ವಾರ ಭವಿಷ್ಯ ಪ್ರಕಾರ ಈ ವಾರ (ಏಪ್ರಿಲ್ 06-12) ಯಾವ ರಾಶಿಗೆ ಹೇಗಿರಲಿದೆ?

ಈ ವಾರದ ರಾಶಿಫಲ ಪ್ರಕಾರ ಯಾವ ರಾಶಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ

ಮೇಷ ರಾಶಿ

ಮೇಷ ರಾಶಿ ಅವರು ಈ ವಾರ ಆರೋಗ್ಯ, ಸಂಬಂಧಗಳು ಮತ್ತು ಕೆಲಸದ ವಿಷಯಗಳಲ್ಲಿ ಅಜಾಗರೂಕತೆಯನ್ನು ತಪ್ಪಿಸಬೇಕು. ಕಚೇರಿ ಸಂಬಂಧ ಹಲವು ರೀತಿಯ ಸವಾಲುಗಳ ಎದುರಿಸಲು ಮಾನಸಿಕವಾಗಿ ಸಿದ್ದವಿರಿ. ಹೀಗಾಗಿ ನೀವು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ಎಲ್ಲಾ ವಿಚಾರಗಳು ನಿಮ್ಮ ಪರವಾಗಿ ಅಥವಾ ನಿಮ್ಮ ಮಾತಿನಂತೆ ನಡೆಯಬಹುದು. ವಾರದ ಅಂತ್ಯವರೆಗೂ ಹಣಕಾಸು ವಿಚಾರವಾಗಿ ನೀವು ಬಲವಾಗುತ್ತೀರಿ. ಆದ್ರೆ ಕೊನೆಯ ದಿನದಂದು ಮುಖ್ಯ ಕೆಲಸವೊಂದಕ್ಕೆ ಹಣ ಹೊಂದಿಸಲು ನೀವು ಕಷ್ಟಪಡುತ್ತೀರಿ. ಈ ವಾರ ಯಾರೊಂದಿಗೂ ಹೊಸ ಒಪ್ಪಂದ, ನಿರ್ಧಾರಗಳ ಪ್ರಕಟಿಸಬೇಡಿ. ಆರೋಗ್ಯ ಸುಧಾರಣೆ ಆಗಲಿದೆ.

ವೃಷಭ ರಾಶಿ

ವೃಷಭ ರಾಶಿ ಮಂದಿ ಈ ವಾರ ತಮ್ಮ ಕೆಲಸದ ಕಡೆ ಗಮನಕೊಡಬೇಕು, ಏಕೆಂದರೆ ಹಲವು ರೀತಿಯ ಒತ್ತಡ ಹಾಗೂ ಸವಾಲು ಎದುರಿಸಬೇಕಾಗುತ್ತದೆ. ಅನುವಂಶಿಕತೆಗೆ ಸಂಬಂಧಿಸಿದ ವಿವಾದಗಳು ನಿಮ್ಮನ್ನು ಚಿಂತೆಗೀಡುಮಾಡುತ್ತವೆ. ನಿಮ್ಮ ಸಂಬಂಧಿಕರಿಂದ ನಿರೀಕ್ಷಿತ ಸಹಾಯ ಸಿಗದ ಕಾರಣ ನೀವು ಸ್ವಲ್ಪ ಅತೃಪ್ತರಾಗುತ್ತೀರಿ. ಹೆಚ್ಚಿನ ಖರ್ಚುಗಳಿಗೆ ನೀವು ಒಳಗಾಗುತ್ತೀರಿ. ಹೀಗಾಗಿ ಹಣ ಖರ್ಚು ಮಾಡುವಾಗ ಯಾವ ವಿಚಾರವಾಗಿ ಮಾಡುತ್ತಿದ್ದೀರಿ ಎಂಬುದನ್ನ ಅರಿತುಕೊಳ್ಳಿ. ಕೆಲವೊಂದು ಘಟನೆಗಳು ನಿಮ್ಮ ಆಲೋಚನೆಗೂ ಮೀರಿ ನಡೆಯಬಹುದು. ಕೌಟುಂಬಿಕ ಸಮಸ್ಯೆಗಳು ಮತ್ತಷ್ಟು ಜಟಿಲವಾಗಬಹುದು. ಇದಕ್ಕಾಗಿ ಬೇಗ ಪರಿಹಾರಕ್ಕೆ ಮುಂದಾಗಿ.

Weekly Horoscope From April 06 To 12 For Al Zodiac Signs In Kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ವಾರ ಲಾಭದಾಯಕ ವಾರವಾಗಲಿದೆ. ನೀವು ಯಾವುದೇ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುವ ದಿನಗಳಿವೆ. ಅದರಲ್ಲೂ ಸ್ವಂತ ಉದ್ಯೋಗ ಮಾಡುವವರಿಗೆ ಈ ವಾರ ಬಹಳ ಶುಭಕರವಾಗುತ್ತಿದೆ. ನಿಮ್ಮ ಆಲೋಚನೆಯಲ್ಲಿದ್ದ ಬದಲಾವಣೆಗಳನ್ನು ಮಾಡಲು ಇದು ಸೂಕ್ತ ಸಮಯ ಆಗುತ್ತಿದೆ. ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಯಶಸ್ಸು ಮತ್ತು ಲಾಭವನ್ನು ಸಾಧಿಸುವಿರಿ. ನಿಮಗೆ ಲಭ್ಯವಿರುವ ಅವಕಾಶವನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಮುಖ್ಯ ಕೆಲಸಕ್ಕಾಗಿ ನೀವು ಹಣಕಾಸನ್ನು ಒಟ್ಟು ಮಾಡಲು ಮುಂದಾಗಿದ್ದರೆ ಈ ಸಮಯದಲ್ಲಿ ಅನಿರೀಕ್ಷಿತವಾಗಿ ಹಣ ನಿಮ್ಮ ಕೈ ಸೇರಬಹುದು. ಅವಿವಾಹಿತರಲ್ಲಿ ಶುಭ ಸುದ್ದಿ ಕೇಳುವ ಯೋಗವಿದೆ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ವಾರ ನಕಾರಾತ್ಮಕ ವ್ಯಕ್ತಿಗಳಿಂದ ಅಥವಾ ಆಲೋಚನೆಗಳಿಂದ ದೂರ ಇರುವುದು ಉತ್ತಮ. ಇದು ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಅನುಕೂಲಕರ ಸಂದರ್ಭಗಳು ಎದುರಾಗುತ್ತವೆ. ನೀವು ಬಹಳ ದಿನಗಳಿಂದ ನಿಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗೆ ಉತ್ತಮ ಅವಕಾಶಗಳು ಸಿಗಬಹುದು. ಹಠಾತ್ ಆರ್ಥಿಕ ಲಾಭದ ಸಾಧ್ಯತೆ ಇದೆ. ಆದರೆ ಇದ್ದಕ್ಕಿದ್ದಂತೆ ದೊಡ್ ಖರ್ಚುಗಳು ಎದುರಾಗಬಹುದು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವವರು ಈ ವಾರ ತಮ್ಮ ಹೆಸರು ಗಳಿಸುತ್ತಾರೆ. ಹೊಸ ವಸ್ತು ಖರೀದಿಯ ಭಾಗ್ಯವಿದೆ.

ಸಿಂಹ ರಾಶಿ

ಸಿಂಹ ರಾಶಿಯವರು ಈ ವಾರದಲ್ಲಿ ಹೆಚ್ಚು ಒತ್ತಡ ಎದುರಿಸಬೇಕಾಗಬಹುದು, ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆಗಳು ಎದುರಾಗಬಹುದು. ಹಣಕಾಸು ವಿಚಾರವಾಗಿ ಎಚ್ಚರಿಕೆ ಅಗತ್ಯ. ನಂಬಿಕಸ್ಥರಿಂದ ಕಿರಿಕಿರಿ ಉಂಟಾಗಬಹುದು. ನೀವು ಪ್ರವಾಸ ಮಾಡುವ ಸಂಬಂಧವಾಗಿ ಮಾತುಕತೆಯಲ್ಲಿ ತೊಡಗಬಹುದು, ಇದು ಯಶಸ್ವಿಯಾಗಬಹುದು. ಬಹಳ ಕಾಲದಿಂದ ನಿಮಗೆ ಬರಬೇಕಿದ್ದ ಹಣವೊಂದು ಈ ಸಮಯದಲ್ಲಿ ಕೈ ಸೇರಬಹುದು. ಹೂಡಿಕೆ ಮತ್ತು ಉಳಿತಾಯ ಸಂಬಂಧ ಮಾತುಕತೆಗೆ ಇದು ಸೂಕ್ತ ಕಾಲ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ಥಾಪಗಳು ಎದುರಾಗಬಹುದು. ಸಂಬಂಧಿಕರ ಮನೆಯಲ್ಲಿ ಶುಭ ಕಾರ್ಯಕ್ಕೆ ನೀವು ತೆರಳುವ ಸಾಧ್ಯತೆ ಇದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ವಾರವು ಶುಭಕರ ಹಾಗೂ ಧನಾತ್ಮಕವಾಗಿ ಬದಲಾಗುತ್ತಿದೆ. ನಿಮ್ಮ ಶ್ರಮದ ಫಲ ಈ ವಾರ ಪಡೆಯಬಹುದು. ಚಿಲ್ಲರೆ ವ್ಯಾಪಾರಿಗಳು ಈ ಸಮಯದಲ್ಲಿ ಬಹಳಷ್ಟು ಲಾಭ ಮಾಡುವ ಸಾಧ್ಯತೆ ಇದೆ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿವಾದಗಳಿದ್ದರೆ ಈ ವಾರದಲ್ಲಿ ನಿಮಗೆ ಓಡಾಟಕ್ಕೆ ಕಾರಣವಾಗಬಹುದು, ಮಕ್ಕಳ ಭವಿಷ್ಯದ ಕುರಿತ ಚಿಂತೆ ಹೆಚ್ಚಾಗಬಹುದು. ತರಾತುರಿಯಲ್ಲಿ ಆಲೋಚನೆ ಮಾಡದೆ ಯಾವುದೇ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ.

ತುಲಾ ರಾಶಿ

ತುಲಾ ರಾಶಿಯ ಮಂದಿ ಈ ದಿನ ದೊಡ್ಡ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದು ಅವರ ಒತ್ತಡ ಹಾಗೂ ಚಿಂತೆಯನ್ನು ನಿವಾರಿಸಲಿದೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಇರಲಿದೆ. ನಿಮ್ಮ ಪರಿಶ್ರಮಕ್ಕೆ ಲಾಭ ಸಿಗುವ ಕಾಲವಿದು. ವ್ಯವಹಾರದಲ್ಲಿ ತೊಡಗಿರುವವರಿಗೆ ಕಳೆದ ವಾರಕ್ಕಿಂತ ಈ ವಾರ ಹೆಚ್ಚು ಉತ್ತಮವಾಗಿರುತ್ತದೆ. ವಾರದ ನಂತರ ನಿಮಗೆ ಇದ್ದಕ್ಕಿದ್ದಂತೆ ಕೆಲವು ಆರ್ಥಿಕ ಲಾಭಗಳನ್ನು ಗಳಿಸುವ ಅವಕಾಶ ಸಿಗುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಬಹಳ ದಿನಗಳ ಕನಸೊಂದು ಈ ಸಮಯದಲ್ಲಿ ನನಸಾಗಲಿದೆ. ಹಲವು ನಿರ್ಧಾರಗಳನ್ನು ನೀವು ನಿಮ್ಮ ಆಲೋಚನೆ ಮೇರೆಗೆ ತೆಗೆದುಕೊಳ್ಳಬೇಕಾಗುತ್ತದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ವಾರವು ಮಿಶ್ರಫಲ ನೋಡಬಹುದು. ವಾರದ ಆರಂಭದಲ್ಲಿ ನಿಮ್ಮಲ್ಲಿ ಹಣ ಓಡಾಡುತ್ತಿರುತ್ತದೆ, ಆದ್ರೆ ವಾರದ ಕೊನೆಯಲ್ಲಿ ಬಹುಮುಖ್ಯ ಕೆಲಸಗಳಲ್ಲಿ ಹಣಕಾಸಿನ ತೊಡಕು ನೋಡಬಹುದು. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಶೀತ , ತಲೆನೋವಿನಂತಹ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ನೀವು ಖಾಸಗಿ ಉದ್ಯೋಗಿಯಾಗಿದ್ದರೆ ಒತ್ತಡ ಹೆಚ್ಚಾಗುವ ನಿರೀಕ್ಷೆ ಇದೆ. ಮನೆ ಹಾಗೂ ಕೆಲಸದಲ್ಲಿ ಸಮನ್ವಯ ಸಾಧಿಸುವುದು ಬಹಳ ಮುಖ್ಯ.

ಧನು ರಾಶಿ

ಧನು ರಾಶಿ ಮಂದಿ ಈ ವಾರದಲ್ಲಿ ಬಹಳ ಸಮಸ್ಯೆಗಳ ಎದುರಿಸಿದರು ಅವುಗಳನ್ನು ಸುಲಭವಾಗಿ ಬಗೆಹರಿಸುತ್ತೀರಿ. ಈ ವಾರದಲ್ಲಿ ನಿಮ್ಮ ಕೆಲಸದ ಉದ್ದೇಶಕ್ಕಾಗಿ ಪ್ರಭಾವಿಯೊಬ್ಬರ ಭೇಟಿಯಾಗಲು ನೀವು ಮುಂದಾಗಬಹಹುದು. ನೀವು ಕೆಲಸವನ್ನು ಪೂರ್ಣ ಸಮರ್ಪಣಾಭಾವದಿಂದ ಮತ್ತು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮಾಡುತ್ತೀರಿ. ಕೆಲಸ ಮಾಡುವವರಿಗೆ ಬಡ್ತಿಗೆ ಅವಕಾಶಗಳು ಸಿಗುತ್ತವೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಈ ವಾರ ಪೂರ್ತಿ ಸಂಬಂಧಗಳ ವಿಷಯದಲ್ಲಿ ಅನುಕೂಲಕರವಾಗಿರುತ್ತದೆ.

ಮಕರ ರಾಶಿ

ಮಕರ ರಾಶಿಯ ಮಂದಿಗೆ ಈ ವಾರವು ಬಹಳ ಲಾಭ ನೋಡುವ ವಾರ. ನಿಮ್ಮ ದೈನಂದಿನ ಕೆಲಸಗಳಲ್ಲಿ ಇದ್ದ ಅಡೆತಡೆಯೊಂದು ನಿವಾರಣೆ ಆಗುವುದು ನೊಡಬಹುದು. ಹತ್ತಿರದ ಸಂಬಂಧಿಗಳ ಭೇಟಿಯು ನಿಮ್ಮಲ್ಲಿ ಹೊಸತನ ತರಲು ಕಾರಣವಾಗಲಿದೆ. ಸರ್ಕಾರಿ ನೌಕರರಲ್ಲಿ ಕಷ್ಟದ ಸಮಯ ನೋಡಬಹುದು. ನೀವು ಹಣಕಾಸು ವ್ಯವಹಾರ ಮಾಡುತ್ತಿದ್ದರೆ ಈ ವಾರವು ನಷ್ಟದ ದಾರಿಗೆ ಕಾರಣವಾಗಬಹುದು, ಆದರೆ ಆ ನಷ್ಟ ಸರಿದೂಗಿಸಿಕೊಳ್ಳುವ ಕಾರ್ಯ ಮಾಡಲಿದ್ದೀರಿ.

ಕುಂಭ ರಾಶಿ

ಕುಂಭ ರಾಶಿಯ ಮಂದಿ ಈ ವಾರ ನಿಮ್ಮ ಜೀವನದ ಮುಖ್ಯ ಕೆಲಸಗಳ ಮಾಡುತ್ತೀರಿ. ನೀವು ಕೆಲಸಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅದು ಇಂದು ಕೊನೆಗೊಳ್ಳುತ್ತದೆ. ಮನೆಗೆ ಅಗತ್ಯವಾದ ವಸ್ತು ಖರೀದಿಸುತ್ತೀರಿ. ನಿಮ್ಮ ವಾಹನ ಖರೀದಿಸುವ ಕನಸಿಗೆ ಈ ದಿನ ಒಂದು ಹೆಜ್ಜೆ ಮುಂದಿಡಲಿದ್ದೀರಿ. ವೃತ್ತಿಗೆ ಸಂಬಂಧಿಸಿದಂತೆ ಕಷ್ಟದ ಸಮಯದಲ್ಲಿ ಸ್ನೇಹಿತರಿಂದ ಬೆಂಬಲ ಪಡೆಯುತ್ತೀರಿ. ನಿಗದಿತ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ.

ಮೀನ ರಾಶಿ

ಮೀನ ರಾಶಿಯವರು ಈ ವಾರವು ಬಹಳ ಅನುಕೂಲಕರ ಸಮಯ ನೋಡಲಿದ್ದಾರೆ. ನಿಮ್ಮ ಕೆಲಸದಲ್ಲಿ ಸುಲಭದ ಪ್ರತಿಫಲ ನೋಡುತ್ತೀರಿ. ಕೆಲಸದ ಹೊರೆ ಕಡಿಮೆಯಾಗುತ್ತದೆ. ಇತರರ ವ್ಯವಹಾರಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಬೇಡಿ, ಅದು ಸಮಸ್ಯೆಗಳಿಗೆ ಕಾರಣವಾಗಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ. ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಒಳಿತಾಗಲಿದೆ. ಬಹಳ ದಿನಗಳಿಂದ ನೀವು ಮಾಡಬೇಕಿದ್ದ ಕೆಲಸ ಮುಗಿಸಲಿದ್ದೀರಿ. ಕಲಾವಿದರಿಗೆ ಈ ವಾರ ಬಹಳ ಉತ್ತಮವಾಗಿರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Weekly Horoscope From April 06 To 12 For Al Zodiac Signs In Kannada

Here is weekly horoscope prediction for all zodiac signs, read on..
X
Desktop Bottom Promotion