Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಾರ ಭವಿಷ್ಯ ಪ್ರಕಾರ ಈ ವಾರ (ಏಪ್ರಿಲ್ 13-19) ಯಾವ ರಾಶಿಗೆ ಹೇಗಿರಲಿದೆ?
ಏಪ್ರಿಲ್ 13-19ರ ವರೆಗಿನ ನಿಮ್ಮ ವಾರ ಭವಿಷ್ಯದಲ್ಲಿ ಏನಿದೆ ನೋಡಿ.
ಮೇಷ ರಾಶಿ
ಮೇಷ ರಾಶಿಯವರಿಗೆ ಈ ವಾರವು ಕುಟುಂಬ ಸದಸ್ಯರೊಂದಿಗೆ ಬಹಳಷ್ಟು ಚರ್ಚೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಲುವಾಗಿ ಅವರ ಬಳಿ ಹೆಚ್ಚು ವಾದಕ್ಕೆ ಮುಂದಾಗಬಹುದು. ಈ ವಾರ ನೀವು ಹೆಚ್ಚು ಶ್ರಮ ಹಾಕಿ ಕೆಲಸ ಮಾಡಬೇಕಾಗುತ್ತದೆ. ಹಾಗೆ ವಿಶ್ರಾಂತಿಯ ಕಡೆಗೆ ಹೆಚ್ಚು ಒಲುವು ಇರಲಿದೆ. ಪ್ರವಾಸ, ದೇವಾಲಯ ಭೇಟಿಯಂತಹ ಆಧ್ಯಾತ್ಮಿಕ ಕಾರ್ಯಗಳಲ್ಲಿ ನೀವು ಭಾಗಿಯಾಗಬಹುದು. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಹಾಗೆ ವಾರದ ಅಂತ್ಯದಲ್ಲಿ ಒತ್ತಡ ಹೆಚ್ಚಾಗಬಹುದು.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ವಾರ ವೃತ್ತಿ ಬದುಕಿನಲ್ಲಿ ಅತ್ಯಂತ ವಿಶ್ರಾಂತಿದಾಯಕ ವಾರವಾಗಲಿದೆ. ನಿಮ್ಮ ಪ್ರಯತ್ನಗಳ ಮೇಲೆ ಯಾವಾಗಲು ನಂಬಿಕೆ ಇರಲಿ. ಹಣಕಾಸು ವ್ಯವಹಾರ ಮಾಡುವಾಗ ಬೇರೊಬ್ಬರ ಸಲಹೆಯಂತೆ ಮುಂದುವರೆಯುವುದ ಒಳಿತು. ಆರೋಗ್ಯದಲ್ಲಿ ಈ ವಾರ ಪ್ರತಿಕೂಲ ಪರಿಣಾಮ ನೋಡಬಹುದು. ಅದೃಷ್ಟದ ಹಿಂದೆ ಬೀಳುವ ಬದಲಾಗಿ ಶ್ರಮದ ಹಿಂದೆ ಬಿದ್ದರೆ ಅತ್ಯುತ್ತಮ ಯಶಸ್ಸು ಪಡೆಯಬಹುದು.

ಮಿಥುನ ರಾಶಿ
ಮಿಥುನ ರಾಶಿಯವರು ಈ ವಾರ ಅದೃಷ್ಟಶಾಲಿಯಾಗಿರುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ಉತ್ತಮ ಅವಕಾಶಗಳಿವೆ. ಬಹಳ ಸಮಯದಿಂದ ಬಯಸಿದ್ದ ನಿಮ್ಮ ಕೆಲಸಗಳು ನಿಮ್ಮ ಪರವಾದ ಯಶಸ್ಸಿಗೆ ಕಾರಣವಾಗಲಿವೆ. ಈ ವಾರ ನಿಮ್ಮ ಮನದಲ್ಲಿದ್ದ ವಿಚಾರಗಳನ್ನು ಹಂಚಿಕೊಳ್ಳುವುದು ಬಹಳ ಉತ್ತಮ. ಇದರಿಂದ ಒತ್ತಡ ಕಡಿಮೆಯಾಗಲಿದೆ. ದುಡಿಯುವ ಜನರ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಆರೋಗ್ಯ ಸಮಸ್ಯೆಗಳು ದೂರಾಗಲಿವೆ.
ಕರ್ಕ ರಾಶಿ
ಕರ್ಕ ರಾಶಿಯವರು ಈ ವಾರ ಓಡಾಟದ ವಾರ ಎನ್ನಬಹುದು, ಬಹಳ ಕಾಲ ನೀವು ಪ್ರವಾಸದಂತಹ ಕಾರ್ಯಕ್ಕೆ ಮುಂದಾಗಬಹುದು. ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು. ಕೆಲಸದಲ್ಲಿನ ಒತ್ತಡ ಕಡಿಮೆಯಾಗಲಿದೆ. ಹೀಗಾಗಿ ಕುಟುಂಬಸ್ಥರ ಜೊತೆಗೆ ನೀವು ಸಮಯ ಕಳೆಯಲಿದ್ದೀರಿ. ನೀವು ವೃತ್ತಿ ಮತ್ತು ವ್ಯವಹಾರಕ್ಕಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಇದರಲ್ಲಿ ಬಹುತೇಕ ಯಶಸ್ಸು ಸಹ ಪಡೆಯಬಹುದು.
ಸಿಂಹ ರಾಶಿ
ಸಿಂಹ ರಾಶಿಯವರು ಈ ವಾರ ಹಣಕಾಸು ವಿಚಾರವಾಗಿ ಬಹಳ ಪ್ರಗತಿ ಕಾಣಬಹುದು, ಹಲವು ಮೂಲದಿಂದ ಹಣಕಾಸು ಹರಿದುಬರುವ ಕಾರಣ ನಿಮ್ಮ ಕೆಲಸ ಕಾರ್ಯಗಳಲ್ಲಿ ವೇಗ ಪಡೆಯಲಿದ್ದೀರಿ. ಇದು ಅನಿರೀಕ್ಷಿತ ಸಂತೋಷಕ್ಕೆ ನೀವು ಒಳಗಾಗುತ್ತೀರಿ. ನಿರುದ್ಯೋಗಿಗಳಿಗೆ ನಿಮ್ಮ ಉದ್ಯೋಗದ ಸ್ಥಳದಲ್ಲಿನ ಒತ್ತಡ ನಿಭಾಯಿಸುವುದು ಒಳಿತು. ನಿಮಗೆ ಹೃದಯ ಸಂಬಂಧಿ ಕಾಯಿಲೆ ಇದ್ದರೆ ಕೋಪ ಮತ್ತು ಒತ್ತಡದಿಂದ ದೂರವಿರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಈ ವಾರ ಎಲ್ಲಾ ಕೆಲಸದಲ್ಲೂ ಎಚ್ಚರಿಕೆ ಇಡಬೇಕು. ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಅಡೆತಡೆ ಹೆಚ್ಚಾಗಬಹುದು. ಹಣಕಾಸಿನ ವಿಷಯಗಳಲ್ಲಿ ನೀವು ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾರನ್ನೂ ಕುರುಡಾಗಿ ನಂಬಬೇಡಿ ಇಲ್ಲದಿದ್ದರೆ ನೀವು ಮೋಸ ಹೋಗಬಹುದು. ಈ ಸಮಯದಲ್ಲಿ ನಿಮಗೆ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಉತ್ತಮ.
ತುಲಾ ರಾಶಿ
ತುಲಾ ರಾಶಿಯವರು ಈ ವಾರ ಗಂಭೀರವಾಗಿ ಪರಿಗಣಿಸಿ. ವ್ಯಾಪಾರಸ್ಥರಿಗೆ ಈ ಸಮಯದಲ್ಲಿ ಬಹಳ ಲಾಭ ನೋಡಬಹುದು. ವಾರದ ಮೊದಲಾರ್ಧದಲ್ಲಿ ನೀವು ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ವಾರದ ಮಧ್ಯದಲ್ಲಿ ಹಣದ ವಿಷಯದಲ್ಲಿ ಯಾರೊಂದಿಗಾದರೂ ವಿವಾದ ಉಂಟಾಗುವ ಸಾಧ್ಯತೆಯಿದೆ. ಈ ಸಮಯವು ನಿಮಗೆ ಬಹಳ ಅಮೂಲ್ಯವಾಗಿದೆ, ಆದ್ದರಿಂದ ನಿಮ್ಮ ಪ್ರಮುಖ ಕಾರ್ಯಗಳ ಮೇಲೆ ಗಮನ ಹರಿಸಬೇಕು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ವಾರ ಬಹಳ ಓಡಾಟದಲ್ಲಿ ಕಳೆಯಬೇಕಾಗಬಹುದು. ಹಾಗೆ ಶುಭ ಕಾರ್ಯ ಸಂಬಂಧ ನೀವು ಬಹಳಷ್ಟು ಓಡಾಟ ಹಾಗೆ ಆಧ್ಯಾತ್ಮಿಕ ಕಾರ್ಯದಲ್ಲಿ ಭಾಗಿಯಾಗಬಹುದು. ಆಸ್ತಿ ವಿಚಾರ ಸಂಬಂಧ ನಿಮ್ಮ ಪರವಾದ ಒಲವು ಇರಲಿದೆ. ಹಾಗೆ ಸಣ್ಣ ಪುಟ್ಟ ವ್ಯಾಪಾರಸ್ಥರಲ್ಲಿ ಹಣಕಾಸು ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ. ದೊಡ್ಡ ಹೂಡಿಕೆಯಿಂದ ದೂರವಿರಿ. ಹಾಗೆ ವಾಹನ ಸಂಬಂಧ ಹಣ ಖರ್ಚಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಈ ವಾರ ಬಹಳ ಅಸಹಾಯಕತೆ ಕಾಡಬಹುದು.
ಧನು ರಾಶಿ
ಧನು ರಾಶಿ ಈ ವಾರದಲ್ಲಿ ಹಲವು ಪ್ರಕಾರವಾದ ಒಲವು ಇರಲಿದೆ. ನಿಮ್ಮ ವ್ಯವಸ್ಥಿತ ಕಾರ್ಯ ಕಲಾಪಗಳಲ್ಲಿ ಪರಿಶ್ರಮದಿಂದ ಯಶಸ್ಸು ಪಡೆಯಬಹುದು. ಈ ವಾರದ ಆರಂಭ ಬಹಳ ಕಠಿಣವಾಗಿ ಸಾಗಲಿದೆ, ಆದರೆ ವಾರಾಂತ್ಯದಲ್ಲಿ ನೆಮ್ಮದಿ ನಿಮ್ಮದಾಗಲಿದೆ. ಮನೆಯಲ್ಲಿದ್ದ ಹಣಕಾಸು ಸಮಸ್ಯೆಗೆ ಪರಿಹಾರ ಸಿಗಲಿದೆ. ಕಷ್ಟಪಟ್ಟು ದುಡಿದ ಹಣವನ್ನು ಸರಿಯಾಗಿ ಬಳಸಿದರೆ ಉತ್ತಮವಾಗಿರುತ್ತದೆ. ದಾಂಪತಿಗಳು ಹಣಕಾಸು ವಿಚಾರವಾಗಿ ಸಮಸ್ಯೆ ಎದುರಿಸಬಹುದು. ಮನೆಗೆ ಬೇಕಾಗಿದ್ದ ಅಗತ್ಯ ವಸ್ತುವೊಂದಕ್ಕೆ ಹಣ ವ್ಯಯಿಸಬೇಕಾಗಬಹುದು.
ಮಕರ ರಾಶಿ
ಹಣದ ವಿಷಯದಲ್ಲಿ ನೀವು ಯಾರೊಂದಿಗಾದರೂ ವಿವಾದವನ್ನು ಹೊಂದಿರಬಹುದು. ನೀವು ಅಂತಹ ವಿಷಯಗಳನ್ನು ತಪ್ಪಿಸಬೇಕು ಇಲ್ಲದಿದ್ದರೆ ನಷ್ಟವು ನಿಮ್ಮದೇ ಆಗಿರುತ್ತದೆ. ಈ ಅವಧಿಯಲ್ಲಿ ನೀವು ಮಾನಸಿಕವಾಗಿ ಚೆನ್ನಾಗಿರುವುದಿಲ್ಲ. ಬಹಳ ಸಮಯದಿಂದ ಮಾಡಬೇಕು ಎಂದುಕೊಂಡಿದ್ದ ಕೆಲಸವೊಂದನ್ನು ಮಾಡಿ ಮುಗಿಸಿ. ನಿಮ್ಮ ಕನಸನ್ನು ಈಡೇರಿಸಿಕೊಳ್ಳಲು ತಪ್ಪು ದಾರಿ ಹಿಡಿಯಬೇಡಿ. ಅನಿರೀಕ್ಷಿತ ಸಂಬಂಧಿಗಳ ಭೇಟಿಯೂ ನಿಮಗೆ ಬಹಳ ಸಂತೋಷ ಹಾಗೆ ಗೊಂದಲಕ್ಕೆ ದಾರಿಯಾಗಬಹುದು. ಈ ವಾರ ನಿಮ್ಮಲ್ಲಿ ಪಂಚೇಂದ್ರಿಯ ಸಂಬಂಧಿ ಸಮಸ್ಯೆಗಳ ಎದುರಿಸಬೇಕಾಗಬಹುದು.
ಕುಂಭ ರಾಶಿ
ನೀವು ಉದ್ಯಮಿಯಾಗಿದ್ದರೆ ಈ ಸಮಯದಲ್ಲಿ ನಿಮ್ಮ ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಹಣದ ವಿಚಾರದಲ್ಲಿ ದುಬಾರಿ ಸ್ವಭಾವವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ನಿಮ್ಮ ಸಾಲದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಉತ್ಸಾಹ ಇರುತ್ತದೆ. ಮನೆ ಅಥವಾ ವಾಹನ ರಿಪೇರಿ ಇತ್ಯಾದಿಗಳಿಗಾಗಿ ನೀವು ಸಾಕಷ್ಟು ಹಣ ಖರ್ಚು ಮಾಡಬಹುದು. ಆರೋಗ್ಯದ ಮೇಲೆ ಕಾಳಜಿ ಇರಲಿ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನದಂದು ಸಕಾರಾತ್ಮಕವಾಗಿರಿ ಮತ್ತು ನಿಮ್ಮ ಇಂದಿನ ಮೇಲೆ ಕೇಂದ್ರೀಕರಿಸಿ. ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಂದ ಪಡೆದಿದ್ದ ಹಣದ ಸಹಾಯವನ್ನು ಮರಳಿಸುವುದು ಉತ್ತಮ. ಯಾವುದೇ ಕಲಸವನ್ನು ಸಂಪೂರ್ಣ ಶ್ರದ್ಧೆಯಿಂದ ಮಾಡಿ ಮುಗಿಸಿ. ನಿಮ್ಮ ದೈನಂದಿನ ಕೆಲಸದಲ್ಲಿ ಇದ್ದ ಅಡೆತಡೆಯೊಂದು ಬಗೆಹರಿಯಲಿದೆ. ಆರೋಗ್ಯ ಸುಧಾರಿಸಲಿದೆ. ಅವಿವಾಹಿತರಿಗೆ ಈ ವಾರ ಲಾಭದಾಯಕವಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











