Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಾರ ಭವಿಷ್ಯ (ಏಪ್ರಿಲ್ 27-ಮೇ 4) ಪ್ರಕಾರ ಈ ವಾರ ನಿಮ್ಮ ರಾಶಿಗೆ ಹೇಗಿದೆ?
ಗ್ರಹಗತಿಗಳ ಸ್ಥಾನದ ಪ್ರಕಾರ ಈ ವಾರದ ಭವಿಷ್ಯ ನೀಡಲಾಗಿದೆ, ಈ ವಾರ ಏಪ್ರಿಲ್ 27ರಿಂದ ಮೇ 4 ದ್ವಾದಶ ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಈವಾರದ ಜ್ಯೋತಿಷ್ಯ ಫಲ ನೋಡುವುದಾದರೆ ಕೆಲಸದಲ್ಲಿ ನಿಮಗೆ ಉತ್ತಮವಾಗಿದೆ, ಅದರಲ್ಲಿ ವಿದೇಶ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದರೆ ಈ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಕಾಣುವುದರಿಂದ ನಿಮಗೆ ಲಾಭದಾಯಕವಾಗಿದೆ. ವ್ಯಾಪಾರಿಗಳಿಗೂ ಈ ಸಮಯ ನಿಮಗೆ ಉತ್ತಮವಾಗಿದೆ. ಇನ್ನು ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಒಳ್ಳೆಯದಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ಹಣದ ನಿರ್ಧಾರಗಳನ್ನು ಉತ್ತಮವಾಗಿ ತೆಗೆದುಕೊಳ್ಳುತ್ತೀರಿ. ಆರೋಗ್ಯ ಕೂಡ ಚೆನ್ನಾಗಿರಲಿದೆ.
ಈ ವಾರ ನಿಮಗೆ ಶುಕ್ರವಾರ ಅದೃಷ್ಟದ ದಿನವಾಗಿದೆ, ಅದೃಷ್ಟದ ಬಣ್ಣ ಪೀಚ್ ಆಗಿದ್ದು 37 ಸಂಖ್ಯೆ ಲಕ್ಕಿ ಸಂಖ್ಯೆಯಾಗಿದೆ.

ವೃಷಭ ರಾಶಿ
ಜ್ಯೋತಿಷ್ಯದ ಪ್ರಕಾರ ಈ ವಾರ ನಿಮಗೆ ಉತ್ತಮವಾಗಿದೆ, ಅದರಲ್ಲೂ ಕುಟುಂಬ ಜೀವನ ತುಂಬಾನೇ ಚೆನ್ನಾಗಿರಲಿದೆ. ವಿವಾಹಿತರು ಪ್ರೇಮ ಪಕ್ಷಿಗಳಂತೆ ಹಾರಾಡುವಿರಿ, ಪ್ರೇಮಿಗಳು ಈ ವಾರ ವಿಶೇಷವಾಗಿರಲಿದೆ. ಆರ್ಥಿಕ ಸ್ಥಿತಿ ಚೆನ್ನಾಗಿದ್ದು ನಿಮ್ಮ ಆದಾಯ ಹೆಚ್ಚಿಸಲು ಪ್ರಯತ್ನಿಸುತ್ತಿದ್ದರೆ ಉತ್ತಮ ಅವಕಾಶ ಸಿಗಲಿದೆ. ದೊಡ್ಡ ಹೂಡಿಕೆಗಳನ್ನು ಮಾಡುವಲ್ಲಿ ಆತುರಪಡಬೇಡಿ. ಇಲ್ಲದಿದ್ದರೆ ಮೋಸದ ಜಾಲಕ್ಕೆ ಸಿಲುಕಬಹುದು, ಆದ್ದರಿಂದ ಈ ಅವಧಿಯಲ್ಲಿ ತುಂಬಾನೇ ಜಾಗ್ರತೆವಹಿಸಿ. ಆಓಗ್ಯದ ಬಗ್ಗೆ ನೋಡುವುದಾದರೆ ಈ ವಾರ ಚಿಕ್ಕ ಪುಟ್ಟ ಕಾಯಿಲೆಗಳು ಕಾಡಬಹುದು.
ಈ ವಾರ ನಿಮಗೆ ಅದೃಷ್ಟದ ಬಣ್ಣ ಮರೂನ್, ಯಾವುದಾದರೂ ಒಳ್ಳೆಯ ಕಾರ್ಯ ಪ್ರಾರಂಭಿಸಲು ಸೊಮವಾರ ಶುಭವಾಗಿದ್ದು ಅದೃಷ್ಟದ ಸಂಖ್ಯೆ 4 ಆಗಿದೆ.
ಮಿಥುನ ರಾಶಿ
ವೈದಿಕ ಶಾಸ್ತ್ರದ ಪ್ರಕಾರ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಈ ವಾರ ಲಾಭದಾಯಕವಾಗಿರಲಿದೆ. ಆದರೆ ಉದ್ಯೋಗಿಗಳು ಸ್ವಲ್ಪ ಜಾಗ್ರತೆವಹಿಸಬೇಕು, ನಿಮ್ಮ ನೋಡಿ ಅಸೂಯೆಪಡುವ ಸಹೋದ್ಯೋಗಿಗಳು ನಿಮ್ಮ ಒಳ್ಳೆಯ ಹೆಸರು ಹಾಳು ಮಾಡಲು ಪ್ರಯತ್ನಸಬಹುದು. ಹಣದ ಬಗ್ಗೆ ತೊಂದರೆಯಿಲ್ಲ, ಸಾಲ ಪಡೆದಿದ್ದರೆ ಸಾಲವನ್ನು ಕತುಗಳಲ್ಲಿ ಮರುಪಾವತಿಸಲು ಬಿಡಬೇಡಿ. ಅವಾಹಿತರು ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಈ ವಾರ ಮದುವೆ ಪ್ರಸ್ತಾಪ ಕೂಡಿ ಬರುವ ಲಕ್ಷಣಗಳಿಗೆ. ಆರೋಗ್ಯ ಚೆನ್ನಾಗಿರಲಿದೆ.
ಭಾನುವಾರ ಅದೃಷ್ಟದ ದಿನವಾಗಿದ್ದು, ನೀಲಿ ಅದೃಷ್ಟದ ಬಣ್ಣ, 15 ಅದೃಷ್ಟದ ಸಂಖ್ಯೆಯಾಗಿದೆ.
ಕರ್ಕ ರಾಶಿ
ಕೆಲಸದಲ್ಲಿ ನೀವು ಯೋಚಿಸಿದಂತೆಯೇ ಫಲಿತಾಂಶ ಪಡೆಯಲು ಸಾಧ್ಯವಾಗುವುದು. ಉದ್ಯಮಿಗಳು ಕೆಲವು ದಿನದಿಂದ ಲಾಭ ಗಳಿಸಲು ಕಷ್ಟಪಡುತ್ತಿದ್ದರೆ ಈ ವಾರ ನಿಮಗೆ ಅದ್ಭುತವಾಗಿರಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಬಹುದು. ಕೌಟುಂಬಿಕ ಜೀವನದಲ್ಲಿ ಕೆಲ ಸಮಸ್ಯೆ ಎದುರಿಸಬೇಕಾಗುತ್ತೆ, ತಾಳ್ಮೆಯಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ. ಅತಿಯಾದ ಕೆಲಸ ಇರಲಿದೆ, ಆದರೆ ಆರೋಗ್ಯವನ್ನೂ ನಿರ್ಲಕ್ಷ್ಯ ಮಾಡಬಾರದು.
ನಿಮಗೆ ಈ ವಾರದಲ್ಲಿ ಮಂಗಳವಾರ ಶುಭ ದಿನವಾಗಿದ್ದು, ಕೆಂಪು ಅದೃಷ್ಟದ ಬಣ್ಣ, 5 ಅದೃಷ್ಟದ ಸಂಖ್ಯೆಯಾಗಿದೆ.
ಸಿಂಹ ರಾಶಿ
ಕೆಲಸದಲ್ಲಿ ನೀವು ಸ್ವಲ್ಪ ಜಾಗ್ರತೆವಹಿಸಬೇಕು. ಕೆಲಸದಲ್ಲಿ ಯಾರನ್ನೂ ಕಣ್ಮುಚ್ಚಿ ನಂಬಲು ಹೋಗಬೇಡಿ. ವ್ಯಾಪಾರಿಗಳು ಈ ವಾರ ನಿರೀಕ್ಷೆಯಂತೆ ನೀವು ಲಾಭವನ್ನು ಪಡೆಯಬಹುದು. ಮನೆಯ ವಾತಾವರಣ ಚೆನ್ನಾಗಿರಲಿದೆ. ನಿಮ್ಮ ನಡುವೆ ಭಿನ್ನಾಭಿಪ್ರಾಯಗಳು ಕೊನೆಯಾಗಲಿದೆ. ಆದಾಯ ಚೆನ್ನಾಗಿರಲಿದೆ, ಆದರೆ ಖರ್ಚು ಕೂಡ ಹೆಚ್ಚಿರಲಿದೆ. ಚರ್ಮದ ಅಲರ್ಜಿ ಸಮಸ್ಯೆವಿರಬಹುದು.
ಈ ವಾರ ನಿಮಗೆ ಕಿತ್ತಳೆ ಬಣ್ಣ ಅದೃಷ್ಟದ ಬಣ್ಣವಾಗಿದೆ, ಇವತ್ತು ಅದೃಷ್ಟದ ಸಂಖ್ಯೆ 20, ಅದೃಷ್ಟದ ದಿನ ಶನಿವಾರವಾಗಿದೆ.
ಕನ್ಯಾ ರಾಶಿ
ನೀವು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುತ್ತೀರಿ, ದಾನದ ಕಡೆಗೆ ಆಸಕ್ತಿ ತೋರುತ್ತೀರಿ. ಈ ವಾರ ನೀವು ತುಂಬಾ ಖುಷಿಯಾಗಿರುತ್ತೀರಿ. ಈ ವಾರ ನೀವು ತೆಗೆದುಕೊಳ್ಳುವ ನಿರ್ಧಾರಗಳು ತುಂಬಾ ಚೆನ್ನಾಗಿರಲಿದೆ. ಉದ್ಯಮಿಗಳು ತಾವು ಯೋಜನೆ ಮಾಡಿದಂತೆ ಮುಂದುವರೆಯಬಹುದು. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಆದರೆ ನೀವು ಸಂಗಾತಿಗೆ ಆರೋಗ್ಯ ಸಮಸ್ಯೆಯಿದ್ದರೆ ಆರೋಗ್ಯದ ಕಡೆಗೆ ಗಮನಹರಿಸಿ.
ಈ ವಾರ ಅದೃಷ್ಟದ ಬಣ್ಣ ನೀಲಿ, ಅದೃಷ್ಟದ ಸಂಖ್ಯೆ 19, ಅದೃಷ್ಟದ ದಿನ ಸೋಮವಾರ ಆಗಿದೆ
ತುಲಾ ರಾಶಿ
ಜ್ಯೋತಿಷ್ಯಶಾಸ್ತ್ರ ಪ್ರಕಾರ ಈ ವಾರ ನಮಗೆ ಅಷ್ಟೊಂದು ಅನುಕೂಲಕರವಲ್ಲ, ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದಾಗಿ ನಿಮ್ಮ ಸಂಬಂಧವು ಹದಗೆಡಬಹುದು, ಆದ್ದರಿಂದ ಈ ಬಗ್ಗೆ ಜಾಗ್ರತೆ. ಹಣದ ವಿಷಯದಲ್ಲಿ ಈ ವಾರ ನಿಮಗೆ ಉತ್ತಮವಾಗಿರಲಿದೆ. ಹಣದ ಸ್ಥಿತಿ ಚೆನ್ನಾಗಿರಲಿದೆ. ಕೆಲಸದಲ್ಲಿ ಈ ವಾರ ಉತ್ತಮವಾಗಿದೆ, ವ್ಯಾಪಾರಿಗಳು ಹಣಕಾಸಿನ ವ್ವಯಹಾರ ಮಾಡುವಾಗ ಜಾಗ್ರತೆವಹಿಸಿ. ಆರೋಗ್ಯದ ದೃಷ್ಟಿಯಿಂದ ಈ ವಾರ ನೀವು ಜಾಗ್ರತೆವಹಿಸಬೇಕು.
ಈ ವಾರ ನಿಮಗೆ ಅದೃಷ್ಟದ ವಾರ ಗುರುವಾರ, ಬಣ್ಣ ಕೇಸರಿ, ಸಂಖ್ಯೆ 42 ಆಗಿದೆ.
ವೃಶ್ಚಿಕ ರಾಶಿ
ವೃತ್ತಿ ಮತ್ತು ವ್ಯವಹಾರದ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಒಳ್ಳೆಯದಿದೆ. ಈ ಅವಧಿಯಲ್ಲಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಾಗಲಿದೆ. ಈ ಅವಧಿಯಲ್ಲಿ, ನೀವು ದೊಡ್ಡ ಯೋಜನೆಯ ಭಾಗವಾಗಲು ಅವಕಾಶವನ್ನು ಪಡೆಯಬಹುದುಈ ಸಮಯದಲ್ಲಿ ಅಹಂಕಾರದ ವರ್ತನೆ ನಿಮ್ಮ ಸಮಸ್ಯೆ ಹೆಚ್ಚಿಸಬಹುದು. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರಲಿದೆ. ಮನೆಯ ಜವಾಬ್ದಾರಿಗಳನ್ನು ಪೂರೈಸುವಲ್ಲಿ ನೀವು ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನೀವು ಕೆಲಸದ ಜೊತೆಗೆ ವಿಶ್ರಾಂತಿ ಕಡೆಯೂ ಗಮನಹರಿಸಿ.
ಈ ವಾರ ಅದೃಷ್ಟದ ಬಣ್ಣ ಕೆಂಪು, ಅದೃಷ್ಟದ ವಾರ ಭಾನುವಾರ, ಅದೃಷ್ಟದ ಸಂಖ್ಯೆ 32 ಆಗಿದೆ.
ಧನು ರಾಶಿ
ಈ ರಾಶಿಯ ನಿರುದ್ಯೋಗಿಗಳಿಗೆ ಈ ವಾರ ಉದ್ಯೋಗ ಪಡೆಯುವ ಬಲವಾದ ಸಾಧ್ಯತೆ ಇದೆ. ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಬಯಸಿದರೆ ಮುಂದುವರೆಯಬಹುದು. ಹಣಕಾಸಿನ ಸಮಸ್ಯೆಗಳನ್ನು ತಪ್ಪಿಸಲು, ನಿಮ್ಮ ಇಡೀ ವಾರದ ಬಜೆಟ್ ಮೊದಲೇ ಜೋಡಿಸಿಟ್ಟರೆ ಒಳ್ಳೆಯದು, ಖರ್ಚು ಹೆಚ್ಚಾಗಲಿದೆ. ಪ್ರೇಮ ಅಥವಾ ವೈವಾಹಿಕ ಜೀವನವಾಗಿರಲಿ, ಈ ವಾರ ನಿಮಗೆ ತುಂಬಾ ಚೆನ್ನಾಗಿರಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ.
ಈ ವಾರ ನಿಮಗೆ ಅದೃಷ್ಟದ ಬಣ್ಣ ಬೂದು, ಅದೃಷ್ಟದ ಸಂಖ್ಯೆ: 26, ಅದೃಷ್ಟದ ದಿನ ಮಂಗಳವಾರ ಆಗಿದೆ.
ಮಕರ ರಾಶಿ
ಕೆಲಸದ ವಿಷಯದಲ್ಲಿ ಈ ದಿನ ಉತ್ತಮವಾಗಿದೆ. ನಿಮ್ಮ ಕಾರ್ಯಕ್ಷಮತೆಯಲ್ಲಿ ನೀವು ದೊಡ್ಡ ಸುಧಾರಣೆ ಕಂಡು ಬರಲಿದೆ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ, ಬೇರೆ ಕಡೆಯಿಂದ ಅವಕಾಶ ಸಿಗಬಹುದು. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ, ಕುಟುಂಬ ಜೀವನದಲ್ಲಿ ಪರಿಸ್ಥಿತಿ ಉತ್ತಮವಾಗಿರಲಿದೆ. ನೀವು
ಈ ದಿನ ಸೋಮವಾರ ಅದೃಷ್ಟ ದಿನವಾಗಿದೆ, ಅದೃಷ್ಟದ ಬಣ್ಣ ಹಸಿರು, ಅದೃಷ್ಟದ ಸಂಖ್ಯೆ 15 ಆಗಿದೆ.
ಕುಂಭ ರಾಶಿ
ಹೊರ ದೇಶದಲ್ಲಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ಇನ್ನು ಕೆಲವು ದಿನ ತಾಳ್ಮೆಯಿಂದ ಕಾಯಿರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕು . ವ್ಯಾಪಾರಿಗಳು ಉತ್ತಮ ಪ್ರಯೋಜನ ಪಡೆಯಬಹುದು. ಕುಟುಂಬ ಜೀವನ ಚೆನ್ನಾಗಿರಲಿದೆ. ನೀವು ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಈ ಸಮಯದಲ್ಲಿ ಚೇತರಿಸಿಕೊಳ್ಳುವಿರಿ.
ಈ ವಾರ ಶುಕ್ರವಾರ ನಿಮಗೆ ಅದೃಷ್ಟದ ದಿನವಾಗಿದೆ, ಅದೃಷ್ಟದ ಸಂಖ್ಯೆ 1, ಅದೃಷ್ಟದ ಬಣ್ಣ ಬಿಳಿಯಾಗಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ವಾರ ಖರ್ಚುಗಳು ಅಧಿಕವಿರುವುದರಿಮದ ಹಣದ ಖರ್ಚು ಹೆಚ್ಚಾಗಲಿದೆ. ಖರ್ಚು ಮಿತಿಯಲ್ಲಿ ಮಾಡಿದರೆ ಪರಿಸ್ಥಿತಿ ನಿಭಾಯಿಸಿಕೊಂಡು ಹೋಗಬಹುದು. ಈ ಸಮಯದಲ್ಲಿ ನೀವು ನಿಮ್ಮ ಸಂಬಂಧದಲ್ಲಿ ಹೊಸತನವನ್ನು ಅನುಭವಿಸುವಿರಿ. ನೀವು ಪರಸ್ಪರರ ಪ್ರಾಮುಖ್ಯತೆಯನ್ನು ಸಹ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು. ಆರೋಗ್ಯದ ದೃಷ್ಟಿಯಿಂದ ಈ ವಾರ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ ಕಿತ್ತಳೆ, ದಿನ ಗುರುವಾರ, ಸಂಖ್ಯೆ 25 ಆಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











