Latest Updates
-
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
ವಾರ ಭವಿಷ್ಯ ಪ್ರಕಾರ ಈ ವಾರ (ಏಪ್ರಿಲ್ 20-26) ಯಾವ ರಾಶಿಗೆ ಹೇಗಿರಲಿದೆ?
ಏಪ್ರಿಲ್ 20-26ರ ವರೆಗಿನ ನಿಮ್ಮ ವಾರ ಭವಿಷ್ಯದಲ್ಲಿ ಏನಿದೆ ನೋಡಿ.
ಮೇಷ ರಾಶಿ
ಮೇಷ ರಾಶಿಯವರಿಗೆ ವಾರ ಅದೃಷ್ಟಶಾಲಿಯಾಗಿರುವಿರಿ. ನೀವು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಹಾಗೆ ಸಣ್ಣ ಪುಟ್ಟ ಸಮಸ್ಯೆಗಳಿರಬಹುದು. ಈ ಅವಧಿಯಲ್ಲಿ ನೀವು ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿ. ನಿಮ್ಮ ಕಾರ್ಯಕ್ಷಮತೆಗೆ ಉತ್ತಮ ಮೆಚ್ಚುಗೆ ದೊರೆಯುತ್ತದೆ. ವೃತ್ತಿ ಮತ್ತು ವ್ಯವಹಾರ ಎರಡರಲ್ಲೂ ಉತ್ತಮ ಪ್ರಗತಿ ನೋಡಬಹುದು. ಆರೋಗ್ಯಕರ ದಿನಗಳ ನೋಡಬಹುದು. ಪ್ರವಾಸ, ದೇವಾಲಯ ಭೇಟಿಯಂತಹ ಕೆಲಸಕ್ಕೆ ಮುಂದಾಗಬಹುದು.
ವೃಷಭ ರಾಶಿ
ವೃಷಭ ರಾಶಿ ಮಂದಿ ಈ ವಾರ ಬಹಳ ಲಾಭಗಳ ನೋಡುಬಹುದಾದರು ಮನಸ್ಸಿನಲ್ಲಿ ಶಾಂತಿ ಇಲ್ಲದೆ ಇರಬಹುದು. ನೀವು ಯಾವುದೇ ಕೆಲಸವನ್ನು ತೀವ್ರ ಎಚ್ಚರಿಕೆಯಿಂದ ಮತ್ತು ವಿವೇಕದಿಂದ ಮಾಡಬೇಕು. ಹಣದ ಉಳಿತಾಯ ಮಾಡಲು ಸಾದ್ಯವಾಗುವುದು. ಆರೋಗ್ಯದ ವಿಷಯದಲ್ಲಿ ಈ ವಾರ ಸರಾಸರಿಯಾಗಿರಲಿದೆ. ಕೌಟುಂಬಿಕ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು. ವ್ಯಾಪಾರಿಗಳಲ್ಲಿ ಹೊಸ ರೀತಿಯ ಆದಾಯ ಮೂಲ ನೋಡಬಹುದು.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ವಾರ ವೃತ್ತಿಪರವಾಗಿ ಮತ್ತು ಆರ್ಥಿಕವಾಗಿ ತುಂಬಾ ಶುಭಕರವಾಗಿರಲಿದೆ. ಎಲ್ಲಾ ಯೋಜಿತ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಈ ಸಮಯದಲ್ಲಿ ನೀವು ವೃತ್ತಿ ಕ್ಷೇತ್ರದಲ್ಲಿ ಮಿಶ್ರ ಫಲಿತಾಂಶ ಪಡೆಯಬಹುದು. ವಿದ್ಯಾರ್ಥಿಗಳಿಗೆ ಈ ವಾರ ಸವಾಲಿನ ವಾರವಾಗಬಹುದು. ನೀವು ಹೆಚ್ಚು ಖರ್ಚು ಮಾಡಬೇಕಾಗಬಹುದು. ಹೀಗಾಗಿ ಹಣದ ವಿಷಯದಲ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯೋಗಿಗಳು ಕಚೇರಿಯಲ್ಲಿ ಉತ್ತಮ ಫಲಿತಾಂಶ ನೋಡಬಹುದು. ಸಂಬಂಧಗಳ ವಿಷಯದಲ್ಲಿ ಈ ವಾರ ಪೂರ್ತಿ ನಿಮಗೆ ಒಳ್ಳೆಯದಾಗಿರುತ್ತದೆ.
ಕರ್ಕ ರಾಶಿ
ಕರ್ಕ ರಾಶಿ ರಾಶಿಯ ಮಂದಿ ಈ ವಾರ ಸಾಮಾನ್ಯವಾಗಿರಲಿದೆ. ಉದ್ಯಮಿಗಳು ಹೊಸ ಒಪ್ಪಂದಗಳಿಂದ ಉತ್ತಮ ಲಾಭ ಗಳಿಸುತ್ತಾರೆ. ಆರ್ಥಿಕವಾಗಿ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಲು ಪ್ರಯತ್ನಿಸಿ. ಈ ವಾರ ನೀವು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ವಾರವು ಬಹಳ ಅನುಕೂಲಕರವಾಗಿರಲಿದೆ. ನಿಮ್ಮ ಜೀವನದಲ್ಲಿ ಪ್ರಗತಿಗೆ ಅವಕಾಶಗಳು ಸಿಗುತ್ತವೆ. ಕುಟುಂಬದಲ್ಲಿ ಕೆಲವು ಸಮಸ್ಯೆಗಳ ಎದುರಿಸಬೇಕಾಗಬಹುದು. ಗಂಡ-ಹೆಂಡತಿ ನಡುವೆ ಅಂತರ ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ಪ್ರವಾಸಕ್ಕೆ ಮುಂದಾಗಬಹುದು. ಆರ್ಥಿಕವಾಗಿ ನೋಡುವುದಾದರೆ ಈ ತಿಂಗಳು ಮಿಶ್ರ ಫಲಿತಾಂಶ ಇರಲಿದೆ. ನಿಮ್ಮ ಆದಾಯ ಹಾಗೂ ಖರ್ಚುಗಳನ್ನು ಸರಿದೂಗಿಸುವುದು ಬಹಳ ಉತ್ತಮ. ಉದ್ಯೋಗ ಹುಡುಕುವವರು ಈ ಸಮಯದಲ್ಲಿ ಹೊಸ ಅವಕಾಶಗಳ ಪಡೆಯುತ್ತೀರಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಈ ವಾರದ ಆರಂಭದಲ್ಲಿ ಬಹಳ ಲಾಭದಾಯಕವಾಗಿ ಆರಂಭಿಸಬಹುದು. ಆದರೆ ವಾರದ ಅಂತ್ಯದಲ್ಲಿ ಹೆಚ್ಚಿನ ಒತ್ತಡ ಹಾಗೂ ಹೆಚ್ಚು ಖರ್ಚು ಕೂಡ ಹೆಚ್ಚಾಗಬಹುದು. ಮಕ್ಕಳ ಭವಿಷ್ಯ ಕುರಿತಾಗಿ ಈ ವಾರ ಪೂರ್ತಿ ಚಿಂತೆ ಕಾಡಬಹುದು. ನಿಮ್ಮ ಯೋಜನೆಗಳನ್ನು ಇತರರಿಗೆ ಬಹಿರಂಗಪಡಿಸುವುದನ್ನು ತಪ್ಪಿಸಬೇಕು. ಆರೋಗ್ಯದ ವಿಷಯದಲ್ಲಿ ಈ ಇಡೀ ವಾರ ಸಾಮಾನ್ಯವಾಗಿರಲಿದೆ. ನೀವು ಯಾವುದೇ ಉದ್ಯೋಗ ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಈ ವಾರ ಅದರಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ.
ತುಲಾ ರಾಶಿ
ತುಲಾ ರಾಶಿಯವರು ಈ ವಾರ ನೀವು ಯಾರ ಬಗ್ಗೆಯೂ ಯಾವುದೇ ಟೀಕೆಗಳನ್ನು ಮಾಡುವುದನ್ನು ತಪ್ಪಿಸಬೇಕು. ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಕಷ್ಟವಾಗಬಹುದು. ನಿಮ್ಮ ಹಣಕಾಸಿನ ಸ್ಥಿತಿಯಲ್ಲೂ ಏರಿಳಿತ ಉಂಟಾಗಬಹುದು. ಕುಟುಂಬ ಜೀವನದಲ್ಲಿ ಸಮಸ್ಯೆಗಳಿರಬಹುದು. ಆರೋಗ್ಯದ ಕಡೆ ಗಮನಹರಿಸಿ. ಪ್ರೇಮಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ವಿವಾಹ ವಿಚಾರವಾಗಿ ನಿಮ್ಮಲ್ಲಿ ಹೊಸ ಸಮಸ್ಯೆಯೊಂದು ಕಾಡಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ವಾರ ಮಿಶ್ರ ಫಲ ಸಿಗಲಿದೆ. ಆರ್ಥಿಕ ಸಮಸ್ಯೆ ಎದುರಾಗಬಹುದು, ಇದರಿಂದ ಸಾಲ ತೆಗೆದುಕೊಳ್ಳಬೇಕಾಗಬಹುದು. ನಿಮ್ಮ ಕುಟುಂಬದಲ್ಲಿ ಕೆಲವು ರೀತಿಯ ಗೊಂದಲಗಳಿರಬಹುದು. ನೀವು ಯಾರಿಗೂ ಭರವಸೆಗಳನ್ನು ನೀಡುವುದನ್ನು ತಪ್ಪಿಸುವುದು ಉತ್ತಮ. ವೃತ್ತಿ ಕ್ಷೇತ್ರದಲ್ಲಿಯೂ ನೀವು ಯಶಸ್ಸನ್ನು ಪಡೆಯಬಹುದು. ಹಣಕಾಸಿನ ದೃಷ್ಟಿಯಿಂದ ಈ ಸಮಯ ಉತ್ತಮವಾಗಿದೆ. ನಿಮ್ಮ ಕೆಲಸದಲ್ಲಿ ಪ್ರಗತಿ ಕಾಣುತ್ತೀರಿ. ಅವಿವಾಹಿತರಲ್ಲಿ ಹಣಕಾಸು ಸಮಸ್ಯೆ ಎದುರಿಬೇಕಾಗುತ್ತದೆ.
ಧನು ರಾಶಿ
ಧನು ರಾಶಿಯವರು ಈ ವಾರದಲ್ಲಿ ಹಲವು ಸವಾಲುಗಳ ಎದುರಿಸಬೇಕಾಗುತ್ತದೆ. ನಿಮ್ಮ ಕೆಲಸದಲ್ಲಿ ತಕ್ಕ ಫಲ ಪಡೆಯಲು ಹೆಚ್ಚು ಶ್ರಮಿಸಬೇಕಾಗಿದೆ. ಆರ್ಥಿಕ ಸಮಸ್ಯೆಗಳು ಕೂಡ ಎದುರಾಗಬಹುದು. ಹಾಗೆ ನಿಮ್ಮ ಉದ್ಯೋಗದ ಸ್ಥಳದಲ್ಲಿಯೂ ಸವಾಲುಗಳ ಎದುರಿಸಬೇಕಾಗುತ್ತದೆ. ದೂರ ಪ್ರಯಾಣ, ಆಯಾಸ, ಖರ್ಚು ಸಾಮಾನ್ಯವಾಗಿರಲಿದೆ. ನಿಮ್ಮ ವೈವಾಹಿಕ ಸಂಬಂಧ ಉತ್ತಮವಾಗಿರಲಿದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ. ವ್ಯವಹಾರದ ದೃಷ್ಟಿಯಿಂದ ಈ ವಾರ ಬಹಳ ಮುಖ್ಯವಾಗಿರುತ್ತದೆ.
ಮಕರ ರಾಶಿ
ಮಕರ ರಾಶಿಯವರು ಈ ವಾರದ ಆರಂಭದಲ್ಲಿಯೇ ಹಲವು ಸಮಸ್ಯೆಗಳು ಎದುರಾಗಬಹುದು. ವ್ಯಾಪಾರಸ್ಥರು ಅಡೆತಡೆಗಳನ್ನು ಎದುರಿಸಬೇಕಾಗುವುದು. ಈ ಸಮಯದಲ್ಲಿ, ನಿಮ್ಮ ಯೋಜಿತ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ . ನೀವು ವಸ್ತು ಸೌಕರ್ಯಗಳಿಗೆ ಸಂಬಂಧಿಸಿದ ಯಾವುದೇ ವಸ್ತುವನ್ನು ಖರೀದಿಸಬಹುದು. ಆರೋಗ್ಯದ ದೃಷ್ಟಿಯಿಂದ ಈ ಸಮಯವು ನಿಮಗೆ ಪ್ರತಿಕೂಲವಾಗಿರಲಿದೆ. ವ್ಯಾಪಾರಿಗಳಿಗೂ ಇದು ಉತ್ತಮ ವಾರವಲ್ಲ.
ಕುಂಭ ರಾಶಿ
ಕುಂಭ ರಾಶಿಯವರು ಈ ವಾರದಲ್ಲಿ ಅನಾನುಕೂಲತೆಯನ್ನು ಸುಲಭದ ರೀತಿ ಎದುರಿಸುತ್ತೀರಿ. ನೀವು ಸೋಮಾರಿತನವನ್ನು ತಪ್ಪಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೆಲಸವನ್ನು ನಾಳೆಗೆ ಮುಂದೂಡುವುದನ್ನು ಅಥವಾ ಬೇರೆಯವರಿಗೆ ಜವಾಬ್ದಾರಿಯನ್ನು ನೀಡುವುದನ್ನು ತಪ್ಪಿಸಿ. ವಾಹನ ಸಂಬಂಧಿ ಖರ್ಚುಗಳು ಹೆಚ್ಚಾಗಬಹುದು. ಪ್ರಯಾಣವು ಆಹ್ಲಾದಕರವಾಗಿರುತ್ತದೆ. ಸಂಗಾತಿಯೊಂದಿಗೆ ಬಾಂಧವ್ಯ ಚೆನ್ನಾಗಿರಲಿದೆ.
ಮೀನ ರಾಶಿ
ಮೀನ ರಾಶಿಯವರು ಈ ವಾರ ತಮ್ಮ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವವರು ಕೆಲವು ಅಡೆತಡೆಗಳ ಎದಯರಿಸಬೇಕಾಗಬಹುದು. ನೀವು ವ್ಯಾಪಾರ ಇತ್ಯಾದಿಗಳಿಗಾಗಿ ದೀರ್ಘ ಅಥವಾ ಕಡಿಮೆ ದೂರ ಪ್ರಯಾಣಿಸಬೇಕಾಗಬಹುದು. ಪ್ರಯಾಣವು ಆಹ್ಲಾದಕರ ಮತ್ತು ಪ್ರಯೋಜನಕಾರಿಯಾಗಿರಲಿದೆ. ಈ ಅವಧಿಯಲ್ಲಿ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಕೆಲವು ದೊಡ್ಡ ಜವಾಬ್ದಾರಿಗಳನ್ನು ಪಡೆಯಬಹುದು. ಆರೋಗ್ಯ ಸುಧಾರಿಸಲಿದೆ. ದಾಂಪತ್ಯದಲ್ಲಿ ಹೊಸ ರೀತಿಯ ಚೈತನ್ಯ ಇರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











