ಈ ವಾರ ನಿಮಗೆ ಬರುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ. ದಾಂಪತ್ಯ ಸಂಬಂಧದಲ್ಲಿನ ಮನಸ್ತಾಪ ನಿವಾರಣೆಯಾಗಲಿದೆ. ಹಾಗೆ ಸಂತೋಷ ಇರಿದೆ. ನಿದ್ರೆಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿಯವರು ಈ ವಾರ ಬಹುನಿರೀಕ್ಷಿತ ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತೀರಿ. ನಿಮ್ಮ ಆಸೆಯೊಂದು ಈಡೇರಿಸಿಕೊಳ್ಳುವಿರಿ. ಗೃಹಿಣಿಯರಲ್ಲಿ ಹೆಚ್ಚಿನ ಸಂತೋಷ ನೋಡಬಹುದು. ಮನೆಯ ಸದಸ್ಯರೊಬ್ಬರು ಐಷಾರಾಮಿ ವಸ್ತು ಖರೀದಿಗೆ ಮುಂದಾಗಬಹುದು. ಎಲ್ಲಾ ಕೆಲಸಗಳಲ್ಲಿ ಧನಾತ್ಮಕ ಬೆಂಬಲ ಸಿಗಲಿದೆ. ನಿಮ್ಮ ಪ್ರಯತ್ನಗಳು ವ್ಯರ್ಥವಾಗುವುದಿಲ್ಲ. ವ್ಯವಹಾರದಲ್ಲಿ ಲಾಭವಿದೆ. ವ್ಯಾಪಾರಿಗಳು ತಾಳ್ಮೆಯಿಂದ ವ್ಯವಹಾರದಲ್ಲಿ ಭಾಗಿಯಾಗಬೇಕು. ಮಕ್ಕಳ ವಿಚಾರವಾಗಿ ನೀವು ಖರ್ಚು ಮಾಡಬೇಕಾಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ವಾರ ಕಷ್ಟಪಡಬೇಕಾಗುತ್ತದೆ. ಸಣ್ಣ ಪುಟ್ಟ ಕೆಲಸಗಳಲ್ಲಿ ನೀವು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ನೀವು ಬಯಸಿದ್ದಂತೆ ಹಣ ಖರ್ಚು ಮಾಡುತ್ತೀರಿ. ವ್ಯವಹಾರದಲ್ಲಿ ತೊಡಗಿರುವವರು ಅಲ್ಪಾವಧಿಯ ಲಾಭಕ್ಕಾಗಿ ದೀರ್ಘಾವಧಿಯ ನಷ್ಟವನ್ನು ಅನುಭವಿಸುವುದನ್ನು ತಪ್ಪಿಸಿ. ಈ ವಾರ ನಿಯಮಗಳನ್ನು ಮುರಿಯಬೇಡಿ. ಮನೆಯ ವಾತಾವರಣದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಹುಟ್ಟಿಕೊಳ್ಳಬಹುದು. ಕೆಲಸದ ಕಡೆಗೆ ಹೆಚ್ಚು ಗಮನವಿಡಿ. ದಾಂಪತ್ಯದಲ್ಲಿ ಕಹಿ ಘಟನೆಗಳಿಗೆ ಸಾಕ್ಷಿಯಾಗಬಹುದು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ವಹಿಸಿ.
ಧನು ರಾಶಿ
ಧನು ರಾಶಿಯವರು ಈ ವಾರದ ಆರಂಭದಲ್ಲಿ ಲಾಭದಾಯಕ ಸ್ಥಿತಿಯಲ್ಲಿರುತ್ತಾರೆ. ಆದ್ರೆ ವಾರದ ಅಂತ್ಯವು ಅವರಿಗೆ ಸಂಕಟಗಳಿಗೆ ಕಾರಣವಾಗಬಹುದು. ನೀವು ಬಹಳಷ್ಟು ಪ್ರಯಾಣ ಮಾಡುತ್ತೀರಿ. ಅನಾರೋಗ್ಯಕ್ಕೆ ಹಾಗೂ ಅಧಿಕ ಖರ್ಚು ಮಾಡಿಸಬಹುದು. ಹಾಗೆ ಬಹಳ ಗೊಂದಲದಿಂದ ತುಂಬಿದ ವಾರವಾಗಬಹುದು, ನಿಮ್ಮ ನಿರ್ಧಾರ ತೆಗೆದುಕೊಳ್ಳಲು ಪರದಾಡುತ್ತೀರಿ. ಈ ವಾರ ಪ್ರೀತಿ, ದಾಂಪತ್ಯ, ಸ್ನೇಹದ ವಿಚಾರದಲ್ಲಿ ನೀವು ಸಮತೋಲನ ಕಾಪಾಡಿಕೊಳ್ಳುತ್ತೀರಿ. ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದ ಕಾರಣ ನಿಮ್ಮ ಮನಸ್ಸಿನಲ್ಲಿ ಉದಾಸೀನತೆಯ ಭಾವನೆ ಮೂಡುತ್ತದೆ.
ಮಕರ ರಾಶಿ
ಮಕರ ರಾಶಿಯವರು ಈ ವಾರ ನೀವು ನಿಮ್ಮ ಕೋಪ ಮತ್ತು ಭಾವನೆಗಳನ್ನು ನಿಯಂತ್ರಿಸಬೇಕು. ಯಾವುದೇ ಕೆಲಸವನ್ನು ಆತುರದಿಂದ ಮಾಡುವುದನ್ನು ತಪ್ಪಿಸಿ. ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಶತ್ರುಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಉಳಿತಾಯದ ಕಡೆಗೆ ನೀವು ಹೆಚ್ಚ ಗಮನವಿಡಿ, ಏಕೆಂದರೆ ಈ ವಾರ ನಿಮ್ಮಿಂದಾಗಿ ಖರ್ಚು ಹೆಚ್ಚಾಗುತ್ತದೆ. ಅರ್ಧದಲ್ಲೇ ನಿಲ್ಲಿಸಿರುವ ಕೆಲಸಗಳನ್ನು ಪೂರ್ಣ ಮಾಡಿ. ಒಂದಿಷ್ಟು ಕೆಲಸಗಲ್ಲಿ ನಿಮಗೆ ನಷ್ಟವಾಗುವ ಸಂಭವವಿದೆ. ಕಬ್ಬಿಣ ಸಂಬಂಧಿ ಕೆಲಸ, ವ್ಯಾಪಾರಸ್ಥರಲ್ಲಿ ತೊಡಕುಗಳು ಎದುರಾಗಬಹುದು. ಯಾರಿದಾದರು ಹಣ ಪಡೆದಿದ್ದರೆ ವಾಪಾಸು ಮಾಡಲು ಇದು ಸೂಕ್ತ ಸಮಯ.
ಕುಂಭ ರಾಶಿ
ಕುಂಭ ರಾಶಿಯವರು ಈ ವಾರದಂದು ಬಹಳ ದುಡುಕಿನ ನಿರ್ಧಾರ ತೆಗೆದುಕೊಂಡು ಪಶ್ಚತ್ತಾಪ ಪಡುತ್ತಾರೆ. ಹೋಗಾಗಿ ಯಾವುದೇ ಸಮಯದಲ್ಲಿಯೂ ಆತುರದಿಂದ ನಿರ್ಧಾರಗಳ ತೆಗೆದುಕೊಳ್ಳಬೇಡಿ. ನೀವು ಕೆಲಸದಲ್ಲಿ ಹೆಚ್ಚುವರಿ ಕೆಲಸದ ಹೊರೆ ಎದುರಿಸಬಹುದು. ಕುಟುಂಬಕ್ಕಾಗಿ ನೀವು ಹಣ ಖರ್ಚು ಮಾಡುವಿರಿ. ವಾರದ ಅಂತ್ಯದಲ್ಲಿ ಲಾಭಾಂಶ ಹೆಚ್ಚಾಗಲಿದೆ. ನಿಮ್ಮ ಸ್ನೇಹಿತರಿಂದ ನೀವು ಹಣ ಬಯಸಿದ್ದರೆ ಈ ಸಮಯದಲ್ಲಿ ಪಡೆಯಬಹುದು. ವಾರದ ಎಲ್ಲಾ ದಿನದಲ್ಲು ನಿಮ್ಮ ಬಳಿ ಹಣ ಇರಲಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ಬಳಸಿ.
ಮೀನ ರಾಶಿ
ಮೀನ ರಾಶಿಯವರು ಈ ವಾರದಲ್ಲಿ ಹಿಂದಿನ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯುತ್ತೀರಿ. ಅದರಿಂದ ನಿಮ್ಮ ದಿನವು ಅತ್ಯಂತ ಸುಖಕರವಾಗಿರಲಿದೆ. ಕೌಟುಂಬಿಕ ಸಮಸ್ಯೆ ಬಗೆಹರಿಯಲಿದೆ. ದೇವಾಲಯ, ಪ್ರವಾಸದಂತಹ ಕೆಲಸದಲ್ಲಿ ಈ ವಾರ ಭಾಗಿಯಾಗುತ್ತೀರಿ. ಕುಟುಂಬ ಸದಸ್ಯರಿಂದ ನಿಮಗೆ ಬೆಂಬಲ ಸಿಗಲಿದೆ. ಕಾನೂನು, ಆಸ್ತಿ ಸಂಬಂಧಿತ ವಿಚಾರದಲ್ಲಿ ನಿಮ್ಮ ಪರವಾದ ಯಶಸ್ಸು ಇರಲಿದೆ. ಒತ್ತಡ ಕಡಿಮೆಯಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











